ಬಾಲಾಕೋಟ್ ವಾಯುದಾಳಿ, ಉಗ್ರರನ್ನು ಸದೆಬಡಿದ ಕಾರ್ಯಾಚರಣೆ ಬಗ್ಗೆ ನ್ಯೂಸ್​​-18 ಜೊತೆ ಮಿರಜ್​ ಪೈಲೆಟ್​ಗಳ ಮಾತು

1971ರ ಯುದ್ಧದ ಅನಂತರ ಮೊದಲ ಬಾರಿಗೆ ಐಎಎಫ್ ವಿಮಾನಗಳು, ಗಡಿನಿಯಂತ್ರಣ ರೇಖೆಯನ್ನು ದಾಟಿವೆ. ಯಾವ ಸ್ಥಳದ ಮೇಲೆ ದಾಳಿ ಮಾಡಬೇಕೆಂದು ಮೊದಲೇ ಪೇಲೋಡ್​​ಗಳಲ್ಲಿ ಪ್ರೋಗ್ರಾಮಿಂಗ್​​ ಇನ್ಸ್ಟಾಲ್​​ ಮಾಡಲಾಗಿತ್ತು.

Ganesh Nachikethu | news18
Updated:June 25, 2019, 8:01 PM IST
ಬಾಲಾಕೋಟ್ ವಾಯುದಾಳಿ, ಉಗ್ರರನ್ನು ಸದೆಬಡಿದ ಕಾರ್ಯಾಚರಣೆ ಬಗ್ಗೆ ನ್ಯೂಸ್​​-18 ಜೊತೆ ಮಿರಜ್​ ಪೈಲೆಟ್​ಗಳ ಮಾತು
ಮಿರೇಜ್ ಜೆಟ್
  • News18
  • Last Updated: June 25, 2019, 8:01 PM IST
  • Share this:
ಸಂದೀಪ್​​ ಬೋಲ್​​

ನವದೆಹಲಿ(ಜೂ. 25): ಪುಲ್ವಾಮ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಗಡಿಭಾಗದಲ್ಲಿದ್ದ ಜೈಷ್-ಎ-ಮೊಹಮ್ಮದ್​ ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿ ಪಾಕ್​​​ ನಿದ್ದೆಗೆಡಿಸಿತ್ತು. ಬಾಲಾಕೋಟ್​ಗೆ ಭಾರತೀಯ ವಿಮಾನಗಳು ನುಗ್ಗಿ ದಾಳಿ ನಡೆಸಿದ್ದ ಪರಿಣಾಮ, ಸುಮಾರು 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಭಾರತದ ಮಿಲಿಟರಿ ಈ ವೈಮಾನಿಕ ದಾಳಿ ಮಾಡಲು ಸಾಕಷ್ಟು ಶ್ರಮ ಹಾಕಿತ್ತು. ಪಾಕ್ ನೆಲದಲ್ಲಿ ಭಾರತ ಏರ್ ಸ್ಟ್ರೈಕ್ ನಡೆಸುವ ಕಾರ್ಯಾಚರಣೆ​​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಯು ಸೇನೆಯ ಉನ್ನತ ಅಧಿಕಾರಿಗಳಿಗೆ ಮಾತ್ರ ಗೊತ್ತಿತ್ತು. ಎಲ್ಲಿಯೂ ಕಾರ್ಯಾಚರಣೆ​​ ಗುಟ್ಟನ್ನು ರಟ್ಟು ಮಾಡದೇ, ಗೌಪ್ಯವಾಗಿಯೇ ಇರಿಸಲಾಗಿತ್ತು. ಬಾಲಾಕೋಟ್​​ಗೆ ನುಗ್ಗಿ ವೈಮಾನಿಕ ದಾಳಿ ಮಾಡಿದ್ದ ಇಬ್ಬರು ಪೈಲೆಟ್​ಗಳನ್ನು ಖುದ್ದು ನ್ಯೂಸ್​​-18 ಮಾತಾಡಿಸಿದೆ. ಈ ವಾಯುದಾಳಿ ಕಾರ್ಯಾಚರಣೆಯ ಸಂಪೂರ್ಣ​ ಮಾಹಿತಿ​ ಬಿಚ್ಚಿಡುವ ಒಂದು ಸಣ್ಣ ಪ್ರಯತ್ನ ಇದಾಗಿದೆ.

ಪಾಕಿಸ್ಥಾನ -ಭಾರತ ಗಡಿ ನಿಯಂತ್ರಣ ರೇಖೆಯಿಂದ ಕೇವಲ 80 ಕಿ.ಮೀ. ದೂರದಲ್ಲಿರುವುದೇ ಬಾಲಾಕೋಟ್‌ ನಗರ. ಬಾಲಾಕೋಟ್‌ನಿಂದ ಬರೀ ಇಪ್ಪತ್ತೇ ಕಿ.ಮೀ. ದೂರದಲ್ಲಿ, ಕುಹ್ನರ್‌ ನದಿ ದಡದಲ್ಲಿತ್ತು ಆ ಜೈಷ್- ಎ- ಮೊಹಮ್ಮದ್‌ ತರಬೇತಿ ಶಿಬಿರ. ಈ ಉಗ್ರರ ತರಬೇತಿ ಕೇಂದ್ರ ಕೆಲ ದಿನಗಳ ಮುನ್ನವೇ ಪ್ರಾರಂಭವಾಗಿತ್ತು. ಇದೇ ತರಬೇತಿ ಕೇಂದ್ರದ ಮತ್ತು ಇತರ ಮೂರು ಸ್ಥಳಗಳ ಮೇಲೆ ಐಎಎಫ್ ಮಿರಜ್‌ 2000 ಯುದ್ಧ ವಿಮಾನಗಳ ಮೂಲಕ ಬಾಂಬ್‌ಗಳನ್ನು ಹಾಕಲು ತಯಾರಿ ನಡೆಸಿಕೊಂಡಿದ್ದೆವು ಎಂದು ಪೆಲೆಟ್​​ ಒಬ್ಬರು ನ್ಯೂಸ್​​-18 ಜತೆಗೆ ಮಾಹಿತಿ ಹಂಚಿಕೊಂಡರು.

ಬಾಲಾಕೋಟ್​​ ಮಿಷನ್​​ಗಾಗಿ ಪೈಲೆಟ್​​ಗಳನ್ನು ಆಯ್ಕೆ ಮಾಡಲಾಗಿತ್ತಾದರೂ, ಯಾರು ಎಂಬುದನ್ನು ಹೇಳಿರಲಿಲ್ಲ. ಯಾರಿಗೂ ಯಾರನ್ನು ಕಳಿಸಬಹುದೆಂಬ ಅರಿವು ಇರಲಿಲ್ಲ.  ದಾಳಿಗೆ ಬಳಸಲಾಗಿದ್ದ ಮಿರಜ್ ಹಾಗೂ ವಿಮಾನಗಳು ಕಾರ್ಯಾಚರಣೆಯ ಗುರಿ ತಲುಪಲು ಪ್ರಯತ್ನಿಸುತ್ತಲೇ ಇದ್ದವು. ಪಾಕ್​​ ನೆಲದ ಮೇಲೆ ಏರ್​​ ಸ್ಟ್ರೈಕ್​​ ನಡೆಯುವ ಒಂದು ದಿನದ ಮುನ್ನ ಮಾತ್ರ ಪೇಲೋಡ್ಸ್​​ ಮತ್ತು ಕ್ಷಿಪಣಿಗಳನ್ನು ಜೋಡಣೆ​​ ಮಾಡಲಾಗಿತ್ತು. ಸ್ಪೈಸ್​​ 2000 ಮತ್ತು ಕ್ರಿಸ್ಟಲ್​​​ ಮೇಜ್​​ ಬಾಂಬ್​​ಗಳನ್ನು ವಿಮಾನಗಳಿಗೆ ಜೋಡಣೆ ಮಾಡಿದೆವು ಎಂದು ಹೇಳುತ್ತಾರೆ.

ಇದನ್ನೂ ಓದಿ: Reservation: ಮೀಸಲಾತಿಯ ಬಗೆಗಿನ ಪ್ರಶ್ನೆಗಳು ಮತ್ತು ಉತ್ತರಗಳು

ಹೀಗೆ ಮಾತು ಮುಂದುವರೆಸಿದ ಅವರು, 6 ಮಿರಜ್​​ಗಳಿಗೆ ತಲಾ ಎರಡು ಪೈಲೆಟ್​​ಗಳಂತೆ 12 ಮಂದಿಯನ್ನು ಕಳಿಸಲು ನಿರ್ಧಾರ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಓರ್ವ ಪೈಲೆಟ್​​ ಮಾತ್ರ ನಾನು ಈ ಕಾರ್ಯಾಚರಣೆಗಾಗಿ ಯಾವಾಗ ಬೇಕಾದರೂ ಪ್ರಾಣ ನೀಡಲು ಸಿದ್ಧ ಎಂದಿದ್ದರು. ಆದರೆ, ಆತನನ್ನೇ ಆಯ್ಕೆ ಮಾಡಿದ್ದ ಕೂಡಲೇ ಆತನ ಹುಮ್ಮಸ್ಸು ಕುಗ್ಗಲು ಶುರುವಾಯ್ತು. ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಸಹಜವಾಗಿಯೇ ವರ್ತಿಸುತ್ತಿದ್ದರಾದರೂ, ಎಲ್ಲೋ ಒಂದು ಕಡೆ ಈತನಿಗೆ ಈ ಕಾರ್ಯಾಚರಣೆ​​​​ ಭಾರೀ ಸವಾಲಾಗಿ, ಗೋಚರಿಸಿತ್ತು. ಈ ವಿಚಾರವನ್ನು ಗೌಪ್ಯವಾಗಿರಿಸಿದ್ದ ವಾಯುಸೇನೆಗೂ ತುಸು ಹೆಚ್ಚೇ ತಲೆನೋವಾಗಿ ಪರಿಣಮಿಸಿತ್ತು ಎಂದು ಪೈಲೆಟ್​​ ತಮ್ಮ ಅನುಭವವನ್ನು ಬಿಚ್ಚುಡುತ್ತಲೇ ಹೋದರು.

ಇನ್ನು ಜೈಷ್- ಎ- ಮೊಹಮ್ಮದ್‌ ತರಬೇತಿ ಕ್ಯಾಂಪ್‌ ಮೇಲೆ ಪೇಲೋಡ್​​ ಹಾಕಿದ ಮೇಲೆ ನಾವು ಭಾರತಕ್ಕೆ ವಾಪಸ್ಸಾಗಬೇಕು ಎಂದು ಸೂಚಿಸಲಾಗಿತ್ತು. ಅಂತೆಯೇ 6 ಮಿರಜ್​ಗಳು ಪೇಲೋಡ್​​ ಬಾಂಬ್​ಗಳನ್ನು​​ ಹಾಕಿದ್ದ ಕೂಡಲೇ ಮರಳಿದ್ದೆವು ಎಂದು ತಿಳಿಸಿದರು.ಕೇವಲ 60 ರಿಂದ 90 ಸೆಕೆಂಡ್​​ಗಳಲ್ಲಿ ನಾವು ಮರಳಬೇಕಿತ್ತು. ನಮ್ಮ ಟಾರ್ಗೆಟ್​​ ರೀಚ್​ ಮಾಡಿದ್ದೇ ತಡ ನಾವು ಭಾರತಕ್ಕೆ ವಾಪಸ್ಸಾದೆವು. ಯಾವುದೇ ಅಡೆತಡೆ ಆಗಲಿಲ್ಲ. ಇದಕ್ಕೆ ನಮಗೆ ವಾಯಸೇನೆ ಸಂಪೂರ್ಣ ಸಹಕಾರ ನೀಡಿತ್ತು ಎನ್ನುತ್ತಾರೆ ಮತ್ತೋರ್ವ ಪೈಲೆಟ್​.

ಪುಲ್ವಾಮಾ ಘಟನೆಗೆ ವೈಮಾನಿಕ ದಾಳಿಯ ಮೂಲಕವೇ ಪ್ರತೀಕಾರ ತೀರಿಸಿಕೊಂಡ ಬೆನ್ನಲ್ಲೇ ನಮಗೆ ಮನೆಯಿಂದ ಫೋನ್​​ ಕಾಲ್​ಗಳು ಬರಲಾರಂಭಿಸಿದವು. ನಾವು ಮಾತ್ರ ಏರ್​​ ಸ್ಟ್ರೈಕ್​​ ನಡೆಸಿದ ಬಳಿಕ ಮೊಬೈಲ್​​ ಸ್ವಿಚ್ಡ್​​ ಆಫ್​​ ಮಾಡಿಕೊಂಡಿದ್ದೆವು. ಎರಡು ದಿನಗಳ ಕಾಲ ಸಂಪೂರ್ಣ ನಿದ್ದೆ ಮಾಡಿದೆವು. ನಂತರ ನಮ್ಮ ರಜೆ ತೆಗೆದುಕೊಳ್ಳದೆ, ಕೆಲಸದಲ್ಲಿ ತೊಡಗಿಕೊಂಡೆವು ಎಂದು ತಿಳಿಸಿದರು.

1971ರ ಯುದ್ಧದ ನಂತರ ಮೊದಲ ಬಾರಿಗೆ ಐಎಎಫ್ ವಿಮಾನಗಳು, ಗಡಿನಿಯಂತ್ರಣ ರೇಖೆಯನ್ನು ದಾಟಿವೆ. ಯಾವ ಸ್ಥಳದ ಮೇಲೆ ದಾಳಿ ಮಾಡಬೇಕೆಂದು ಮೊದಲೇ ಪೇಲೋಡ್​​ಗಳಲ್ಲಿ ಪ್ರೋಗ್ರಾಮಿಂಗ್​​ ಇನ್ಸ್ಟಾಲ್​​ ಮಾಡಲಾಗಿತ್ತು. ಇದಕ್ಕೆ ಜಿಪಿಎಸ್​​​ ಮೂಲಕ ಸಂಪರ್ಕ ಕಲ್ಪಿಸಲಾಗಿತ್ತು. ಈ ಪೇಲೋಡ್​​ಗಳು ಎಷ್ಟು ಅದ್ಭುತ ಎಂದರೇ, ಹೇಗೆ ಪ್ರೀ-ಪ್ರೋಗ್ರಾಂ ಇನ್ಸ್ಟಾಲ್​​ ಮಾಡಲಾಗಿತ್ತೋ, ಅದೇ ರೀತಿಯಾಗಿ ತಮ್ಮ ಗುರಿ ತಲುಪಿದವು  ಎಂದು ಸಂತೋಷ ವ್ಯಕ್ತಪಡಿಸಿದರು ಪೈಲೆಟ್​ಗಳು.
-----------------
First published:June 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading