ಪಾಕ್​ ಸುಳ್ಳು​ ಪ್ರತಿಪಾದನೆಯಿಂದ ಕುಲಭೂಷಣ್ ಜಾಧವ್ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ; ಭಾರತ

ಕುಲಭೂಷಣ್ ಜಾಧವ್​ ಅವರನ್ನು ಭೇಟಿಯಾಗಲು ಭಾರತದ ರಾಯಭಾರ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕ್​ಗೆ ಆದೇಶ ನೀಡಿದ ಬಳಿಕ ಇಂದು ಭಾರತದ ರಾಯಭಾರಿ ಗೌರವ್​ ಅಹ್ಲುವಾಲಿಯಾ ಅವರು ಜಾಧವ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

HR Ramesh | news18-kannada
Updated:September 2, 2019, 9:59 PM IST
ಪಾಕ್​ ಸುಳ್ಳು​ ಪ್ರತಿಪಾದನೆಯಿಂದ ಕುಲಭೂಷಣ್ ಜಾಧವ್ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ; ಭಾರತ
ಕುಲಭೂಷಣ್ ಜಾಧವ್
  • Share this:
ನವದೆಹಲಿ: ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪ ಹೊರಿಸಿ ಭಾರತದ  ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಮರಣದಂಡನೆ ವಿಧಿಸಿದೆ. ಪಾಕಿಸ್ತಾನ ಜೈಲಿನಲ್ಲಿರುವ ಜಾಧವ್​  ಪಾಕ್​ನ ಸುಳ್ಳು ಪ್ರತಿಪಾದನೆಗಳಿಂದ ತೀವ್ರ  ಒತ್ತಡಕ್ಕೆ ಒಳಗಾಗಿದ್ದಾರೆ ಭಾರತೀಯ ವಿದೇಶಾಂಗ ಇಲಾಖೆ ಸೋಮವಾರ ಹೇಳಿದೆ. ಜಾಧವ್​ ಅವರು ಬಂಧನಕ್ಕೆ ಒಳಗಾದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಅಧಿಕಾರಿಗಳಿಗೆ ಅವರೊಂದಿಗೆ ಮಾತನಾಡಲು ಪಾಕ್ ಅನುಮತಿ ನೀಡಿತ್ತು. ಜಾಧವ್​ ಅವರೊಂದಿಗಿನ ಸಭೆ ಬಳಿಕ ಭಾರತ ಈ ಹೇಳಿಕೆ ನೀಡಿದೆ.

ನಾವು ಸಮಗ್ರ ವರದಿಗಾಗಿ ಕಾಯುತ್ತಿದ್ದೇವೆ. ಪಾಕ್​ನ ಸುಳ್ಳು ನಿರೂಪಣೆಯಿಂದ ಜಾಧವ್​  ತೀವ್ರ ಒತ್ತಡಕ್ಕೆ ಒಳಗಾಗಿರುವುದು ಸ್ಪಷ್ಟವಾಗಿದೆ. ನಮ್ಮ ಆರೋಪಗಳಿಗೆ ವಿವರವಾದ ವರದಿಯನ್ನು ಪಡೆದ ಬಳಿಕ ನಾವು ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನಗಳಂತೆ ನಾವು ನಮ್ಮ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದರು.

ಇದನ್ನು ಓದಿ: ಕುಲಭೂಷಣ್ ಜಾಧವ್ ಭೇಟಿ ಮಾಡಿ ಮಾತುಕತೆ ನಡೆಸಿದ ಭಾರತದ ರಾಜತಾಂತ್ರಿಕ ಅಧಿಕಾರಿಗಳು

ಕುಲಭೂಷಣ್ ಜಾಧವ್​ ಅವರನ್ನು ಭೇಟಿಯಾಗಲು ಭಾರತದ ರಾಯಭಾರ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕ್​ಗೆ ಆದೇಶ ನೀಡಿದ ಬಳಿಕ ಇಂದು ಭಾರತದ ರಾಯಭಾರಿ ಗೌರವ್​ ಅಹ್ಲುವಾಲಿಯಾ ಅವರು ಜಾಧವ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

First published:September 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading