Delh HC: ತಾಯ್ತನದ ಅವಧಿಯಲ್ಲಿ ಪ್ರತಿಯೊಬ್ಬ ಗರ್ಭಿಣಿ ಮಹಿಳೆ ಗೌರವಕ್ಕೆ ಅರ್ಹಳು: ಹೈಕೋರ್ಟ್

ಆಗಸ್ಟ್ 18 ರಂದು ನ್ಯಾಯಾಲಯವು ತನ್ನ ಆದೇಶದಲ್ಲಿ, "ಮಹಿಳೆಯ ಗರ್ಭಾವಸ್ಥೆಯು ಅವಳ ವಿಶೇಷ ಸಂದರ್ಭವಾಗಿದೆ ಮತ್ತು ಕಸ್ಟಡಿಯಲ್ಲಿ ಮಗುವಿನ ಜನನವು ತಾಯಿಗೆ ನೋವಿನಿಂದ ಕೂಡಿದೆ ಅಲ್ಲದೇ ಮಗುವಿನ ಮೇಲೆ ಶಾಶ್ವತ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿಶೇಷವಾಗಿ ಅವನ ಹುಟ್ಟಿನ ಬಗ್ಗೆ ಪ್ರಶ್ನೆ ಬಂದಾಗ ಇದು ಹೆಚ್ಚು ಕಂಡು ಬರುತ್ತದೆ ಎಂದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನವದೆಹಲಿ(ಆ.22): ತಾಯ್ತನದ ಅವಧಿಯಲ್ಲಿ ಸಂವಿಧಾನ ಖಾತ್ರಿಪಡಿಸಿರುವ ಘನತೆಗೆ ಪ್ರತಿ ಗರ್ಭಿಣಿ (Pregnant) ಮಹಿಳೆಯೂ ಅರ್ಹಳು ಎಂದು ಹೇಳುವ ಮೂಲಕ ಅಪಹರಣ ಮತ್ತು ಕೊಲೆ ಯತ್ನದ ಆರೋಪಿ ಗರ್ಭಿಣಿ ಮಹಿಳೆಗೆ ದೆಹಲಿ ಹೈಕೋರ್ಟ್ (Delhi High Court)ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಕಸ್ಟಡಿಯಲ್ಲಿ ಮಗುವಿಗೆ ಜನ್ಮ ನೀಡುವುದು ತಾಯಿಗೆ ನೋವು ಉಂಟು ಮಾಡುವುದು ಮಾತ್ರವಲ್ಲ, ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಹೇಳಿದರು. ನ್ಯಾಯಾಲಯವು ಆಗಸ್ಟ್ 18 ರಂದು ತನ್ನ ಆದೇಶದಲ್ಲಿ, "ಮಹಿಳೆ ಗರ್ಭಿಣಿಯಾಗುವುದು ವಿಶೇಷ ಸಂದರ್ಭವಾಗಿದೆ ಮತ್ತು ಕಸ್ಟಡಿಯಲ್ಲಿ ಮಗುವಿನ ಜನನವು ತಾಯಿಗೆ ನೋವಿನಿಂದ ಕೂಡಿದೆ, ಇದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಅವನ ಜನನದ ಬಗ್ಗೆ ಪ್ರಶ್ನೆ ಬಂದಾಗ. ಹೀಗಾಗಿ ತಾಯ್ತನದ (Motherhood) ಅವಧಿಯಲ್ಲಿ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯೂ ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಘನತೆಗೆ ಅರ್ಹಳಾಗಿದ್ದಾಳೆ ಎಂದಿದೆ.

ಹುಟ್ಟಲಿರುವ ಮಗುವಿನ ಹಿತಾಸಕ್ತಿಗಳ ಕಾಳಜಿ ವಹಿಸಬೇಕು

"ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಲ್ಲಿ ಯಾವುದೇ ಗಂಭೀರ ಅಪಾಯವಿಲ್ಲದಿರುವವರೆಗೆ ನ್ಯಾಯಾಲಯವು ಹುಟ್ಟಲಿರುವ ಮಗುವಿನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳುವ ನಿರೀಕ್ಷೆಯಿದೆ" ಎಂದು ಪೀಠ ಹೇಳಿದೆ.

ಇದನ್ನೂ ಓದಿ:  Supreme Court: ಜೀವವೈವಿಧ್ಯದ ಮಹತ್ವ ಸಾರುವ GZRRC ಮೃಗಾಲಯದ ವಿರುದ್ಧ ಅರ್ಜಿ ವಜಾಗೊಳಿಸಿದ ಸುಪ್ರೀಂ

ಮಹಿಳಾ ಕೈದಿಯನ್ನು ಜೈಲಿನ ಹೊರಗಿನ ಆಸ್ಪತ್ರೆಯಲ್ಲಿ ಹೆರಿಗೆ ಮಾಡುವಂತೆ ಸಾಧ್ಯವಾದಷ್ಟು ಮಟ್ಟಿಗೆ ತಾತ್ಕಾಲಿಕ ಬಿಡುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಜೈಲು ನಿಯಮಗಳು ಹೇಳುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ

ವೈದ್ಯಕೀಯ ವರದಿಗಳ ಆಧಾರದ ಮೇಲೆ ಸಂಬಂಧಪಟ್ಟ ಜೈಲಿನಲ್ಲಿ ಹೆರಿಗೆ ಸೌಲಭ್ಯಗಳು ಲಭ್ಯವಿಲ್ಲ ಮತ್ತು ಅರ್ಜಿದಾರರನ್ನು ಹೆರಿಗೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕಳುಹಿಸುವಂತೆ ಉಲ್ಲೇಖಿಸಿದ್ದಾರೆ ಎಂದು ಅದು ಹೇಳಿದೆ.

ಇದನ್ನೂ ಓದಿ: Karnataka High Court: ತಪ್ಪಾಗಿ ಬಂಧಿಸಲ್ಪಟ್ಟ ವ್ಯಕ್ತಿಗೆ ರೂ.5 ಲಕ್ಷ ಪರಿಹಾರ! ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿಯೇ ಕೊಡಬೇಕು

ಅರ್ಜಿದಾರರು ಗರ್ಭಿಣಿಯಾಗಿರುವುದರಿಂದ ಹೆರಿಗೆ ಮಾಡಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಮೂರು ತಿಂಗಳ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಪತ್ನಿ ವಿದ್ಯಾವಂತೆಯಾಗಿದ್ರೆ ಪತಿ ಜೀವನಾಂಶ ಕೊಡುವ ಅವಶ್ಯಕತೆ ಇಲ್ಲ ಎಂದ ಕೋರ್ಟ್

ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಹಕ್ಕುದಾರಳು ಆಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರದ ತೀರ್ಪು ನೀಡಿದೆ. ಇಷ್ಟು ದಿನ ವಿಚ್ಚೇದನ ಆದರೆ ಮುಗೀತು ಪತಿಯಿಂದ ಪತ್ನಿಗೆ ಜೀವನಾಂಶ ಬರುತ್ತಿತ್ತು. ಆದರೆ ವಿದ್ಯಾವಂತ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ, ಅಂತಹವರಿಗೆ ಪತಿಯಿಂದ ಯಾವುದೇ ಜೀವನಾಂಶ ದೊರೆಯುವುದಿಲ್ಲ ಎಂದು ನ್ಯಾಯಾಲಯ ವಿದ್ಯಾವಂತ ಮಹಿಳೆಯರಿಗೆ ಶಾಕ್‌ ನೀಡಿದೆ.

ಏನಿದು ಪ್ರಕರಣ?

ವಾಣಿಜ್ಯ ನಗರಿ ಮುಂಬೈನಲ್ಲಿ ಮಹಿಳೆಯೊಬ್ಬರು ವಿಚ್ಚೇದನ ಪಡೆದು ಜೀವನಾಂಶವನ್ನು ಪಡೆಯಬೇಕೆಂದು ತನ್ನ ಗಂಡನ ವಿರುದ್ಧ ದಾಖಲಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ, ಪತ್ನಿಯೂ ದಂತವೈದ್ಯ ಆಗಿರುವುದರಿಂದ, ಇವರು ಪತಿಯಿಂದ ಜೀವನಾಂಶಕ್ಕೆ ಅರ್ಹರಾಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರ ತೀರ್ಪನ್ನು ಹೊರಡಿಸಿದೆ.

ಗಂಡನ ವಿರುದ್ಧ ಜೀವನಾಂಶ ಪಡೆಯಬೇಕೆಂದು ದೂರು ದಾಖಲಿಸಿದ ಮಹಿಳೆಯು ವೈದ್ಯೆ ಮತ್ತು ಮುಂಬೈನಂತಹ ಮಹಾನಗರದಲ್ಲಿ ವಾಸಿಸುತ್ತಿದ್ದಾರೆ ಎಂಬ ವಿಷಯ ನ್ಯಾಯಾಲಯಕ್ಕೆ ತಿಳಿದು ಬಂದಿದೆ. ಈ ಮಹಿಳೆಯು 2010-11ರಲ್ಲಿ ತನ್ನ ಬಿಡಿಎಸ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇವರು ಮುಂದೆ ದಂತ ವೈದ್ಯರಾಗಿ ಕಾರ್ಯ ನಿರ್ವಹಿಸಬಹುದು. ಹಾಗೆಯೇ ಮುಂಬೈ ನಗರದಲ್ಲಿ ವಾಸ ಆಗಿರುವುದರಿಂದ ಇವರು ತಮ್ಮ ವೈದ್ಯ ವೃತ್ತಿಯಲ್ಲಿ ಕೆಲಸವನ್ನು ಸುಲಭವಾಗಿ ಪಡೆಯಬಹುದು ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.
Published by:Precilla Olivia Dias
First published: