‘ನಾವು ಹೇಳೋವರೆಗೂ ಕೋರ್ಟ್ ಹಾಲ್​ನ ಮೂಲೆಯಲ್ಲಿರಿ’ – ಮಾಜಿ ಸಿಬಿಐ ಮುಖ್ಯಸ್ಥರಿಗೆ ಸುಪ್ರೀಂ ಪೀಠದ ಕಟ್ಟಾಜ್ಞೆ

ಕೋರ್ಟ್ ಗಮನಕ್ಕೆ ತರದೆಯೇ ಉನ್ನತ ಸಿಬಿಐ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿದ್ದಕ್ಕೆ ಮಾಜಿ ಮುಖ್ಯಸ್ಥ ಎಂ. ನಾಗೇಶ್ವರ್ ರಾವ್ ಮೇಲೆ ಸುಪ್ರೀಂ ಕೋರ್ಟ್ ಕೆಂಗಣ್ಣು ಬಿದ್ದಿದೆ.

Vijayasarthy SN | news18
Updated:February 12, 2019, 2:09 PM IST
‘ನಾವು ಹೇಳೋವರೆಗೂ ಕೋರ್ಟ್ ಹಾಲ್​ನ ಮೂಲೆಯಲ್ಲಿರಿ’ – ಮಾಜಿ ಸಿಬಿಐ ಮುಖ್ಯಸ್ಥರಿಗೆ ಸುಪ್ರೀಂ ಪೀಠದ ಕಟ್ಟಾಜ್ಞೆ
ನಾಗೇಶ್ವರ ರಾವ್
Vijayasarthy SN | news18
Updated: February 12, 2019, 2:09 PM IST
ನವದೆಹಲಿ(ಫೆ. 12): ಸಿಬಿಐನ ಹಿರಿಯ ತನಿಖಾಧಿಕಾರಿಯೊಬ್ಬರ ವರ್ಗಾವಣೆ ವಿಚಾರದಲ್ಲಿ ಕೋರ್ಟ್ ಆದೇಶ ದಿಕ್ಕರಿಸಿದ ಕಾರಣಕ್ಕೆ ಮಾಜಿ ಸಿಬಿಐ ಮುಖ್ಯಸ್ಥ ಎಂ. ನಾಗೇಶ್ವರ್ ರಾವ್ ಹಾಗೂ ಹೆಚ್ಚುವರಿ ಕಾನೂನು ಸಲಹೆಗಾರ ಎಸ್. ಭಾಸುರನ್ ಅವರಿಬ್ಬರನ್ನೂ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಅವರಿಬ್ಬರೂ ತಪ್ಪಿತಸ್ಥರೆಂದು ಪರಿಗಣಿಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಕೋರ್ಟ್ ಪೀಠವು, ಎಂ. ನಾಗೇಶ್ವರ್ ರಾವ್ ಮತ್ತು ಎಸ್. ಭಾಸುರನ್ ಅವರಿಬ್ಬರಿಗೂ ಅನಿರ್ದಿಷ್ಟ ಅವಧಿಯವರೆಗೂ ಕೋರ್ಟ್ ಹಾಲ್​ನಲ್ಲೇ ವಾಸವಿರಬೇಕೆಂದು ಆಜ್ಞಾಪಿಸಿದೆ. ಮತ್ತೆ ವಿಚಾರಣೆ ನಡೆದು ಮುಂದಿನ ಆಜ್ಞೆ ಬರುವವರೆಗೂ ನೀವಿಬ್ಬರೂ ಈ ಕೋರ್ಟ್ ಹಾಲ್​ನ ಮೂಲೆಯಲ್ಲೇ ಇರಬೇಕೆಂದು ಸುಪ್ರೀಂ ಪೀಠವು ಆದೇಶಿಸಿತು. ಇದರ ಜೊತೆಗೆ ನಾಗೇಶ್ವರ್ ರಾವ್ ಅವರಿಗೆ 1 ಲಕ್ಷ ರೂ ದಂಡವನ್ನೂ ವಿಧಿಸಲಾಯಿತು. ಒಂದು ವಾರದೊಳಗೆ ಮಾಜಿ ಸಿಬಿಐ ಮುಖ್ಯಸ್ಥರು ಈ ದಂಡದ ಮೊತ್ತವನ್ನು ಕೋರ್ಟ್​ಗೆ ಇಡಬೇಕೆಂದು ಸೂಚಿಸಿತು.

ಇದನ್ನೂ ಓದಿ: ವೇದಿಕೆಯ ಮೇಲೆ ಪಿಎಂ ಮೋದಿ ಇರುವಾಗಲೇ ಸಹೋದ್ಯೋಗಿ ಜೊತೆ ಅಸಭ್ಯವಾಗಿ ನಡೆದುಕೊಂಡ ಬಿಜೆಪಿ ಸಚಿವ

ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನಾ ಅವರಿಬ್ಬರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಕೇಂದ್ರ ಸರಕಾರವು ಎಂ. ನಾಗೇಶ್ವರ್ ರಾವ್ ಅವರನ್ನು ಹಂಗಾಮಿ ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಅಧಿಕಾರಕ್ಕೆ ಏರಿದ ಕೂಡಲೇ, ಅಂದರೆ ಜನವರಿ 17ರಂದು ನಾಗೇಶ್ವರ್ ರಾವ್ ಅವರು ಹಲವಾರು ಸಿಬಿಐ ಅಧಿಕಾರಿಗಳನ್ನು ಆಯಕಟ್ಟಿನ ಜಾಗದಿಂದ ವರ್ಗಾವಣೆ ಮಾಡಿದ್ದರು. ಈ ರೀತಿ ವರ್ಗಾವಣೆಯಾದವರಲ್ಲಿ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಕೂಡ ಒಬ್ಬರು. ಮುಜಾಫರ್​ಪುರ್ ನಗರದ ಅನಾಥಾಶ್ರಮವೊಂದರ ಲೈಂಗಿಕ ಹಗರಣದಲ್ಲಿ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ನೇತೃತ್ವದಲ್ಲಿ ಸಿಬಿಐ ತಂಡವೊಂದು ತನಿಖೆ ನಡೆಸುತ್ತಿತ್ತು.

ಇದನ್ನೂ ಓದಿ: 'ಗಲ್ಲಿ ಬಾಯ್​'ಗೆ ಸೆನ್ಸಾರ್​ ಕಿರಿಕ್​​; 13 ಸೆಕೆಂಡ್​ಗಳ ಕಿಸ್ಸಿಂಗ್​ ದೃಶ್ಯಕ್ಕೆ ಕತ್ತರಿ!

ನಾಗೇಶ್ವರ್ ರಾವ್ ಅವರ ನೇಮಕಾತಿಗೆ ಕೋರ್ಟ್ ಕೆಲ ಷರತ್ತುಗಳನ್ನ ವಿಧಿಸಿತ್ತು. ತಮ್ಮ ಗಮನಕ್ಕೆ ತರದೆ ಯಾವುದೇ ಪ್ರಮುಖ ವರ್ಗಾವಣೆ ಮಾಡಬಾರದು ಎಂಬುದೂ ಅದರಲ್ಲಿದ್ದ ಷರತ್ತುಗಳಲ್ಲೊಂದು. ಆದರೆ, ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಅವರಂಥ ಉನ್ನತ ಅಧಿಕಾರಿಯನ್ನು ಕೋರ್ಟ್ ಆದೇಶ ದಿಕ್ಕರಿಸಿ ವರ್ಗಾವಣೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಫೆ. 7ರಂದೇ ನಾಗೇಶ್ವರ್ ರಾವ್ ಅವರನ್ನ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಆಗ ನಾಗೇಶ್ವರ್ ರಾವ್ ಅವರು ಕೋರ್ಟ್​ಗೆ ಬೇಷರತ್ ಕ್ಷಮೆ ಯಾಚಿಸಿದ್ದರು. ಎ.ಕೆ. ಶರ್ಮಾ ಅವರನ್ನು ವರ್ಗಾವಣೆ ಮಾಡಿದ ವಿಚಾರವನ್ನು ಕೋರ್ಟ್ ಗಮನಕ್ಕೆ ತರದೇ ಇರುವುದು ಕಿರಿಯ ವಕೀಲರ ತಪ್ಪಾಗಿತ್ತು ಎಂದು ನಾಗೇಶ್ವರ್ ರಾವ್ ಪರ ಅಟಾರ್ನಿ ಜನರಲ್ ಅವರು ವಾದ ಮಂಡಿಸಲು ಪ್ರಯತ್ನಿಸಿದರು. ಆದರೆ, ಎಜಿ ಅವರ ಮಾತಿಗೆ ಸುಪ್ರೀಂ ಸೊಪ್ಪು ಹಾಕಲಿಲ್ಲ.

ಇದೇ ವೇಳೆ, ಎ.ಕೆ. ಶರ್ಮಾ ಅವರ ವರ್ಗಾವಣೆಯ ಹಿಂದಿರುವ ಎಲ್ಲಾ ಅಧಿಕಾರಿಗಳ ಪಟ್ಟಿ ನೀಡುವಂತೆ ಸುಪ್ರೀ ಕೋರ್ಟ್ ಪೀಠವು ಈಗಿನ ಸಿಬಿಐ ಮುಖ್ಯಸ್ಥ ರಿಷಿ ಕುಮಾರ್ ಶುಕ್ಲಾ ಅವರಿಗೆ ಸೂಚಿಸಿದೆ. ಒಟ್ಟಾರೆಯಾಗಿ, ಕೋರ್ಟ್​ನ ಆದೇಶವನ್ನು ಧಿಕ್ಕರಿಸಿ ನಡೆದುಕೊಂಡ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ನಾಗೇಶ್ವರ್ ರಾವ್ ಮತ್ತು ಭಾಸುರನ್ ಅವರಿಬ್ಬರು ಒಂದು ದಿನ ಮಟ್ಟಿಗೆ ಕೋರ್ಟ್ ಹಾಲ್ ನಂಬರ್ ಒಂದರಲ್ಲಿ ಕಾಲ ದೂಡಬೇಕಾಗುತ್ತದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ