• Home
  • »
  • News
  • »
  • national-international
  • »
  • Gujarat Election Exit Poll Result: ಗುಜರಾತ್​ ಮತ್ತೆ ಬಿಜೆಪಿ ತೆಕ್ಕೆಗೆ: ಕಾಂಗ್ರೆಸ್​, ಆಪ್​ಗೆ ಭಾರೀ ನಿರಾಸೆ!

Gujarat Election Exit Poll Result: ಗುಜರಾತ್​ ಮತ್ತೆ ಬಿಜೆಪಿ ತೆಕ್ಕೆಗೆ: ಕಾಂಗ್ರೆಸ್​, ಆಪ್​ಗೆ ಭಾರೀ ನಿರಾಸೆ!

ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ

ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ

ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ಕೂಡಲೇ ಎಕ್ಸಿಟ್ ಪೋಲ್ ಅಂದಾಜುಗಳು ಬರಲಾರಂಭಿಸಿವೆ. ಆರಂಭಿಕ ಅಂದಾಜಿನಲ್ಲಿ, ಬಿಜೆಪಿಗೆ ಭಾರಿ ಬಹುಮತ ಸಿಗಲಿದೆ ಎಂದು ಊಹಿಸಲಾಗಿದೆ. ಆದರೆ ಕಾಂಗ್ರೆಸ್ ಪಕ್ಷವು 2017 ರ ಚುನಾವಣಾ ಫಲಿತಾಂಶಗಳ ಅಂಕಿ ಅಂಶಗಳಿಗಿಂತ ಮತ್ತಷ್ಟು ಕುಸಿದಿದೆ. ಹುಮ್ಮಸ್ಸಿನಲ್ಲಿದ್ದ ಆಮ್ ಆದ್ಮಿ ಪಕ್ಷ 2ರಿಂದ 10 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.

ಮುಂದೆ ಓದಿ ...
  • News18 Kannada
  • Last Updated :
  • Ahmadabad (Ahmedabad) [Ahmedabad], India
  • Share this:

ಅಹಮದಾಬಾದ್: ಗುಜರಾತ್​ನಲ್ಲಿ (Gujarat Elections) ಎರಡನೇ ಹಂತದ (Second Phase Polls) ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಶೇ.60ಕ್ಕಿಂತ ಹೆಚ್ಚು ಮತ ಚಲಾವಣೆಯಾಗಿದ್ದು, ಕೊನೆಯ ಹಂತದ ವಿಧಾನಸಭೆ ಚುನಾವಣೆಯಲ್ಲಿ (Gujarat Assembly Elections) ಶೇ.58ಕ್ಕೂ ಹೆಚ್ಚು ಮತದಾನವಾಗಿದೆ. ಎರಡನೇ ಹಂತದ ಮತದಾನದ ಬಳಿಕ ವಿವಿಧ ಸಮೀಕ್ಷೆ ಸಂಸ್ಥೆಗಳ ಎಕ್ಸಿಟ್ ಪೋಲ್ ಅಂದಾಜುಗಳು ಬಂದಿವೆ. ಎಲ್ಲ ಸಮೀಕ್ಷೆಗಳಲ್ಲಿ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ಭವಿಷ್ಯವನ್ನೇ ನುಡಿದಿವೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಎಲ್ಲಾ ಹೇಳಿಕೆಗಳ ಹೊರತಾಗಿಯೂ, ಪಕ್ಷದ ಕಾರ್ಯಕ್ಷಮತೆ ಸುಧಾರಿಸಿಲ್ಲ. ಎಕ್ಸಿಟ್ ಪೋಲ್‌ನಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಹಿಂದುಳಿದಿದೆ.


ಎಕ್ಸಿಟ್ ಪೋಲ್‌ಗಳ ಅಂದಾಜಿನ ಪ್ರಕಾರ ಗುಜರಾತ್ ಚುನಾವಣೆಯಲ್ಲಿ ದೊಡ್ಡ ಭರವಸೆಗಳನ್ನು ನೀಡಿದ ಆಮ್ ಆದ್ಮಿ ಪಕ್ಷದ ಕಾರ್ಯಕ್ಷಮತೆ ಕೂಡ ನಿರಾಶಾದಾಯಕವಾಗಿದೆ. ವಿವಿಧ ಸಮೀಕ್ಷಾ ಏಜೆನ್ಸಿಗಳ ಎಕ್ಸಿಟ್ ಪೋಲ್‌ಗಳಲ್ಲಿ ಆಮ್ ಆದ್ಮಿ ಪಕ್ಷವು ಕೇವಲ 10 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ: Assembly Elections: ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ರೆಡಿಯಾಗಿದೆ ಬಿಜೆಪಿ ಮಾಸ್ಟರ್​ ಪ್ಲಾನ್!


ಎಕ್ಸಿಟ್ ಪೋಲ್ ಅಂಕಿಅಂಶಗಳನ್ನು ನೋಡಿದರೆ, ರಿಪಬ್ಲಿಕ್ ನ್ಯೂಸ್‌ನ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ಗುಜರಾತ್‌ನಲ್ಲಿ ಸಂಪೂರ್ಣ ಬಹುಮತದ ಸಾಧ್ಯತೆಯನ್ನು ತೋರಿಸಿದೆ. ಇದರ ಪ್ರಕಾರ ರಾಜ್ಯದಲ್ಲಿ ಪಕ್ಷ 128 ರಿಂದ 148 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷ ಕೇವಲ 30ರಿಂದ 42 ಸ್ಥಾನಗಳಿಗೆ ಸೀಮಿತವಾದಂತಿದೆ. ಇದಲ್ಲದೆ, ಆಮ್​ ಆದ್ಮಿ 2 ರಿಂದ 10 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.


ವಿವಿಧ ಏಜೆನ್ಸಿಗಳ ಅಂದಾಜು ಹೀಗಿದೆ


* ರಿಪಬ್ಲಿಕ್ ಟಿವಿ ಎಕ್ಸಿಟ್ ಪೋಲ್ ಪ್ರಕಾರ ಗುಜರಾತ್ ನಲ್ಲಿ ಭಾರತೀಯ ಜನತಾ ಪಕ್ಷ 128 ರಿಂದ 148 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ ಪಕ್ಷ 30-42 ಮತ್ತು ಎಎಪಿ 2 ರಿಂದ 10 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಇತರರು 0 ರಿಂದ 3 ಸ್ಥಾನಗಳನ್ನು ಪಡೆಯಬಹುದು.


* ನ್ಯೂಸ್ ಎಕ್ಸ್ ಮತ್ತು ಜನ್ ಕಿ ಬಾತ್ ನ ಎಕ್ಸಿಟ್ ಪೋಲ್ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆಯಬಹುದು. ಬಿಜೆಪಿಗೆ 117 ರಿಂದ 140 ಸ್ಥಾನಗಳು, ಕಾಂಗ್ರೆಸ್‌ಗೆ 34 ರಿಂದ 51 ಸ್ಥಾನಗಳು, ಎಎಪಿಗೆ 6 ರಿಂದ 13 ಸ್ಥಾನಗಳು ಮತ್ತು ಇತರರಿಗೆ 1 ರಿಂದ 2 ಸ್ಥಾನಗಳು ಎಂದು ಸಂಸ್ಥೆ ಭವಿಷ್ಯ ನುಡಿದಿದೆ.


ಇದನ್ನೂ ಓದಿ: Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಬಿಗ್ ಶಾಕ್, 26 ಕೈ ನಾಯಕರು ಬಿಜೆಪಿಗೆ ಸೇರ್ಪಡೆ!


* TV9 Bharatvarsh ನ ಎಕ್ಸಿಟ್ ಪೋಲ್ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ 125-130 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ 40 ರಿಂದ 50 ಸ್ಥಾನಗಳನ್ನು ಮತ್ತು ಆಮ್ ಆದ್ಮಿ ಪಕ್ಷವು ಕೇವಲ 3 ರಿಂದ 5 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಪಕ್ಷೇತರರು 3ರಿಂದ 7 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು