Evening Digest: ರೈತರ ಹೋರಾಟಕ್ಕೆ ಆಪ್​ ಬೆಂಬಲ, ರಜನಿಕಾಂತ್​​ ರಾಜಕೀಯ ಪ್ರವೇಶ ಸಾಧ್ಯತೆ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 'ದೆಹಲಿ ಚಲೋ' ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ.

  Farmers Protest: ರೈತ ಹೋರಾಟಕ್ಕೆ ಆಪ್​ ಬೆಂಬಲ, ಕೇಜ್ರಿವಾಲ್​ ನಿರ್ದೇಶನದಂತೆ ಹೋರಾಟಗಾರರಿಗೆ ಆಹಾರ ನೀರು ಸರಬರಾಜು

  2. ದೇಶದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ ಎನ್ನುವ ಹೊತ್ತಿಗೆ ಮತ್ತೆ ಪ್ರಕರಣ ಸಂಖ್ಯೆ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನಲೆ ಈ ಕುರಿತು ನಾಯಕರ ಜೊತೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷ ಸಭೆ ನಡೆಸಲು ಮುಂದಾಗಿದ್ದಾರೆ.

  ಕೋವಿಡ್​-19 ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ

  3.ಆಂಧ್ರಪ್ರದೇಶ ವಿಧಾನಸಭೆಯ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದ ಕಾರಣಕ್ಕಾಗಿ ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತು ಅವರ 12 ಬೆಂಬಲಿಗರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ಆದೇಶಿಸಿದ್ದಾರೆ.

  ಚಂದ್ರಬಾಬು ನಾಯ್ಡು ಸೇರಿದಂತೆ 13 ಶಾಸಕರು 1 ದಿನದ ಮಟ್ಟಿಗೆ ಆಂಧ್ರ ವಿಧಾನಸಭೆಯಿಂದ ಅಮಾನತು

  4. ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗುವ ಕುರಿತು ನಟ ​​ರಜನಿಕಾಂತ್​​ ನಿರ್ಧಾರ ಇನ್ನು ಅಸ್ಪಷ್ಟವಾಗಿದೆ. ಈಗಾಗಲೇ ರಾಜಕಾರಣ ಪ್ರವೇಶಿದಂತೆ ರಜನೀಕಾಂತ್​ಗೆ ವೈದ್ಯರು ಸೂಚನೆ ನೀಡಿದ್ದಾರೆ. ಈ ನಡುವೆ ತಮ್ಮ ರಾಜಕೀಯ ನಿರ್ಧಾರ ಕುರಿತು ಇಂದು ತಮ್ಮ ರಜನಿ ಮಕ್ಕಳ್​ ಮಂಡ್ರಂ​ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

  Rajinikanth: ಜನವರಿಯಲ್ಲಿ ರಜನಿಕಾಂತ್​​ ರಾಜಕೀಯ ಪ್ರವೇಶ ಸಾಧ್ಯತೆ; ಶೀಘ್ರದಲ್ಲಿಯೇ ನಿರ್ಧಾರ ಎಂದ ಸೂಪರ್​ಸ್ಟಾರ್​​

  5. ಭಾರತದ ಪ್ರಮುಖ ಇ-ಕಾಮರ್ಸ್​ ಸಂಸ್ಥೆಗಳ ಜೊತೆ ಅನೇಕ ಬ್ಯಾಂಕ್​ಗಳು ಕೈ ಜೋಡಿಸಿವೆ. ಬ್ಯಾಂಕ್​ಗಳ ಡೆಬಿಟ್, ಕ್ರೆಡಿಟ್ ಕಾರ್ಡ್​ ಮೂಲಕ ಶಾಪಿಂಗ್ ಮಾಡಿದರೆ ಆಫರ್, ಫೆಸ್ಟಿವ್ ಸೇಲ್ ನೆಪದಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಅಮೆಜಾನ್, ಫ್ಲಿಪ್​ಕಾರ್ಟ್​ ಮುಂತಾದ ಇ-ಕಾಮರ್ಸ್​ ಸಂಸ್ಥೆಗಳಿಂದ ಸಣ್ಣ ಉದ್ಯಮಗಳಿಗೆ, ವ್ಯಾಪಾರಿಗಳಿಗೆ ಭಾರೀ ನಷ್ಟವಾಗುತ್ತಿದೆ. ಹಾಗಾಗಿ, ಬ್ಯಾಂಕ್​ಗಳ ಈ ನಡೆಗೆ ಕಡಿವಾಣ ಹಾಕಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಎಐಟಿ ಪತ್ರ ಬರೆದಿದೆ.

  ಇ-ಕಾಮರ್ಸ್​ ಜೊತೆ ಬ್ಯಾಂಕ್​ಗಳ ಹೊಂದಾಣಿಕೆಯಿಂದ ಸಣ್ಣ ಉದ್ಯಮಗಳಿಗೆ ಭಾರೀ ನಷ್ಟ; ಸಚಿವೆ ನಿರ್ಮಲಾ ಸೀತಾರಾಮನ್​ಗೆ ಸಿಎಐಟಿ ದೂರು

  6. ಮುಂಬರುವ ಚುನಾವಣೆಗೆ ನಾಯಕತ್ವ, ಸಿದ್ದತೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಇಂದು ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆ  ನಗರದ ಹೊರವಲಯದಲ್ಲಿ ನಡೆಯುತ್ತಿದೆ.

  ಕಾಂಗ್ರೆಸ್ ನಾಯಕರ ನಡುವೆ ಸಾಮರಸ್ಯ ಮೂಡಿಸಲು ಬೆಂಗಳೂರಿನಲ್ಲಿಂದು ಮಹತ್ವದ ಸಭೆ

  7. ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಗೊಂದಲ ಮಂದುವರೆದಿದ್ದು, ಇನ್ನೆರಡು ದಿನ ಕಾದು ನೋಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ. ವೇಟ್ ಫಾರ್ ಅನದರ್ ಟು ಡೇಸ್ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

  ಗ್ರಾಮ ಪಂಚಾಯತಿ ಚುನಾವಣೆಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ; ಸಿಎಂ ಬಿಎಸ್ ಯಡಿಯೂರಪ್ಪ

  8. ಹೈಕಮಾಂಡ್ ನಿಂದ ನಿರ್ದೇಶನ ಬಂದ ತಕ್ಷಣ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಾ ಪ್ರವಾಸದಲ್ಲಿದ್ದಾರೆ.  ಬಿಜೆಪಿ ರಾಷ್ಟ್ರ ನಾಯಕರು ಎಲ್ಲರೂ ಸೇರಿ ಮಾತನಾಡಿದ ನಂತರ ನಿರ್ದೇಶನ ನೀಡಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ  ಸ್ಪಷ್ಟಪಡಿಸಿದ್ದಾರೆ.

  ಹೈಕಮಾಂಡ್ ನಿರ್ದೇಶನದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ; ಡಿಸಿಎಂ ಗೋವಿಂದ ಕಾರಜೋಳ

  9.ಕೊರೋನಾ ಕಾರಣದಿಂದಾಗಿ ಚಿತ್ರೀಕರಣ ನಿಲ್ಲಿಸಿದ್ದ ಚಿತ್ರತಂಡಗಳು ಮೆಲ್ಲನೆ ಸಿನಿಮಾ ಶೂಟಿಂಗ್​ ಆರಂಭಿಸಿದ್ದು, ಚಿತ್ರೀಕರಣ ಮುಗಿಸುತ್ತಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ನಟನೆಯ ಶುಗರ್​ಲೆಸ್​ ಚಿತ್ರತಂಡ ಸಹ ಈಗ ಸಿನಿಮಾದ ಶೂಟಿಂಗ್​ ಮಗಿಸಿದೆ. ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ. ಅವರು ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಇದಾಗಿದೆ.

  Sugarless: ಚಿತ್ರೀಕರಣ ಪೂರ್ಣಗೊಳಿಸಿದ ಶುಗರ್​ಲೆಸ್​ ಚಿತ್ರತಂಡ: ಸದ್ಯದಲ್ಲೇ ರಿಲೀಸ್ ಆಗಲಿದೆ ಟೀಸರ್​..!

  10.ಕ್ರಿಕೆಟ್ ಅಂಗಳದ ದಾಖಲೆಯ ಸರದಾರ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ರೆಕಾರ್ಡ್​ನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆ ಎಂಬುದು ವಿಶೇಷ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿ 22 ಸಾವಿರ ರನ್ ಪೂರೈಸಿದ್ದಾರೆ.

  Virat Kohli: ಸಚಿನ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ..!
  Published by:G Hareeshkumar
  First published: