ಬೇಸಿಗೆಯಲ್ಲಿ ಕಪ್ಪು ಕೋಟು ಧರಿಸುವುದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಸಲ್ಲಿಸಿದ ವಕೀಲ

ಸುಪ್ರೀಂ ಕೋರ್ಟ್​

ಸುಪ್ರೀಂ ಕೋರ್ಟ್​

ವಕೀಲರ ಡ್ರೆಸ್ ಕೋಡ್ ಅನ್ನು ವಕೀಲರ ಕಾಯಿದೆ 1961 ರ ಅಡಿಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ ಮತ್ತು ವಕೀಲರು ಬಿಳಿ ಅಂಗಿ ಮತ್ತು ಬಿಳಿ ಕುತ್ತಿಗೆ ಪಟ್ಟಿಯೊಂದಿಗೆ ಕಪ್ಪು ಕೋಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

 • Share this:

  ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಲು ಮಾನ್ಯತೆ ಪಡೆದಿರುವ ವಕೀಲರು ಹಾಗೂ ಹೈಕೋರ್ಟಿನ ವಕೀಲರು ನ್ಯಾಯಲಯದ ಕಲಾಪದ ವೇಳೆ ಕಪ್ಪು ಕೋಟುಗಳು ಮತ್ತು ಗೌನ್‌ಗಳನ್ನು ಧರಿಸುವುದಕ್ಕೆ ವಿನಾಯಿತಿ  ನೀಡುವಂತೆ  ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ವಿಚಾರವಾಗಿ ಕೋರ್ಟ್​ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ,


  ಈ ಮನವಿಯಲ್ಲಿ ಹೀಗೆ ತಿಲಿಸಲಾಗಿದ್ದು ಬೇಸಿಗೆಯು ಕೆಲವೊಂದು ರಾಜ್ಯಗಳಲ್ಲಿ ಸಾಕಷ್ಟು ಪ್ರಕರವಾಗಿರುತ್ತದೆ, ಅಲ್ಲದೇ ಇಂತಹ ಸಂದರ್ಭದಲ್ಲಿ ವಕೀಲರು ಕಪ್ಪು ಕೋಟು ಧರಿಸಿ ವಾದ- ವಿವಾದಗಳಲ್ಲಿ ಪಾಲ್ಗೊಳ್ಳುವುದು ಅತ್ಯಂತ ಕಷ್ಟ ಕೆಲಸ ಆದ ಕಾರಣ ಈ ವಿನಾಯಿತಿ ನೀಡುವಂತೆ ಮನವಿಯಲ್ಲಿ ಹೇಳಲಾಗಿದೆ. ಈ ಮನವಿಯಲ್ಲಿ ಮತ್ತೊಂದು ಅಂಶವನ್ನು ಸೇರಿಸಲಾಗಿದ್ದು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ತಮ್ಮ ನಿಯಮಗಳನ್ನು ತಿದ್ದುಪಡಿ ಮಾಡಲು ಮತ್ತು ವಕೀಲರಿಗೆ ಕಪ್ಪು ಕೋಟುಗಳು ಮತ್ತು ನಿಲುವಂಗಿಗಳನ್ನು ಧರಿಸುವುದರಿಂದ ವಿನಾಯಿತಿ ನೀಡುವ ಕಾಲಾವಧಿಯನ್ನು ನಿರ್ಧರಿಸಲು ನಿರ್ದೇಶನ ನೀಡಬೇಕೆಂದು ಕೋರಿದೆ.

  ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಬೇಸಿಗೆಯಲ್ಲಿ ಕೋಟುಗಳನ್ನು ಧರಿಸುವುದರಿಂದ ವಕೀಲರು ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ಹೋಗುವುದು ಕಷ್ಟವಾಗುತ್ತದೆ. ಬಿರು ಬೇಸಿಗೆಯಲ್ಲಿ ಕಪ್ಪು ಕೋಟು ಇಲ್ಲದ ಯಾತನೆ ನೀಡುತ್ತದೆ. ಆದ ಕಾರಣ ಈ ವಿನಾಯಿತಿಗೆ ಘನ ನ್ಯಾಯಲಯ ಸೂಚಿಸಬೇಕಾಗಿ ಕೇಳಲಾಗಿದೆ.


  ವಕೀಲರ ಡ್ರೆಸ್ ಕೋಡ್ ಅನ್ನು ವಕೀಲರ ಕಾಯಿದೆ 1961 ರ ಅಡಿಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ ಮತ್ತು ವಕೀಲರು ಬಿಳಿ ಅಂಗಿ ಮತ್ತು ಬಿಳಿ ಕುತ್ತಿಗೆ ಪಟ್ಟಿಯೊಂದಿಗೆ ಕಪ್ಪು ಕೋಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.


  ನಿಯಮಗಳ ಪ್ರಕಾರ, ವಕೀಲರು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನಲ್ಲಿ ಹಾಜರಾಗುವಾಗ ಈ ಡ್ರೆಸ್​ ಕೋಡ್​ಅನ್ನು ಪಾಲಿಸಲೇ ಬೇಕು ಹಾಗೂ  ವಕೀಲರ ಗೌನ್ ಧರಿಸುವುದು ಅವರವರ ಇಷ್ಟಕ್ಕೆ ಬಿಟ್ಟ ವಿಚಾರ ಎಂದೂ ಹೇಳಲಾಗಿದೆ.


  ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಶಿವಸೇನಾ ನಾಯಕ ಸಚಿವ ಅನಿಲ್ ಪರಬ್​ ವಿಚಾರಣೆಗೆ ಕರೆದ ED


  ಭಾರತದ ಅನೇಕ ರಾಜ್ಯಗಳಲ್ಲಿ ಬೇಸಿಗೆಯ ಕಾವು ಅತ್ಯಂತ ಪ್ರಖರವಾದ ಮಟ್ಟದಲ್ಲಿ ಜನವರಿ ತಿಂಗಳ ಅಂತ್ಯದಿಂದ ಪ್ರಾರಂಭಾಗುತ್ತದೆ. ಆಗ ಅನೇಕ ರಾಜ್ಯಗಳು ಈ ಬೇಸಿಗೆಗೆ ನಲುಗುವುದಂತೂ ಅಕ್ಚರಶಃ ಸತ್ಯ ಆದ ಕಾರಣ ಈ ಮನವಿಯನ್ನು ಸಲ್ಲಿಸಲಾಗಿದೆ. ಅಲ್ಲದೇ ಕಪ್ಪು ಕೋಟು ಹೆಚ್ಚು ಬಿಸಿಯನ್ನು ಹೀರುವ ಕಾರಣ ಸಾಕಷ್ಟು ಕಿರಿಕಿರಿಗೆ ಇದು ಕಾರಣವಾಗುತ್ತದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: