• Home
  • »
  • News
  • »
  • national-international
  • »
  • Jitendra Narain: ಮತ್ತೆ ಸಂಕಷ್ಟಕ್ಕೆ ಸಿಲುಕಿದ ಅಂಡಮಾನ್ ಮಾಜಿ ಮುಖ್ಯ ಕಾರ್ಯದರ್ಶಿ, ಕೆಲಸದ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯ ಆರೋಪ

Jitendra Narain: ಮತ್ತೆ ಸಂಕಷ್ಟಕ್ಕೆ ಸಿಲುಕಿದ ಅಂಡಮಾನ್ ಮಾಜಿ ಮುಖ್ಯ ಕಾರ್ಯದರ್ಶಿ, ಕೆಲಸದ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯ ಆರೋಪ

 ಜಿತೇಂದ್ರ ನರೇನ್

ಜಿತೇಂದ್ರ ನರೇನ್

Ex Andamans Chief Secretary in Trouble: 21 ವರ್ಷದ ಯುವತಿಯೊಬ್ಬರು ಜಿತೇಂದ್ರ ಹಾಗೂ ಕಾರ್ಮಿಕ ಆಯುಕ್ತ RL ರಿಷಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ನಂತರ ನರೇನ್ ಹೆಸರು ಬೆಳಕಿಗೆ ಬಂದಿದೆ.

  • Share this:

ಅಂಡಮಾನ್ ಮತ್ತು ನಿಕೋಬಾರ್ (Andaman and Nicobar) ಕೇಂದ್ರಾಡಳಿತ ಪ್ರದೇಶದ ಅಮಾನತುಗೊಂಡಿರುವ ಮಾಜಿ ಮುಖ್ಯ ಕಾರ್ಯದರ್ಶಿ (Ex Andamans Chief Secretary) ಜಿತೇಂದ್ರ ನರೇನ್(jitendra narain) ಇನ್ನಷ್ಟು ವಿವಾದಗಳಿಗೆ ಸಿಲುಕಿದ್ದು ಕೆಲಸದ ಸ್ಥಳದಲ್ಲಿ ಜಿತೇಂದ್ರ ನರೇನ್ ಲೈಂಗಿಕ ಕಿರುಕುಳವನ್ನು ನಡೆಸಿದ್ದಾರೆ ಎಂದು ಆರೋಪಿಸಿ ವಿಶಾಕಾ ಮಾರ್ಗಸೂಚಿಗಳ ಅಡಿಯಲ್ಲಿ ಮತ್ತೊಬ್ಬ ಮಹಿಳೆ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. 21 ವರ್ಷದ ಯುವತಿಯೊಬ್ಬರು ಜಿತೇಂದ್ರ ಹಾಗೂ ಕಾರ್ಮಿಕ ಆಯುಕ್ತ RL ರಿಷಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ನಂತರ ನರೇನ್ ಹೆಸರು ಬೆಳಕಿಗೆ ಬಂದಿದೆ.


ನರೇನ್ ತಮ್ಮ ಅಧಿಕಾರಾವಧಿಯಲ್ಲಿ 20 ಕ್ಕೂ ಹೆಚ್ಚು ಮಹಿಳೆಯರನ್ನು ತಮ್ಮ ಪೋರ್ಟ್ ಬ್ಲೇರ್ ನಿವಾಸಕ್ಕೆ ಕರೆದೊಯ್ದಿರುವುದು ಈಗ ತನಿಖೆಗಳಿಂದ ಬೆಳಕಿಗೆ ಬಂದಿದ್ದು, ಉದ್ಯೋಗದ ಆಮಿಷವೊಡ್ಡಿ ಸೆಕ್ಸ್‌ಗಾಗಿ ಉದ್ಯೋಗ ದಂಧೆ ನಡೆಸಿರುವ ನರೇನ್ ಅವರ ಕುಕೃತ್ಯ ಸಾಬೀತಾಗಿದ್ದು, ಲೈಂಗಿಕವಾಗಿ ಶೋಷಣೆಗೊಳಗಾದವರು ಉದ್ಯೋಗ ದೊರೆಯುತ್ತದೆಂಬ ಆಮಿಷದಿಂದ ನರೇನ್‌ಗೆ ಬಲಿಪಶುಗಳಾಗಿದ್ದರು ಎಂಬುದು ತಿಳಿದುಬಂದಿದೆ.


ಈ ಕುರಿತು ಇತ್ತೀಚಿನ ಬೆಳವಣಿಗೆಯನ್ನು ದೃಢೀಕರಿಸಿರುವ ಅಂಡಮಾನ್ ಆಡಳಿತವು ಜಿತೇಂದ್ರ ನರೇನ್ ವಿರುದ್ಧ ಆರೋಪಿಸಿರುವ ದೂರನ್ನು ಸ್ವೀಕರಿಸಲಾಗಿದೆ ಹಾಗೂ ವಿಶಾಕಾ ಸಮಿತಿಗೆ ಕಳುಹಿಸಲಾಗಿದೆ ಎಂದು ನ್ಯೂಸ್ 18 ಸುದ್ದಿ ವಿಭಾಗಕ್ಕೆ ತಿಳಿಸಿದೆ. ಇನ್ನು ದೊರೆತಿರುವ ಮೂಲಗಳ ಪ್ರಕಾರ, ದೂರಿನಲ್ಲಿ ಇದುವರೆಗೆ ಯಾವುದೇ ಅಪರಾಧವನ್ನು ದಾಖಲಿಸಲಾಗಿಲ್ಲ ಹಾಗೂ ಮುಂದಿನ ಕ್ರಮ ಕೈಗೊಳ್ಳಲು ಸಮಿತಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.


ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಂಡಿರುವ ನರೇನ್


ಅಂಡಮಾನ್ ಆಡಳಿತ ಅಧಿಕಾರಿಯೊಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ದೂರು ಸ್ವೀಕರಿಸಿದ ಬೆನ್ನಲ್ಲೇ ನರೇನ್ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಈಗಷ್ಟೇ ಮಹಿಳಾ ದೂರುದಾರರು ನೀಡಿರುವ ದೂರಿನ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದ್ದು ಅಗತ್ಯ ಸಮಿತಿಗೆ ವರದಿಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.


ಈ ಕುರಿತು ಸುದ್ದಿ ವಿಭಾಗ ನೇರವಾಗಿ ನರೇನ್ ಅವರನ್ನು ಸಂಪರ್ಕಿಸಲು ಸಂದೇಶಗಳನ್ನು ರವಾನಿಸಿದ್ದು, ಫೋನ್ ಕರೆಗಳನ್ನು ನಡೆಸಿದ್ದಾರೆ ಆದರೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂಬುದು ತಿಳಿದುಬಂದಿದೆ.


ಅಂಡಮಾನ್ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ ಮಾಜಿ ಮುಖ್ಯ ಕಾರ್ಯದರ್ಶಿ ನರೇನ್ ವಿರುದ್ಧ ಮಹಿಳೆಯು ಪ್ರಚೋದನೆಯನ್ನು ಆರೋಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಇತರ ಆರೋಪಗಳೊಂದಿಗೆ ಮಹಿಳೆಯು ನರೇನ್ ವಿರುದ್ಧ ಪ್ರಚೋದನೆಯ ಆರೋಪವನ್ನು ಮಾಡಿದ್ದು, ನರೇನ್ ಮುಖ್ಯಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಮಹಿಳೆಗೆ ಗುತ್ತಿಗೆ ಸರಕಾರಿ ಉದ್ಯೋಗ ದೊರಕಿತ್ತು.


ಮಹಿಳೆ ಮಾಡಿರುವ ಆರೋಪವು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಇದುವರೆಗೆ ಅಪರಾಧದ ವಿಷಯ ಗಮನಕ್ಕೆ ಬಂದಿಲ್ಲವಾದ್ದರಿಂದ ಇದೀಗ ಪ್ರಕರಣ ಸಮಿತಿಯಲ್ಲಿದೆ. ಸಮಿತಿ ನಿರ್ಧಾರ ಕೈಗೊಂಡ ನಂತರ ಮಾರ್ಗಸೂಚಿಗಳ ಪ್ರಕಾರ ಪೊಲೀಸರಿಗೆ ದೂರು ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಭಾರತದ ವಿರುದ್ಧ ನಡೆಯುತ್ತಿದೆ ದೊಡ್ಡ ಷಡ್ಯಂತ್ರ: ಬಂಧಿತ ಚೀನಾ ಮಹಿಳಾ ಗೂಢಚಾರಿಣಿಯಿಂದ ಬಹಿರಂಗ!


ಪ್ರತ್ಯೇಕ ಸಮಿತಿ ರಚನೆ


ರಾಷ್ಟ್ರೀಯ ಮಹಿಳಾ ಆಯೋಗದ (NCW) ಪ್ರಕಾರ ವಿಶಾಕಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ದೇಶದ ಪ್ರತಿಯೊಂದು ಸರ್ಕಾರಿ ಇಲಾಖೆ/ಸಂಸ್ಥೆ/ಸ್ವಾಯತ್ತ ಸಂಸ್ಥೆಗಳು ಆಂತರಿಕ ದೂರುಗಳನ್ನು ದಾಖಲಿಸಲು ಪ್ರತ್ಯೇಕ ಸಮಿತಿಗಳನ್ನು ರಚಿಸಲು ಒತ್ತು ನೀಡಿದೆ.


1998 ರಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನ್ವಯ ಕೆಲಸದ ಸ್ಥಳಗಳಲ್ಲಿ ನೀತಿ ಸಂಹಿತೆಯನ್ನು ರೂಪಿಸಲಾಗಿದ್ದು ಎಲ್ಲಾ ರಾಜ್ಯ ಮಹಿಳಾ ಆಯೋಗಗಳು, ಎನ್‌ಜಿಒಗಳು, ಕಾರ್ಪೊರೇಟ್ ವಲಯದ ಉನ್ನತ ಸಂಸ್ಥೆಗಳಿಗೆ ಅನುಸರಣೆಗಾಗಿ ರವಾನಿಸಲಾಗಿದೆ.


ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಮಿತ್ ಶಾ ಆದೇಶ


ನರೇನ್ ವಿರುದ್ಧ ಆರೋಪಿಸಿರುವ ಸಾಮೂಹಿಕ ಅತ್ಯಾಚಾರ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ಈಗಾಗಲೇ ನರೇನ್ ಅವರನ್ನು ತನಿಖೆಗೆ ಒಳಪಡಿಸಿದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಉದ್ಯೋಗಕ್ಕಾಗಿ ಹುಡುಕುತ್ತಿದ್ದ ಸಮಯದಲ್ಲಿ ಹೋಟೆಲ್ ಮಾಲೀಕರ ಮೂಲಕ ರಿಷಿಯ ಪರಿಚಯವಾಯಿತು ಎಂದು ತಿಳಿಸಿದ್ದಾರೆ.


ಕಮಿಷನರ್ (ರಿಷಿ) ಮುಖ್ಯ ಕಾರ್ಯದರ್ಶಿಯ (ನರೇನ್) ನಿವಾಸಕ್ಕೆ ತನ್ನನ್ನು ಕರೆದೊಯ್ದಿರುವುದಾಗಿ ಮಹಿಳೆ ತಿಳಿಸಿದ್ದು ಆಕೆಗೆ ಮದ್ಯ ನೀಡಿದ್ದು ಅದನ್ನಾಕೆ ನಿರಾಕರಿಸಿರುವುದನ್ನು ಪ್ರಸ್ತಾವಿಸಿದ್ದಾರೆ. ನಂತರ ಸರಕಾರಿ ಉದ್ಯೋಗದ ಭರವಸೆಯನ್ನು ನೀಡಲಾಯಿತು ಎಂದು ಆರೋಪಿಸಿದ್ದಾರೆ. ತರುವಾಯ ಇಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂಬುದಾಗಿ ಮಹಿಳೆ ತಿಳಿಸಿದ್ದನ್ನು ವರದಿ ಮಾಡಲಾಗಿದೆ.


ಇದನ್ನೂ ಓದಿ: ಒಬ್ಬಳಿಗೆ ಪ್ರಿಯತಮ ಕೈಕೊಟ್ಟಿದ್ದಕ್ಕೆ ವಿಷ ಕುಡಿದ ಮೂವರು ಬಾಲಕಿಯರು! ದುಡುಕಿನ ನಿರ್ಧಾರಕ್ಕೆ ಇಬ್ಬರು ಬಲಿ


ಆಪಾದಿತೆಯ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ 16 ರಂದು ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರಿಂದ ವರದಿಯನ್ನು ಸ್ವೀಕರಿಸಿದೆ. ಜಿತೇಂದ್ರ ನರೇನ್ IAS (AGMUT: 1990) ಕಡೆಯಿಂದ ಸಂಭವಿಸಿದ ಗಂಭೀರ ದುರ್ನಡತೆ ಹಾಗೂ ಅಧಿಕೃತ ಸ್ಥಾನದ ದುರುಪಯೋಗವನ್ನು ವರದಿಯು ಸೂಚಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

Published by:Sandhya M
First published: