Evening Digest: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್​ಐಆರ್​, ಯಡಿಯೂರಪ್ಪ ವಿರುದ್ಧ ಶ್ರೀನಿವಾಸ್ ಪ್ರಸಾದ್​ ಅಸಮಾಧಾನ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರಾಷ್ಟ್ರಾಧ್ಯಂತ ಕಳೆದ ಮೂರ್ನಾಲ್ಕು ತಿಂಗಳಿನಿಂದ ರೈತರು ಉಗ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಇನ್ನೂ ಪಂಜಾಬ್​ನಲ್ಲಿ ರೈತರ ಹೋರಾಟ ಉಗ್ರರೂಪ ತಾಳಿದೆ. ಇದಲ್ಲದೆ, ಇಂದು ದೇಶದಾದ್ಯಂತ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಹೋರಾಟಕ್ಕೆ ಕರೆ ನೀಡಿತ್ತು. ಇದರ ಭಾಗವಾಗಿ ಉತ್ತರಪ್ರದೇಶ, ಪಂಜಾಬ್, ಹರಿಯಾಣ ರಾಜ್ಯದಿಂದ ಅಸಂಖ್ಯಾತ ರೈತ ಹೋರಾಟಗಾರರು ಇಂದು ದೆಹಲಿಗೆ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ.

  ದೆಹಲಿ ಚಲೋ; ಗಡಿಯಲ್ಲಿಯೇ ರೈತರನ್ನು ತಡೆದು ಅಶ್ರುವಾಯು ಪ್ರಯೋಗ, ಬ್ಯಾರಿಕೇಡ್ ಮುರಿದು ರೈತರ ಆಕ್ರೋಶ

  2. ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಪಶ್ಚಿಮ ಬಂಗಾಳ ಘಟಕ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಈ ಸಭೆಯನ್ನು ಅನುಮತಿ ಪಡೆಯದೆ ಆಯೋಜಿಸಿದ್ದ ಕಾರಣ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು. ಆದರೆ, ಇದೀಗ ಹೈದ್ರಾಬಾದ್​ ಕಾರ್ಪೋರೇಷನ್ ಚುನಾವಣಾ ಪ್ರಚಾರಕ್ಕೆ ತೆರಳಿರುವ ಸಂಸದ ತೇಜಸ್ವಿ ಸೂರ್ಯ ಅಲ್ಲಿ ಹದ್ದು ಮೀರಿ ತಮ್ಮ ಬೆಂಬಲಿಗರ ಜೊತೆಗೆ ಉಸ್ಮಾನಿಯ ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸಿದ್ದಾರೆ.

  ಹೈದ್ರಾಬಾದ್​ ಉಸ್ಮಾನಿಯ ವಿವಿಗೆ ಅತಿಕ್ರಮ ಪ್ರವೇಶ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್​ಐಆರ್​

  3.ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಓರ್ವ ಮಹಿಳೆ ಸೇರಿ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್​ನ ಆನಂದ್ ಜಿಲ್ಲೆಯ ಉಮ್ರೇತ್​​ ನಗರದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ಹಾಗೂ ಆಕೆಯ ಮಗ ಮತ್ತು ಆತನ ಇಬ್ಬರು ಗೆಳೆಯರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  National Flag: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪ; ಮಹಿಳೆ ಸೇರಿ ಮೂವರು ಅಪ್ರಾಪ್ತರ ಬಂಧನ

  4. ಸಂವಿಧಾನ ದಿನದಂದೇ ತಮ್ಮ ಹಕ್ಕುಗಳಿಗಾಗಿ ಪಂಜಾಬ್​ನಿಂದ ದೆಹಲಿಗೆ ಆಗಮಿಸಿದ್ದ ರೈತರನ್ನು ಗಡಿಯಲ್ಲಿಯೇ ತಡೆದು ನಿಲ್ಲಿಸಿರುವ ಕೇಂದ್ರ ಮತ್ತು ಹರಿಯಾಣದ ಬಿಜೆಪಿ ಸರ್ಕಾರದ ನಡೆಯನ್ನು ಸಂವಿಧಾನ ವಿರೋಧಿ ನಡೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್ ಕಿಡಿಕಾರಿದ್ದಾರೆ.

  ಸಂವಿಧಾನದ ದಿನದಂದೇ ರೈತರ ಹಕ್ಕುಗಳು ತುಳಿತಕ್ಕೆ ಒಳಗಾಗುತ್ತಿರುವುದು ವಿಷಾಧನೀಯ; ಅಮರೀಂದರ್​ ಸಿಂಗ್

  5. ದೇಶದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಇದನ್ನು ಗಮದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಡಿಸೆಂಬರ್ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ನಿಷೇಧಿಸಿದೆ. ಹೀಗಾಗಿ ಈ ವರ್ಷಾಂತ್ಯದವರೆಗೆ ಭಾರತದಿಂದ ಹಾಗೂ ಭಾರತಕ್ಕೆ ಯಾವುದೇ ವಿಮಾನಗಳ ಹಾರಾಟ ಇರುವುದಿಲ್ಲ.

  International Flights: ಡಿಸೆಂಬರ್ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ

  6.ತಾವು ಶಿಫಾರಸು ಮಾಡಿದವರಿಗೆ ನಿಗಮ ಮಂಡಳಿಗಳಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷ ಸ್ಥಾನ ನೀಡದ ಬಗ್ಗೆ ಸಂಸದ ಶ್ರೀನಿವಾಸ್​ ಪ್ರಸಾದ್​ ನಿನ್ನೆಯಷ್ಟೇ ಅಸಮಾಧಾನ ಹೊರಹಾಕಿದ್ದರು. ಇಂದು ಮತ್ತೆ ಯಡಿಯೂರಪ್ಪನವರ ವಿರುದ್ಧ ಮೈಸೂರಿನಲ್ಲಿ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ಅಧಿಕಾರವೆಂಬುದು ಕೆಲವೊಮ್ಮೆ ಎಲ್ಲರನ್ನೂ ಬದಲಾಯಿಸಿಬಿಡುತ್ತದೆ.

  ಅಧಿಕಾರ ಎಲ್ಲರನ್ನೂ ಬದಲಾಯಿಸಿಬಿಡುತ್ತದೆ; ಯಡಿಯೂರಪ್ಪ ವಿರುದ್ಧ ಮತ್ತೆ ಶ್ರೀನಿವಾಸ್ ಪ್ರಸಾದ್​ ಅಸಮಾಧಾನ

  7.ಬಿಜೆಪಿಗೆ ವಲಸೆ ಬಂದ 17 ಜನರಿಂದ ಮಾತ್ರ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ ಎಂದು ನಿನ್ನೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಎಂಟಿಬಿ ನಾಗರಾಜ್, 17 ಜನರಿಂದ ಸರ್ಕಾರ ಬಂದಿಲ್ಲ ಎಂದಾದರೆ, ಉಳಿದ 105 ಜನರಿಂದ ಯಾಕೆ ಸರ್ಕಾರ ರಚಿಸಲು ಆಗಲಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಪ್ರಶ್ನಿಸಿದ್ದಾರೆ.

  ಸರ್ಕಾರ ರಚನೆಯಲ್ಲಿ ನಮ್ಮ ಕೊಡುಗೆಯೂ ಇದೆ, 17 ಜನರ ತ್ಯಾಗವೂ ಇದೆ; ವಿವಾದದ ಬಳಿಕ ಎಚ್ಚೆತ್ತ ರೇಣುಕಾಚಾರ್ಯ

  8. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಹನಾರಾಯಣ ಹೇಳಿಕೆ ನೀಡಿದ್ದಾರೆ. ಮಾಗಡಿಯ ಜೇನುಕಲ್ಲು ಪಾಳ್ಯದ ಬಡವರಿಗೆ ಭೂಮಿಯ ಹಕ್ಕುಪತ್ರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ, ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ತಿಳಿಸಿದರು.

  ನಮಗೆ ಯಡಿಯೂರಪ್ಪನವರೇ ನಾಯಕರು, ನಾಯಕತ್ವದ ಬದಲಾವಣೆ ಇಲ್ಲ: ಡಿಸಿಎಂ ಅಶ್ವತ್ಹನಾರಾಯಣ

  9.ಲಾಕ್​ಡೌನ್​ನಲ್ಲಿ ಸುಮಾರು 7 ತಿಂಗಳ ಕಾಲ ಮನೆಗಳಲ್ಲೇ ಲಾಕ್​ ಆಗಿದ್ದ ಸೆಲೆಬ್ರಿಟಿಗಳು ಸದ್ಯ ವಿದೇಶಕ್ಕೆ ತೆರಳಿ ಎಂಜಾಯ್​ ಮಾಡುತ್ತಿದ್ದಾರೆ. ಕೆಲವು ಭಾರತದಲ್ಲೇ ಗಿರಿಧಾಮಗಳಿಗೆ ಹೋದರೆ, ಹೆಚ್ಚಿನ ಸ್ಟಾರ್​ಗಳು ಮಾಲ್ಡೀವ್ಸ್​ಗೆ ಹೋಗುತ್ತಿದ್ದಾರೆ.

  Maldives Trip: ಮಾಲ್ಡೀವ್ಸ್​ನಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳು: ಟ್ರೋಲ್ ಮಾಡುತ್ತಿರುವ ನೆಟ್ಟಿಗರು..!

  10.ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ನಾಳೆ ಶುಕ್ರವಾರದಿಂದ ಆರಂಭವಾಗಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಮೊದಲ ಏಕದಿನ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

  IND vs AUS: ರೋಹಿತ್ – ಇಶಾಂತ್ ಭಾರತ ತಂಡ ಸೇರಿಕೊಳ್ಳಲು ಬಿಸಿಸಿಐ ಮಾಡಿತು ಮಾಸ್ಟರ್ ಪ್ಲ್ಯಾನ್: ಏನದು?
  Published by:G Hareeshkumar
  First published: