ನವದೆಹಲಿ; ನವೆಂಬರ್ ತಿಂಗಳ ನಂತರ ಲಡಾಕ್ನಲ್ಲಿ ಭಾರೀ ಹಿಮಪಾತವಾಗಲಿದ್ದು, ಅಸಾಧಾರಣ ಚಳಿ ಆರಂಭವಾಗಲಿದೆ. ಈ ಸಮಯದಲ್ಲಿ ಸುಮಾರು 40 ಅಡಿವರೆಗೆ ಹಿಮಪಾತವಾಗಲಿದೆ. ಮೈನಸ್ 30-40 ಡಿಗ್ರಿ ತಾಪಮಾನವಿರುತ್ತದೆ. ಈ ಸಮಯದಲ್ಲಿ ಅಲ್ಲಿನ ರಸ್ತೆಗಳು ಸಹ ಹಿಮದಿಂದ ಮುಚ್ಚಿಹೋಗಿರುತ್ತವೆ. ಇಂತಹ ಕ್ಲಿಷ್ಟ ಸಮಯದಲ್ಲಿ ಈ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಜೀವನ ಸೌಲಭ್ಯವನ್ನು ಭಾರತೀಯ ಸೇನೆ ನವೀಕರಿಸಿದೆ.
ಚಳಿಗಾಲದಲ್ಲಿ ನಿಯೋಜಿಸಲಾದ ಸೈನಿಕರ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಸೇನೆಯು ಈ ವಲಯದಲ್ಲಿ ನಿಯೋಜಿಸಲಾದ ಎಲ್ಲಾ ಸೈನಿಕರಿಗೆ ವಾಸಸ್ಥಾನದ ಸೌಲಭ್ಯಗಳ ನವೀಕರಣ ಕಾರ್ಯ ಪೂರ್ಣಗೊಳಿಸಿದೆ.
ಸಮಗ್ರ ಸೌಲಭ್ಯಗಳನ್ನು ಹೊಂದಿರುವ ಟೆಂಟ್ (ಡೇರಿ)ಗಳನ್ನು ಒಂದು ವರ್ಷದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಸೈನಿಕರಿಗೆ ವಿಶಾಲ ಸ್ಥಳಾವಕಾಶ, ವಿದ್ಯುತ್, ನೀರು, ಹೀಟಿಂಗ್ ಸೌಲಭ್ಯಗಳು, ಆರೋಗ್ಯ ಮತ್ತು ನೈರ್ಮಲ್ಯ ಇವುಗಳೆಲ್ಲಾ ಸೌಲಭ್ಯ ಹೊಂದಿರುವ ಅತ್ಯುತ್ತಮ ವಾಸಸ್ಥಾನವನ್ನು ನಿರ್ಮಿಸಲಾಗಿದೆ.
ಇದನ್ನು ಓದಿ: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಕಸರತ್ತು ಮತ್ತೆ ನನೆಗುದಿಗೆ!
ಮುಂಚೂಣಿಯಲ್ಲಿರುವ ಸೈನಿಕರನ್ನು ತಮ್ಮ ನಿಯೋಜನೆಯ ಯುದ್ಧತಂತ್ರದ ಪರಿಗಣನೆಗಳ ಪ್ರಕಾರ ಬಿಸಿಯಾದ ಗುಡಾರಗಳಲ್ಲಿ ಇರಿಸಲಾಗುತ್ತದೆ.
ಹೆಚ್ಚುವರಿಯಾಗಿ, ಯಾವುದೇ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ನಾಗರಿಕ ಮೂಲಸೌಕರ್ಯಗಳನ್ನು ನೂತನ ಟೆಂಟ್ಗಳಲ್ಲಿ ಕಲ್ಪಿಸಿಕೊಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ