Crime News| ಜಮ್ಮು-ಕಾಶ್ಮೀರ ಮಾಜಿ ಎಂಎಲ್​ಸಿ ಕೊಲೆ ಪ್ರಕರಣ; ಜಮ್ಮುವಿನಲ್ಲಿ ಓರ್ವ ಪ್ರಮುಖ ಆರೋಪಿ ಬಂಧನ!

ರಾಜೇಂದರ್ ಚೌಧರಿ ಅಲಿಯಾಸ್ ರಾಜು ಎಂದು ಗುರುತಿಸಲಾಗಿರುವ ವ್ಯಕ್ತಿಯನ್ನು ಮಂಗಳವಾರ ಬೆಳಿಗ್ಗೆ ಜಮ್ಮುವಿನಲ್ಲಿ ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಇದೀಗ ಬಂಧನಕ್ಕೆ ಒಳಗಾಗಿರುವ ವ್ಯಕ್ತಿ ಕೊಲೆ ಪಿತೂರಿಯ ಪ್ರಮುಖ ಆರೋಪಿ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ನವ ದೆಹಲಿ (ಸೆಪ್ಟೆಂಬರ್​ 15); ಜಮ್ಮು ಮತ್ತು ಕಾಶ್ಮೀರ (Jammu Kashmir) ವಿಧಾನ ಪರಿಷತ್ತಿನ (Vidhana Parishat) ಮಾಜಿ ಸದಸ್ಯ ಮತ್ತು ನ್ಯಾಷನಲ್ ಕಾನ್ಫರೆನ್ಸ್ (National Conference) ನಾಯಕ ತ್ರಿಲೋಚನ್ ಸಿಂಗ್ ವಜೀರ್ (Trilochan Singh Wazir) (67) ಪಶ್ಚಿಮ ದೆಹಲಿಯ (West Delhi) ಬಸಾಯಿ ದರಾಪುರದ ಅಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದರು. ಆದರೆ, ಇದೊಂದು ಪೂರ್ವ ನಿಯೋಜಿತ ಕೊಲೆ (Murder Case) ಎಂಬುದನ್ನು ತನಿಖೆಯ ವೇಳೆ ಪೊಲೀಸರು ಪತ್ತೆ ಹಚ್ಚಿದ್ದರು. ಇದೀಗ ಕೊಲೆ ನಡೆದ ಕೆಲ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಆರೋಪಿಯನ್ನು ಪೊಲೀಸರು ಜಮ್ಮುವಿನಲ್ಲಿ ಬಂಧಿಸಿದ್ದಾರೆ ಎಂಬುದು ತಿಳಿದು ಬಂದಿದೆ.

  ರಾಜೇಂದರ್ ಚೌಧರಿ ಅಲಿಯಾಸ್ ರಾಜು ಎಂದು ಗುರುತಿಸಲಾಗಿರುವ ವ್ಯಕ್ತಿಯನ್ನು ಮಂಗಳವಾರ ಬೆಳಿಗ್ಗೆ ಜಮ್ಮುವಿನಲ್ಲಿ ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಇದೀಗ ಬಂಧನಕ್ಕೆ ಒಳಗಾಗಿರುವ ವ್ಯಕ್ತಿ ಕೊಲೆ ಪಿತೂರಿಯ ಪ್ರಮುಖ ಆರೋಪಿ ಎನ್ನಲಾಗಿದೆ.

  ಕೆನಡಾಕ್ಕೆ ವಿಮಾನ ಹಿಡಿಯಲು ವಜೀರ್ ಸೆಪ್ಟೆಂಬರ್ 2 ರಂದು ದೆಹಲಿಗೆ ಬಂದಿದ್ದರು. ಆದರೆ, ಈ ವೇಳೆ ಅಪಾರ್ಟ್ಮೆಂಟ್ ಒಳಗೆ ಗುಂಡು ಹಾರಿಸಲಾಗಿತ್ತು. ಸೆಪ್ಟೆಂಬರ್​ 9 ರಂದು ಅವರ ಕೊಳೆತ ಶವ ಪತ್ತೆಯಾಗಿತ್ತು. ಇದೇ ವೇಳೆ ಪೊಲೀಸರ ಪ್ರಮುಖ ಅನುಮಾನಿತ ವ್ಯಕ್ತಿಗಳಾಗಿದ್ದ ಟ್ರಾನ್ಸ್‌ಪೋರ್ಟರ್ ಹರ್ಮೀತ್ ಸಿಂಗ್ ಮತ್ತು ವಜೀರ್ ಅವರ ಸ್ನೇಹಿತ ಹರಪ್ರೀತ್ ಸಿಂಗ್ ಖಾಲ್ಸಾ ಕಾಣೆಯಾಗಿದ್ದರು.

  ಆದರೆ, ಕೆಲ ದಿನದಲ್ಲೇ ಪ್ರಮುಖ ಆರೋಪಿ ಹರ್ಮೀತ್ ಸಿಂಗ್ ಬಹಿರಂಗವಾಗಿ ಫೇಸ್​ಬುಕ್​ನಲ್ಲಿ ತಪ್ಪೊಪ್ಪಿಗೆ ಪತ್ರವನ್ನು ಲಗತ್ತಿಸಿದ್ದರು. ಈ ಪತ್ರದಲ್ಲಿ, "ತ್ರಿಲೋಚನ್​ ಸಿಂಗ್ ವಜೀರ್ ಅವರನ್ನು ಕೊಂದದ್ದು ನಾವೇ. ವಜೀರ್​ ಮತ್ತು ಆತನ ಮಗನನ್ನು ಕೊಲ್ಲುವ ಸಲುವಾಗಿ ನಮ್ಮನ್ನು ಗುತ್ತಿಗೆ ಕೊಲೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ನಾನು ಹಾಗೂ ಮತ್ತೊಬ್ಬ ಆರೋಪಿ ಹರಪ್ರೀತ್ ಸಿಂಗ್ ಖಾಲ್ಸಾ ಆತ್ಮಹತ್ಯೆಗೆ ಶರಣಾಗಲಿದ್ದೇವೆ" ಎಂದು ಆತ ಬರೆದುಕೊಂಡಿದ್ದ. ಆದರೆ, ಫೇಸ್​ಬುಕ್​ನಲ್ಲಿ ಪೋಸ್ಟ್​ ಅಪ್ಲೋಡ್ ಆಗುತ್ತಿದ್ದಂತೆ ಆತ ಮೊಬೈಲನ್ನು ಸ್ವಿಚ್​ ಆಫ್ ಮಾಡಿದ್ದ ಕಾರಣ ಆತನನ್ನು ಹಿಡಿಯುವುದು ಪೊಲೀಸರಿಂದ ಸಾಧ್ಯವಾಗಿರಲಿಲ್ಲ.

  ಮಂಗಳವಾರ ಪಶ್ಚಿಮ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, "ಆರೋಪಿ ತಂಡವನ್ನು ಹಿಡಿಯಲು ವಿಶೇಷ ಅಪರಾಧ ತಂಡವನ್ನು ನಿಯೋಜಿಸಲಾಗಿದೆ. ಇದೇ ತಂಡ ಇದೀಗ ರಾಜೇಂದರ್ ಚೌಧರಿ ಅಲಿಯಾಸ್ ರಾಜು ನನ್ನು ಬಂಧಿಸಿದ್ದು ಆತನನ್ನು ಜಮ್ಮುವಿನಿಂದ ದೆಹಲಿಗೆ ಕರೆತರಲಾಯಿತು" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Explainer: ಖಾದ್ಯ ತೈಲಗಳ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವೇನು..? ಇಲ್ಲಿದೆ ವಿವರ!

  ಮೂಲಗಳ ಪ್ರಕಾರ, ರಾಜೇಂದರ್ ಚೌಧರಿ ಅಲಿಯಾಸ್ ರಾಜು ಮುಂಬೈನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ವ್ಯಯಕ್ತಿಕ ಸೇಡು ತೀರಿಸಿಕೊಳ್ಳುವ ಸಲಿವಾಗಿ ತ್ರಿಲೋಚನ್ ಸಿಂಗ್ ವಜೀರ್​ನ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 1980 ರಲ್ಲಿ ವಜೀರ್ ರಾಜುವಿನ ತಾಯಿಯ ಚಿಕ್ಕಪ್ಪನನ್ನು ಕೊಂದನೆಂದು ಶಂಕಿಸಿದ್ದರಿಂದಲೇ ರಾಜು ಈ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: