Buffaloes Theft: ಮಾಜಿ ಶಾಸಕರ 10 ಎಮ್ಮೆಗಳನ್ನು ಕದ್ದ ಖದೀಮರು! ಲಕ್ಷ ಲಕ್ಷ ನಷ್ಟ

ಕಳ್ಳರು ಏನೇನು ಕದಿಯುತ್ತಾರೆ ನೋಡಿ. ಇಲ್ಲೊಂದು ಕಡೆ ಮಾಜಿ ಶಾಸಕರ ಮನೆಯಿಂದಲೇ ಎಮ್ಮೆಗಳನ್ನು ಕದ್ದಿದ್ದಾರೆ ಖದೀಮರು. ಎಮ್ಮೆ ಅಷ್ಟೇನಾ ಅನ್ನಬೇಡಿ, ಮಾಜಿ ಶಾಸಕರಿಗೆ ಲಕ್ಷ ಲಕ್ಷ ನಷ್ಟವಾಗಿದೆ.

ಎಮ್ಮೆ

ಎಮ್ಮೆ

  • Share this:
ಕಳ್ಳರಿಗೆ ಏನು ಸಿಕ್ಕಿದರೂ ಸರಿ, ಕದ್ದು ಬಿಡುತ್ತಾರೆ. ಅದರಿಂದ ಹಣ ಸಿಗಬೇಕು ಅಷ್ಟೇ. ಹಾಗಾಗಿ ಕಳ್ಳರು ಇದನ್ನೇ ಕದಿಯುತ್ತಾರೆಂದು ಊಹಿಸುವುದು ಕಷ್ಟ. ಎಷ್ಟೇ ಸಂರಕ್ಷಿಸಿದರೂ ಕೆಲವೊಮ್ಮೆ ಊಹಿಸಿಯೇ ಇರದ ರೀತಿಯಲ್ಲಿ ಕಳ್ಳತನ (Theft) ನಡೆದುಬಿಟ್ಟಿರುತ್ತದೆ. ನಗರಗಳಲ್ಲಿ ಕಾರು, ಬೈಕ್ ಕಳ್ಳತನವಾದರೆ ಹಳ್ಳಿಗಳಲ್ಲಿ ಕುರಿ, ಕೋಳಿ ಕಳ್ಳತನ ತುಂಬಾ ಸಾಮಾನ್ಯ. ಹಾಗಾಗಿ ಎಷ್ಟೇ ಸೆಕ್ಯುರಿಟಿ (Security) ಇದ್ದರೂ ಕಳ್ಳರಿಂದ ತಪ್ಪಿಸಿಕೊಳ್ಳೋದು ಸ್ವಲ್ಪ ಕಷ್ಟವೇ. ಹೀಗೆನ್ನಲು ಕಾರಣ ಏನು ಗೊತ್ತಾ? ಮಾಜಿ ಶಾಸಕರ ಮನೆಯಿಂದಲೇ ಕಳ್ಳತನವಾಗಿದೆ. ಚಿನ್ನವೋ ಹಣವೋ ಕದ್ದರೆ ಗೊತ್ತಾಗಲ್ಲ ಎನ್ನಬಹುದು. ಆದರೆ ಹತ್ತತ್ತು ಎಮ್ಮೆಗಳನ್ನೇ (Buffalo) ಕದ್ದೊಯ್ಯುವಾಗಲೂ ಗೊತ್ತಾಗಲಿಲ್ವೇ? ಇಂಥದ್ದೊಂದು ಅಪರೂಪದ ಕಳ್ಳತನ ಪ್ರಕರಣ ಈಗ ವರದಿಯಾಗಿದೆ.

ಶುಕ್ರವಾರ ಸಂಜೆ ಮಾಜಿ ಶಾಸಕ (Ex MLA) ತಾರ್ಸೆಮ್ ಜೋಧನ್ ಅವರ ಡೈರಿ ಫಾರ್ಮ್‌ನಲ್ಲಿ (Diary Farm) ಕಳ್ಳರು ದಾಳಿ ಮಾಡಿ 10 ಎಮ್ಮೆಗಳನ್ನು ಕದ್ದುಕೊಂಡು ಹೋಗಿದ್ದಾರೆ.

ಕದ್ದ ಎಮ್ಮೆಗಳನ್ನು ವಾಹನದಲ್ಲಿ ಲೋಡ್ ಮಾಡಿ ಸಾಗಣೆ

ಮಾಜಿ ಶಾಸಕ, ಪಂಜಾಬ್ ಮಾತಾ ನಗರದ ನಿವಾಸಿ, ಐದು ಜನರು ಜಮೀನಿಗೆ ನುಗ್ಗಿ ಅವರ ಇಬ್ಬರು ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ಕದ್ದ ಎಮ್ಮೆಗಳನ್ನು ವಾಹನದಲ್ಲಿ ಲೋಡ್ ಮಾಡುವಾಗ ಅವರು ನನ್ನ ಕೆಲಸಗಾರರನ್ನು ಸೆರೆಹಿಡಿದರು ಎಂದು ಮಾಜಿ ಶಾಸಕ ಹೇಳಿದ್ದಾರೆ.

ಮಾಜಿ ಶಾಸಕರಿಗೆ 10 ಲಕ್ಷ ರೂಪಾಯಿಗಳ ನಷ್ಟ

ದರೋಡೆಕೋರರಿಗೆ ಜಮೀನಿನ ಪರಿಚಯವಿದ್ದು, ಡೈರಿಯನ್ನು ಗುರಿಯಾಗಿಸುವ ಮೊದಲು ಅವರು ಎಲ್ಲವನ್ನೂ ತಿಳಿದುಕೊಂಡಿದ್ದರು ಎಂದು ಘಟನೆಯ ಸಮಯದಲ್ಲಿ ಮನೆಯಲ್ಲಿದ್ದ ಜೋಧನ್ ಹೇಳಿದರು. ನನಗೆ ₹10 ಲಕ್ಷ ನಷ್ಟವಾಗಿದೆ’ ಎಂದು ಅವರು ಹೇಳಿದರು.

ಕಳ್ಳತನಕ್ಕೆ ಸಂಬಂಧಿಸಿ ಪ್ರಕರಣ ದಾಖಲು

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 395 (ದರೋಡೆಕೋರರಿಗೆ ಶಿಕ್ಷೆ), 148 (ಗಲಭೆ, ಮಾರಣಾಂತಿಕ ಆಯುಧಗಳಿಂದ ಶಸ್ತ್ರಸಜ್ಜಿತ) ಮತ್ತು 149 (ಅಪರಾಧದ ಕಾನೂನುಬಾಹಿರ ಸಭೆ ಅಪರಾಧ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಲ್ವಿಂದರ್ ಸಿಂಗ್ ಹೇಳಿದ್ದಾರೆ. ಆರೋಪಿ ವಿರುದ್ಧ ದಾಖಲಿಸಲಾಗಿದೆ. ಅವರನ್ನು ಗುರುತಿಸಲು ಪೊಲೀಸರು ಸಿಸಿಟಿವಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.

ಇದನ್ನೂ ಓದಿ: West Bengal Violence: BJP ರಾಜ್ಯಾಧ್ಯಕ್ಷ ಅರೆಸ್ಟ್, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ ಮಮತಾ ಬ್ಯಾನರ್ಜಿ

ಸೈಕಲ್ ಮಾತ್ರ ಕದಿಯುವ ಕಳ್ಳ

ಈ ಕಳ್ಳ ಬರೀ ಸೈಕಲ್ ಗಳನ್ನು ಕಳ್ಳತನ (Cycle Theft) ಮಾಡುತ್ತಿದ್ದ. ಹೈ-ಫೈ ಸೈಕಲ್ ಗಳನ್ನ ಟಾರ್ಗೆಟ್ ಮಾಡುತ್ತಿದ್ದ ಈ ಕಳ್ಳ, ಯಾಕೆ ಕಳ್ಳತನ ಮಾಡುತ್ತಿದ್ದ ಎಂಬ ಕಾರಣ ಸಹ ವಿಚಿತ್ರವಾಗಿದೆ. ನಗರದ ಸುದ್ದುಗುಂಟೆಪಾಳ್ಯ ಠಾಣೆ (Sudduguntepalya Police) ಪೊಲೀಸರು ಸೈಕಲ್ ಕದಿಯುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಹೆಸರು ಬಾಲರಾಜ್. ಸದ್ಯ ಆರೋಪಿಯಿಂದ ಸುದ್ದಗುಂಟೇಪಾಳ್ಯ ಪೊಲೀಸರು 6 ಲಕ್ಷ ಮೌಲ್ಯದ 54 ಸೈಕಲ್ ಗಳನ್ನು ಜಪ್ತಿ ಮಾಡಿದ್ದಾರೆ.

ಬಾಲಾಜಿ ಅಲಿಯಾಸ್ ಬಾಲರಾಜು ಕುಡಿತದ ಚಟಕ್ಕೆ ಒಳಗಾಗಿದ್ದ ಆರೋಪಿ ಎಣ್ಣೆಗೆ ದುಡ್ಡಿಲ್ಲ ಅಂತಾ ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದನು. ಸೈಕಲ್ ಗಳನ್ನು ಕಳ್ಳತನ ಮಾಡಿದ್ರೆ ಕೇಸ್ ಆಗಲ್ಲ ಅಂತ ಬಾಲರಾಜು ತಿಳಿದುಕೊಂಡಿದ್ದನು. ಹೀಗಾಗಿ ನಗರದ ಬಹುತೇಕ ಕಡೆ ದುಬಾರಿ ಬೆಲೆಯ ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದ.

ಇದನ್ನೂ ಓದಿ: Bangalore Theft News: ಬೆಂಗಳೂರಿಗರೇ ಎಚ್ಚರ.. ಮನೆ ಮುಂದೆ ಪಾರಿವಾಳ ಬಂದು ಕೂತರೆ ಡೇಂಜರ್!

ಸುಮಾರು 30 ರಿಂದ 40 ಸಾವಿರ ಬೆಲೆಯ ಸೈಕಲ್ ಗಳನ್ನು ಎರಡರಿಂದ ಮೂರು ಸಾವಿರ ರೂ.ಗಳಿಗೆ ಮಾರಾಟ ಮಾಡಿ ಮದ್ಯ ಸೇವನೆ ಮಾಡುತ್ತಿದ್ದನು. ಸೈಕಲ್ ಕಳ್ಳತನ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಆರೋಪಿ ಸೈಕಲ್ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ ಸೈಕಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Published by:Divya D
First published: