Imran Khan: ಉಡುಗೊರೆ ಬಂದ ಆಭರಣ ಮಾರಿ ಕೋಟಿ ಕೋಟಿ ಗಳಿಸಿದ ಪಾಕ್ ಮಾಜಿ ಪಿಎಂ! ಎಂಥಾ ದುಸ್ಥಿತಿ?

ಇಮ್ರಾನ್‌ ಖಾನ್‌ ತಾನು ಉಡುಗೊರೆಯಾಗಿ ಪಡೆದ ನೆಕ್ಲೇಸ್‌ ಅನ್ನು ತೋಶಾ ಖಾನಾ (ರಾಜ್ಯ ಉಡುಗೊರೆ ಭಂಡಾರ)ಕ್ಕೆ ನೀಡಲಿಲ್ಲ. ಅದರ ಬದಲಾಗಿ ಮಾಜಿ ವಿಶೇಷ ಸಹಾಯಕ ಜುಲ್ಫಿಕರ್ ಬುಖಾರಿಗೆ ನೀಡಿದ್ದರು ಎಂದು ತಿಳಿದುಬಂದಿದೆ.

ಇಮ್ರಾನ್ ಖಾನ್

ಇಮ್ರಾನ್ ಖಾನ್

  • Share this:

ಇಮ್ರಾನ್‌ ಖಾನ್‌ಗೆ ಯಾಕೋ ಗ್ರಹಚಾರವೇ ಸರಿ ಇದ್ದಂತಿಲ್ಲ. ಪಾಕಿಸ್ತಾನ (Pakistan) ಪ್ರಧಾನಿಯಾಗಿದ್ದವರು (Prime Minister) ಈಗ ಮಾಜಿ ಪ್ರಧಾನಿಯಾಗಿದ್ದಾರೆ. ಅವಿಶ್ವಾಸ ನಿರ್ಣಯದಲ್ಲಿ ಸೋಲನುಭವಿಸಿ ಅಧಿಕಾರವನ್ನು (Power) ಕಳೆದುಕೊಂಡ ಮೇಲೂ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ಗೆ ಸಂಕಷ್ಟ ತಪ್ಪುತ್ತಿಲ್ಲ. ಅವರ ಅಧಿಕಾರಾವಧಿಯಲ್ಲಿ ಉಡುಗೊರೆಯಾಗಿ (Gift) ಪಡೆದ ದುಬಾರಿ ನೆಕ್ಲೇಸ್ ಅನ್ನು ಸರ್ಕಾರದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು, ಅದನ್ನು 18 ಕೋಟಿ ರೂ. ಗೆ ಆಭರಣ ವ್ಯಾಪಾರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪದ ಮೇಲೆ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ಇಮ್ರಾನ್‌ ಖಾನ್‌ ವಿರುದ್ಧ ವಿಚಾರಣೆಯನ್ನು ಆರಂಭಿಸಿದೆ. ಈ ಸಮಬಂಧ ಬುಧವಾರ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.


ಇಮ್ರಾನ್‌ ಖಾನ್‌ ತಾನು ಉಡುಗೊರೆಯಾಗಿ ಪಡೆದ ನೆಕ್ಲೇಸ್‌ ಅನ್ನು ತೋಶಾ ಖಾನಾ (ರಾಜ್ಯ ಉಡುಗೊರೆ ಭಂಡಾರ)ಕ್ಕೆ ನೀಡಲಿಲ್ಲ. ಅದರ ಬದಲಾಗಿ ಮಾಜಿ ವಿಶೇಷ ಸಹಾಯಕ ಜುಲ್ಫಿಕರ್ ಬುಖಾರಿಗೆ ನೀಡಿದ್ದರು ಎಂದು ತಿಳಿದುಬಂದಿದೆ. ನಂತರ ಬುಖಾರಿ, ಅದನ್ನು ಲಾಹೋರ್‌ನ ಆಭರಣ ವ್ಯಾಪಾರಿಗೆ 18 ಕೋಟಿ ರೂ. ಗೆ ಮಾರಾಟ ಮಾಡಿದರು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.


ಇಮ್ರಾನ್ ಖಾನ್ ವಿರುದ್ಧ ತನಿಖೆ


ಈ ಆರೋಪದ ಮೇಲೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA) ಅವರ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿ ತಿಳಿಸಿದೆ.


 ಸಾರ್ವಜನಿಕ ಉಡುಗೊರೆಗಳನ್ನು ಅದರ ಅರ್ಧ ಬೆಲೆಯನ್ನು ಪಾವತಿಸುವ ಮೂಲಕ ವಯಕ್ತಿಕ ಬಳಕೆಗೆ ಇರಿಸಿಕೊಳ್ಳಬಹುದು ಎಂಬುದು ಪಾಕಿಸ್ತಾನದ ಕಾನೂನು. ಆದರೆ, ಕಳೆದ ವಾರ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದಲ್ಲಿ ಸೋತ ಇಮ್ರಾನ್‌ ಖಾನ್‌, ಅಕ್ರಮವಾಗಿ ರಾಷ್ಟ್ರೀಯ ಖಜಾನೆಗೆ ಕೆಲವು ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದ್ದಾರಷ್ಟೇ ಎಂದೂ ಈ ವರದಿ ಹೇಳುತ್ತದೆ.


ಕಾನೂನುಬಾಹಿರ ಕೃತ್ಯ


ಪಾಕಿಸ್ತಾನದ ಕಾನೂನಿನ ಪ್ರಕಾರ, ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ತೋಶಾ - ಖಾನಾದಲ್ಲಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಹ ಸಲ್ಲಿಸದಿದ್ದರೆ, ಅದು ಕಾನೂನುಬಾಹಿರ ಕೃತ್ಯವಾಗಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ:  Scholarship Offer: ಒಬ್ಬ ವಿದ್ಯಾರ್ಥಿಗಾಗಿ 27 ಶಾಲೆಗಳಿಂದ ₹30 ಕೋಟಿ ಸ್ಕಾಲರ್ಶಿಪ್ ಆಫರ್: ಅಂಥ ವಿಶೇಷವೇನು?

ಪಾಕಿಸ್ತಾನ್‌ ತೆಹ್ರೀಕ್‌ -ಇ-ಇನ್ಸಾಫ್ (PTI) ಸರ್ಕಾರವನ್ನು ಉರುಳಿಸುವ ಪಿತೂರಿಯನ್ನು ಬಹಿರಂಗಪಡಿಸಿದ ಕೇಬಲ್ ಅನ್ನು ಪರಿಶೀಲಿಸಬಹುದು ಎಂದು ಮಾಧ್ಯಮ ವರದಿಗಳು ಸೂಚಿಸಿದ ನಂತರ ಈ ಆರೋಪ ಕೇಳಿಬಂದಿದೆ.

 'ವಿದೇಶಿ ಸಂಚು' ಪತ್ರದ ತನಿಖೆಯನ್ನು ಬಹಿಷ್ಕರಿಸಲಿರುವ ಪಿಟಿಐ..!


ರಾಷ್ಟ್ರೀಯ ಭದ್ರತೆ ಕುರಿತು ಸಂಸದೀಯ ಸಮಿತಿ ನಡೆಸುವ ಯಾವುದೇ ಸಭೆಯನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಘೋಷಿಸಿದೆ.


 ಶೀಘ್ರವಾಗಿ ಸಾರ್ವತ್ರಿಕ ಚುನಾವಣೆ ನಡೆಸಲು ಕರೆ ನೀಡಿದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಈ ಪಕ್ಷ, ತಮ್ಮ ಬೆಂಬಲದ ನೆಲೆಯನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ಹಾಗೂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಹಲವಾರು ರ‍್ಯಾಲಿಗಳನ್ನು ಘೋಷಣೆ ಮಾಡಿದೆ.


ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ, ಶೆಹಬಾಜ್ ಷರೀಫ್ ಅವರು ಸೋಮವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ತಮ್ಮ ಉದ್ಘಾಟನಾ ಭಾಷಣದಲ್ಲಿ ಇಮ್ರಾನ್ ಖಾನ್ ಅವರ ಸರ್ಕಾರವನ್ನು ಉರುಳಿಸಲು “ವಿದೇಶಿ ಪಿತೂರಿ” ಕುರಿತು ಸಂಸದೀಯ ತನಿಖೆಯನ್ನು ಘೋಷಿಸಿದರು. ಹಾಗೂ, ಈ ಆರೋಪವನ್ನು ಸಾಬೀತುಪಡಿಸಲು ಒಂದು ಚೂರು ಸಾಕ್ಷ್ಯವಿದ್ದರೂ ರಾಜೀನಾಮೆ ನೀಡುವುದಾಗಿ ಅವರು ಹೇಳಿದರು.


 ಇದನ್ನೂ ಓದಿ: Trademark ಸಂಬಂಧ ಸೋನಿ ಫುಟ್‍ವೇರ್ ಜೊತೆ ಕದನಕ್ಕಿಳಿದ ಜಪಾನಿನ Sony ಕಂಪನಿ! ಏನಿದು ವಿವಾದ?


ಮಾರ್ಚ್‌ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನು ಭೇಟಿ ಮಾಡಿದ ಬಳಿಕ, ಅಮೆರಿಕ ತನ್ನ ವಿರುದ್ಧ ಪಿತೂರಿ ನಡೆಸುತ್ತಿದೆ. ಅವಿಶ್ವಾಸ ನಿರ್ಣಯ ಸಹ ವಿದೇಶಿ ಪಿತೂರಿ ಎಂದು ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪ ಮಾಡಿದ್ದರು. ಪಿಟಿಐ ಪಕ್ಷದ ಕೆಲ ನಾಯಕರು ಸಹ ಇಮ್ರಾನ್‌ ಖಾನ್‌ರನ್ನು ಅಧಿಕಾರದಿಂದ ಕೆಳಗಿಳಿಸಿರುವುದು ವಿದೇಶಿ ಪಿತೂರಿ ಎಂದೇ ದೂಷಿಸಿದ್ದಾರೆ.

Published by:Divya D
First published: