News18 India World Cup 2019

IPSOS Exit poll Survey: ಮೋದಿ 2.0; ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತ ಎನ್ನುತ್ತಿದೆ ನ್ಯೂಸ್​ 18-ಐಪಿಎಸ್​ಓಎಸ್​ ಸಮೀಕ್ಷೆ

MAshok Kumar | news18
Updated:May 19, 2019, 10:53 PM IST
IPSOS Exit poll Survey: ಮೋದಿ 2.0; ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತ ಎನ್ನುತ್ತಿದೆ ನ್ಯೂಸ್​ 18-ಐಪಿಎಸ್​ಓಎಸ್​ ಸಮೀಕ್ಷೆ
ನರೇಂದ್ರ ಮೋದಿ.
MAshok Kumar | news18
Updated: May 19, 2019, 10:53 PM IST
ನವ ದೆಹಲಿ (ಮೇ.19); ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ನ್ಯೂಸ್​ 18-ಐಪಿಎಸ್​ಓಎಸ್​  ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.

ಪ್ರಮುಖ ವಿರೋಧ ಪಕ್ಷದವಾದ ಕಾಂಗ್ರೆಸ್​ ಕೇವಲ 82 ಸ್ಥಾನಗಳನ್ನಷ್ಟೆ ಗಳಿಸಲಿದೆ. ಕಾಂಗ್ರೆಸ್ ಪಾಲಿಗೆ ಕೇರಳ ಹಾಗೂ ಪಂಜಾಬ್​ ರಾಜ್ಯಗಳಿಂದ ಹೆಚ್ಚಿನ ಸ್ಥಾನ ಹರಿದುಬರಲಿದೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ. 2014 ಚುನಾವಣೆಯಲ್ಲಿ ಕೇವಲ 44 ಸ್ಥಾನಗಳನ್ನು ಗಳಿಸುವ ಮೂಲಕ ಹೀನಾಯ ಸ್ಥಿತಿಗೆ ತಲುಪಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲೂ ಅಷ್ಟೇನೂ ಗಮನಾರ್ಹ ಸಾಧನೆ ಮಾಡುವ ಸಾಧ್ಯತೆ ಇಲ್ಲ ಎಂದು ತಿಳಿಸಲಾಗಿದೆ.

ನರೇಂದ್ರ ಮೋದಿ ನಾಯಕತ್ವದ ಫಲವಾಗಿ ಎನ್​ಡಿಎ ಮೈತ್ರಿಕೂಟ ರಾಜಸ್ತಾನ್, ಮಧ್ಯಪ್ರದೇಶ್, ಗುಜರಾತ್, ಜಾರ್ಖಂಡ್​ ರಾಜ್ಯದಲ್ಲಿನ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದರೆ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ. ಇನ್ನೂ ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಮಹಾಘಟಬಂದನ್ ದೆಸೆಯಿಂದಾಗಿ ಬಿಜೆಪಿ ಕೆಲವು ಕ್ಷೇತ್ರಗಳನ್ನು ಕೈಚೆಲ್ಲಿದರೆ, ಬಿಜೆಪಿಗೆ ನೆಲೆ ಇಲ್ಲದ ಒದಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಪಕ್ಷ ಗಮನಾರ್ಹ ಸಾಧನೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ಚುನಾವಣೋತ್ತರ ಸಮೀಕ್ಷೆಗಳು ಸತ್ಯಕ್ಕೆ ಎಷ್ಟು ಹತ್ತಿರ? ಇಲ್ಲಿದೆ ಕಳೆದ ಮೂರು ಚುನಾವಣೆಗಳ ಎಕ್ಸಿಟ್​ ಪೋಲ್​

ಕಳೆದ 5 ವರ್ಷದ ಸರ್ಕಾರದ ಸಾಧನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಮೇಲೆ ಚುನಾವಣೆ ಎದುರಿಸಿದ್ದ ಬಿಜೆಪಿ ಈ ಬಾರಿ ಸ್ವತಂತ್ರ್ಯವಾಗಿ 277 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಬಹುಮತ ಪಡೆಯಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಈ ಸಮೀಕ್ಷೆಗಳು ನಿಜವಾದರೆ ಬಿಜೆಪಿ ಯಾವ ಪಕ್ಷಗಳ ಸಹಾಯವೂ ಬೇಡದೆ ಮತ್ತೊಮ್ಮೆ ಸ್ವತಂತ್ರ್ಯ ಸರ್ಕಾರ ರಚಿಸುವುದು ಖಚಿತ ಎನ್ನಲಾಗುತ್ತಿದೆ.

ಸಮೀಕ್ಷೆ ನಡೆದ ಹಾದಿ; ಭಾರತೀಯ ಚುನಾವಣಾ ಇತಿಹಾಸದಲ್ಲೇ ನ್ಯೂಸ್​ 18-ಐಪಿಎಸ್​ಓಎಸ್ ಸಮೀಕ್ಷೆಯನ್ನು ಅತ್ಯಂತ ನಂಬಿಕಾರ್ಹ ಸಮೀಕ್ಷೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
Loading...

ಚುನಾವಣೋತ್ತರ ಸಮೀಕ್ಷೆಗೆ 543 ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳನ್ನು ನಾವು ಆಯ್ಕೆ ಮಾಡಿಕೊಂಡಿದ್ದೆವು. ಇವುಗಳ ಮಾಹಿತಿ ಪಡೆಯಲು 1,21,542 ಮತದಾರರನ್ನು ಭೇಟಿ ಮಾಡಿದ್ದೇವೆ. 796 ವಿಧಾನಸಭಾ ಕ್ಷೇತ್ರಗಳನ್ನೂ ನಾವು ಆಯ್ಕೆ ಮಾಡಿಕೊಂಡಿದ್ದೆವು. ಎಕ್ಸಿಟ್​ ಪೋಲ್​ ನಡೆಸಲು 4,776 ಜನರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇವೆ.

ಸ್ಟೇಜ್​ 1: ಕ್ಷೇತ್ರಗಳ ಆಯ್ಕೆಗೆ ಇವು ಮಾನದಂಡ
* ಪಕ್ಷವೊಂದು ಹಿಂದಿನ 2-3 ಚುನಾವಣೆಗಳಲ್ಲಿ ಸತತವಾಗಿ ಗೆಲುವು ಸಾಧಿಸಿದ ಕ್ಷೇತ್ರಗಳು
* ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆಲುವು ಕಂಡ ಕ್ಷೇತ್ರಗಳು
* ಹಿಂದಿನ ಚುನಾವಣೆಗಳ ಫಲಿತಾಂಶಗಳಲ್ಲಿ ವ್ಯತ್ಯಾಸ ಕಂಡ ಕ್ಷೇತ್ರಗಳು
* ದೊಡ್ಡ ಅಭ್ಯರ್ಥಿಗಳು ಕಣದಲ್ಲಿರುವ ಕ್ಷೇತ್ರಗಳು

ಇದನ್ನೂ ಓದಿ : Tumkur Lok Sabha Elections Exit Poll: ತುಮಕೂರಿನಲ್ಲಿ ದೇವೇಗೌಡರಿಗೆ ಪ್ರಯಾಸದ ಗೆಲುವಿನ ಸಾಧ್ಯತೆ!

ಸ್ಟೇಜ್​- 2: ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕರಿಂದ ಆರು ವಿಧಾನಸಭಾ ಕ್ಷೇತ್ರಗಳನ್ನು ರ್ಯಾಂಡಮ್​(ಯಾದೃಚ್ಛಿಕ) ಆಗಿ ಆಯ್ಕೆ ಮಾಡಲಾಗಿತ್ತು.

ಸ್ಟೇಜ್​ 3: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆರು ಮತಗಟ್ಟೆಯನ್ನು ಆಯ್ಕೆ ಮಾಡಿಕೊಂಡಿದ್ದೆವು

ಸ್ಟೇಜ್​ 4: ಮತದಾನ ಮಾಡಿದ ನಂತರ ಹೊರ ಬರುವ ಮತದಾರರನ್ನು ನಾವು ಆಯ್ಕೆ ಮಾಡಿಕೊಂಡು ಸರ್ವೆ ನಡೆಸಿದ್ದೇವೆ.

ಏಳು ಹಂತಗಳ ಚುನಾವಣೆಯಲ್ಲಿ ಮತದಾನ ಆರಂಭವಾದ ತಕ್ಷಣವೇ ನಮ್ಮ ಪ್ರತಿನಿಧಿಗಳು ಸಮೀಕ್ಷೆ ಆರಂಭಿಸಿದ್ದರು. ಪ್ರತಿ ಮತಗಟ್ಟೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸಮೀಕ್ಷೆ ನಡೆಸಲಾಗಿತ್ತು. ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲೇ ಪ್ರಶ್ನೆ ಕೇಳಲಾಗಿತ್ತು.


First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...