Evening Digest: ಬಿಜೆಪಿ ಸೇರ್ಪಡೆಗೆ ಮುಂದಾದ ನಟಿ ವಿಜಯಶಾಂತಿ, ಡಿಸೆಂಬರ್​ವರೆಗೂ ಶಾಲೆಗಳ ಪುನಾರಂಭ ಇಲ್ಲ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಕಳೆದ ಒಂದು ದಶಕಗಳಿಂದ ಬಿಜೆಪಿ ವಿರುದ್ಧ ಉಗ್ರವಾಗಿ ಮಾತನಾಡುತ್ತಾ ಟ್ವೀಟ್​ ದಾಳಿ ನಡೆಸುತ್ತಿದ್ದ ಕಾಂಗ್ರೆಸ್​ ಪಕ್ಷದ ಸ್ಟಾರ್​ ಕ್ಯಾಂಪೇನರ್​ ನಟಿ ಖುಷ್ಬೂ ಸುಂದರ್​ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿ ಆಶ್ಚರ್ಯ ಮೂಡಿಸಿದ್ದರು. ಅಲ್ಲದೆ, ಅವರು ಇದೀಗ ಸತತವಾಗಿ ಕಾಂಗ್ರೆಸ್​ ವಿರೋಧಿ ಭಾಷಣದಲ್ಲಿ ನಿರತರಾಗಿದ್ದಾರೆ. ಇದೀಗ ಅವರ ಬೆನ್ನಿಗೆ ಆಂಧ್ರ ಪ್ರದೇಶದ ಮತ್ತೋರ್ವ ಕಾಂಗ್ರೆಸ್​ ಸ್ಟಾರ್​ ಕ್ಯಾಂಪೇನರ್​ ನಟಿ ವಿಜಯಶಾಂತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಮುಂದಾಗಿದ್ದಾರೆ.

  ಕಾಂಗ್ರೆಸ್​ಗೆ​ ಬೆನ್ನು ತೋರಿಸಿದ ಮತ್ತೋರ್ವ ನಟಿ; ಖುಷ್ಬೂ ಆಯ್ತು ಇದೀಗ ಬಿಜೆಪಿ ಪಾಲಾಗಲಿದ್ದಾರೆ ವಿಜಯಶಾಂತಿ

  2. ಪಾಕಿಸ್ತಾನದ ಕರಾಚಿ ನಗರ ಮುಂದೊಂದು ದಿನ ಭಾರತದ ಭಾಗವಾಗಲಿದೆ. ನಾವು ಅಖಂಡ ಭಾರತದ ಬಗ್ಗೆ ನಂಬಿಕೆ ಹೊಂದಿದ್ದು, ಒಂದಿ ದಿನ ಕರಾಚಿ ಭಾರತಕ್ಕೆ ಸೇರಲಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಮುಂದೊಂದು ದಿನ ಪಾಕ್​ನ ಕರಾಚಿನಗರ ಭಾರತದ ಭಾಗವಾಗಲಿದೆ; ಫಡ್ನವೀಸ್​

  3.ಹೈದರಾಬಾದ್ ಜಿಹೆಚ್​ಎಂಸಿ ಚುನಾವಣೆಯಲ್ಲಿ ಬಿಜೆಪಿ ಪ್ರಚಾರದಲ್ಲಿ ನಿರತವಾಗಿರುವ ತೇಜಸ್ವಿ ಸೂರ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್​ಗೆ ಒಳಗಾಗಿದ್ದಾರೆ. ಹೈದರಾಬಾದ್​ನ ನೆಟ್ಟಿಗರು ತೇಜಸ್ವಿ ಸೂರ್ಯರನ್ನ ಅಶ್ಲೀಲವಾಗಿ ಟ್ರೋಲ್ ಮಾಡಿದ್ದಾರೆ.

  ಹೈದರಾಬಾದಿಗಳ ಕೈಲಿ ಭಾರೀ ಟ್ರೋಲ್ ಆದ ತೇಜಸ್ವಿ ಸೂರ್ಯ; ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

  4. ವಿಧ ರಾಜ್ಯಗಳಲ್ಲಿರುವ ಕೊರೋನಾ ಪರಿಸ್ಥಿತಿ, ಕೊರೋನಾ ಲಸಿಕೆಯ ತಯಾರಿಕೆ ಹಾಗೂ ವಿತರಣೆ ಬಗ್ಗೆ ಚರ್ಚಿಸಲು ಪ್ರಧಾನ ನರೇಂದ್ರ ಮೋದಿ ನಾಳೆ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.

  ನಾಳೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ; ಕೋವಿಡ್ ಪರಿಸ್ಥಿತಿ ಮತ್ತು ಲಸಿಕೆ ವಿತರಣೆ ಬಗ್ಗೆ ಚರ್ಚೆ

  5. ನಟಿ ಕಂಗನಾ ರಣಾವತ್​ ಮತ್ತು ಅವರ ಸಹೋದರಿ ರಂಗೋಲಿ ಚಾಂಡೇಲ್ ತಮ್ಮ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ಇಂದು ಬಾಂಬೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

  ಸಮಾಜದಲ್ಲಿ ಕೋಮುದ್ವೇಷ ಹರಡಿದ ಪ್ರಕರಣ; ಎಫ್​ಐಆರ್​ ರದ್ಧತಿ ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ನಟಿ ಕಂಗನಾ

  6. ಡಿಸೆಂಬರ್​ವರೆಗೂ ಶಾಲೆಗಳನ್ನ ಪ್ರಾರಂಭಿಸುವುದು ಸೂಕ್ತ ಅಲ್ಲ ಎಂದು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಮಾಡಿದ ಶಿಫಾರಸನ್ನು ಸರ್ಕಾರ ಸ್ವೀಕರಿಸಿದ್ದು, ಡಿಸೆಂಬರ್​ವರೆಗೂ ಶಾಲೆ ಮರುಪ್ರಾರಂಭ ಮಾಡದಿರಲು ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಸೋಮವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

  ಡಿಸೆಂಬರ್​ವರೆಗೂ ಶಾಲೆಗಳ ಪುನಾರಂಭ ಇಲ್ಲ: ತಾಂತ್ರಿಕ ಸಮಿತಿ ಸಲಹೆ ಸ್ವೀಕರಿಸಿದ ರಾಜ್ಯ ಸರ್ಕಾರ

  7. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್​ಗೆ ಅಭ್ಯರ್ಥಿಯೇ ಸಿಕ್ಕಿಲ್ಲ ಎಂದ್ರೆ ನಾಚಿಕೆಗೇಡು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯ ಮಾಡಿದರು. ಮುಖ್ಯಮಂತ್ರಿಗಳ ಕಾವೇರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಸ್ಕಿಯಲ್ಲಿ ಕಾಂಗ್ರೆಸ್ ಯಾರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೂ ಆ ಕ್ಷೇತ್ರವನ್ನ ಹೇಗೆ ಗೆಲ್ಲಬೇಕೆಂಬ ತಂತ್ರವನ್ನ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಮಸ್ಕಿಯಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿ ಸಿಕ್ಕಿಲ್ಲ ಅಂದ್ರೆ ನಾಚಿಕೆಗೇಡು: ಬಿ.ವೈ. ವಿಜಯೇಂದ್ರ ವ್ಯಂಗ್ಯ

  8. ಮಾಜಿ ಸಚಿವ ವಿನಯ ಕುಲಕರ್ಣಿಗೆ ಇಂದು ಕೂಡ ರಿಲೀಫ್ ಸಿಕ್ಕಿಲ್ಲ. ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ವಿನಯ ಕುಲಕರ್ಣಿಯ ವಿಚಾರಣೆ ನಡೆಸಿದ ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳಿಗೆ ವಿಸ್ತರಿಸಿದ್ದಾರೆ.

  ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ; ಡಿ.7ರವರೆಗೆ ಹಿಂಡಲಗಾ ಜೈಲೇ ಗತಿ!

  9. ಮಂಡ್ಯದ ಗಂಡು ಅಂಬರೀಶ್ ಅಂದ್ರೆ  ಅಭಿಮಾನಿಗಳ ಆರಾಧ್ಯದೈವ.‌ ಅಂಬಿಯ ಮಗ್ದ ಮನಸಿನ ಒರಟು ಮಾತಿಗೆ ತಲೆ ಬಾಗದವರೆ ಇಲ್ಲ. ಆದರೆ, ರೆಬೆಲ್ ಸ್ಟಾರ್ ನಮ್ಮನ್ನೆಲ್ಲಾ ಅಗಲಿ 2 ವರ್ಷ ತುಂಬಿದೆ‌. ವ್ಯಕ್ತಿ ಸತ್ತರು ಅಂಬಿ ಮೇಲಿನ ಪ್ರೀತಿ, ಅಭಿಮಾನ ಕಡಿಮೆ ಆಗಿಲ್ಲ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಲಿಯುಗ ಕರ್ಣನಿಗೆ ಅಭಿಮಾನಿಗಳು ಪ್ರೀತಿಯಿಂದ ಗುಡಿ ಕಟ್ಟಿದ್ದಾರೆ.

  ಮಂಡ್ಯದಲ್ಲಿ ಅಭಿಮಾನಿಗಳಿಂದ ರೆಬಲ್ ಸ್ಟಾರ್ ಗುಡಿ ನಿರ್ಮಾಣ ; ನಾಳೆ ಅಂಬಿಯ ಕಂಚಿನ ಪ್ರತಿಮೆ ಲೋಕಾರ್ಪಣೆ

  10. ಭಾರತದಲ್ಲಿ ಕೋವಿಡ್-19ನಿಂದ ಐಪಿಎಲ್ ಸಂಪೂರ್ಣ ರದ್ದಾಗಿದ್ದರೆ ಬಿಸಿಸಿಐ ಬರೋಬ್ಬರಿ 4,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿತ್ತು. ಇದೇ ಕಾರಣಕ್ಕೆ ವಿದೇಶದಲ್ಲಾದರೂ ಟೂರ್ನಿಯನ್ನು ನಡೆಸುವ ಅನಿವಾರ್ಯ ಬಿಸಿಸಿಐಗೆ ಎದುರಾಗಿತ್ತು.  ಐಪಿಎಲ್ 2020ಕ್ಕೆ ತೆರೆಬಿದ್ದಿದ್ದು ವಿದೇಶದಲ್ಲಿ ಆಯೋಜಿಸಿ ಬಿಸಿಸಿಐ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಹೀಗಿರುವಾಗಲೇ ಸ್ವತಃ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವಿಚಾರವನ್ನು ಬಹಿರಂಗ ಪಡಿಸಿದೆ.

  IPL 2020: ಐಪಿಎಲ್ 2020ರಲ್ಲಿ ಬಿಸಿಸಿಐ ಗಳಿಸಿದ ಲಾಭವೆಷ್ಟು?: ಅಧಿಕೃತವಾಗಿ ಹೊರಬಿತ್ತು ಲೆಕ್ಕಾಚಾರ
  Published by:G Hareeshkumar
  First published: