ಜಾಗತಿಕ ಮಂದ ಆರ್ಥಿಕತೆ ಭಾರತದಂತಹ ಉದಯೋನ್ಮುಖ ದೇಶಗಳನ್ನು ಮತ್ತಷ್ಟು ಕಾಡಲಿದೆ; ಎಚ್ಚರಿಕೆ ನೀಡಿದ ಐಎಮ್ಎಫ್

ಅಕ್ಟೋಬರ್ 2019ರಲ್ಲಿ ಆರ್​ಬಿಐ ಬಿಡುಗಡೆ ಮಾಡಿದ್ದ ತನ್ನ ಹಣಕಾಸು ನೀತಿ ವರದಿಯಲ್ಲಿ ದೇಶೀಯ ಮತ್ತು ಜಾಗತಿಕ ಆರ್ಥಿಕ ಸಂಯೋಜನೆಗಳು ದೇಶದ ಆರ್ಥಿಕ ಚಟುವಟಿಕೆಯನ್ನು ಮತ್ತಷ್ಟು ಖಿನ್ನತೆಗೆ ಒಳಪಡಿಸಿವೆ. ಹೀಗಾಗಿ ಭಾರತದ ಆರ್ಥಿಕತೆ ಹಲವಾರು ಅಪಾಯಗಳನ್ನು ಭವಿಷ್ಯದಲ್ಲಿ ಎದುರಿಸಬೇಕಿದೆ ಎಂದು ಆತಂಕ ವ್ಯಕ್ತಪಡಿಸಿತ್ತು.

MAshok Kumar | news18-kannada
Updated:October 9, 2019, 1:51 PM IST
ಜಾಗತಿಕ ಮಂದ ಆರ್ಥಿಕತೆ ಭಾರತದಂತಹ ಉದಯೋನ್ಮುಖ ದೇಶಗಳನ್ನು ಮತ್ತಷ್ಟು ಕಾಡಲಿದೆ; ಎಚ್ಚರಿಕೆ ನೀಡಿದ ಐಎಮ್ಎಫ್
ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲೀನಾ ಜಾರ್ಜೀವಾ
  • Share this:
ವಿಶ್ವದ ಆರ್ಥಿಕತೆ ಸಿಂಕ್ರೋನೈಸ್ ಮಾಡಲಾದ ಮಂದಗತಿಯ ಹಿಡಿತದಲ್ಲಿದ್ದು, ಈ ವರ್ಷ ಶೇ 90 ರಷ್ಟು ನಿಧಾನ ಆರ್ಥಿಕತೆಯ ಬೆಳವಣಿಗೆಗೆ ಇದೇ ಕಾರಣ. ಇದರ ಪರಿಣಾಮ ಇತರೆ ದೇಶಗಳಿಂತ ಭಾರತದಂತಹ ಉದಯೋನ್ಮುಖ ಹಾಗೂ ದೊಡ್ಡ ಆರ್ಥಿಕತೆಯ ದೇಶಗಳ ಮೇಲೆ ವ್ಯತಿರೀಕ್ತವಾಗಿರುತ್ತದೆ ಎಂದು 189 ರಾಷ್ಟ್ರಗಳ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ (ಐಎಮ್​ಎಫ್) ಭಾರತವನ್ನು ಎಚ್ಚರಿಸಿದೆ.

ಈ ಕುರಿತು ಮಾತನಾಡಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಕ್ರಿಸ್ಟಲೀನಾ ಜಾರ್ಜೀವಾ, “ಕಳೆದ ಹತ್ತು ವರ್ಷಗಳಲ್ಲಿ ಜಾಗತಿಕ ಮಂದ ಬೆಳವಣಿಗೆ ಪರಿಣಾಮದಿಂದಾಗಿ ವಿಶ್ವ ಆರ್ಥಿಕತೆ ಇದೀಗ ಅತ್ಯಂತ ಕಡಿಮೆ ಹಂತಕ್ಕೆ ಇಳಿದಿದೆ. ಈ ಕುರಿತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಂದಿನ ವಾರ ಸಂಪೂರ್ಣ ವರದಿ ನೀಡಲಿದೆ” ಎಂದರು. ಅಲ್ಲದೆ, ದೇಶಗಳ ನಡುವಿನ ವ್ಯಾಪಾರ ಸಂಘರ್ಷ ಈ ಮಂದಗತಿಯ ಬೆಳವಣಿಗೆಗೆ ಕಾರಣ ಎಂದು ದೂಷಿಸಿದ ಅವರು, “ಮುಂದಿನ ವರ್ಷ 700 ಶತಕೋಟಿ ಉತ್ಪಾದನೆಯ ನಷ್ಟವನ್ನೂ, ಅಂದರೆ ವಿಶ್ವ ಜಿಡಿಪಿಯ ಶೇ 0.8 ರಷ್ಟು ನಷ್ಟವನ್ನು ಎಲ್ಲಾ ರಾಷ್ಟ್ರಗಳು ಅನುಭವಿಸಬೇಕಾಗುತ್ತದೆ ” ಎಂದು ಅವರು ಎಚ್ಚರಿಸಿದ್ದಾರೆ.

"ವಿಶ್ವದ ಎರಡು ದೊಡ್ಡ ಆರ್ಥಿಕತೆಯಾದ ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರದ ಹೋರಾಟ ಉಲ್ಭಣಗೊಳ್ಳುತ್ತಿದೆ. ವ್ಯಾಪಾರ ಯುದ್ಧ ನಡೆದರೆ ಇದರಲ್ಲಿ ಎಲ್ಲರೂ ಸೋಲಬೇಕಾಗುತ್ತದೆ. ಹೀಗಾಗಿ ಈ ದೇಶಗಳು ವ್ಯಾಪಾರ ಯುದ್ಧದಿಂದ ಹಿಂದೆ ಸರಿಯಬೇಕು" ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

"ಇಂತಹ ವ್ಯಾಪಾರ ಯುದ್ಧಗಳು ಜಾಗತಿಕ ಆರ್ಥಿಕತೆಗೆ ಹಾನಿಯಾಗುವುದಿಲ್ಲ. ಆದರೆ, ಇವು ಭಾರತ ಬ್ರೆಜಿಲ್ ನಂತಹ ಉದಯೋನ್ಮುಖ ಆರ್ಥಿಕತೆಗಳ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು. ಅಮೆರಿಕ ಜರ್ಮನ್ ರಾಷ್ಟ್ರಗಳಲ್ಲಿ ನಿರುದ್ಯೋಗ ಐತಿಹಾಸಿಕ ಕನಿಷ್ಠ ಮಟ್ಟದಲ್ಲಿದೆ. ಅಮೆರಿಕ, ಜಪಾನ್ ಮತ್ತು ವಿಶೇಷವಾಗಿ ಯೂರೋ ಪ್ರದೇಶಗಳು ಸೇರಿದಂತೆ ಮುಂದುವರಿದ ದೇಶಗಳ ಆರ್ಥಿಕ ಚಟುವಟಿಕೆ ಮೃದುತ್ವದಿಂದ ಕೂಡಿದೆ. ಆದರೆ, ಇಂತಹ ಯುದ್ಧಗಳು ಭಾರತ, ಬ್ರಿಜಿಲ್ ನಂತಹ ಉದಯೋನ್ಮುಖ ಮಾರುಕಟ್ಟೆಗಳು ಮತ್ತಷ್ಟು ಮಂದಗತಿಗೆ ಒಳಗಾಗಲು ಕಾರಣವಾಗುತ್ತವೆ" ಎಂದು ಅವರು ಎಚ್ಚರಿಸಿದ್ದಾರೆ.

ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ (ಐಎಂಎಫ್)ಜಾಗತಿಕ ವ್ಯಾಪಾರದ ಬೆಳವಣಿಗೆ ಸ್ಥಗಿತಗೊಂಡಿದೆ ಎಂದು ಎಚ್ಚರಿಸಿದೆ. ಇದರ ಬೆನ್ನಿಗೆ ದೇಶೀಯ ಬೇಡಿಕೆಗೆ ನಿರೀಕ್ಷೆಗಿಂತ ದುರ್ಬಲ ದೃಷ್ಟಿಕೋನದ ಕಾರಣಕ್ಕೆ ಐಎಂಎಫ್ 2019-20 ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ತನ್ನ ಪ್ರಕ್ಷೇಪಣವನ್ನು ಶೇ. 0.3 ರಿಂದ ಶೇ. 7 ರಷ್ಟು ಪ್ರತಿಶತಕ್ಕೆ ಇಳಿಸಿದೆ. ಇನ್ನೂ ಈ ಕುರಿತು ಸ್ವತಃ ಕಳವಳ ವ್ಯಕ್ತಪಡಿಸಿರುವ ಆರ್​ಬಿಐ "ಕಳೆದ ಕೆಲವು ತ್ರೈಮಾಸಿಕಗಳಿಂದ ಅತ್ಯಂತ ಮಂದಗತಿಯ ಲಕ್ಷಣಕ್ಕೆ ಒಳಗಾಗಿರುವ ಭಾರತೀಯ ಆರ್ಥಿಕತೆ ಭವಿಷ್ಯದಲ್ಲಿ ಮತ್ತಷ್ಟು ಅಪಾಯಗಳನ್ನು ಎದುರಿಸಲಿದೆ" ಎಂದು ಎಚ್ಚರಿಸಿದೆ.

ಅಕ್ಟೋಬರ್ 2019ರಲ್ಲಿ ಆರ್​ಬಿಐ ಬಿಡುಗಡೆ ಮಾಡಿದ್ದ ತನ್ನ ಹಣಕಾಸು ನೀತಿ ವರದಿಯಲ್ಲಿ, “ದೇಶೀಯ ಮತ್ತು ಜಾಗತಿಕ ಆರ್ಥಿಕ ಸಂಯೋಜನೆಗಳು ದೇಶದ ಆರ್ಥಿಕ ಚಟುವಟಿಕೆಯನ್ನು ಮತ್ತಷ್ಟು ಖಿನ್ನತೆಗೆ ಒಳಪಡಿಸಿವೆ. ಹೀಗಾಗಿ ಭಾರತದ ಆರ್ಥಿಕತೆ ಹಲವಾರು ಅಪಾಯಗಳನ್ನು ಭವಿಷ್ಯದಲ್ಲಿ ಎದುರಿಸಬೇಕಿದೆ” ಎಂದು ಆತಂಕ ವ್ಯಕ್ತಪಡಿಸಿತ್ತು.

ಇದನ್ನೂ ಓದಿ : ಆರ್ಥಿಕ ಕುಸಿತ, ಆತಂಕದಲ್ಲಿ ಭಾರತ; ಆರ್ಥಿಕತೆ ಎಂದರೇನು? ಲೆಕ್ಕಾಚಾರ ಹೇಗೆ? ದೇಶದ ಪ್ರಸ್ತುತ ಸ್ಥಿತಿ ಏನು? ಇಲ್ಲಿದೆ ಮಾಹಿತಿ
First published: October 9, 2019, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading