Ex-J&K MLC Murder: ಜಮ್ಮು ಮಾಜಿ ಶಾಸಕನಿಗೆ ಗುಂಡು ಹಾರಿಸಿ ಕೊಲೆ; ಆರೋಪಿಗಳನ್ನು ಬಂಧಿಸಿದ ಪೊಲೀಸರು

ತನಿಖಾ ಅಧಿಕಾರಿಗಳು ಇದುವರೆಗೆ ಹರ್ಮೀತ್ ಮತ್ತು ಹರ್‌ಪ್ರೀತ್ ಅವರನ್ನು ಪ್ರಮುಖ ಆರೋಪಿಗಳೆಂದು ಶಂಕಿಸಿದ್ದಾರೆ. ವಜೀರ್ ತನ್ನನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಆದ ಕಾರಣ ಅವನನ್ನೇ ನಾವು ಮುಗಿಸಬೇಕಾಯಿತು ಎಂದು ಹರ್ಮೀತ್ ಹೇಳಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  J&K: ಸೆಪ್ಟೆಂಬರ್ 2 ರಂದು (former J&K legislative council member)  ಜಮ್ಮು ಮತ್ತು ಕಾಶ್ಮೀರ ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ತ್ರಿಲೋಚನ್ ಸಿಂಗ್ ವಜೀರ್ (Trilochan Singh Wazir) ಹತ್ಯೆ ನಡೆದ ಫ್ಲಾಟ್ ನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಪಶ್ಚಿಮ ದೆಹಲಿ ಪೊಲೀಸರು ಜಮ್ಮುವಿನಿಂದ ಬಂಧಿಸಿದ್ದಾರೆ.

  ಮಂಗಳವಾರ ಬೆಳಿಗ್ಗೆ ಅವರು ಜಮ್ಮುವಿನಿಂದ ರಾಜೇಂದ್ರ ಚೌಧರಿ ಅಲಿಯಾಸ್ ರಾಜುವನ್ನು (Rajendra Chaudhary alias Raju) ಬಂಧಿಸಿದರು ಮತ್ತು ನಂತರ ಮತ್ತೊಬ್ಬ ಆರೋಪಿ ಬಲಬೀರ್ ಸಿಂಗ್ ಅಲಿಯಾಸ್ ಬಿಲ್ಲಾ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  ತನಿಖೆಯ ಸಮಯದಲ್ಲಿ ಬಾಯಿ ಬಿಟ್ಟಿರುವ ಆರೋಪಿಗಳು, ಮಾಜಿ ಶಾಸಕರನ್ನು ಅಪಹರಿಸುವುದು ಮತ್ತು ನಂತರ ಆವರ ಕುಟುಂಬದಿಂದ 2 ಕೋಟಿ ರೂಪಾಯಿ ಸುಲಿಗೆಗೆ ಬೇಡಿಕೆ ಇಡುವುದು ಮುಖ್ಯ ಉದ್ದೇಶವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಜೀರ್ ತನ್ನ ಎಲ್ಲಾ ಹಣವನ್ನು ಕೆನಡಾಕ್ಕೆ ತನ್ನ ಮಗನ ಖಾತೆಗೆ ವರ್ಗಾಯಿಸಿರುವುದನ್ನು ಆರೋಪಿ ಪತ್ತೆಹಚ್ಚಿದ್ದಾರೆ, ಆನಂತರ ಶಾಸಕನನ್ನು ಕೊಲೆ ಮಾಡಲು ನಿರ್ಧರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

  ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಮಾಜಿ ಎಂಎಲ್‌ಸಿ ಸೆಪ್ಟೆಂಬರ್ 2 ರಂದು ಕೆನಡಾಕ್ಕೆ ವಿಮಾನ ಹತ್ತಲು ದೆಹಲಿಗೆ ಭೇಟಿ ನೀಡಿದ್ದರು ಆದರೆ ರಮೇಶ್ ನಗರದಲ್ಲಿರುವ ವಜೀರ್ ಅವರ ಸ್ನೇಹಿತ ಹರಪ್ರೀತ್ ಸಿಂಗ್ ಖಾಲ್ಸಾ ಅವರ ಫ್ಲಾಟ್‌ನಲ್ಲಿ ಗುಂಡು ಹಾರಿಸಿ ಅವರನ್ನು ಸಾಯಿಸಲಾಗಿತ್ತು. ಅವರ ದೇಹವನ್ನು ಸೆಪ್ಟೆಂಬರ್ 9 ರಂದು ವಾಸನೆ ಬಂದ ಕಾರಣ ಫ್ಲಾಟ್​ ಒಳಗೆ ಹೋಗಿ ಪರಿಶೀಲಿಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.


  ಗುಂಡು ಹಾರಿಸಿ ಹತ್ಯೆ ಮಾಡಿದ ನಂತರ, ವಜೀರ್ ಅವರು ಕೆನಡಾಕ್ಕೆ ವಿಮಾನ ಹತ್ತಲು ಹೋಗಿದ್ದಾರೆ ಎಂದು  ಕುಟುಂಬಕ್ಕೆ ಮನವರಿಕೆ ಮಾಡಿಕೊಡಲು ವಿಮಾನ ನಿಲ್ದಾಣಕ್ಕೆ ಹರ್ಪ್ರೀತ್ ಹೋಗಿದ್ದ ಎಂದು ಪೊಲೀಸರು ತನಿಖೆ ವೇಳೆ ಆರೋಪಿಗಳ ಬಾಯಿ ಬಿಡಿಸಿದ್ದಾರೆ. ಆದರೆ ನಂತರ ವಜೀರ್​ ಬಗ್ಗೆ ಸರಿಯಾಗಿ ಮಾಹಿತಿ ಸಿಗದ ಕಾರಣ, ವಜೀರ್ ಬಗ್ಗೆ ತಿಳಿಯಲು ಕುಟುಂಬದ ಸ್ನೇಹಿತ ಹರಪ್ರೀತ್ ಅವರನ್ನು ಶಾಸಕರ ಕುಟುಂಬಸ್ಥರು ಸಂಪರ್ಕಿಸಿದ್ದರು. ಆಗ ಸತ್ಯ ಹೊರಗೆ ಬಂದಿದೆ ಆರೋಪಿ ಹರ್ಮೀತ್ ಸಿಂಗ್ ವಜೀರ್ ಗೆ ಗುಂಡು ಹಾರಿಸಿ ಕೊಲೆ ಮಾಡಿದ್ದು, ಅವರ ದೇಹವನ್ನು ಮರುಪಡೆಯುವಂತೆ ಕೇಳಿಕೊಂಡರು ಎಂದು ಹೇಳಲಾಗಿದೆ.

  ರಾಜು ಹೇಳಿಕೆಯ ಪ್ರಕಾರ, ಹರ್‌ಪ್ರೀತ್ ಚಿಕ್ಕಪ್ಪನನ್ನು 1983 ರಲ್ಲಿ ಹತ್ಯೆ ಮಾಡಲಾಯಿತು ಮತ್ತು ತನ್ನ ಚಿಕ್ಕಪ್ಪನ ಹತ್ಯೆಯ ಹಿಂದೆ ವಜೀರ್ ಕೈವಾಡವಿದೆ ಎಂದು ಆತ ಬಲವಾಗಿ ನಂಬಿದ್ದನು. ಹರ್ಮೀತ್ ಮತ್ತು ಬಿಲ್ಲಾ ಇಬ್ಬರೂ ಇದರಲ್ಲಿ ಭಾಗಿಯಾಗಿದ್ದಾರೆ. ರಾಜು ವಜೀರ್‌ ಅವರಿಗೆ ನಿದ್ರೆ ಬರುವಂತಹ  ಔಷಧಿಗಳನ್ನು ಕೊಲೆ ಮಾಡುವ ಮುಂಚಿತವಾಗಿ ನೀಡಿದ್ದಾನೆ ನಂತರ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ವಿಚಾರಣೆ ವೇಳೆ ಹೇಳಿದ್ದಾನೆ. ಆನಂತರ ವಜೀರ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ, ಎಲ್ಲಾ ನಾಲ್ವರು ಆರೋಪಿಗಳು ಒಬ್ಬರ ನಂತರ ಒಬ್ಬರು ಸ್ಥಳದಿಂದ ಬೇರೆ ಬೇರೆ ಕಡೆ ಹೋಗಿದ್ದಾರೆ.

  ತನಿಖಾ ಅಧಿಕಾರಿಗಳು ಇದುವರೆಗೆ ಹರ್ಮೀತ್ ಮತ್ತು ಹರ್‌ಪ್ರೀತ್ ಅವರನ್ನು ಪ್ರಮುಖ ಆರೋಪಿಗಳೆಂದು ಶಂಕಿಸಿದ್ದಾರೆ. ವಜೀರ್ ತನ್ನನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಆದ ಕಾರಣ ಅವನನ್ನೇ ನಾವು ಮುಗಿಸಬೇಕಾಯಿತು ಎಂದು ಹರ್ಮೀತ್ ಹೇಳಿದ್ದಾನೆ.


  ಇದನ್ನೂ ಓದಿ: Covid-19: ಕೋವಿಡ್ ಕುರಿತಾದ ಫೇಕ್​ ನ್ಯೂಸ್​ ಹಂಚಿಕೆಯಲ್ಲಿ ಭಾರತದ್ದೇ ಮೇಲುಗೈ; ಅಧ್ಯಯನ

  ಹೆಚ್ಚಿನ ತನಿಖೆಗಾಗಿ, ಪೊಲೀಸರು ಹರ್ಪ್ರೀತ್, ಹರ್ಮೀತ್ ಮತ್ತು ವಜೀರ್ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ಹರ್ಮೀತ್ ತಾನು ಮಾಜಿ ಶಾಸಕ ವಜೀರ್ ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಆ ತಪ್ಪೊಪ್ಪಿಗೆ ಟಿಪ್ಪಣಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದನು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: