HOME » NEWS » National-international » EVENING DIGEST NOVEMBER 25TH TOP 10 KANNADA POLITICAL SPORTS AND OTHER NEWS ARE HE HK

Evening Digest: ಪಂಜಾಬ್​​​ನಲ್ಲಿ ಡಿ.1ರಿಂದ ರಾತ್ರಿ ಕರ್ಫ್ಯೂ ಜಾರಿ, ಬ್ರಿಟನ್​ ರಾಜಮನೆತನದ ಸೊಸೆ​ಗೆ ಗರ್ಭಪಾತ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

news18-kannada
Updated:November 25, 2020, 5:04 PM IST
Evening Digest: ಪಂಜಾಬ್​​​ನಲ್ಲಿ ಡಿ.1ರಿಂದ ರಾತ್ರಿ ಕರ್ಫ್ಯೂ ಜಾರಿ, ಬ್ರಿಟನ್​ ರಾಜಮನೆತನದ ಸೊಸೆ​ಗೆ ಗರ್ಭಪಾತ
ಸಾಂದರ್ಭಿಕ ಚಿತ್ರ
  • Share this:
1.ಮಹಾಮಾರಿ ಕೊರೋನಾ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆ, ಪಂಜಾಬ್​ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್ ಸಿಂಗ್ ರಾತ್ರಿ ಕರ್ಫ್ಯೂ ಹೊರಡಿಸಿದ್ದಾರೆ. ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಜಾರಿಯಲ್ಲಿರಲಿದೆ. ಜೊತೆಗೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಅಂದರೆ ಆದೇಶ ಉಲ್ಲಂಘನೆ ಮಾಡಿದವರಿಗೆ 1 ಸಾವಿರ ರೂ. ದಂಡ ಬೀಳುತ್ತದೆ ಎಂದು ಸಿಎಂ ಆದೇಶ ಹೊರಡಿಸಿದ್ದಾರೆ.

ಪಂಜಾಬ್​: ಡಿ.1ರಿಂದ ರಾತ್ರಿ ಕರ್ಫ್ಯೂ ಜಾರಿ; ಕೊರೋನಾ ನಿಯಮ ಉಲ್ಲಂಘಿಸಿದರೆ 1 ಸಾವಿರ ರೂ.ದಂಡ

2.ಕೇಂದ್ರ ಸರ್ಕಾರ ಹೊಸದಾಗಿ ನಿರ್ಮಿಸಲು ಮುಂದಾಗಿರುವ ಸಂಸತ್ ಭವನ ಪ್ರಾಜೆಕ್ಟ್​ ಸೆಂಟ್ರಲ್ ವಿಸ್ತಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ 10ಕ್ಕೆ ಅಡಿಪಾಯ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹೊಸ ಸಂಸತ್​ ಭವನ ಸೆಂಟ್ರಲ್ ವಿಸ್ತಾ ಯೋಜನೆಗೆ ಡಿಸೆಂಬರ್​ 10ರಂದು ಮೋದಿಯಿಂದ ಶಂಕುಸ್ಥಾಪನೆ

3. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 1 ಕೋಟಿಯ ಸನಿಹಕ್ಕಿದೆ. ಇನ್ನೂ ಮೃತಪಟ್ಟವರ ಸಂಖ್ಯೆಯೂ 1.40 ಲಕ್ಷದ ಸಮೀಪವಿದೆ. ಇನ್ನೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೊರೋನಾ  ಮೂವರನೇ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.

ಕೊರೋನಾಗೆ ಲಸಿಕೆ ಸಿದ್ಧವಾಗುವವರೆಗೆ ದೆಹಲಿಯಲ್ಲಿ ಶಾಲೆಗಳ ಪುನರಾರಂಭ ಸಾಧ್ಯವಿಲ್ಲ; ಮನೀಶ್​ ಸಿಸೋಡಿಯಾ

4.ಬಿಹಾರದಲ್ಲಿ ಜೆಡಿಯು- ಬಿಜೆಪಿ ನೇತೃತ್ವದ ಎನ್​ಡಿಎ ಅಧಿಕಾರಕ್ಕೆ ಬಂದಿದೆ. ಬಿಹಾರದ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಎನ್​ಡಿಎ ಪರವಾಗಿ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಹಾಗೂ ಮಹಾಘಟಬಂಧನದ ಪರವಾಗಿ ಆರ್​ಜೆಡಿಯ ಅವಧ್ ಬಿಹಾರಿ ಚೌಧರಿ ನಾಮಪತ್ರ ಸಲ್ಲಿಸಿದ್ದಾರೆ.ಎನ್​ಡಿಎ ಶಾಸಕರಿಗೆ ಜೈಲಿನಿಂದಲೇ ಲಾಲೂ ಪ್ರಸಾದ್ ಯಾದವ್ ಆಮಿಷ; ಬಿಜೆಪಿ ಗಂಭೀರ ಆರೋಪ

5.ರಾಜಮನೆತನದ ವೈಭೋಗ ಬೇಡ ಎಂದು ಬ್ರಿಟ​ನ್ ರಾಜಕುಮಾರ ಹ್ಯಾರಿ ಮತ್ತು ಮೇಘನ್​ ಮಾರ್ಕೆಲ್​ ಕಳೆದ ಮಾರ್ಚ್​ನಲ್ಲಿ ಅಧಿಕೃತವಾಗಿ ಅರಮನೆಯಿಂದ ಹೊರನಡೆದಿದ್ದರು. ರಾಜಮನೆತನದ ಜವಾಬ್ದಾರಿಯಿಂದ ದೂರಾಗಿ ಇಂಗ್ಲೆಡ್​ನಲ್ಲಿ ಸಾಮಾನ್ಯರಂತೆ ವಾಸಿಸುತ್ತಿದ್ದಾರೆ. ಸ್ವತಂತ್ರವಾಗಿ ಜೀವನ ನಡೆಸುತ್ತಿರುವ ಈ ಜೋಡಿ ಈಗ ಮಗುವನ್ನು ಕಳೆದುಕೊಂಡು ದುಃಖಕ್ಕೆ ಒಳಗಾಗಿದೆ. ಕಳೆದ ಜುಲೈನಲ್ಲಿ ಮೇಘನ್​ಗೆ ಗರ್ಭಪಾತವಾಗಿದೆ ಎಂದು ನ್ಯೂಯರ್ಕ್​ ಟೈಮ್ಸ್​ ವರದಿ ಮಾಡಿದೆ.

ಬ್ರಿಟನ್​ ರಾಜಮನೆತನದ ಸೊಸೆ​ಗೆ ಗರ್ಭಪಾತ; ಮಗು ಕಳೆದುಕೊಂಡ ದುಃಖ ತೊಡಿಕೊಂಡ ಮಾರ್ಕೆಲ್​

6.ಹದಿನೇಳು ಜನರಿಂದ ಬಿಜೆಪಿ ಸರ್ಕಾರ ಬಂದಿದೆ ಎಂಬುದು ಸುಳ್ಳು. ಬಿಜೆಪಿ ಪಕ್ಷದ ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಸರ್ಕಾರ ಬಂದಿದೆ. ಯಾರೋ ಒಬ್ಬರಿಂದ ಸರ್ಕಾರ ಬಂದಿದೆ ಎಂದು ಹೇಳಲಾಗದು. ಕಾಂಗ್ರೆಸ್, ಜೆಡಿಎಸ್​ನಿಂದ ಬೇಸತ್ತವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಅಷ್ಟೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಕೇವಲ 17 ಜನರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ; ರೇಣುಕಾಚಾರ್ಯ ಮತ್ತೆ ವಾಗ್ದಾಳಿ

7. ರಾಜ್ಯದಲ್ಲಿ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗಬೇಕೆಂದು ಹೋರಾಟ ನಡೆಯುತ್ತಿದೆ. ಈಗಾಗಲೇ ಸಚಿವ ಕೆ ಎಸ್ ಈಶ್ವರಪ್ಪ ಸ್ವಾಮೀಜಿಗಳೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬಂದಿದ್ದಾರೆ. ಇನ್ನೊಂದೆಡೆ ಸಚಿವ ಕೆ ಎಸ್ ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿಕೊಂಡಿರುವದಕ್ಕೆ ಅಪಸ್ವರ ಕಂಡು ಬಂದಿದೆ.

ಎಸ್.ಟಿ. ಮೀಸಲಾತಿ ಹೋರಾಟದ ಮೂಲಕ ಈಶ್ವರಪ್ಪ ತಮ್ಮ ಮಗನನ್ನು ರಾಜಕೀಯವಾಗಿ ಬೆಳೆಸಲು ಯತ್ನ; ಯಲ್ಲಪ್ಪ ಹೆಗ್ಡೆ

8. ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಲ್ಲಿ ಬೆಳಗಾವಿ ಪಾತ್ರ ಬಹಳದ ದೊಡ್ಡದು. ಅದೇ‌ ರೀತಿ‌ ಇದೀಗ ಜಿಲ್ಲೆಯ ಬಿಜೆಪಿ ಶಾಸಕರು, ಮುಖ್ಯಮಂತ್ರಿಗಳ ಆಪ್ತರು  ಸರ್ಕಾರದ ಅನೇಕ ಮಹತ್ವದ ಹುದ್ದೆಗಳಿಗೆ ನೇಮಕವಾಗುವ ಮೂಲಕ ಜಿಲ್ಲೆಯ ಪ್ರತಿನಿಧಿಗಳ ಶಕ್ತಿ ಹೆಚ್ಚಿಸಿಕೊಂಡಿದ್ದಾರೆ. ಜಿಲ್ಲೆಯ ಕೆಲ ಶಾಸಕರು ಹೊರತು ಪಡಿಸಿ ಬಹುತೇಕರು ಇದೀಗ ಅಧಿಕಾರದ ಗದ್ದುಗೆ ಏರಿದ್ದಾರೆ.

ಬಿಎಸ್​ವೈ ಸರ್ಕಾರದಲ್ಲಿ ಬೆಳಗಾವಿ ನಾಯಕರದ್ದೇ ಪಾರುಪತ್ಯ; ಜಿಲ್ಲೆಯ ಬಹುತೇಕ ನಾಯಕರಿಗೆ ಅಧಿಕಾರ ಗದ್ದುಗೆ

9.ಲಾಕ್​ಡೌನ್​ ಆದಾಗಿನಿಂದ ಯಾವ ಸ್ಟಾರ್​ ನಟರ ಸಿನಿಮಾಗಳು ರಿಲೀಸ್ ಆಗಿಲ್ಲ. ಲಾಕ್​ಡೌನ್​ ಸಡಿಲಗೊಂಡು ಚಿತ್ರತಮಂದಿರಗಳು ಬಾಗಿಲು ತೆರೆದರೂ ಸಹ ಯಾವ ಸ್ಟಾರ್​ಗಳು ಚಿತ್ರ ರಿಲೀಸ್​ ಮಾಡುವ ಮನಸ್ಸು ಮಾಡುತ್ತಿಲ್ಲ. ಇನ್ನು ದೊಡ್ಡ ತಾರಾಬಳಗ ಇಲ್ಲದ ಸಿನಿಮಾಗಳು ತೆರೆ ಕಾಣುತ್ತಿವೆ. ಹೀಗಿರುವಾಗಲೇ  ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರತಂಡ ತೆರೆ ಕಾಣಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

Pogaru Release Date: ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸ್ ಡೇಟ್​ ಫಿಕ್ಸ್​: ಸಿನಿಪ್ರಿಯರ ಅಭಿಪ್ರಾಯ ಕೇಳಿದ ನಿರ್ದೇಶಕ..!

10. ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಆಡಲಿರುವುದು ಬಹುತೇಕ ಖಚಿತವಾಗಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಇಂಗ್ಲೆಂಡ್ ಐದು ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಣ ಪಂದ್ಯಗಳ ಮಾಹಿತಿ ಹಂಚಿಕೊಂಡ ಸೌರವ್ ಗಂಗೂಲಿ..!
Published by: G Hareeshkumar
First published: November 25, 2020, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories