Evening Digest: ಕಳೆದ 3 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆ, ಆಸ್ಟ್ರೇಲಿಯಾ ಪಾಲಾದ ಏಕದಿನ ಸರಣಿ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಕ್ರೂರಿ ಕೊರೋನಾ ಮತ್ತು ಲಾಕ್​ಡೌನ್​​ ಕಾರಣಗಳಿಂದ ಜನಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಲೇ ಇದೆ.

  Petrol Price: ಕಳೆದ 3 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆ; ಇಂದಿನ ದರವೆಷ್ಟು ಗೊತ್ತೇ?

  2.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ರೈತರಿಗೆ ಹಲವು ಅವಕಾಶಗಳನ್ನು ತೆರೆದಿಟ್ಟಿದೆ. ಹೊಸ ಕಾಯ್ದೆಯಿಂದ ಕೃಷಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ರೈತ ಸಮುದಾಯಕ್ಕೆ ಅವಕಾಶಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

  Mann Ki Baat: ಕೃಷಿ ಕಾಯ್ದೆಯಿಂದ ರೈತರಿಗೆ ಹೊಸ ಆಯ್ಕೆಗಳು ತೆರೆದಿವೆ; ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್​

  3.ನಕ್ಸಲರು ನಡೆಸಿದ ದಾಳಿಯಿಂದ ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯಲ್ಲಿ ಓರ್ವ ಸಿಆರ್​​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ. ಶನಿವಾರ ರಾತ್ರಿ ಸುಕ್ಮಾ ಜಿಲ್ಲೆಯ ತಾಲ್ಮೆತಲ ಪ್ರದೇಶದಲ್ಲಿ ನಕ್ಸಲರು ದಾಳಿ ನಡೆಸಿ, ಐಇಡಿ ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ ಸಿಆರ್​ಪಿಎಫ್​ ಯೋಧ ಸಾವನ್ನಪ್ಪಿದ್ದು, 10 ಯೋಧರಿಗೆ ಗಂಭೀರ ಗಾಯಗಳಾಗಿವೆ.

  ಛತ್ತೀಸ್​ಗಢದಲ್ಲಿ ನಕ್ಸಲರಿಂದ ಐಇಡಿ ದಾಳಿ; ಸಿಆರ್​ಪಿಎಫ್ ಯೋಧ ಸಾವು, 10 ಮಂದಿಗೆ ಗಂಭೀರ ಗಾಯ

  4.ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ನಮ್ಮ ಮುಖ್ಯಮಂತ್ರಿಗಳು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಕೇಂದ್ರದ ನಾಯಕರ ಜೊತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಸಿಎಂ ಈ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಚಿತ್ರದುರ್ಗದಲ್ಲಿ  ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

  ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಶೀಘ್ರ ನಿರ್ಧಾರ; ಸಚಿವ ಬಿ. ಶ್ರೀರಾಮುಲು

  5. ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ವಿಡಿಯೋಗಳಿವೆ. ಅವುಗಳನ್ನು ಬಿಜೆಪಿ ನಾಯಕರೇ ಕೇಂದ್ರ ನಾಯಕರಿಗೆ ಕೊಟ್ಟಿದ್ದಾರೆ. ಹೀಗಾಗಿಯೇ ಸಂತೋಷ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಒಂದು ಚಟವಾಗಿಬಿಟ್ಟಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

  ಬಿಜೆಪಿ ಬಗ್ಗೆ ಮಾತನಾಡೋದು ಡಿಕೆಶಿ​​ಗೆ ಚಟವಾಗಿದೆ; ಸಚಿವ ಆರ್. ಅಶೋಕ್ ವ್ಯಂಗ್ಯ

  6.ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಯ ತಲೆನೋವು ಇನ್ನೂ ಬಗೆಹರಿದಿಲ್ಲ. ಹಾಗೇ, ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನವೂ ಶಮನವಾಗಿಲ್ಲ. ಈಗಾಗಲೇ ಮಂತ್ರಿಗಿರಿಯ ಆಕಾಂಕ್ಷಿಗಳು ದೆಹಲಿಗೆ ತೆರಳಿ ಹಿರಿಯ ನಾಯಕರ​ ಮೂಲಕವೂ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರುವ ಆಕಾಂಕ್ಷಿಗಳಿಗೆ ಸಿಎಂ ಯಡಿಯೂರಪ್ಪ ಮತ್ತೆ ನಿರಾಸೆ ಮಾಡಿದ್ದಾರೆ.

  ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಎಂ ಮತ್ತೆ ನಿರಾಸೆ; ನಾಳೆಯೂ ಸಂಪುಟ ವಿಸ್ತರಣೆಯಿಲ್ಲ

  7.ಮರಾಠ ಸಮಾಜಕ್ಕೆ 2ಎ ಮೀಸಲಾತಿ‌ ನೀಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್​ ಹೇಳಿದರು. ಧಾರವಾಡದಲ್ಲಿ ಮರಾಠ ಕ್ರಾಂತಿ‌ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಮರಾಠ ಸಮಾಜದ ಬಗ್ಗೆ ‌ಕಾಳಜಿ ಇದ್ದರೆ 2 ಎ ಮೀಸಲಾತಿ ನೀಡಲಿ ಎಂದರು.

  ಮರಾಠ ಸಮಾಜಕ್ಕೆ 2ಎ ಮೀಸಲಾತಿ‌ ನೀಡದಿದ್ದರೆ ಚುನಾವಣೆ ಬಹಿಷ್ಕಾರ: ಶಾಸಕಿ ಅಂಜಲಿ ನಿಂಬಾಳ್ಕರ್​

  8.ರಾಜ್ಯದ ಕೆಲ ಸಚಿವರು ಕೆಲವರಿಗಾಗಿ ಸಚಿವ ಸ್ಥಾನ ಕೊಡಿಸಲು ಹೋರಾಟ ಮಾಡುತ್ತಿದ್ದಾರೆ. ಯಾರು ಲಾಬಿ ಮಾಡುತ್ತಿದ್ದಾರೋ ಅವರು ತಮ್ಮ ಸಚಿವ ಸ್ಥಾನವನ್ನೇ ತ್ಯಾಗ ಮಾಡಿ ಬಿಟ್ಟುಕೊಡಲಿ ಎಂದು ರಮೇಶ್ ಜಾರಕಿಹೊಳಿ ಅವರ ಹೆಸರು ಹೇಳದೆ ಸಿಎಂ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

  ಲಾಬಿ ನಡೆಸುತ್ತಿರುವವರು ತಮ್ಮ ಸಚಿವ ಸ್ಥಾನವನ್ನೇ ಬಿಟ್ಟುಕೊಡಲಿ; ರಮೇಶ್ ಜಾರಕಿಹೊಳಿಗೆ ರೇಣುಕಾಚಾರ್ಯ ತಿರುಗೇಟು

  9. ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ ಅವಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಾಜಿ ಸಂಸದೆ ಹಾಗೂ ಕಾಂಗ್ರೆಸ್​ನ ಮಾಜಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನದ ಉಸ್ತುವಾರಿಯಾದ ಮೋಹಕ ತಾರೆ ಇಂದು 38ನೇ ವರ್ಷಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  Happy Birthday Ramya: 38ನೇ ವಸಂತಕ್ಕೆ ಕಾಲಿಟ್ಟ ಮೋಹಕ ತಾರೆ ರಮ್ಯಾ: ಸ್ಯಾಂಡಲ್​ವುಡ್ ಕ್ವೀನ್​ಗೆ ಶುಭಾಶಯಗಳ ಮಹಾಪೂರ

  10.ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ 51 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 390 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಭಾರತ 338 ರನ್​ ಗಳಿಸಲಷ್ಟೇ ಶಕ್ತರಾದರು. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮಿಂಚಿದ ಫಿಂಚ್ ಪಡೆ ಈ ಜಯದೊಂದಿಗೆ ಏಕದಿನ ಸರಣಿಯನ್ನು ಕೈವಶಪಡಿಸಿಕೊಂಡಿದೆ.

  India vs Australia: ಟೀಮ್ ಇಂಡಿಯಾಗೆ ಫಿಂಚ್ ಪಡೆಯ ಪಂಚ್: ಆಸ್ಟ್ರೇಲಿಯಾ ಪಾಲಾದ ಏಕದಿನ ಸರಣಿ
  Published by:G Hareeshkumar
  First published: