ಡೊನಾಲ್ಡ್ ಟ್ರಂಪ್ ಜೊತೆಗಿನ ಔತಣ ಕೂಟಕ್ಕೆ ಗೈರಾಗಲು ನಿಶ್ಚಯಿಸಿರುವ ಮನಮೋಹನ್ ಸಿಂಗ್, ಗುಲಾಂ ನಬಿ ಆಜಾದ್

ಸಂಸತ್ತಿನ ಉಬಯ ಸದನದ ನಾಯಕರಿಗೂ ಟ್ರಂಪ್ ಜೊತೆಗಿನ ಔತಣ ಕೂಟಕ್ಕೆ ಆಹ್ವಾನ ನೀಡಲಾಗಿದೆ. ಆದರೆ, ಸಂಪ್ರದಾಯದಂತೆ ಟ್ರಂಪ್ ಭೇಟಿಗೆ ಎರಡು ದಿನದ ವೇಳಾಪಟ್ಟಿಯಲ್ಲಿ ಯಾವುದೇ ವಿರೋಧ ಪಕ್ಷದ ನಾಯಕರಿಗೂ ಅವಕಾಶ ನೀಡಲಾಗಿಲ್ಲ. ಈ ಕುರಿತು ನಮಗೆ ಯಾವುದೇ ಆಹ್ವಾನವೂ ಬಂದಿಲ್ಲ ಎಂದು ಕಾಂಗ್ರೆಸ್​ ಶುಕ್ರವಾರವೇ ಸ್ಪಷ್ಟಪಡಿಸಿದೆ.

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​

 • Share this:
  ನವದೆಹಲಿ (ಫೆಬ್ರವರಿ 24): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗೌರವಾರ್ಥ ಭೇಟಿ ಮಾಡಿ ಔತಣ ಕೂಟದಲ್ಲಿ ಪಾಲ್ಗೊಳ್ಳುವಂತೆ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೀಡಿರುವ ಆಹ್ವಾನದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಭಿ ಆಜಾದ್ ಹಿಂಜರಿಯಲಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ನಡೆಯಲಿದೆ.

  ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಈ ಹಿಂದೆ ರಾಷ್ಟ್ರಪತಿ ಭವನದಿಂದ ತನಗೆ ನೀಡಲಾಗಿದ್ದ ಆಹ್ವಾನವನ್ನು ಸ್ವೀಕರಿಸಿದ್ದರು. ಆದರೆ, ಸೋಮವಾರ ಸಂಜೆಯ ವೇಳೆಗೆ ಈ ಕುರಿತು ಸ್ಪಷ್ಟನೆ ನೀಡಿರುವ ಮನಮೋಹನ್​ ಸಿಂಗ್ ಆಪ್ತ ವಲಯ “ಮಾಜಿ ಪ್ರಧಾನಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಔತಣ ಕೂಟದಲ್ಲಿ ಭಾಗವಹಿಸದಿರುವುದಕ್ಕೆ ವಿಷಾಧಿಸಿದ್ದಾರೆ” ಎಂದು ತಿಳಿಸಿದೆ.

  ಇನ್ನೂ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬಿಜೆಪಿ ಸರ್ಕಾರ ಡೊನಾಲ್ಡ್​ ಟ್ರಂಪ್ ಜೊತೆಗಿನ ಔತಣ ಕೂಟಕ್ಕೆ ಯಾವುದೇ ಆಹ್ವಾನವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್​ ರಂಜನ್ ಚೌಧರಿ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಭಿ ಆಜಾದ್ ತಾವು ಈ ಔತಣ ಕೂಟದಲ್ಲಿ ಭಾಗಿಯಾಗುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ರಾಷ್ಟ್ರಪತಿ ಭವನ ಆಹ್ವಾನದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

  ಸಂಸತ್ತಿನ ಉಬಯ ಸದನದ ನಾಯಕರಿಗೂ ಟ್ರಂಪ್ ಜೊತೆಗಿನ ಔತಣ ಕೂಟಕ್ಕೆ ಆಹ್ವಾನ ನೀಡಲಾಗಿದೆ. ಆದರೆ, ಸಂಪ್ರದಾಯದಂತೆ ಟ್ರಂಪ್ ಭೇಟಿಗೆ ಎರಡು ದಿನದ ವೇಳಾಪಟ್ಟಿಯಲ್ಲಿ ಯಾವುದೇ ವಿರೋಧ ಪಕ್ಷದ ನಾಯಕರಿಗೂ ಅವಕಾಶ ನೀಡಲಾಗಿಲ್ಲ. ಈ ಕುರಿತು ನಮಗೆ ಯಾವುದೇ ಆಹ್ವಾನವೂ ಬಂದಿಲ್ಲ ಎಂದು ಕಾಂಗ್ರೆಸ್​ ಶುಕ್ರವಾರವೇ ಸ್ಪಷ್ಟಪಡಿಸಿದೆ.

  ಇದನ್ನೂ ಓದಿ : ಕೊರೊನಾ ಎಫೆಕ್ಟ್​: ಚೀನಾದಿಂದ ಎಲೆಕ್ಟ್ರಾನಿಕ್ ಸರಕುಗಳ ಪೂರೈಕೆಯಲ್ಲಿ ಇಳಿಕೆ, ತಟ್ಟಲಿದೆ ಬೆಲೆ ಏರಿಕೆ ಬಿಸಿ
  First published: