ಸಚಿವ ಪಿಯೂಶ್ ಗೋಯಲ್ ಸಂಸತ್ತಿಗೆ ಓಡಿಕೊಂಡು ಹೋಗುತ್ತಿರುವ ದೃಶ್ಯ ವೈರಲ್

ಸಂಸತ್ ಪ್ರವೇಶಿಸುತ್ತಿರುವ ಪಿಯೂಶ್ ಗೋಯಲ್

ಸಂಸತ್ ಪ್ರವೇಶಿಸುತ್ತಿರುವ ಪಿಯೂಶ್ ಗೋಯಲ್

ಕೇಂದ್ರ ಸಂಪುಟ ಸದಸ್ಯರೊಬ್ಬರು ಈ ರೀತಿಯಾಗಿ ಓಡಿಕೊಂಡು ಬಂದಿದ್ದನ್ನು ಇದೇ ಮೊದಲ ಬಾರಿ ನೋಡಿದ್ದು ಎಂದು ಒಬ್ಬ ಟ್ವೀಟಿಗ ಅಭಿಪ್ರಾಯಪಟ್ಟಿದ್ದಾರೆ. ಪಿಯೂಶ್ ಗೋಯಲ್ ಅವರು ಒಲಿಂಪಿಕ್​ಗೆ ಓಡುತ್ತಿಲ್ಲ, ಪ್ರಶ್ನೆ ವೇಳೆಯಲ್ಲಿ ಭಾಗವಹಿಸಲು ಹೋಗುತ್ತಿದ್ದಾರೆ ಎಂದು ಒಬ್ಬಾತ ಟ್ವೀಟ್ ಮಾಡಿದ್ಧಾರೆ.

ಮುಂದೆ ಓದಿ ...
  • News18
  • 3-MIN READ
  • Last Updated :
  • Share this:

ನವದೆಹಲಿ(ಡಿ. 05): ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಸಂಸತ್ ಭವನದ ಮೆಟ್ಟಿಲುಗಳ ಹತ್ತಿಕೊಂಡು ಓಡಿಹೋಗುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಸಂಸತ್ ಕಲಾಪದ ಪ್ರಶ್ನೆ ವೇಳೆಯ ಚರ್ಚೆಯಲ್ಲಿ ಭಾಗವಹಿಸಲು ಪಿಯೂಶ್ ಗೋಯಲ್ ವೇಗವಾಗಿ ಸಾಗಿದ್ದರು. ಅವರ ತರಾತುರಿಯು ನೆಟ್ಟಿಗರಲ್ಲಿ ವಿಪುಲ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಟ್ವಿಟ್ಟರ್​ನಲ್ಲಿ ಬಹುತೇಕವಾಗಿ ಪ್ರಶಂಸೆಗಳೇ ವ್ಯಕ್ತವಾಗಿವೆ.

ಕೇಂದ್ರ ಸಂಪುಟ ಸದಸ್ಯರೊಬ್ಬರು ಈ ರೀತಿಯಾಗಿ ಓಡಿಕೊಂಡು ಬಂದಿದ್ದನ್ನು ಇದೇ ಮೊದಲ ಬಾರಿ ನೋಡಿದ್ದು ಎಂದು ಒಬ್ಬ ಟ್ವೀಟಿಗ ಅಭಿಪ್ರಾಯಪಟ್ಟಿದ್ದಾರೆ. ಪಿಯೂಶ್ ಗೋಯಲ್ ಅವರು ಒಲಿಂಪಿಕ್​ಗೆ ಓಡುತ್ತಿಲ್ಲ, ಪ್ರಶ್ನೆ ವೇಳೆಯಲ್ಲಿ ಭಾಗವಹಿಸಲು ಹೋಗುತ್ತಿದ್ದಾರೆ ಎಂದು ಒಬ್ಬಾತ ಟ್ವೀಟ್ ಮಾಡಿದ್ಧಾರೆ.

ಇದನ್ನೂ ಓದಿ: ನಿತ್ಯಾನಂದರ ‘ಕೈಲಾಸ’ ವಾಸ; ಅಮೆರಿಕ ಖಂಡದಲ್ಲೊಂದು ಹೊಸ ‘ಹಿಂದೂ ರಾಷ್ಟ್ರ’?

ಇದು ನವಭಾರತ, ಫಿಟ್ ಇಂಡಿಯಾ ಎಂದೊಬ್ಬರು ಉದ್ಗರಿಸಿದ್ದಾರೆ. ಇದು ನಿಮ್ಮ ಕೆಲಸದ ಮೇಲಿನ ಶ್ರದ್ಧೆಯನ್ನು ತೋರಿಸುತ್ತದೆ. ಮೋದಿ ಸರ್ಕಾರದಲ್ಲಿ ನೀವು ಅತ್ಯಂತ ಬುದ್ಧಿವಂತ ಮತ್ತು ಶ್ರಮಿಕ ಸಚಿವರಲ್ಲಿ ಒಬ್ಬರಾಗಿದ್ದೀರಿ ಎಂದು ಮತ್ತೊಬ್ಬರು ವಂದನೆ ಅರ್ಪಿಸಿದ್ದಾರೆ. ಇದು ಮೋದಿ ನಾಯಕತ್ವದ ಝಲಕ್ ಆಗಿದೆ. ಮೋದಿ ಟೀಮ್​ನಲ್ಲಿ ಎಲ್ಲರೂ ಸಮರ್ಪಣಾ ಸೇವಕರೇ ಆಗಿದ್ಧಾರೆ. ಇಲ್ಲಿ ಅಧಿಕಾರ, ಅಂತಸ್ತು ಬಯಸುವ ಸ್ವಾರ್ಥ ರಾಜಕಾರಣಿಗಳಿಗೆ ಅವಕಾಶವಿಲ್ಲ ಎಂದು ಮಗದೊಬ್ಬ ಟ್ವೀಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.











ಇದನ್ನೂ ಓದಿ: ಆರ್​ಬಿಐ ರೆಪೋ ದರದಲ್ಲಿ ಬದಲಾವಣೆ ಇಲ್ಲ; ಅಂದಾಜು ಜಿಡಿಪಿ ಶೇ. 6.1ರಿಂದ 5ಕ್ಕೆ ಇಳಿಕೆ

ಇನ್ನೂ ಕೆಲ ಟ್ವೀಟ್ಟರು ಇದರಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ ಎಂದು ಅಭಿಪ್ರಾಯಪಟ್ಟಿದ್ಧಾರೆ. ಪ್ರಶ್ನೆ ವೇಳೆಯೊಳಗೆ ಸಭೆಯಲ್ಲಿ ಇರಬೇಕಾದ್ದು ಅವರ ಕರ್ತವ್ಯ ಎಂದು ಕೆಲವು ಹೇಳಿದ್ದಾರೆ.

ಸಂಸತ್​ನ ಪ್ರಶ್ನೆ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ತಮ್ಮ ಸಹಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಂಸದ್ ಅಧಿವೇಶನದಲ್ಲಿ ಪ್ರತಿಯೊಬ್ಬರೂ ಹಾಜರಾಗಬೇಕಷ್ಟೇ ಅಲ್ಲ, ಸರಿಯಾದ ವೇಳೆಗೂ ಬರಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು