PM Security: ಪ್ರಧಾನಿಯ ಭದ್ರತೆ ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾಜಿ IPS ಅಧಿಕಾರಿಗಳಿಂದ ರಾಷ್ಟ್ರಪತಿಗಳಿಗೆ ಪತ್ರ

ಫ್ಲೈಓವರ್‌ನಲ್ಲಿ ಯೋಜಿತ ರೀತಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಪ್ರಧಾನಿಯ ಕಾರನ್ನು ನಿಲ್ಲಿಸುವುದು ಪಂಜಾಬ್‌ನಲ್ಲಿನ ಕಳಪೆ ಕಾನೂನು ಸುವ್ಯವಸ್ಥೆಗೆ ಸಾಕ್ಷಿಯಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪಂಜಾಬ್ ಪ್ರವಾಸದ ವೇಳೆ ಭದ್ರತಾ ಲೋಪ ಕಂಡು ಬಂದಿದ್ದು ಈ ಘಟನೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರನ್ನು ಗುರುವಾರ ಮಾಜಿ ಐಪಿಎಸ್ ಅಧಿಕಾರಿಗಳು (Former IPS officers) ಒತ್ತಾಯಿಸಿದರು.ರಾಜ್ಯ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಸಹಕರಿಸಿ ಉದ್ದೇಶಪೂರ್ವಕವಾಗಿ ಭದ್ರತೆಯನ್ನು ವಿಳಂಬಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ. 27 ಮಾಜಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳು ಸೇರಿ ಕೋವಿಂದ್ ಅವರಿಗೆ ಬರೆದಿರುವ ಪತ್ರದಲ್ಲಿ ಇದು ಈ ದೇಶದ ಇತಿಹಾಸದಲ್ಲೇ (History) ಅತ್ಯಂತ ಗಂಭೀರವಾದ ಭದ್ರತಾ ಲೋಪವಾಗಿದೆ ಎಂದು ವಿವರಿಸಿದರು.

ನಾಚಿಕೆಗೇಡಿನ ಪ್ರದರ್ಶನ
ಪ್ರತಿಭಟನಾಕಾರರು ಪ್ರಧಾನಿಯವರ ಮಾರ್ಗವನ್ನು ತಡೆದ ಘಟನೆ ಕೇವಲ ಭದ್ರತಾ ಲೋಪವಾಗಿರದೆ, ಪ್ರಧಾನ ಮಂತ್ರಿಯನ್ನು ಮುಜುಗರಕ್ಕೀಡುಮಾಡಲು ಮತ್ತು ಅವರಿಗೆ ಹಾನಿ ಒದಗಿಸುವ ಉದ್ದೇಶದಿಂದ ರಾಜ್ಯದ ಪದಾಧಿಕಾರಿಗಳ ಮತ್ತು ಪ್ರತಿಭಟನಾಕಾರರ ನಡುವಿನ ಒಪ್ಪಂದದ ನಾಚಿಕೆಗೇಡಿನ ಪ್ರದರ್ಶನವಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: Explained: ಪ್ರಧಾನಿ ಭದ್ರತೆಗೆ ಏನೆಲ್ಲಾ ಪ್ಲಾನ್‌ ಮಾಡ್ತಾರೆ ಗೊತ್ತಾ? ಹಾಗದ್ರೆ ಪಂಜಾಬ್‌ನಲ್ಲಾದ ಲೋಪವೇನು?

ಸಹಿ ಮಾಡಿದ 27 ಜನರ ತಂಡದಲ್ಲಿ ಪಂಜಾಬ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪಿ.ಸಿ ಡೋಗ್ರಾ ಮತ್ತು ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ದೀಕ್ಷಿತ್ ಅವರೂ ಸೇರಿದ್ದಾರೆ.

ರಾಷ್ಟ್ರಪತಿ ಬಳಿ ಒತ್ತಾಯ
ಮಾಜಿ ಐಪಿಎಸ್ ಅಧಿಕಾರಿಗಳ ಪ್ರಕಾರ, ಘಟನೆಯ ಗಂಭೀರತೆ ಮತ್ತು ಅದರಿಂದೊದಗುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಣಾಮಗಳು ಸೇರಿ, ಸೂಕ್ತ ಕ್ರಮವನ್ನು ಕೋರಿ ರಾಷ್ಟ್ರಪತಿ ಕೋವಿಂದ್ ಅವರನ್ನು ಸಂಪರ್ಕಿಸುವಂತೆ ಒತ್ತಾಯಿಸಿತು. ಫ್ಲೈಓವರ್‌ನಲ್ಲಿ ಯೋಜಿತ ರೀತಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಪ್ರಧಾನಿಯ ಕಾರನ್ನು ನಿಲ್ಲಿಸುವುದು ಪಂಜಾಬ್‌ನಲ್ಲಿನ ಕಳಪೆ ಕಾನೂನು ಸುವ್ಯವಸ್ಥೆಗೆ ಸಾಕ್ಷಿಯಾಗಿದೆ ಮತ್ತು ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಇದರಿಂದ ಅಪಾಯ ಕಾದಿದೆ ಎಂದು ಅವರು ವಾದಿಸಿದರು.

ಪಂಜಾಬ್‌ನೊಳಗೆ ಮೋದಿಯವರ ಪ್ರಯಾಣ ಮತ್ತು ಭದ್ರತೆಯು ಪ್ರಾಥಮಿಕವಾಗಿ ಪಂಜಾಬ್ ಪೊಲೀಸರ ಜವಾಬ್ದಾರಿಯಾಗಿದ್ದು ಸ್ಥಾಪಿತ ಪ್ರೋಟೋಕಾಲ್‌ಗೆ ಅನುಗುಣವಾಗಿ, ಅವರು ಎಲ್ಲಾ ಮಾರ್ಗಗಳಲ್ಲಿ ಸುರಕ್ಷಿತ ಮಾರ್ಗವನ್ನು ಒದಗಿಸಬೇಕಾಗಿತ್ತು .

ಮಾಜಿ ಐಪಿಎಸ್ ಅಧಿಕಾರಿಗಳ ತಂಡ
ರಾಜ್ಯ ಏಜೆನ್ಸಿಗಳು ತಮ್ಮ ಕ್ರಿಯೆಗಳಿಗೆ ಒಂದಲ್ಲ ಒಂದು ನೆಪ ಹೇಳುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು , ಇಂತಹ ಘಟನೆ ಹಿಂದೆ ಎಂದೂ ಸಂಭವಿಸದ ಕಾರಣ ಹಾಗೂ ಮುಖ್ಯಮಂತ್ರಿಗಳ ಮಟ್ಟದಲ್ಲಿಯೂ ಪ್ರಧಾನಿಯವರ ಮಾರ್ಗದ ಬಗ್ಗೆ ವ್ಯತಿರಿಕ್ತ ಹೇಳಿಕೆಗಳಿರುವುದರಿಂದ ನಾವು ನಿಮ್ಮನ್ನು ಸಂಪರ್ಕಿಸುತ್ತಿದ್ದೇವೆ. ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಪ್ರಯಾಣದ ಮಾರ್ಗದ ಮಾಹಿತಿ ಲಭ್ಯವಾಗಿರುವುದರಿಂದ ಪ್ರತಿಭಟನಾಕಾರರು ಪ್ರಧಾನಿಯ ಮಾರ್ಗವನ್ನು ಹೇಗೆ ತಿಳಿದುಕೊಂಡರು ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಚದರಿಸಲು ಪ್ರಯತ್ನಿಸುವ ಬದಲು ಆರಾಮವಾಗಿ ಚಹಾ ಕುಡಿಯುತ್ತಿದ್ದರು, ಅವರ ಈ ನಡವಳಿಕೆ ನಿಜವಾದ ಉದ್ದೇಶಗಳನ್ನು ಬಹಿರಂಗಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Viral News: ಈ ವಯಸ್ಸಲ್ಲೂ ಸಖತ್​ ವರ್ಕೌಟ್​ ಮಾಡಿದ ಮೋದಿ: ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಬೇಜವಾಬ್ದಾರಿತನದ ವರ್ತನೆ
ಕಾಂಗ್ರೆಸ್ ಅನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ , “ನಿರ್ದಿಷ್ಟ ಪಕ್ಷದ ಪರಿಶೀಲಿಸಲ್ಪಟ್ಟ ಟ್ವಿಟ್ಟರ್‌ ಖಾತೆಗಳ ಕೆಲವು ಟ್ವೀಟ್‌ಗಳು ಪಂಜಾಬ್ ಸರ್ಕಾರದ ಉದ್ದೇಶ ಮತ್ತು ಬೇಜವಾಬ್ದಾರಿತನದ ವರ್ತನೆಯನ್ನು ಬಹಿರಂಗಪಡಿಸಿದ್ದು ಇದು ದೇಶದ ಪ್ರಜಾಪ್ರಭುತ್ವಕ್ಕೆ ಆತಂಕಕಾರಿಯಾಗಿದೆ” ಎಂದು ಅವರು ಹೇಳಿದರು. ಪಂಜಾಬ್ ಈಗಾಗಲೇ ದುರ್ಬಲವಾದ ಗಡಿ ರಾಜ್ಯವಾಗಿದೆ ಮತ್ತು ಶಾಂತಿ ಕದಡಲು ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುವ ಗಡಿಯಾಚೆಗಿನ ದೇಶಗಳ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮಾಜಿ ಐಪಿಎಸ್ ಅಧಿಕಾರಿಗಳ ಪ್ರಕಾರ, ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಎಲ್ಲಾ ನಾಯಕರ ಭದ್ರತೆಯನ್ನು ನಿರ್ವಹಿಸುವುದು ರಾಜ್ಯ ಪದಾಧಿಕಾರಿಗಳ ಕರ್ತವ್ಯವಾಗಿದೆ.
Published by:vanithasanjevani vanithasanjevani
First published: