Evening Digest: ದೆಹಲಿಯಲ್ಲಿ ವಾಯು ಮಾಲಿನ್ಯದಿಂದ ಕೋವಿಡ್​19 ಪ್ರಕರಣ ಏರಿಕೆ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ರಾಷ್ಟ್ರ ರಾಜಧಾನಿಯಲ್ಲಿ  ನಿಯಂತ್ರಣಕ್ಕೆ ಬಂದಿದ್ದ ಕರೋನಾ ಪ್ರಕರಣ ಕಳೆದೊಂದು ವಾರದಿಂದ ಮತ್ತೆ ಹೆಚ್ಚಾಗಿದೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡರಲ್ಲಿಯೂ ಕಳವಳ ಉಂಟು ಮಾಡಿದೆ. ಈ ಕುರಿತು ಇಂದು ಮಾತನಾಡಿರುವ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಇನ್ನ ಏಳೆಂಟು ದಿನಗಳ ಒಳಗಾಗಿ ಸೋಂಕಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಸೋಂಕು ಹೆಚ್ಚಲು ಕಾರಣ ವಾಯು ಮಾಲಿನ್ಯವಾಗಿದೆ ಎಂದು ಆಪಾದಿಸಿದ್ದಾರೆ.

  ವಾಯು ಮಾಲಿನ್ಯದಿಂದ ಕೋವಿಡ್​19 ಪ್ರಕರಣ ಏರಿಕೆ; ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​

  2.ಅಸ್ಸಾಂನ ಸ್ಥಳೀಯ ಚಾನೆಲ್​ವೊಂದರ ಪತ್ರಕರ್ತರೊಬ್ಬರು ಅಸ್ಸಾಂನ ತಿನ್ಸುಕಿಯ ಜಿಲ್ಲೆಯಲ್ಲಿರುವ ತಮ್ಮ ಮನೆಯ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಏರಿಯಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಬಯಲು ಮಾಡಿದ್ದಕ್ಕಾಗಿ ಪತ್ರಕರ್ತ ಪರಾಗ್ ಭುಯಾನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಚಾನೆಲ್ ಮುಖ್ಯಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಆದೇಶಿಸಿದ್ದಾರೆ.

  ಭ್ರಷ್ಟಾಚಾರ ಬಯಲು ಮಾಡಿದ್ದ ಅಸ್ಸಾಂ ಪತ್ರಕರ್ತ ಸಾವು; ಸಿಐಡಿ ತನಿಖೆಗೆ ಆದೇಶಿಸಿದ ಸಿಎಂ ಸೋನೊವಾಲ್

  3.ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ನೂತನ ಪುಸ್ತಕದಲ್ಲಿ ವಿಶ್ವದ ಹಲವು ನಾಯಕರ ಬಗ್ಗೆ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕದಲ್ಲಿ ಒಬಾಮ ತಮ್ಮ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಹಲವು ನಾಯಕರ ಬಗ್ಗೆ ಒಬಾಮ ಈ ಪುಸ್ತಕದಲ್ಲಿ ನೇರ ಅಭಿಪ್ರಾಯಗಳನ್ನ ವ್ಯಕ್ತಪಡಿಸಿ ಬರೆದಿದ್ದಾರೆ.

  Barack Obama: ‘ಕಲಿತ ಪಾಠ ಒಪ್ಪಿಸುವ ತವಕದ ವಿದ್ಯಾರ್ಥಿಯಂತೆ…’; ರಾಹುಲ್ ಬಗ್ಗೆ ಬರಾಕ್ ಒಬಾಮ ಅನಿಸಿಕೆ

  4.ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ವರ್ಕ್ ಫ್ರಂ ಹೋಮ್ ಮಾಡುತ್ತಿರುವ ಉದ್ಯೋಗಿಗಳಿಗೆ ತೆರಿಗೆ ಹೇರುವ ಪ್ರಸ್ತಾವ ಅಮೆರಿಕದಲ್ಲಿದೆ. ಮನೆಯಿಂದಲೇ ಕೆಲಸ ಮಾಡುವ ಭಾಗ್ಯ ಇಲ್ಲದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಇಂಥದ್ದೊಂದು ತೆರಿಗೆ ಪರಿಕಲ್ಪನೆಯನ್ನು ಅಮೆರಿಕದ ಡ್ಯೂಷೆ ಬ್ಯಾಂಕ್​ನ ತಂತ್ರಗಾರರು ಅಭಿಪ್ರಾಯಪಟ್ಟಿದ್ದಾರೆ.

  Work From Home - ವರ್ಕ್ ಫ್ರಂ ಹೋಮ್ ಮಾಡುವವರಿಗೆ ಶೇ 5 ತೆರಿಗೆ ವಿಧಿಸುವ ಚಿಂತನೆ

  5. ಇತ್ತೀಚೆಗೆ ನಡೆದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಗೆಲುವು ಬಿ.ವೈ. ವಿಜಯೇಂದ್ರ ಅವರನ್ನು ಸ್ಟಾರ್ ಪಟ್ಟಕ್ಕೆ ಏರಿಸಿದೆ. ಮುಂಬರಲಿರುವ ಬಸವ ಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರೇ ಬಿಜೆಪಿ ಪಾಲಿಗೆ ಟ್ರಂಪ್ ಕಾರ್ಡ್ ಆಗುವ ಎಲ್ಲಾ ಸೂಚನೆಗಳು ಇವೆ. ಶಿರಾದಲ್ಲಿನ ಗೆಲುವಿನ ಖುಷಿಯಲ್ಲಿ ಮೈಮರೆಯದ ವಿಜಯೇಂದ್ರ ಈಗಾಗಲೇ ಮುಂದಿನ ಉಪಚುನಾವಣೆಳತ್ತ ಚಿತ್ತ ಹರಿಸಿದ್ದಾರೆ.

  ಶಿರಾ ಯಶಸ್ಸಿನ ಬಳಿಕ ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳತ್ತ ಬಿ.ವೈ. ವಿಜಯೇಂದ್ರ ಚಿತ್ತ

  6. ಕನ್ನಡದ ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆ ನಿನ್ನೆ ಮಧ್ಯರಾತ್ರಿ 1 ಗಂಟೆಗೆ ವಿಧಿವಶರಾಗಿದ್ದಾರೆ. 62 ವರ್ಷದ ರವಿ ಬೆಳಗೆರೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಹಾಯ್​ ಬೆಂಗಳೂರು ಕಚೇರಿಯಲ್ಲಿ ರಾತ್ರಿ ಊಟ ಮುಗಿಸಿ, ನಿದ್ರೆ ಮಾಡುತ್ತಿದ್ದಾಗ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ

  Ravi Belagere Death: ಖ್ಯಾತ ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಹೃದಯಾಘಾತದಿಂದ ನಿಧನ

  7. ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಕಾಲವೇ ಕೂಡಿಬರುತ್ತಿಲ್ಲ ಎನ್ನುವಂತಿದೆ ಸದ್ಯದ ಪರಿಸ್ಥಿತಿ. ಉಪಚುನಾವಣೆ ಫಲಿತಾಂಶದ ಬಳಿಕ ಹೈ ಕಮಾಂಡ್​ ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತೇನೆ ಎಂದಿದ್ದ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತೆ ಈ ಕಾರ್ಯಕ್ರಮವನ್ನು ಮುಂದೆ ಹಾಕಿದ್ದಾರೆ. ಬಿಹಾರದಲ್ಲಿ ಸರ್ಕಾರ ರಚನೆಯಲ್ಲಿ  ಹಿರಿಯ ಬಿಜೆಪಿ ನಾಯಕರು ಮಗ್ನರಾಗಿರುವ ಹಿನ್ನಲೆ ಈ ಸಂದರ್ಭದಲ್ಲಿ ದೆಹಲಿ ಪ್ರಯಾಣ ಸಲ್ಲದು ಎಂಬ ತೀರ್ಮಾನಿಸಿದ್ದಾರೆ.

  ಬಿಹಾರ ಸರ್ಕಾರ ರಚನೆ ಬಳಿಕ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರ ಜತೆ ಚರ್ಚೆ; ಸಿಎಂ ಬಿಎಸ್​ ಯಡಿಯೂರಪ್ಪ

  8. ಅಧಿಕಾರ ದಾಹ ನನಗಿಲ್ಲ. ಸಚಿವರನ್ನಾಗಿಸಿ, ಎಂಎಲ್​ಸಿಯನ್ನಾಗಿಸಿ ಎಂದು ಯಾರ ಮನೆ ಬಳಿಯೂ ಹೋಗಲ್ಲ. ಈ ಮಾಲೀಕಯ್ಯ ಗುತ್ತೇದಾರ ಭಿಕ್ಷೆ ಬೇಡುವ ಜಾಯಮಾನದವನಲ್ಲ ಎಂದಿದ್ದಾರೆ. ಎಂಎಲ್​​ಸಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆಯನ್ನು ಈಡೇರಿಸದೇ ಇರುವುದಕ್ಕೆ ಮಾಲೀಕಯ್ಯ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

  ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ- ಕೂಡಲೇ ಸಚಿವ ಸಂಪುಟ ಪುನರ್​ರಚಿಸಿ: ಮಾಲೀಕಯ್ಯ ಗುತ್ತೇದಾರ

  9.ಕಾಲಿವುಡ್​ ನಟ ಹಾಗೂ ನಿರ್ದೇಶಕ ಪ್ರಭುದೇವ ಮತ್ತೊಮ್ಮೆ ತಮ್ಮ ವಿವಾಹದ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ಈ ಹಿಂದೆಯೂ ಸಹ ತಮ್ಮ ಪ್ರೀತಿ-ಪ್ರೇಮದ ಸಂಬಂಧಗಳಿಂದಾಗಿ ಚರ್ಚೆಯಲ್ಲಿದ್ದರು. ಈ ಹಿಂದೆ ನಯನತಾರಾ ಜೊತೆ ಮೂರು ವರ್ಷಗಳ ಕಾಲ ಪ್ರೀತಿ-ಪೇಮ ಅಂತ ಸುತ್ತಾಡಿದ್ದ ಪ್ರಭುದೇವ ಇನ್ನೇನು ಹಸೆಮಣೆ ಏರಬೇಕಿತ್ತು. ಆದರೆ ಈ ಜೋಡಿಯ ನಡುವೆ ಮನಸ್ತಾಪವಾಗಿ ಇವರ ಮದುವೆ ನಿಂತು ಹೋಯಿತು. ಈಗ ಮತ್ತೊಮ್ಮೆ ಪ್ರಭುದೇವ ತಮ್ಮ ಎರಡನೇ ಮದುವೆಯ ವಿಷಯದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. 

  Prabhu Deva: ಎರಡನೇ ಮದುವೆಯಾಗಲಿದ್ದಾರಂತೆ ಪ್ರಭುದೇವ: ಡೇಟ್​ ಮಾಡುತ್ತಿರುವ ಹುಡುಗಿ ಇವರೇ ಅಂತೆ..!

  10. ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಒಂದೇ ಒಂದು ಕಪ್​ ಗೆದ್ದಿರಲಿಲ್ಲ. ಆದರೆ, ರೋಹಿತ್​ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಐದು ಬಾರಿ ಕಪ್​ ಗೆದ್ದಿದೆ. ಈ ವಿಚಾರದ ಕುರಿತಂತೆ ಮಾತನಾಡಿದ್ದ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​, ರೋಹಿತ್​ ಶರ್ಮಾ ಭಾರತ ಕ್ರಿಕೆಟ್​ ತಂಡದ ಟಿ20 ನಾಯಕನಾಗದೆ ಇರುವುದು ನಮ್ಮ ದುರಾದೃಷ್ಟ ಎಂದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗನೋರ್ವ ಉತ್ತರಿಸಿದ್ದು, ಆರ್​​ಸಿಬಿಯಂಥ ಟೀಂ ಇದ್ದಿದ್ದರೆ ರೋಹಿತ್​ ಕಪ್​ ಗೆಲ್ಲುತ್ತಿದ್ದರೇ ಎಂದು ಪ್ರಶ್ನೆ ಮಾಡಿದ್ದಾರೆ!

  ಕೊಹ್ಲಿ ತಪ್ಪಿಲ್ಲ, ಆರ್​​ಸಿಬಿಯಂಥ ಟೀಂ ಇದ್ದಿದ್ರೆ ರೋಹಿತ್​ಗೆ ದೇವ್ರಾಣೆ ಕಪ್​ ಗೆಲ್ಲೋಕೆ ಆಗ್ತಿರಲಿಲ್ಲ ಎಂದ ಮಾಜಿ​ ಕ್ರಿಕೆಟಿಗ
  Published by:G Hareeshkumar
  First published: