Sunil Jakhar: ಕೈಗೆ ಶಾಕ್​; ಕಾಂಗ್ರೆಸ್​ ತೊರೆದ ಪಂಜಾಬ್​​ ಮಾಜಿ ಅಧ್ಯಕ್ಷ ಸುನೀಲ್​ ಜಾಖರ್

ಶಿಸ್ತು ಕ್ರಮ ಸಮಿತಿಯ ಶಿಫಾರಸಿನ ಮೇರೆಗೆ ಹದಿನೈದು ದಿನಗಳ ಹಿಂದೆ ಜಾಖರ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಎರಡು ವರ್ಷಗಳ ಕಾಲ ತೆಗೆದುಹಾಕಲು ಪಕ್ಷವು ನಿರ್ಧರಿಸಿದೆ.

ಸುನೀಲ್​ ಜಾಖರ್​​​

ಸುನೀಲ್​ ಜಾಖರ್​​​

 • Share this:
   ಉದಯಪುರದಲ್ಲಿ (Udaipur) ಕಾಂಗ್ರೆಸ್​ ಚಿಂತನಾ ಶಿಬಿರ (Congress Chintan Shivar) ನಡೆಸುವ ಮೂಲಕ ಪಕ್ಷ ಬಲಗೊಳಿಸಲು ಸಜ್ಜಾಗುತ್ತಿದೆ. ಈ ನಡುವೆ ಪಂಜಾಬ್​​ ಕಾಂಗ್ರೆಸ್​ನ ಮಾಜಿ ಮುಖ್ಯಸ್ಥ ಸುನೀಲ್​ ಜಾಖರ್ (Punjab Ex chief Sunil Jakhar) ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ (Resign) ನೀಡುವ ಮೂಲಕ ಶಾಕ್​ ನೀಡಿದ್ದಾರೆ. ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಜಾಖರ್​, ಇಂದು ತಮ್ಮ ಸಾಮಾಜಿಕ ಜಾಲತಾಣದಿಂದ ಕಾಂಗ್ರೆಸ್ (Congress)​ ಕುರಿತ ಮಾಹಿತಿ, ಉಲ್ಲೇಖ, ಟ್ವೀಟ್​ಗಳನ್ನು ಡಿಲೀಟ್​ ಮಾಡಿದ್ದರು. ಇದಾದ ಒಂದು ಗಂಟೆ ಬಳಿಕ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 

  ಪಕ್ಷದ ವಿರುದ್ಧ ಶಿಸ್ತು ಕ್ರಮಕ್ಕೆ ಒಳಗಾಗಿದ್ದ ಜಾಖರ

  ಸುನೀಲ್​ ಜಾಖರ್​ ವಿರುದ್ದ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷವು ತನ್ನ ವಿರುದ್ಧ ಕ್ರಮ ಕೈಗೊಂಡಾಗಿನಿಂದ ಜಾಖರ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದರು. ಶಿಸ್ತು ಕ್ರಮ ಸಮಿತಿಯ ಶಿಫಾರಸಿನ ಮೇರೆಗೆ ಹದಿನೈದು ದಿನಗಳ ಹಿಂದೆ ಜಾಖರ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಎರಡು ವರ್ಷಗಳ ಕಾಲ ತೆಗೆದುಹಾಕಲು ಪಕ್ಷವು ನಿರ್ಧರಿಸಿದೆ. ಅಂದಿನಿಂದ ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಆಯ್ಕೆಗಳನ್ನು ಪರಿಗಣಿಸುತ್ತಿದ್ದರು

  ಇಂದು ಅವರು ಫೇಸ್​ ಬುಕ್​ ಪೇಜ್​ನಲ್ಲಿ 'ದಿಲ್ ಕಿ ಬಾತ್' ಎಂಬ ಹೆಸರಿನ ಮೂಲಕ ಲೈವ್​ ಮಾಡಿದ ಬಳಿಕ ಕಾಂಗ್ರೆಸ್ ತೊರೆದಿದ್ದಾರೆ.

  ಪಕ್ಷದ ಬೆಳವಣಿಗೆ ಕುರಿತು ಟೀಕೆ

  ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರ್ಗಮನದ ನಂತರ ಸಿಎಂ ನೇಮಕದ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ನಾಯಕರೊಬ್ಬರ ಮಾತನ್ನು ಕೇಳುತ್ತಿದೆ ಎಂದು ಜಾಖರ್ ಆರೋಪಿಸಿದ್ದರು. ನಮ್ಮ ಕುಟುಂಬದ ಮೂರು ತಲೆಮಾರುಗಳು 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದೆ ಎಂದು ಅವರು ತಿಳಿಸಿದ್ದರು.

  ಇದನ್ನು ಓದಿ: ದೇಶದಲ್ಲಿ ಗೋಧಿ ಬೆಲೆ ಹೆಚ್ಚಳ ತಪ್ಪಿಸೋಕೆ ಮಾಸ್ಟರ್ ಪ್ಲಾನ್! ವಿದೇಶಗಳಿಗೆ ರಫ್ತು ಬಂದ್

  ಚನ್ನಿ ಸೋಲಿನ ವಿರುದ್ಧ ಬಹಿರಂಗ ಅಸಮಾಧಾನ

  ಮಾರ್ಚ್‌ನಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಕಾಂಗ್ರೆಸ್ ಸೋತ ನಂತರ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಪಕ್ಷಕ್ಕೆ ಹೊಣೆಗಾರ ಎಂದು ಜಾಖರ್ ಕರೆದಿದ್ದರು. ಅಷ್ಟೇ ಅಲ್ಲದೇ ಚನ್ನಿ ಸೋಲುಗೆ ಉನ್ನತ ಅಧಿಕಾರಿಗಳಲ್ಲ, ಚನ್ನಿಯ ಸ್ವಂತ ದುರಾಸೆಯು ಅವರನ್ನು ಸೋಲಿಸಿದೆ ಎಂದು ಆರೋಪಿಸಿ ಟ್ವೀಟ್​ ಮಅಡಿದ್ದರು.

  ಇದನ್ನು ಓದಿ: ದೆಹಲಿಯ ಬಹು ಮಹಡಿ ಕಟ್ಟದಲ್ಲಿ ಭೀಕರ ಅಗ್ನಿ ದುರಂತ; 20 ಸಾವು, 40 ಕ್ಕೂ ಹೆಚ್ಚು ಜನರಿಗೆ ಗಾಯ

  ಮುಖ್ಯಮಂತ್ರಿ ಅಭ್ಯರ್ಥಿ ರೇಸ್​ನಲ್ಲಿದ್ದ ಜಾಖರ್​

  ಮಾಜಿ ಸಚಿವ ರಾಜ್ ಕುಮಾರ್ ವರ್ಕಾ ಸೇರಿದಂತೆ ಪಕ್ಷದ ಕೆಲವು ಮುಖಂಡರು ಟಿವಿ ಸಂದರ್ಶನದಲ್ಲಿ ಚನ್ನಿ ಮತ್ತು ಪರಿಶಿಷ್ಟ ಜಾತಿ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿದ ನಂತರ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಈ ಸಂದರ್ಭದಿಂದ ಅದರ ದುರುಪಯೋಗ ನಡೆಸಲಾಗಿದೆ ಎಂದು ಜಾಖರ್ ಆರೋಪವನ್ನು ತಿರಸ್ಕರಿಸಿದ್ದರು.
  ತಾನು ಹಿಂದೂ ಎಂಬ ಕಾರಣಕ್ಕೆ ಪಕ್ಷವು ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿಲ್ಲ ಎಂದು ಜಾಖರ್ ಹೇಳಿಕೊಂಡಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

  ಕಳೆದ ವರ್ಷ ಅಮರಿಂದರ್ ಸಿಂಗ್ ಅವರನ್ನು ಕಣಕ್ಕಿಳಿಸಿದ ನಂತರ ಜಾಖರ್​ ಕೂಡ ಮುಖ್ಯಮಂತ್ರಿ ಸ್ಥಾನದ ಮುಂಚೂಣಿಯಲ್ಲಿದ್ದರು. ಪಕ್ಷವು ಸಿಖ್ ಸಮುದಾಯದವರನ್ನು ಮುಖ್ಯಮಂತ್ರಿಯಾಗಿ ಪರಿಗಣಿಸಬೇಕು ಎಂಬ ಪಕ್ಷದ ನಾಯಕಿ ಅಂಬಿಕಾ ಸೋನಿ ಹೇಳಿಕೆ ಬಳಿಕ ಅವರು ಮುಖ್ಯಮಂತ್ರಿ ರೇಸ್​ನಿಂದ ಹೊರ ಬಿದ್ದರು
  Published by:Seema R
  First published: