Jamaishashti Offer: ಕೇವಲ ₹299ಕ್ಕೆ 21 ಬಗೆಯ ತಿನಿಸುಗಳ ಆಫರ್! ಇದು ಜಮೈಷಷ್ಠಿ ಹಬ್ಬದ ವಿಶೇಷ ಕೊಡುಗೆ

ಜಮೈಷಷ್ಠಿ ಹಬ್ಬದ ವಿಶೇಷ ಕೊಡುಗೆ

ಜಮೈಷಷ್ಠಿ ಹಬ್ಬದ ವಿಶೇಷ ಕೊಡುಗೆ

ಜಮೈ ಷಷ್ಠಿಯು ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರುವ ದೊಡ್ಡ ಆಚರಣೆಯಾಗಿದೆ. ಆದರೆ ಕಾಲ ಬದಲಾದಂತೆ ಆಚರಣೆಯಲ್ಲೂ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು, ಈ ದಿನದಂದು ಪದ್ಧತಿಯ ಪ್ರಕಾರ ಅಳಿಯನಿಗೆ ಅದ್ಧೂರಿಯಾಗಿ ಊಟ ಹಾಕುತ್ತಾರೆ.

  • Local18
  • 5-MIN READ
  • Last Updated :
  • Share this:

ಸಿಲಿಗುರಿ: ಪ್ರತಿಯೊಂದು ಊರಿನಲ್ಲೂ ಆಯಾಯಾ ಪ್ರದೇಶದ ಹಬ್ಬಗಳು, ಆಚರಣೆಗಳು ಆಚರಿಸ್ಪಡುತ್ತದೆ. ಅದರಂತೆ ಜಮೈ ಷಷ್ಠಿ (Jamaishashti Festival) ಅನ್ನೋದು ಬಂಗಾಳಿಯ ಸಾಂಪ್ರದಾಯಿಕ (Bengali Ritual) ಸಾಂಸ್ಕೃತಿಕ ಆಚರಣೆಯನ್ನು ಮಾಡಲಾಗುತ್ತದೆ. ಇದನ್ನು ಜೈಷ್ಠ ಮಾಸದಲ್ಲಿ ನಡೆಸಲಾಗುತ್ತದೆ. ಈ ಆಚರಣೆಯ ಪ್ರಕ್ರಿಯೆಯನ್ನು ನೋಡಿದರೆ ನಿಜಕ್ಕೂ ಹೊಸಬರಿಗೆ ಅಚ್ಚರಿ ಅನ್ನಿಸುತ್ತದೆ.


ಹೌದು.. ಜಮೈ ಶಾಸ್ತಿ ಆಚರಣೆಯ ದಿನ ವಿವಾಹಿತ ಮಹಿಳೆಯರು ಮತ್ತು ಅಳಿಯಂದಿರನ್ನು ಸಂಬಂಧಿಕರ ಮನೆಗೆ ಆಹ್ವಾನಿಸಲಾಗುತ್ತದೆ. ಜಮೈ ಷಷ್ಠಿಯು ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರುವ ದೊಡ್ಡ ಆಚರಣೆಯಾಗಿದೆ. ಆದರೆ ಕಾಲ ಬದಲಾದಂತೆ ಆಚರಣೆಯಲ್ಲೂ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು, ಈ ದಿನದಂದು ಪದ್ಧತಿಯ ಪ್ರಕಾರ ಅಳಿಯನಿಗೆ ಅದ್ಧೂರಿಯಾಗಿ ಊಟ ಹಾಕುತ್ತಾರೆ. ಆದ್ದರಿಂದ, ವಿಶೇಷ ಅಂದರೆ ಪ್ರತಿಯೊಬ್ಬರೂ ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿ ತಿನ್ನಬೇಕು.


ಇದನ್ನೂ ಓದಿ: Garden Lizards: ಯಾರಿಗೂ ಕಮ್ಮಿ ಇಲ್ಲದಂತೆ ಜಬರ್ದಸ್ತ್‌ ಫೈಟಿಂಗ್‌ನಲ್ಲಿ ಜಗವನ್ನೇ ಮರೆತ ಅಪರೂಪದ ಹಲ್ಲಿಗಳು!


ಕಡಿಮೆ ಬೆಲೆಗೆ ಹೆಚ್ಚು ಐಟಂಗಳು


ಜಮೈ ಶಾಸ್ತ್ರಿಯ ದಿನ ಸಿಲಿಗುರಿಯ ವಾರ್ಡ್ ನಂ. 23, ಪ್ರಿತಿಲತಾ ರಸ್ತೆಯಲ್ಲಿರುವ "ತಾಂಗ್ರಾ ರೆಸ್ಟೋರೆಂಟ್" ನಲ್ಲಿ ಜಮೈಷಷ್ಠಿಯ ವಿಶೇಷ ಕೊಡುಗೆಯಾಗಿ ಕೇವಲ 299 ರೂಪಾಯಿಗೆ 21 ಬಗೆಯ ತಿನಿಸುಗಳನ್ನು ಕೊಡುತ್ತಾರೆ. ಇದೊಂದು ವಿಶೇಷ ದಿನದ ಆಫರ್ ಆಗಿದ್ದು, ಅದರಲ್ಲಿ, ಬೆಂಡೆಕಾಯಿ ಪಟುರಿ, ಪೋಟಲ್ ಪೋಸ್ಟಾ, ಹಸಿ ಬಾಳೆಹಣ್ಣು ಕೋಫ್ತಾ, ಸೀಗಡಿ ಫ್ರೈ, ಚಿಲ್ಲಿ ಚಿಕನ್, ಚಿಕನ್ ಕೋಶಾ, ಚಟ್ನಿಗಳು, ಸಿಹಿತಿಂಡಿಗಳು ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಒಳಗೊಂಡಿರುತ್ತದೆ. ಜಮೈಷಷ್ಠಿಯ ದಿನ ಅಳಿಯನಿಗೆ ಊಟ ಹಾಕಲು ಈ ಆಫರ್ ಎಂದು ರೆಸ್ಟೋರೆಂಟ್ ಮಾಲೀಕ ಮೌಶುಮಿ ಡಿ ಹೇಳಿದ್ದಾರೆ.


ಅಂದ ಹಾಗೆ ಈ 299 ರೂಪಾಯಿಯ ಆಫರ್ ಪಡೆದುಕೊಳ್ಳಲು ನೀವು ರೆಸ್ಟೋರೆಂಟ್‌ಗೆ ಹೋಗಿ ಹಣ ಪಾವತಿಸಿ ಕೂಪನ್ ಅನ್ನು ಪಡೆದುಕೊಳ್ಳಬೇಕು. ಆ ಬಳಿಕ ಜಮೈಷಷ್ಠಿಯ ದಿನದಂದು ಮಧ್ಯಾಹ್ನ 2 ಗಂಟೆಗೆ ಆ ರೆಸ್ಟೋರೆಂಟ್‌ನಿಂದ ನಿಮ್ಮ ಮನೆಗೆ ಆಹಾರವನ್ನು ಡೆಲಿವರಿ ಮಾಡಲಾಗುತ್ತದೆ. ಆದರೆ ರೆಸ್ಟೊರೆಂಟ್ ನಲ್ಲಿ ಊಟ ಮಾಡಬೇಕೆಂದರೆ ಮೊದಲೇ ಇಪ್ಪತ್ತು ರೂಪಾಯಿಗೆ ಟೇಬಲ್ ಬುಕ್ ಮಾಡಿ ಜಮೈಷಷ್ಠಿಯ ದಿನ ರೆಸ್ಟೊರೆಂಟ್‌ನಲ್ಲಿ ಊಟವನ್ನು ಸವಿಯಬಹುದು. ಈಗಾಗಲೇ ಸುಮಾರು 200 ಕೂಪನ್‌ಗಳು ಮಾರಾಟವಾಗಿದ್ದು, ಎಲ್ಲಾ ಕೂಪನ್‌ಗಳು ಮಾರಾಟವಾಗುವ ನಿರೀಕ್ಷೆ ರೆಸ್ಟೋರೆಂಟ್ ಮಾಲೀಕರಿಗೆ ಇದೆ.


ಇದನ್ನೂ ಓದಿ: House in Graveyard: ಸ್ಮಶಾನದಲ್ಲೇ ಮನೆ ಕಟ್ಟಿ ಮಹಿಳೆಯರ ವಾಸ, ಇವ್ರನ್ನ ನೋಡಿ ಅಧಿಕಾರಿಗಳೇ ಶಾಕ್!


top videos



    ಈ ಬಗ್ಗೆ ಮಾತನಾಡಿರುವ ಹೋಟೆಲ್‌ ಮಾಲೀಕ ಮೌಶುಮಿ ಡೇ, ‘ನನಗೆ ಮೊದಲಿನಿಂದಲೂ ಅಡುಗೆ ಮಾಡುವುದು ಅಂದರೆ ತುಂಬಾ ಇಷ್ಟ. ನಾನು ಮೊದಲು ಹಾಡುತ್ತಿದ್ದೆ. ಆಗ ಯಾರೂ ನನ್ನನ್ನು ಬೆಂಬಲಿಸಲಿಲ್ಲ. ನಾನೇ ಏನಾದರೂ ಮಾಡಬೇಕೆಂಬ ಅದಮ್ಯ ಬಯಕೆಯಿಂದ ಈ ಹೋಟೆಲ್‌ ಅನ್ನು ಓಪನ್ ಮಾಡಿದೆ. ನನ್ನ ಮಗ ಮತ್ತು ಪತಿ ತುಂಬಾ ಬೆಂಬಲ ನೀಡುತ್ತಿದ್ದಾರೆ’ ಎಂದು ಹೇಳಿದರು.

    First published: