Afghanistan Crisi| ತಾಲಿಬಾನ್ ದಾಳಿಯ ನಂತರ ಎಲ್ಲರೂ ಈ ಊರು ಬಿಟ್ಟರು; ಅಫ್ಘನ್​ನ ಪಂಜಶೀರ್ ಈಗ ಜನರಿಲ್ಲದ ಪ್ರೇತ ಪಟ್ಟಣ!

ತಾಲಿಬಾನಿಗಳು ಅಫ್ಘನ್ ಅನ್ನು ವಶಪಡಿಸಿಕೊಂಡ ನಂತರ ಪಂಜಶೀರ್​ಗೆ ಅವರ ಆಗಮನ ಸಾಕಷ್ಟು ಕ್ರೂರವಾಗಿತ್ತು ಎನ್ನತ್ತಾರೆ ಇಲ್ಲಿನ ಕೆಲ ಹಿರಿಯ ನಿವಾಸಿಗಳು. ಮಕ್ಕಳಿಗೆ ಆಹಾರ ತರಲು ಮನೆಯಿಂದ ಹೊರ ಬಂದವರನ್ನು ಸಹ ತಾಲಿಬಾನ್ ಕಾರಿನ ಎದುರು ಮಂಡಿಯೂರಿಸಿ ಗುಂಡಿಕ್ಕಿ ಕೊಲ್ಲಲಾಗಿದೆ.

ಪಂಜಶೀರ್​ ನಗರ.

ಪಂಜಶೀರ್​ ನಗರ.

 • Share this:
  ತಾಲಿಬಾನ್ ಉಗ್ರರು (Taliban Terrorist) 20 ವರ್ಷಗಳ ಸತತ ಹೋರಾಟದ ನಂತರ ಕೊನೆಗೂ ಅಫ್ಘಾನಿಸ್ತಾನವನ್ನು(Afghanistan) ಜಯಿಸುವಲ್ಲಿ ಸಫಲರಾಗಿದ್ದಾರೆ. ಇದೀಗ ಹೊಸ ಸರ್ಕಾರವನ್ನೂ ರಚನೆ ಮಾಡಿದ್ಧಾರೆ. ಅಫ್ಘನ್ ಅವರ ತೆಕ್ಕೆಗೆ ಬರುತ್ತಿದ್ದಂತೆ ಹಿಂಸಾಚಾರಗಳೂ ಅಧಿಕವಾಗುತ್ತಿದೆ. ಆದರೆ, ಅಫ್ಘಾನಿಸ್ತಾನದ ಪಂಜಶೀರ್ ನಲ್ಲಿನ (Panjshir) ಹೋರಾಟಗಾರರು ಮಾತ್ರ ತಮ್ಮ ಊರಿನ ಕೊನೆಯ ಮನುಷ್ಯ ಇರುವ ತನಕ ತಾವು ತಾಲಿಬಾನ್ ವಿರುದ್ಧ ಹೋರಾಟ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದರು. ತಾಲಿಬಾನ್ ವಿರುದ್ಧ ಹೋರಾಟದಲ್ಲಿ ಈ ಭಾಗದ ಹಲವರು ಮೃತಪಟ್ಟಿದ್ದರೆ, ತಾಲಿಬಾನ್ ಗೆಲುವಿನ ನಂತರ ಅಸಂಖ್ಯಾತ ಜನ ಈ ನಗರವನ್ನೇ ಬಿಟ್ಟು ಹೊರ ನಡೆದಿದ್ದಾರೆ. ಪರಿಣಾಮ ಇದೀಗ ಕಣಿವೆ ಭಾಗದ ಈ ಇಡೀ ನಗರ ಜನರಿಲ್ಲದೆ ಬಣಗುಡುತ್ತಿದೆ. ಅಲ್ಲದೆ, ಮುದುಕರು ಮತ್ತು ಜಾನುವಾರುಗಳು ಮಾತ್ರ ಇರುವ ಪ್ರೇತ ಪಟ್ಟಣವಾಗಿ ಬದಲಾಗಿದೆ.

  ಪಂಜಶೀರ್​ನಲ್ಲಿ ಮೊದಲು 100ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದವು. ಆದರೆ, ಈಗ ಕೇವಲ 3 ಕುಟುಂಬಗಳು ಮಾತ್ರ ಈ ನಗರದಲ್ಲಿ ಉಳಿದಿವೆ. ಅದೂ ಸಹ ವೃದ್ಧರಷ್ಟೇ ಇಲ್ಲೇ ಉಳಿದುಕೊಂಡಿದ್ದಾರೆ. ಉಳಿದ ಎಲ್ಲರೂ ಈ ಊರನ್ನೇ ಬಿಟ್ಟು ರಾಜಧಾನಿ ಕಾಬೂಲ್‌ಗೆ ದಕ್ಷಿಣಕ್ಕೆ ಪಲಾಯನ ಮಾಡಿದ್ದಾರೆ.

  ಪಂಜಶೀರ್ ಹೋರಾಟಗಾರರು ಪ್ರತಿರೋಧ ಹೋರಾಕ್ಕಾಗಿ ಪೌರಾಣಿಕ ಖ್ಯಾತಿಯನ್ನು ಗಳಿಸಿದವರು. ಈ ಮೊದಲು ಪರ್ವತಗಳ ತೆಕ್ಕೆಯಲ್ಲಿದ್ದ ತಮ್ಮ ನಗರವನ್ನು ಉಳಿಸಿಕೊಳ್ಳಲು ಸೋವಿಯತ್ ರಷ್ಯಾದ ಮಿಲಿಟರಿಯ ಜೊತೆಗೆ ಒಂದು ದಶಕದವರೆಗೆ ಹೋರಾಟ ನಡೆಸಿದ್ದರು. ಆದರೆ, 1996-2001ರ ಕೊನೆಯಲ್ಲಿ ಅಂತರ್ಯುದ್ಧದ ಕಾರಣಕ್ಕೆ ತಾಲಿಬಾನ್ ಆಡಳಿತ ಕೊನೆಯಾಗಿ ನಂತರ ನೆಮ್ಮದಿಯ ಬದುಕು ಕಂಡುಕೊಂಡಿದ್ದರು.

  ಆದರೆ ತಾಲಿಬಾನ್‌ಗಳು ಇದೀಗ ಅಫ್ಘಾನಿಸ್ತಾನದಲ್ಲಿ ಮತ್ತೆ ಜಯಭೇರಿ ಬಾರಿಸಿದ್ದಾರೆ. ವಿಜಯ ಬೆನ್ನಿಗೆ ತಾಲಿಬಾನಿಗಳು ಅಮೆರಿಕದ ಪಡೆಯ ಅಗಾಧವಾದ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಕಿಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಳೆದ 2 ದಶಕಗಳಿಂದ ಅಮೆರಿಕ ಬಳಿಸಿದ್ದ ಎಲ್ಲಾ ಶಸ್ತ್ರಾಸ್ತ್ರಗಳನ್ನೂ ಅಫ್ಘನ್ ಸೇನೆಗೆ ನೀಡಲಾಗಿತ್ತು. ಆದರೆ, ಇದೀಗ ಈ ಎಲ್ಲವೂ ತಾಲಿಬಾನ್ ಪಾಲಾಗಿದೆ.

  ದಿವಂಗತ ಹಿರಿಯ ಹೋರಾಟಗಾರ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್ ಸೇರಿದಂತೆ ಹಲವಾರು ಪಂಜ್‌ಶಿರ್ ನಾಯಕರು ತಾಲಿಬಾನ್‌ಗೆ ಎಂದಿಗೂ ಶರಣಾಗುವುದಿಲ್ಲ ಎಂದು ಈ ಹಿಂದೆ ಪ್ರತಿಜ್ಞೆ ಮಾಡಿದರು. ಅದರಂತೆ ಹೋರಾಟವನ್ನೂ ಮುಂದುವರೆಸಿದ್ದರು. ಆದರೆ, ತಾಲಿಬಾನ್ ಪಂಜಶೀರ್ ಹೋರಾಟವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಪರಿಣಾಮ ಪಂಜಶೀರ್​ ಜನರಿಲ್ಲದ ಪ್ರೇತ ಪಟ್ಟಣವಾಗಿ ಬದಲಾಗಿದೆ.

  ತಾಲಿಬಾನಿಗಳು ಅಫ್ಘನ್ ಅನ್ನು ವಶಪಡಿಸಿಕೊಂಡ ನಂತರ ಪಂಜಶೀರ್​ಗೆ ಅವರ ಆಗಮನ ಸಾಕಷ್ಟು ಕ್ರೂರವಾಗಿತ್ತು ಎನ್ನತ್ತಾರೆ ಇಲ್ಲಿನ ಕೆಲ ಹಿರಿಯ ನಿವಾಸಿಗಳು. ಮಕ್ಕಳಿಗೆ ಆಹಾರ ತರಲು ಮನೆಯಿಂದ ಹೊರ ಬಂದವರನ್ನು ಸಹ ತಾಲಿಬಾನ್ ಕಾರಿನ ಎದುರು ಮಂಡಿಯೂರಿಸಿ ಗುಂಡಿಕ್ಕಿ ಕೊಲ್ಲಲಾಗಿದೆ. ಈವರೆಗೆ ಪಂಜಶೀರ್​ನ 19 ನಾಗರೀಕರನ್ನು ಕೊಲ್ಲಲಾಗಿದೆ. ಈ ಸಂಪ್ರದಾಯವಾದಿ ಕಣಿವೆಯಲ್ಲಿ, ತಾಲಿಬಾನ್ ಸೈನಿಕರ ಉಪಸ್ಥಿತಿಯು ಇಲ್ಲಿಯವರಿಗೆ ಇಷ್ಟವಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಹೆಣಗಳು ಉರುಳುತ್ತಿವೆ.

  ಇದೇ ಕಾರಣಕ್ಕೆ ಪಂಜಶೀರ್ ಸೇರಿದಂತೆ ಸುತ್ತ ಮುತ್ತಲಿನ ಎಲ್ಲಾ ನಗರಗಳಿಂದ ಜನ ಬೇರೆಡೆ ಪಲಾಯನ ಮಾಡುತ್ತಿದ್ದಾರೆ. ಆದರೆ, ಜನರು ಹೋಗುವುದನ್ನು ತಡೆಯಲು ತಾಲಿಬಾನ್‌ಗಳು ರಸ್ತೆ ತಡೆಗಳನ್ನು ಸ್ಥಾಪಿಸಿದ್ದಾರೆ. ಇಸ್ಲಾಮಿಸ್ಟ್‌ಗಳು ಕುಟುಂಬ ಸದಸ್ಯರನ್ನು ಮನೆಗೆ ಮರಳಿ ಕರೆತರುವಂತೆ ಜನರನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.

  ಇದನ್ನೂ ಓದಿ: Taliban| ತಾಲಿಬಾನ್ ನಾಯಕರ ಕಲಹಗಳ ಸುದ್ದಿ ಕುರಿತು ಉಗ್ರ ಸಂಘಟನೆಯ ಪ್ರತಿಕ್ರಿಯೆ ಏನು? ಬರಾದಾರ್ ಕಣ್ಮರೆಯಾಗಿದ್ದು ನಿಜವೇ..?

  "ಜನರು ತಮ್ಮ ಮನೆಗಳಿಗೆ ಮರಳಿ ಬರಬಹುದು ಮತ್ತು ಅವರಿಗೆ ತೊಂದರೆ ಆಗುವುದಿಲ್ಲ ಎಂದು ನಾವು ಜನರಿಗೆ ಭರವಸೆ ನೀಡುತ್ತೇವೆ" ಎಂದು ಖೆಂಜ್ ಮಾರುಕಟ್ಟೆಯ ಒಬ್ಬ ತಾಲಿಬಾನ್ ಕಮಾಂಡರ್ ಆಶ್ವಾಸನೆ ನೀಡಿದ್ದಾರೆ. ಆದರೂ ಪಂಜಶೀರ್​ಗೆ ಮಾತ್ರ ಯಾರೂ ಹಿಂತಿರುಗುವ ಮನಸ್ಸು ಮಾಡಿಲ್ಲ. ಒಂದು ವೇಳೆ ಹಿಂತಿರುಗಿದರೂ ತಾಲಿಬಾನ್​ಗಳು ತಮ್ಮನ್ನೇ ಮಾನವ ಗುರಾಣಿಯನ್ನಾಗಿ ಬಳಸುತ್ತಾರೆ ಎಂಬುದು ಅವರ ಭಯಕ್ಕೆ ಕಾರಣ. ಪರಿಣಾಮ ಈ ನಗರವೀಗ ಜನರಿಲ್ಲದ ಪ್ರೇತ ಪಟ್ಟಣವಾಗಿ ಬದಲಾಗಿದೆ.
  Published by:MAshok Kumar
  First published: