Evening Digest: ಜಮ್ಮುವಿನಲ್ಲಿ 4 ಉಗ್ರರ ಹತ್ಯೆ, ಚುನಾವಣೆ ಬೆನ್ನಲ್ಲೇ ಶಶಿಕಲಾ ಬಿಡುಗಡೆಗೆ ಸಿದ್ದತೆ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಭದ್ರತಾ ಪಡೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ್ಯೆಯಾಗಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ. ನಗ್ರೋತಾ ಜಿಲ್ಲೆಯ ಬಾನ್ ಟೋಲ್ ಪ್ಲಾಜಾ ಬಳಿ ಇಂದು ಗುರುವಾರ ಬೆಳಗ್ಗೆ ಈ ಎನ್​ಕೌಂಟರ್ ನಡೆದಿರುವುದು ತಿಳಿದುಬಂದಿದೆ.

  ಜಮ್ಮುವಿನ ನಗ್ರೋತಾದಲ್ಲಿ ಎನ್​ಕೌಂಟರ್; ಬಸ್​ನೊಳಗಿದ್ದ 4 ಉಗ್ರರ ಹತ್ಯೆ

  2.ನಿತೀಶ್​ ಕುಮಾರ್​ ಐದನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಇಂದು ಬಿಹಾರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

  ಬಿಹಾರದ ಹಂಗಾಮಿ ವಿಧಾನಸಭಾ ಸ್ಪೀಕರ್​ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸಿಎಂ ಜಿತನ್ ರಾಮ್ ಮಾಂಜಿ

  3.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ಸ್ಮಾರಕ ಇರುವ ಶಕ್ತಿ ಸ್ಥಳ್​ಗೆ ಭೇಟಿ ನೀಡಿದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಗೌರವ ಸಲ್ಲಿಸಿದರು. ಈ ವೇಳೆ, ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ ಅವರನ್ನು ಈ ದೇಶದ ಮಹಾನ್ ಪುತ್ರಿ ಎಂದು ಬಣ್ಣಿಸಿ ಟ್ವೀಟ್ ಮಾಡಿದೆ.

  Indira Gandhi Birth Anniversary: ಇಂದಿರಾ ಗಾಂಧಿ 103ನೇ ಜಯಂತಿಯಂದು ಕಾಂಗ್ರೆಸ್ಸಿಗರಿಂದ ನಮನ

  4.ಪ್ರಧಾನಿ ನರೇಂದ್ರ ಮೋದಿ ಅವರು ಇಂದು 23ನೇ ಬೆಂಗಳೂರು ತಂತ್ರಜ್ಞಾನ ಮೇಳ (ಬಿಟಿಎಸ್-2020) ಉದ್ಘಾಟನೆ ಮಾಡಿದರು. ವಿಡಿಯೋ ಕಾನ್ಫೆರೆನ್ಸ್ ಮೂಲಕ ಆಯೋಜಿಸಲಾಗಿರುವ ಮೂರು ದಿನಗಳ ಈ ತಂತ್ರಜ್ಞಾನ ಮೇಳದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ತಂತ್ರಜ್ಞಾನವೇ ಭವಿಷ್ಯದ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

  BTS 2020 - ತಂತ್ರಜ್ಞಾನವೇ ಭವಿಷ್ಯದ ಶಕ್ತಿ: ಬೆಂಗಳೂರು ಟೆಕ್ ಸಮಿಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ

  5. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ, ಅವರು ನಿಶ್ಚಿತವಾಗಿ ನನಗೆ ಸಚಿವ ಸ್ಥಾನ ನೀಡಲಿದ್ದಾರೆ. ಸಂಪುಟ ವಿಸ್ತರಣೆಗೆ ನನ್ನಿಂದ ಯಾವುದೇ ಆತುರವಿಲ್ಲ. ವಿಸ್ತರಣೆ ಮಾಡುವವರೆಗೂ ಕಾಯುತ್ತೇನೆ ಎಂದು ನೂತನ ಶಾಸಕ ಮುನಿರತ್ನ ಹೇಳಿದ್ದಾರೆ.

  ರಾಜ್ಯ ಸಚಿವ ಸಂಪುಟ ಸೇರಲು ಆತುರವಿಲ್ಲ, ಸಿಎಂ ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ; ಮುನಿರತ್ನ

  6. ಖರ್ಗೆಯವರು ಪಕ್ಷದ ಬಗ್ಗೆ ಮಾತನಾಡಿದ್ದಾರೆ. ತುಂಬಾ ನೊಂದು ಅವರು ಮಾತನಾಡಿದ್ದಾರೆ. ನಾನು ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತೇನೆ. ದೇಶದಲ್ಲಿ ಕೋಮುವಾದಿಗಳು ಹೆಚ್ಚಾಗುತ್ತಿದ್ದಾರೆ. ಇಡೀ ದೇಶವನ್ನೇ ಆವರಿಸಿಕೊಳ್ಳುತ್ತಿದ್ದಾರೆ. ನಾವು ಜನರನ್ನು ಕನ್ವೀನ್ಸ್  ಮಾಡುವಲ್ಲಿ ವಿಫಲರಾಗಿದ್ದೇವೆ. ಕಾರ್ಯಕರ್ತರನ್ನು ಕನ್ವೀನ್ಸ್ ಮಾಡೋಕೆ ವಿಫಲರಾಗಿದ್ದೇವೋ ಗೊತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

  ಬಿಜೆಪಿ ಆರ್​ಎಸ್​ಎಸ್​ನ ಮುಖವಾಡ, ಅವರನ್ನು ಓಡಿಸದಿದ್ದರೆ ದೇಶ ಛಿದ್ರವಾಗುತ್ತದೆ; ಸಿದ್ದರಾಮಯ್ಯ

  7. ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಲಿಕಯ್ಯ ಗುತ್ತೇದಾರ ಕೆಂಡಾಮಂಡಲವಾಗಿದ್ದಾರೆ. ನನಗೆ ವಾರ್ನ್ ಮಾಡುವುದಕೆ ನೀನೇನು ದೊಡ್ಡ ಹುಲೀನಾ ಎಂದು ಪ್ರಶ್ನಿಸಿದ್ದಾರೆ. ಮಾಲೀಕಯ್ಯ ಗುತ್ತೇದಾರ ಮುಂದೆ ನೀನು ಬಚ್ಚಾ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಕಿಡಿಕಾರಿದ್ದಾರೆ.

  ಪ್ರಿಯಾಂಕ್ ಖರ್ಗೆ ನನ್ನ ಮುಂದೆ ಬಚ್ಚಾ: ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಕಿಡಿ

  8.ತಮಿಳುನಾಡಿನಲ್ಲಿ ಬರುವ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಚಿನ್ನಮ್ಮ ರಿಲೀಸ್ ಆಗುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ‌. ಈ ನಡುವೆ ಬೇಕಾದ ಸಿದ್ದತೆಗಳನ್ನ ಸಹ ಶಶಿಕಲಾ ಪರ ವಕೀಲರು ಸಹ ಮಾಡಿಕೊಳ್ತಿದ್ದು, ಇಂದು ದಂಡ  ಕೂಡಾ ಪಾವತಿ ಮಾಡಿದ್ದಾರೆ. ಸಿಟಿ ಸಿವಿಲ್ ಕೋರ್ಟ್​​​ನ ಹಾಲ್ ನಂಬರ್ 36 ನಲ್ಲಿ ಹತ್ತು ಕೋಟಿ ಹತ್ತು ಸಾವಿರ ದಂಡವನ್ನ ಡಿಡಿ ಮೂಲಕ ಪಾವತಿ ಮಾಡಲಾಗಿದೆ. 

  ತಮಿಳುನಾಡಿನ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಶಶಿಕಲಾ ಬಿಡುಗಡೆಗೆ ಸಿದ್ದತೆ

  9. 2020 ನಿಜಕ್ಕೂ ಸಿನಿರಂಗದ ಪಾಲಿಗೆ ಕರಾಳ ವರ್ಷ ಎಂದರೆ ತಪ್ಪಾಗದು. ವರ್ಷದ ಆರಂಭದಿಂದಲೇ ಭಾರತೀಯ ಸಿನಿರಂಗದ ಸಾಕಷ್ಟು ಮಂದಿ ಅಗಲಿದ್ದಾರೆ. ಸ್ಯಾಂಡಲ್​ವುಡ್​ನ ನಿರ್ದೇಶಕ ಶಾಹುರಾಜ್​ ಶಿಂಧೆ ಅವರೂ ಅಗಲಿದ್ದಾರೆ. ಇಂದು ಬೆಳಿಗ್ಗೆ ಹೃದಾಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  Shahuraj Shinde Passed Away: ದರ್ಶನ್​ ಅಭಿನಯದ ಅರ್ಜುನ್​ ಸಿನಿಮಾದ ನಿರ್ದೇಶಕ ಶಾಹುರಾಜ್​ ಶಿಂಧೆ ಇನ್ನಿಲ್ಲ..!

  10.ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿ ಆರಂಭಕ್ಕೆ ಇನ್ನೇನು ಒಂದು ವಾರವಷ್ಟೆ ಬಾಕಿಯಿದೆ. ನವೆಂಬರ್‌ 27 ರಿಂದ ಭಾರತದ ಆಸ್ಟ್ರೇಲಿಯಾ ಪೂರ್ಣ ಪ್ರವಾಸ ಆರಂಭವಾಗಲಿದೆ. ಉಭಯ ತಂಡಗಳೆರಡು ಅತ್ಯಂತ ಬಲಿಷ್ಠವಾಗಿರುವುದರಿಂದ ಏಕದಿನ, ಟಿ-20 ಹಾಗೂ ಟೆಸ್ಟ್ ಸರಣಿಗಳು ಸಾಕಷ್ಟು ಕುತೂಹಲ ಕೆರಳಿಸಿವೆ.

  IND vs AUS: ಭಾರತ- ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ವಿಘ್ನ: ಏನದು?
  Published by:G Hareeshkumar
  First published: