• Home
  • »
  • News
  • »
  • national-international
  • »
  • Digvijay Singh: ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಪುರಾವೆ ಕೇಳಿದ ದಿಗ್ವಿಜಯ್‌ ಸಿಂಗ್‌ಗೆ ನಿವೃತ್ತ ಏರ್ ಮಾರ್ಷಲ್ ಖಡಕ್ ಉತ್ತರ

Digvijay Singh: ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಪುರಾವೆ ಕೇಳಿದ ದಿಗ್ವಿಜಯ್‌ ಸಿಂಗ್‌ಗೆ ನಿವೃತ್ತ ಏರ್ ಮಾರ್ಷಲ್ ಖಡಕ್ ಉತ್ತರ

ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌

ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌

ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಪುಲ್ವಾಮಾ ಭಯೋತ್ಪಾದಕರ ಕೇಂದ್ರವಾಗಿತ್ತು ಎಂದು ಅಲ್ಲಿ ಬರುವ ಪ್ರತಿಯೊಂದು ಕಾರ್‌ಗಳನ್ನೂ ಪರಿಶೀಲನೆ ನಡೆಸಲಾಗ್ತಿತ್ತು. ದಾಳಿ ನಡೆದ ದಿನ ಸ್ಕಾರ್ಪಿಯೋ ಕಾರೊಂದು ವಿರುದ್ಧ ದಿಕ್ಕಿನಿಂದ ಬಂದಿತ್ತು. ಬಳಿಕ ಅಲ್ಲಿ ಅವಘಡ ಸಂಭವಿಸಿತ್ತು. ಆದರೆ ಆ ಕಾರನ್ನು ಏಕೆ ಪರಿಶೀಲನೆ ನಡೆಸಿಲ್ಲ? ಈ ಘಟನೆಯ ಕುರಿತು ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಎಲ್ಲೂ ಉತ್ತರವೇ ನೀಡಿಲ್ಲ’ ಎಂದು ಆರೋಪ ಮಾಡಿದ್ದರು.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ: 2019ರಲ್ಲಿ ಭಾರತೀಯ ವಾಯುಪಡೆ (Indian Air Force) ಪಾಕಿಸ್ತಾನದ ಬಾಲಾಕೋಟ್‌ನಲ್ಲಿ (Balakot) ಉಗ್ರರ ತರಬೇತಿ ಕೇಂದ್ರದ ಮೇಲೆ ನಡೆಸಿದ ಏರ್‌ಸ್ಟ್ರೈಕ್ (Air Strike) ಬಗ್ಗೆ ಪುರಾವೆ ಕೇಳಿದ್ದ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ (Digvijay Singh) ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ನಾಯಕರು (BJP Leaders) ದಿಗ್ವಿಜಯ್ ವಿರುದ್ಧ ಮುಗಿಬಿದ್ದಿದ್ದಾರೆ. ದಿಗ್ವಿಜಯ್ ಸಿಂಗ್ ಹೇಳಿಕೆಯಿಂದ ಕಾಂಗ್ರೆಸ್‌ (Congress Party) ಪಕ್ಷಕ್ಕೆ ಮುಜುಗರ ಉಂಟಾಗಿಸಲು ಬಿಜೆಪಿ ಪ್ರಯತ್ನ ನಡೆಸಿದ್ದು, ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಕಾಂಗ್ರೆಸ್ ಪರ ಒಂದಷ್ಟು ಧನಾತ್ಮಕ ಭಾವನೆಗಳು ರೂಪುಗೊಳ್ಳುತ್ತಿರುವ ಮಧ್ಯೆಯೇ ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ನಕರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.


ದಿಗ್ವಿಜಯ್ ಸಿಂಗ್‌ ವಿರುದ್ಧ ಕಿಡಿ


ಒಂದೆಡೆ ಏರ್‌ಸ್ಟ್ರೈಕ್‌ ಬಗ್ಗೆ ಪುರಾವೆ ಕೇಳಿದ್ದಕ್ಕೆ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರಂತೆ ಮುಗಿಬೀಳುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕನ ಹೇಳಿಕೆಯ ವಿರುದ್ಧ ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ರಘುನಾಥ್ ನಂಬಿಯಾರ್ ಕೂಡ ಕಿಡಿಕಾರಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ವಿಡಿಯೋ ಮೂಲಕ ದಿಗ್ವಿಜಯ್ ಸಿಂಗ್‌ರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ‘ಈ ವ್ಯಕ್ತಿಗೆ 3 ವರ್ಷಗಳ ಹಿಂದೆ ಭಾರತೀಯ ವಾಯುಪಡೆ ಪಾಕ್‌ನ ಬಾಲಾಕೋಟ್‌ ಮೇಲೆ ನಡೆಸಿದ ಸರ್ಜಿಕಲ್‌ ಸ್ರ್ಟೈಕ್‌ ಬಗ್ಗೆ ಅವರೇನು ಮಾತಾಡಿದ್ದಾರೆಂದೇ ಗೊತ್ತಾಗ್ತಿಲ್ಲ. ಅಥವಾ ಇವರಿಗೆ ಆ ಕಾರ್ಯಾಚರಣೆಯ ಬಗ್ಗೆ ತಪ್ಪು ಮಾಹಿತಿ ಇದೆ. ಈ ಸರ್ಜಿಕಲ್ ಸ್ಟ್ರೈಕ್‌ ಭಾರತೀಯ ಶೌರ್ಯದ ಪ್ರತೀಕವಾಗಿದ್ದು, ಈ ಕಾರ್ಯಾಚರಣೆಯ ಮೂಲಕ ನಾವು ಉಗ್ರರ ಹುಟ್ಟಡಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ಬಗ್ಗೆ ಯಾರೂ ಅನುಮಾನಪಡುವ ಹಾಗಿಲ್ಲ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Surgical Strike: ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಕ್ಕೆ ಪುರಾವೆ ಎಲ್ಲಿದೆ? ಕೇಂದ್ರಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪ್ರಶ್ನೆ


ಮುಂದುವರಿದು ಮಾತನಾಡಿರುವ ರಘುನಾಥ್ ನಂಬಿಯಾರ್, ‘ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ನಡೆದು ಎರಡು ದಿನಗಳ ನಂತರ ನಾನು ವಾಯು ಪಡೆಯ ವೆಸ್ಟರ್ನ್‌ ಕಮಾಂಡ್‌ನ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ್ದೆ. ಹಾಗಾಗಿ ನನಗೆ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಬಗ್ಗೆ ಇಂಚಿಂಚೂ ಮಾಹಿತಿ ಇದೆ. ನಮ್ಮ ಸಾಹಸಿ ಪೈಲಟ್‌ಗಳಿಗೆ ಈ ಕಾರ್ಯಾಚರಣೆಯಲ್ಲಿ ಅವರು ಏನು ಮಾಡಬೇಕು ಎಂದು ಸೂಚಿಸಲಾಗಿತ್ತೋ ಅದೆಲ್ಲವನ್ನೂ ಅವರು ಚಾಚೂ ತಪ್ಪದೇ ಮಾಡಿಕೊಂಡು ಬಂದಿದ್ದರು. ಹೀಗಾಗಿ ನಾನು ಸಾರ್ವಜನಿಕರಲ್ಲಿ ಕೇಳೋದು ಇಷ್ಟೇ, ದಯವಿಟ್ಟು ಬಾಲಾಕೋಟ್ ದಾಳಿಯ ಬಗ್ಗೆ ಹರಿದಾಡುವ ವದಂತಿಗಳನ್ನು ನಂಬಬೇಡಿ. ಅದು ನಿಜಕ್ಕೂ ಭಾರತದ ಯಶಸ್ಚಿ ಕಾರ್ಯಾಚರಣೆಯಾಗಿದೆ’ ಎಂದು ಹೇಳಿದ್ದಾರೆ.


'ಕೇಂದ್ರ ಸರ್ಕಾರ ಪುರಾವೆಯೇ ನೀಡಿಲ್ಲ'


ಜಮ್ಮು ಕಾಶ್ಮೀರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದ ವೇದಿಕೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಬಾಲಾಕೋಟ್ ಮೇಲೆ ನಡೆಸಲಾಗಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ, 2019 ರ ಫೆಬ್ರವರಿಯಲ್ಲಿ 40 ಮಂದಿ ಭಾರತೀಯ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ಭಯೋತ್ಪಾದಕರ ದಾಳಿಯ ಕುರಿತು ಪುನಃ ಪ್ರಶ್ನೆ ಎತ್ತಿದ್ದ ದಿಗ್ವಿಜಯ್ ಸಿಂಗ್, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್‌ ನಡೆಸಿದ್ದಕ್ಕೆ ಕೇಂದ್ರ ಸರ್ಕಾರ ಈವರೆಗೂ ಪುರಾವೆ ನೀಡಿಲ್ಲ ಎಂದು ಹೇಳಿದ್ದರು.


ಇದನ್ನೂ ಓದಿ:VR Sudarshan Resign: ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ ಆರ್ ಸುದರ್ಶನ್ ರಾಜೀನಾಮೆ, ಕಾರಣ ಏನು?


ಈ ಬಗ್ಗೆ ತಮ್ಮ ಭಾಷಣದಲ್ಲಿ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಪುಲ್ವಾಮಾ ಭಯೋತ್ಪಾದಕರ ಕೇಂದ್ರವಾಗಿತ್ತು ಎಂದು ಅಲ್ಲಿ ಬರುವ ಪ್ರತಿಯೊಂದು ಕಾರ್‌ಗಳನ್ನೂ ಪರಿಶೀಲನೆ ನಡೆಸಲಾಗ್ತಿತ್ತು. ದಾಳಿ ನಡೆದ ದಿನ ಸ್ಕಾರ್ಪಿಯೋ ಕಾರೊಂದು ವಿರುದ್ಧ ದಿಕ್ಕಿನಿಂದ ಬಂದಿತ್ತು. ಆ ಬಳಿಕ ಅಲ್ಲಿ ಅವಘಡ ಸಂಭವಿಸಿತ್ತು. ಆದರೆ ಆ ಕಾರನ್ನು ಏಕೆ ಪರಿಶೀಲನೆ ನಡೆಸಿಲ್ಲ? ಈ ಘಟನೆಯ ಕುರಿತು ಕೇಂದ್ರ ಸರ್ಕಾರ ಪಾರ್ಲಿಮೆಂಟ್ ಅಥವಾ ಸಾರ್ವಜನಿಕವಾಗಿ ಎಲ್ಲೂ ಉತ್ತರವೇ ನೀಡಿಲ್ಲ’ ಎಂದು ಆರೋಪ ಮಾಡಿದ್ದರು.
ಮುಂದುವರಿದು ಮಾತನಾಡಿದ ಅವರು, ಕೇಂದ್ರ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ. ನಾವು ಇಷ್ಟು ಜನರನ್ನು ಕೊಂದಿದ್ದೇವೆ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಪುರಾವೆಯೇ ಇಲ್ಲ. ಕೇಂದ್ರ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳುತ್ತಿದೆ ಎಂದು ದಿಗ್ವಿಜಯ್ ಸಿಂಗ್ ಆರೋಪ ಮಾಡಿದ್ದರು. ಇದೀಗ ದಿಗ್ವಿಜಯ್ ಸಿಂಗ್ ಹೇಳಿಕೆ ವಿವಾದವಾಗಿ ಮಾರ್ಪಟ್ಟಿದೆ.

Published by:Avinash K
First published: