Amazon online: ಆನ್​ಲೈನ್​ನಲ್ಲಿ ಗಾಂಜಾ; ಅಮೇಜಾನ್ ಅಧಿಕಾರಿಗಳ ವಿರುದ್ಧ ಮ.ಪ್ರ. ಪೊಲೀಸರಿಂದ ಪ್ರಕರಣ

ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು. ಈ ಪ್ರಕರಣವನ್ನು ಎನ್‌ಡಿಪಿಎಸ್( NDPS Act) ಕಾಯ್ದೆಯ ಸೆಕ್ಷನ್ 38 ರ ಅಡಿಯಲ್ಲಿ ದಾಖಲಿಸಲಾಗಿದೆ. ಭಿಂಡ್ ಎಸ್ಪಿ ಮನೋಜ್ ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಆನ್​ಲೈನ್​ನಲ್ಲಿ ಗಾಂಜಾ

ಆನ್​ಲೈನ್​ನಲ್ಲಿ ಗಾಂಜಾ

  • News18
  • Last Updated :
  • Share this:
     ಇ- ಕಾಮರ್ಸ್‌  ದೈತ್ಯ ಅಮೆಜಾನ್ ಇಂಡಿಯಾಕ್ಕೆ ( Amazon India booked ) ಭಾರಿ ದೊಡ್ಡ ಸಂಕಷ್ಟ ಎದುರಾಗಿದೆ. ಗಾಂಜಾ ಸರಬರಾಜು ಆರೋಪದಲ್ಲಿ(marijuana online ) ಅಮೆಜಾನ್‌ ಇಂಡಿಯಾಗೆ ಇದೀಗ ಭಾರಿ ಹೊಡೆತ ಬಿದ್ದಿದೆ ಎಂದರೆ ತಪ್ಪಾಗಲಾರದು. ಹೌದು ಮಧ್ಯಪ್ರದೇಶದ (MP Police ) ಭೀಂಡ್ ಪೊಲೀಸರು ಇ-ಕಾಮರ್ಸ್ ಪೋರ್ಟಲ್ ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ (Executive Directors of E-commerce ) ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಂಡಿದೆ. ಭಿಂಡ್ ಜಿಲ್ಲೆಯ ಪೊಲೀಸರು ಆನ್‌ಲೈನ್ (online) ಗಾಂಜಾ ಮಾರಾಟ ದಂಧೆಯನ್ನು ಭೇದಿಸಿದ ನಂತರ ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು. ಈ ಪ್ರಕರಣವನ್ನು ಎನ್‌ಡಿಪಿಎಸ್( NDPS Act) ಕಾಯ್ದೆಯ ಸೆಕ್ಷನ್ 38 ರ ಅಡಿಯಲ್ಲಿ ದಾಖಲಿಸಲಾಗಿದೆ. ಭಿಂಡ್ ಎಸ್ಪಿ ಮನೋಜ್ ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಬೇರೆ ವಿಳಾಸಗಳಿಂದ ಬುಕ್‌ ಮಾಡಿದ ಮತ್ತು ತಲುಪಿಸಲಾದ 20 ನಿಷಿದ್ಧ ಸರಕುಗಳ ವಿವರ ಇನ್ನೂ ಲಭ್ಯವಾಗಿಲ್ಲ ಎನ್ನಲಾಗಿದೆ. ನವೆಂಬರ್ 13 ರಂದೇ ಈ ಪ್ರಕರಣ ದಾಖಲಾಗಿದೆ.

    ಗಾಂಜಾ ವಶಕ್ಕೆ: ಚೀಮಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Bijendra Tomar who hails from Cheemaka police station Gohad Chauraha) ಗ್ವಾಲಿಯರ್ ನಿವಾಸಿಗಳಾದ ಬಿಜೇಂದ್ರ ತೋಮರ್ ಮತ್ತು ಸೂರಜ್ ಅಲಿಯಾಸ್ ಕಲ್ಲು ಪಾವಯ್ಯ ಅವರಿಂದ 21.724 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಗ್ವಾಲಿಯರ್ ನ ಮುಕುಲ್ ಜಯಸಾವಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ಗಾಂಜಾವನ್ನು ಮಹಾಗಾಂವ್ ಮೂಲದ ಚಿತ್ರಾ ಬಾಲ್ಮಿಕಿ ಎಂಬುವವರಿಗೆ ಮಾರಾಟ ಮಾಡಲಾಗಿದೆ. ಬಾಲ್ಮೀಕಿಯನ್ನೂ ಬಂಧಿಸಲಾಗಿದೆ.

    ಆಂಧ್ರಪ್ರದೇಶದಿಂದ ಸರಬರಾಜು

    ಪ್ರಾಥಮಿಕ ವಿಚಾರಣೆಯ ನಂತರ ಈ ಗಾಂಜಾವನ್ನು ಆಂಧ್ರಪ್ರದೇಶದಿಂದ ಆನ್‌ಲೈನ್‌ನಲ್ಲಿ ಅಮೆಜಾನ್ ಗ್ರಾಹಕರಿಗೆ ಸರಬರಾಜು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ, ಆರೋಪಿ ಸೂರಜ್ ಅಲಿಯಾಸ್ ಕಲ್ಲು ಪಾವಯ್ಯ ತನ್ನ ಕಂಪನಿ ASSL Amazon ಅನ್ನು ಇ-ಕಾಮರ್ಸ್ ಪೋರ್ಟಲ್ ಅಮೆಜಾನ್ ಇಂಡಿಯಾದಲ್ಲಿ BABU TEX ಮೂಲಕ GSTIN-37AAFPE9088BIZP ನಲ್ಲಿ ಮಾರಾಟಗಾರನಾಗಿ ನೋಂದಾಯಿಸಿದ್ದರು.

    ಇದನ್ನು ಓದಿ: Pulwama Attackನಲ್ಲಿ ಬಳಸಿದ ಸ್ಫೋಟಕಗಳ ತಯಾರಿಕೆಗೆ Amazon ಮೂಲಕ ಕೆಮಿಕಲ್​​ಗಳ ಖರೀದಿ!



    ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ

    ಭಿಂಡ್ ಪೊಲೀಸರು ಇದುವರೆಗೆ ನಡೆಸಿದ ತನಿಖೆಯ ಆಧಾರದ ಮೇಲೆ, ASSl Amazon ನ ಕಾರ್ಯನಿರ್ವಾಹಕ ನಿರ್ದೇಶಕರನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ ಮತ್ತು ಇದೀಗ ಮಧ್ಯಪ್ರದೇಶ ಪೊಲೀಸರು ಅವರನ್ನು ಬಂಧಿಸಲು ಸಜ್ಜಾಗಿದ್ದಾರೆ. ASSL ಅಮೆಜಾನ್ ಅಧಿಕಾರಿಗಳು ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೂ ಅಮೆಜಾನ್ ಇಂಡಿಯಾ ಹೇಳಿಕೆಯೊಂದರಲ್ಲಿ ತಾವು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದೆ. ಇದುವರೆಗೆ ಒಂದು ಕೋಟಿ ರೂಪಾಯಿ ಮೌಲ್ಯದ ಗಾಂಜಾವನ್ನು ಅಮೆಜಾನ್ ಇಂಡಿಯಾ ಮೂಲಕ ವಿವಿಧ ಖರೀದಿದಾರರಿಗೆ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನು ಓದಿ:Amazon: ಡ್ರಗ್ಸ್ ಸಂಬಂಧಿತ ತಪಾಸಣೆಗೆ ಅಮೇಜಾನ್ ಅಧಿಕಾರಿಗಳು ಸಹಕಾರ ನೀಡದಿದ್ದರೆ ಅವರ ವಿರುದ್ಧವೇ ಕ್ರಮ: ಮಧ್ಯಪ್ರದೇಶ ಎಚ್ಚರಿಕೆ

    ಸಿಹಿತಿಂಡಿ ನೆಪ

    ದಾಖಲಾದ ಪ್ರಕರಣದ ಪ್ರಕಾರ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಸಿಹಿತಿಂಡಿ (sweet item)ಮಾರಾಟ ಮಾಡುವ ನೆಪದಲ್ಲಿ ಗಾಂಜಾವನ್ನು ಮಾರಾಟ ಮಾಡಲಾಗುತ್ತಿತ್ತು. ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್ ಮೂಲಕ ಅಕ್ರಮ ಉತ್ಪನ್ನಗಳ ಮಾರಾಟವನ್ನು ಅನುಮತಿಸುವುದಿಲ್ಲ ಮತ್ತು ಈ ವಿಷಯದ ತನಿಖೆಗೆ ಸಹಕರಿಸುತ್ತಿದೆ ಎಂದು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿತ್ತು. ಪ್ರಕರಣ ಭೇದಿಸಿದ ಪೊಲೀಸ್ ವ್ಯವಸ್ಥೆಯ ದಕ್ಷತೆಯನ್ನು ಎಂಪಿಯ ಸಿ.ಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಅವರು (MP CM Shri Shivraj Singh Chauhan and MP Home Minister Dr Narottam Mishra) ಶ್ಲಾಘಿಸಿದ್ದಾರೆ.
    Published by:vanithasanjevani vanithasanjevani
    First published: