Ex-Spy: ಮಾಜಿ ಗೂಢಚಾರಿಯ 30 ವರ್ಷಗಳ ಕಾನೂನು ಹೋರಾಟಕ್ಕೆ ಸಿಗ್ತು ಜಯ: ಏನಿದು ಪ್ರಕರಣ?

ಸತತ 30 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ ಮಹಮೂದ್ ಅನ್ಸಾರಿ ಅವರಿಗೆ ಕೊನೆಗೂ ಜಯ ಲಭಿಸಿದೆ. ಸಿಜೆಐ ಯುಯು ಲಲಿತ್‌ ಹಾಗೂ ನ್ಯಾಯಮೂರ್ತಿ ರವೀಂದ್ರ ಭಟ್‌ ಅವರಿದ್ದ ನ್ಯಾಯಪೀಠ ಈ ಮಾಜಿ ಗೂಢಚಾರಿಗೆ 10 ಲಕ್ಷ ರೂ ಪರಿಹಾರ ನೀಡುವಂತೆ ಕೇಂದ್ರಕ್ಕೆ ಆದೇಶಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇದು ದೇಶಕ್ಕಾಗಿ ಹೋರಾಡಿದ ಗೂಢಚಾರಿಯೊಬ್ಬನ (Spy) ವ್ಯಥೆಯ ಕಥೆ. ಅಲ್ದೇ ಇದು ಸ್ಪೈ ಥ್ರಿಲ್ಲರ್​ನ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಕಥೆ. ಈತನೊಬ್ಬ ಮಾಜಿ ಗೂಢಚಾರಿ. ಈತ ಹೇಳೋ ಪ್ರಕಾರ ಈತ ಪಾಕಿಸ್ತಾನಕ್ಕೆ (Pakistan) ಗೂಢಚಾರಿಕೆಗೆ ತೆರಳಿದ್ದು, ಅಲ್ಲಿ ಎರಡು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಆದ್ರೆ 1976 ರಲ್ಲಿ ನಡೆದ ಮೂರನೇ ಕಾರ್ಯಾಚರಣೆಯಲ್ಲಿ ಅವರ ಅದೃಷ್ಟ ಕೈಕೊಟ್ಟು ಪಾಕಿಗಳ ಕೈಗೆ ಸಿಕ್ಕು ಬಿದ್ದಿದ್ದರು. ಅಲ್ಲಿ ಅವರಿಗೆ ಜೈಲು ಶಿಕ್ಷೆ (Imprisonment) ವಿಧಿಸಲಾಯ್ತು, ಅಂತೂ ಇಂತೂ 12  ವರ್ಷ ಕಾರಾಗೃಹದಲ್ಲಿ ಕಳೆದ ಬಳಿಕ ಅವರು ಹಿಂದಿರುಗಿದರು. ಆದರೆ ತಾಯ್ನಾಡಿಗೆ ಬಂದು ನೋಡಿದರೆ ಅವರಿಗೆ ಶಾಕ್‌ ಕಾದಿತ್ತು.

ಸರ್ಕಾರ ಅವರನ್ನು ಗುರುತಿಸಲೇ ಇಲ್ಲ. ಯಾವುದೇ ಬೆಂಬಲವೂ ಸಿಗಲಿಲ್ಲ. ಅಲ್ದೇ ಯಾವುದೇ ಅಧಿಕೃತ ದಾಖಲೆಗಳಲ್ಲಿ ಅವರ ಹೆಸರೂ ಕೂಡ ಕಂಡು ಬರಲಿಲ್ಲ. ಛಲಬಿಡದ ಆ ಮಾಜಿ ಗೂಢಚಾರಿ ಕಾನೂನು ಹೋರಾಟ ಆರಂಭಿಸಿದರು.

ಈ ಮಾಜಿ ಗೂಢಚಾರಿ ಯಾರು?
ಅವರೇ ಮಹಮೂದ್ ಅನ್ಸಾರಿ. ಸದ್ಯ 75 ವರ್ಷ ಇಳಿವಯಸ್ಸಿನ ಈ ಮಾಜಿ ಗೂಢಚಾರಿ ವಾಸಿಸುತ್ತಿರೋದು ರಾಜಸ್ಥಾನದ ಕೋಟದಲ್ಲಿ. ನೆರೆಯ ರಾಷ್ಟ್ರಗಳ ಪಾಕಿಗಳ ಕೈಗೆ ಸಿಲುಕಿ ಬರೋಬ್ಬರಿ 13 ವರ್ಷ ಶಿಕ್ಷೆ ಅನುಭವಿಸಿ ಬಂದ ಇವರಿಗೆ ಯಾವುದೇ ಗೌರವವಾಗಲಿ, ಗೌರವಧನವಾಗಲಿ, ಪರಿಹಾರವಾಗಲೀ ಏನೂ ಸಿಗದೇ ಹೋಗಿದ್ದರಿಂದ ಕಾನೂನು ಹೋರಾಟ ಆರಂಭಿಸಿದರು. ಒಂದಲ್ಲ ಎರಡಲ್ಲ.. ಸತತ 30 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ ಇವರಿಗೆ ಕೊನೆಗೂ ಜಯ ಲಭಿಸಿದೆ. ಸಿಜೆಐ ಯುಯು ಲಲಿತ್‌ ಹಾಗೂ ನ್ಯಾಯಮೂರ್ತಿ ರವೀಂದ್ರ ಭಟ್‌ ಅವರಿದ್ದ ನ್ಯಾಯಪೀಠ ಈ ಮಾಜಿ ಗೂಢಚಾರಿಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಆದೇಶಿಸಿದೆ.

ಇದನ್ನೂ ಓದಿ:  US Supports Pak: ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಅಮೆರಿಕಾ; ಭಾರತಕ್ಕೆ ದ್ರೋಹ?

ವಕೀಲರಾದ ಸಮರ್‌ ವಿಜಯ್‌ ಸಿಂಗ್‌ ಅವರ ಮೂಲಕ ಸಲ್ಲಿಸಲಾದ ಅರ್ಜಿಯ ಪ್ರಕಾರ, 1966 ರಲ್ಲಿ ಇದೇ ಮಹಮೂದ್‌ ಅನ್ಸಾರಿ ಅವರು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 1974 ರ ಜೂನ್​ನಲ್ಲಿ ವಿಶೇಷ ಗುಪ್ತಚರ ಸಂಸ್ಥೆಯಿಂದ ರಾಷ್ಟ್ರಕ್ಕಾಗಿ ರಹಸ್ಯ ಕಾರ್ಯಾಚರಣೆ ನಡೆಸಲು ಬಂದ ಪ್ರಸ್ತಾವನೆಯನ್ನು ಸ್ವೀಕರಿಸಿದರು. ಎಸ್​ಬಿಐ (ಸ್ಪೆಷಲ್‌ ಬ್ಯೂರೋ ಆಫ್‌ ಇಂಟೆಲಿಜೆನ್ಸ್)‌ ಅಗತ್ಯವಿದ್ದಾಗ ಅವರನ್ನು ರಿಲೀವ್‌ ಮಾಡಬೇಕೆಂಬ ಮನವಿಯನ್ನು ಅಂಚೆ ಇಲಾಖೆಯೂ ಒಪ್ಪಿಕೊಂಡಿದೆ.

ಏನಿದು ಪ್ರಕರಣ 
ಅರ್ಜಿಯ ಪ್ರಕಾರ ನಿರ್ದಿಷ್ಟ ಕಾರ್ಯ ನಿರ್ವಹಿಸಲು ಅನ್ಸಾರಿಯನ್ನು ಪಾಕಿಸ್ತಾನಕ್ಕೆ ನಿಯೋಜಿಸಲಾಗಿತ್ತು. ಅವರ ಮೂರನೇ ಕಾರ್ಯಾಚರಣೆಯ ಸಮಯದಲ್ಲಿ ಅವರನ್ನ ಪಾಕ್​ನ  ರೇಂಜರ್​ಗಳು ತಡೆದರು. ಅನಂತರ 1976, ಡಿಸೆಂಬರ್‌ 23 ರಂದು ಅವರನ್ನು ಬಂಧಿಸಲಾಯಿತು. ಅಲ್ಲದೇ ಅವರನ್ನು ವಿಚಾರಣೆಗೆ ಒಳಪಡಿಸಿ ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲಿನಲ್ಲಿದ್ದಾಗ ತನ್ನ ಸೆರೆವಾಸದ ಬಗ್ಗೆ ಅನೇಕ ಪತ್ರಗಳನ್ನು ಬರೆದಿದ್ದರು. ಆದರೆ ಇಲಾಖೆಯು ಜುಲೈ 31, 1980 ರಲ್ಲಿ ಅವರ ವಿರುದ್ಧ ಎಕ್ಸ್‌ ಪಾರ್ಟಿ ಆದೇಶ ಜಾರಿಗೊಳಿಸಿ ಅವರನ್ನು ಕೆಲಸದಿಂದ ವಜಾಗೊಳಿಸಿತು.

ಇದನ್ನೂ ಓದಿ:  Queen Elizabeth II: ರಾಣಿಯ ಆತ್ಮಶಾಂತಿಗೆ ಮೆಕ್ಕಾ ತೀರ್ಥಯಾತ್ರೆ ಕೈಗೊಂಡ ವ್ಯಕ್ತಿ ಅರೆಸ್ಟ್!

ಇನ್ನು ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವಿಕ್ರಮಜಿತ್‌ ಬ್ಯಾನರ್ಜಿ, ಅವರ ಕಥೆಯನ್ನು ಕೇವಲ ಕಾಲ್ಪನಿಕ ಎಂದು ಹೇಳಿದರು. ಆದರೆ ಅಂಚೆ ಇಲಾಖೆಯಲ್ಲಿ ಅವರಿಗೆ ದೀರ್ಘಾವಧಿ ರಜೆ ಹೇಗೆ ನೀಡಲಾಯಿತು ಅನ್ನೋದರ ಬಗ್ಗೆ ಹಾಗೂ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಕೇಳಲಾಯ್ತು. ಆದರೆ 40 ವರ್ಷಗಳ ಹಿಂದಿನ ದಾಖಲೆ ಪಡೆಯುವುದು ಕಷ್ಟಕರ ಎಂದು ಎಎಸ್​ಜಿ ಹೇಳಿದೆ.

ಅನ್ಸಾರಿಗೆ 10 ಲಕ್ಷ ಪರಿಹಾರ
ಅಂತೂ ಕೊನೆಯಲ್ಲಿ 5 ಲಕ್ಷ ಪರಿಹಾರವನ್ನು ನೀಡಲು ಕೋರ್ಟ್‌ ಆದೇಶಿಸಿತು. ಆದರೆ ಆದಾಯದ ಮೂಲವಿಲ್ಲದ 75 ವರ್ಷ ವಯಸ್ಸಿನ ಅನ್ಸಾರಿಗೆ 10 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಈ ಮೂಲಕ ಅನ್ಸಾರಿ ಅವರ ಸುದೀರ್ಘ ಅವಧಿಯ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ.
Published by:Ashwini Prabhu
First published: