ಚೆನ್ನೈ: ಟಿಕ್ಟಾಕ್ ಮಾಜಿ ಸ್ಟಾರ್ ತನ್ನ 52 ವರ್ಷದ ಬಾಯ್ಫ್ರೆಂಡ್ ಜೊತೆ ಸೇರಿಕೊಂಡು 33 ವರ್ಷ ಮಗಳ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳನ್ನು ಹರಿಬಿಟ್ಟ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ಟಿಕ್ಟಾಕ್ ವಿಡಿಯೋಗಳ ಮೂಲಕ ಖ್ಯಾತಿ ಗಳಿಸಿದ್ದ ಅಮೃತ ಪ್ರಿಯ ಎಂಬುವರನ್ನು ಅಂಬತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮೃತ ಪ್ರಿಯ ಜೊತೆ ಅವರ 52 ವರ್ಷದ ಬಾಯ್ಫ್ರೆಂಡ್ ರಾಜೇಶ್ ಸಹ ಅರೆಸ್ಟ್ ಮಾಡಿದ್ದಾರೆ. ಅಮೃತ ಪ್ರಿಯ ಅವರ 33 ವರ್ಷದ ಮಗಳ ತನ್ನ ತಾಯಿ ಹಾಗೂ ಆಕೆಯ ಬಾಯ್ ಫ್ರೆಂಡ್ ವಿರುದ್ಧ ದೂರು ದಾಖಲಿಸಿದ್ದಾರೆ.
ಟಿಕ್ಟಾಕ್ ಮಾಜಿ ಸ್ಟಾರ್ ಅಮೃತ ಪ್ರಿಯ 2 ವರ್ಷಗಳ ಹಿಂದೆ ಪತಿಯನ್ನು ತೊರೆದು ರಾಜೇಶ್ ಜೊತೆ ವಾಸಿಸುತ್ತಿದ್ದಾರೆ. ಪತಿಯಿಂದ ದೂರವಾಗಿದ್ದ ಮಗಳು ಸಹ ಅಮ್ಮನೊಂದಿಗೆ ವಾಸವಾಗಿದ್ದರು. ಅಮೃತ ಪ್ರಿಯರ ಪ್ರಿಯಕರ ರಾಜೇಶ್ ಮಗಳ ಮೇಲೆ ಕಣ್ಣಾಕಿದ್ದ. ಮನೆಯಲ್ಲಿ ಮಗಳಿಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದ. 33 ವರ್ಷದ ಮಗಳು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರು ಕಿರುಕುಳ ಮುಂದುವರೆಸಿದ್ದ. ನಿನ್ನ ತಾಯಿಗೆ ವಯಸ್ಸಾಗಿದೆ, ಹೀಗಾಗಿ ನೀನು ನನ್ನ ಜೊತೆ ಸಹಕರಿಸು. ಆಗ ನಾವೆಲ್ಲಾ ಸಂತೋಷವಾಗಿ ಬಾಳಬಹುದು ಎನ್ನುತ್ತಿದ್ದ ಎಂದು ಮಗಳು ಆರೋಪಿಸಿದ್ದಾರೆ.
ತಾಯಿಯ ಪ್ರಿಯಕರನ ಕಿರುಕುಳ ತಾಳಲಾರದೆ ಮಗಳು ಠಾಣೆ ಮೆಟ್ಟಿಲೇರಿದ್ದಳು. ಪೊಲೀಸ್ ಠಾಣೆಯಲ್ಲಿ ರಾಜೇಶ್ಕ್ಷಮೆ ಕೇಳಿದ ಬಳಿಕ ಮಗಳು ದೂರು ವಾಪಸ್ ಪಡೆದಿದ್ದರು. ಈ ಘಟನೆಯಿಂದ ರೊಚ್ಚಿಗೆದ್ದಿದ್ದ ರಾಜೇಶ್, ಅಮೃತ ಪ್ರಿಯ ಅವರ ಮಗಳ ಅಶ್ಲೀಲ ಫೋಟೋಗಳನ್ನು ಹರಿಬಿಡಲು ಶುರುಮಾಡಿದ್ದ. ಫೋಟೋಗಳನ್ನು ತಿರುಚಿ ಅಪ್ಲೋಡ್ ಮಾಡಿ ಮಾನಹಾನಿ ಮಾಡಿದ್ದಾನೆ. ಇದಕ್ಕೆ ತಾಯಿ ಅಮೃತ ಪ್ರಿಯ ಕೂಡ ಸಾಥ್ ನೀಡಿದ್ದಾರೆ.
ಒಂದು ವಾರದಿಂದ ತನ್ನ ಫೋಟೋಗಳನ್ನು ಹರಿಬಿಡುತ್ತಿರುವುದನ್ನು ತಿಳಿದ ಮಗಳು ಮತ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಾಯಿ ಅಮೃತ ಪ್ರಿಯ ಹಾಗೂ ಆಕೆಯ ಬಾಯ್ಫ್ರೆಂಡ್ ರಾಜೇಶ್ನ ಬಂಧಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ