1.ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿನಿಧಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ತಡರಾತ್ರಿವರೆಗೂ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿದ್ದು ಬಿಕ್ಕಟ್ಟು ಮುಂದುವರೆದಿದೆ.
Farmers Protest - ಬಗೆಹರಿಯದ ರೈತರ ಬಿಕ್ಕಟ್ಟು; ಅಮಿತ್ ಶಾ ಮಾತುಕತೆ ವಿಫಲ; ಇಂದಿನ ಸಭೆ ಬಹಿಷ್ಕಾರ
2. ವಿಶ್ವದ ಶಕ್ತಿಶಾಲಿ ಪ್ರಭಾವಿ ಮಹಿಳೆಯ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಇನ್ನು ಈ ಪಟ್ಟಿಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೂಡ ಸ್ಥಾನ ಪಡೆದಿದೆ. ಇನ್ನು ಈ ಪಟ್ಟಿಯಲ್ಲಿ ಕಮಲಾ ಹ್ಯಾರಿಸ್, ಬಯೋಕಾನ್ ಸಂಸ್ಥಾಪಕ ಕಿರಣ್ ಮಂಜುಂದಾರ್ ಶಾ ಹಾಗೂ ಎಚ್ಸಿಎಲ್ ಎಂಟರ್ಪ್ರೈಸನ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ ಸೇರಿದಂತೆ 100 ವಿಶ್ವದ ಶಕ್ತಿಶಾಲಿ ಮಹಿಳೆಯರಲ್ಲಿ ಫೋರ್ಬ್ಸ್ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಪಟ್ಟಿ ಬಿಡುಗಡೆ: ವಿಶ್ವದ ನೂರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ನಿರ್ಮಲಾ ಸೀತಾರಾಮನ್
3.ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಮುಂದಾದರೆ, ಆ ಭಾಗದ ಯಾವುದೇ ಭೂಮಿಯನ್ನು ಸ್ವಾಧೀನಪಡಿಕೊಳ್ಳುವ ಸಂಫೂರ್ಣ ಅಧಿಕಾರ ಸರ್ಕಾರಕ್ಕೆ ಇದೆ ಎಂದು ವಿವಾದಾತ್ಮಕ ತೀರ್ಪು ನೀಡುವ ಮೂಲಕ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದೆ.
ರಾಷ್ಟ್ರೀಯ ಹೆದ್ದಾರಿಗಾಗಿ ಕೇಂದ್ರ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು: ಸುಪ್ರೀಂ ಆದೇಶ
4.ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೇಶದ ಹಲವೆಡೆ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಅದರಲ್ಲೂ ಪಂಜಾಬ್ ಮತ್ತು ಹರಿಯಾಣದ ರೈತರ ಪ್ರತಿಭಟನೆ ತಾರಕದಲ್ಲಿದೆ. ಇದೇ ಹೊತ್ತಲ್ಲೇ ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದೆ. ರಾಜಸ್ಥಾನದಲ್ಲಿ ವಿಪಕ್ಷವಾಗಿರುವ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನ ಗೆದ್ದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ನಿರಾಸೆಯಾಗಿದೆ.
Rajasthan Elections - ರೈತರ ಪ್ರತಿಭಟನೆ ಮಧ್ಯೆ ರಾಜಸ್ಥಾನ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿ ಗೆಲುವು
5. ವಿಧಾನಪರಿಷತ್ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಗೆ ಜೆಡಿಎಸ್ ನಿನ್ನೆ ಅಂಗೀಕಾರ ಮಾಡಿ ಅಚ್ಚರಿ ಹುಟ್ಟಿಸಿದೆ. ಆದರೆ, ಜೆಡಿಎಸ್ನ ಈ ನಡೆ ಆ ಪಕ್ಷದ ರಾಜ್ಯಾಧ್ಯಕ್ಷರಿಗೂ ಗೊತ್ತಿಲ್ಲದಂತೆ ಆಗಿದೆ. ವಿಧಾನಸೌಧದಲ್ಲಿ ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ನಿನ್ನೆ ಮೇಲ್ಮನೆಯಲ್ಲಿ ಏನು ನಡೆಯಿತು ಎಂಬುದು ತನಗೆ ಗೊತ್ತಿಲ್ಲ ಎಂದರು. ಭೂ ಸುಧಾರಣೆ ಕಾಯ್ದೆಯಲ್ಲಿ ದ್ವಂದ್ವ ನಿಲುವಿರುವುದನ್ನು ನಾನು ಒಪ್ಪುತ್ತೇನೆ. ನಾನು ಮೇಲ್ಮನೆ ಸದಸ್ಯನಲ್ಲವಾದ್ದರಿಂದ ಪರಿಷತ್ನಲ್ಲಿ ಏನಾಯಿತು ಎಂಬುದು ನನ್ನ ಗಮನಕ್ಕೆ ಬರಲಿಲ್ಲ ಎಂದು ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ಭೂ ಸುಧಾರಣೆ ಕಾಯ್ದೆ ಅಂಗೀಕಾರ ವಿಚಾರ: ಜೆಡಿಎಸ್ನಲ್ಲೇ ಗೊಂದಲ; ಪಕ್ಷದ ವೇದಿಕೆಯಲ್ಲಿ ನಡೆದಿಲ್ಲವಾ ಚರ್ಚೆ?
6. ಭೂ ಸುಧಾರಣಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾಕಷ್ಟು ಹೋರಾಟಗಳು ನಡೆಯುತ್ತಿರುವ ಬೆನ್ನಲ್ಲೇ ನೆನ್ನೆ ಮಸೂದೆ ಪರವಾಗಿ ವಿಧಾನ ಪರಿಷತ್ನಲ್ಲಿ ಜೆಡಿಎಸ್ ಸದಸ್ಯರು ಮತ ಚಲಾಯಿಸಿದ್ದರು. ಇದಕ್ಕೆ ರಾಜ್ಯವ್ಯಾಪಿ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು, ಜೆಡಿಎಸ್ ಈ ಮಣ್ಣಿಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ; ಎಚ್.ಡಿ.ಕುಮಾರಸ್ವಾಮಿ
7.ಮಧ್ಯರಾತ್ರಿ ಹೋಗಿ ನಾನು ಸಿಎಂ ಭೇಟಿ ಮಾಡುತ್ತಿದ್ದೆ ಎನ್ನುವ ಮಾತನ್ನ ಕುಮಾರಸ್ವಾಮಿ ಹೇಳಿದ್ದಾರೆ. ನೀಚ ರಾಜಕಾರಣದ ರಕ್ತ ಡಿ.ಕೆ ಶಿವಕುಮಾರ್ ನಲ್ಲಿ ಇಲ್ಲ. ನಾನು ಮಧ್ಯರಾತ್ರಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ತಮ್ಮ ವಿರುದ್ಧ ಪಿತೂರಿ ಮಾಡಿದ್ದರ ಬಗ್ಗೆ ದಾಖಲೆ ಇದ್ರೆ ಕುಮಾರಸ್ವಾಮಿ ಬಹಿರಂಗಪಡಿಸಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸವಾಲ್ ಹಾಕಿದ್ದಾರೆ.
ತಮ್ಮ ವಿರುದ್ಧ ಪಿತೂರಿ ಮಾಡಿದ ದಾಖಲೆಗಳಿದ್ರೆ ತೋರಿಸಲಿ- ರಾಜಕೀಯದಿಂದಲೇ ನಿವೃತ್ತಿ ಪಡಿಯುತ್ತೇನೆ: ಹೆಚ್ಡಿಕೆಗೆ ಡಿಕೆಶಿ ಸವಾಲು
8. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲ ಆಗಿದ್ದಾರೆ. ಇಂದು ಬಾರುಕೋಲು ಚಳುವಳಿ ನಡೆಸಲು ಮುಂದಾಗಿರುವ ಕೋಡಿಹಳ್ಳಿ, ಮಾಜಿ ಸಿಎಂ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಧ್ಯಾಹ್ನದವರೆಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿದ್ದ ಜೆಡಿಎಸ್, ಬಳಿಕ ತನ್ನ ನಿಲುವನ್ನು ಬದಲಿಸಿತ್ತು. ಹೀಗಾಗಿ ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಎಚ್ಡಿಕೆ ವಿರುದ್ಧ ಕಿಡಿಕಾರಿವೆ.
ಕುಮಾರಸ್ವಾಮಿ ಪುಟಗೋಸಿ ರಾಜಕಾರಣ ಮಾಡೋಕೆ ಇರೋದು; ಕೋಡಿಹಳ್ಳಿ ಚಂದ್ರಶೇಖರ್ ಕಿಡಿ
9.ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಕೇವಲ ಸಲಾರ್ ಸಿನಿಮಾದ್ದೇ ಸದ್ದು. ಕೆಜಿಎಫ್ ಸಿನಿಮಾವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಈ ಸಲಾರ್ ಚಿತ್ರಕ್ಕೂ ಹಣ ಹೂಡಿದೆ. ಈ ಸಿನಿಮಾವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
Prabhas: ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸುವ ಅವಕಾಶ ನಿಮ್ಮದಾಗಬಹುದು..!
10. 2002ರಲ್ಲಿ ವಿಶ್ವದ ಅತ್ಯಂತ ಕಿರಿಯ ಟೆಸ್ಟ್ ವಿಕೆಟ್ ಕೀಪರ್ ಎಂಬ ದಾಖಲೆಯೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಆರಂಭಿಸಿದ ಪಾರ್ಥಿವ್ ಪಟೇಲ್ 25 ಟೆಸ್ಟ್, 38 ಏಕದಿನ ಮತ್ತು ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿ ಇದೀಗ ನಿವೃತ್ತಿ ಘೋಷಿಸಿದ್ದಾರೆ.
Parthiv Patel Retirement –ಪಾರ್ಥಿವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ