Exit Poll Result 2020: ದೆಹಲಿ ಮತಗಟ್ಟೆ ಸಮೀಕ್ಷೆ; ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆಯತ್ತ ಅರವಿಂದ ಕೇಜ್ರಿವಾಲ್?

ಈ ಬಾರಿ ದೆಹಲಿ ಚುನಾವಣೆಯಲ್ಲಿ ಕೇವಲ ಶೇ.54.97 ರಷ್ಟು ಮಾತ್ರ ಮತದಾನವಾಗಿದ್ದು, ಫಲಿತಾಂಶ ಯಾವುದೇ ಪಕ್ಷದ ಪರ ಬಂದರೂ ಅಚ್ಚರಿ ಇಲ್ಲ ಎಂದೂ ಹೇಳಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ದೆಹಲಿಯಲ್ಲಿ ಶೇ. 67 ರಷ್ಟು ಮತದಾನ ದಾಖಲಾಗಿತ್ತು.

ಅರವಿಂದ ಕೇಜ್ರಿವಾಲ್.

ಅರವಿಂದ ಕೇಜ್ರಿವಾಲ್.

  • Share this:
ಬಾರೀ ಕುತೂಹಲಕ್ಕೆ ಕಾರಣವಾಗಿದ್ದ ದೆಹಲಿ ವಿಧಾನಸಭಾ ಚುನಾವಣೆ ಕೊನೆಗೂ ಅಂತ್ಯ ಕಂಡಿದೆ. ಚುನಾವಣೆ ಮುಗಿಯುತ್ತಿದ್ದಂತೆ ಚುನಾವಣಾ ನಂತರ ಸಮೀಕ್ಷೆಗಳು ಹೊರ ಬೀಳುತ್ತಿದ್ದು ಎಲ್ಲಾ ಸಮೀಕ್ಷೆಗಳು ಮತ್ತೊಮ್ಮೆ ದೆಹಲಿ ಗದ್ದುಗೆ ಮೇಲೆ ಅರವಿಂದ ಕೇಜ್ರಿವಾಲ್ ಅವರ ಆಪ್ ದ್ವಜ ಹಾರುವುದು ಖಚಿತ ಎನ್ನುತ್ತಿವೆ.

ಕಳೆದ ಕಾಂಗ್ರೆಸ್​ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಸಂಘಟಿಸಿದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿದ "ಅಮ್ ಆದ್ಮಿ" ಪಕ್ಷ ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ದೆಹಲಿಯ ಗದ್ದುಗೆಗೆ ಏರಿತ್ತು. 2015ರಲ್ಲಿ ನಡೆದ ವಿಧಾನಸಣಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಮತದಾರ 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಮನ್ನಣೆ ನೀಡಿದ್ದ.

ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಮ್ ಆದ್ಮಿಗೆ ಪ್ರಬಲ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಯೂ ಇದೆ ಎನ್ನಲಾಗಿತ್ತು. ಆದರೆ, ಕಳೆದ ಐದು ವರ್ಷದ ಆಡಳಿತ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ ಸೇರಿದಂತೆ ದೆಹಲಿಯ ಮೂಲಭೂತ ಸೌಲಭ್ಯ ವಿಭಾಗದಲ್ಲಿ ಆಮ್​ ಆದ್ಮಿ ಅಕ್ಷರಶಃ ಕ್ರಾಂತಿಯನ್ನೇ ನಡೆಸಿದ್ದು, ಇದರ ಪರಿಣಾಮ ಮಧ್ಯಮ ವರ್ಗದ ಸಮಾಜ ಮತ್ತೊಮ್ಮೆ ಆಪ್ ಸರ್ಕಾರವನ್ನೇ ಬಯಸಿದೆ ಎನ್ನುತ್ತಿವೆ ಚುನಾವಣಾ ಸಮೀಕ್ಷೆಗಳು.

ಈ ಬಾರಿ ದೆಹಲಿ ಚುನಾವಣೆಯಲ್ಲಿ ಕೇವಲ ಶೇ.54.97 ರಷ್ಟು ಮಾತ್ರ ಮತದಾನವಾಗಿದ್ದು, ಫಲಿತಾಂಶ ಯಾವುದೇ ಪಕ್ಷದ ಪರ ಬಂದರೂ ಅಚ್ಚರಿ ಇಲ್ಲ ಎಂದೂ ಹೇಳಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ದೆಹಲಿಯಲ್ಲಿ ಶೇ. 67 ರಷ್ಟು ಮತದಾನ ದಾಖಲಾಗಿತ್ತು.

ವಿವಿಧ ಸಮೀಕ್ಷಾ ಸಂಸ್ಥೆಗಳು ನೀಡಿರುವ ಚುನಾವಣಾ ನಂತರ ಫಲಿತಾಂಶ

ಟೈಮ್ಸ್​ ನೌ : ಆಮ್ ಆದ್ಮಿ​ 44, ಬಿಜೆಪಿ 26, ಕಾಂಗ್ರೆಸ್​ 00.

ಇಂಡಿಯಾ ನ್ಯೂಸ್​ : ಕಾಂಗ್ರೆಸ್ (53-57), ಬಿಜೆಪಿ (11-17), ಕಾಂಗ್ರೆಸ್​ (00-02)

ರಿಪಬ್ಲಿಕ್ : ಆಪ್​ (48-61), ಬಿಜೆಪಿ (09-21), ಕಾಂಗ್ರೆಸ್​ (0-1)

 
First published: