Evening Digest: ದೇಶಾದ್ಯಂತ ಪ್ರತಿಭಟನೆಗಳ ಮಹಾಪೂರ, 50 ಸಾವಿರ ರೂ. ಗಡಿ ದಾಟಿದ ಚಿನ್ನದ ಬೆಲೆ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನ ವಿರೋಧಿಸಿ ‘ಭಾರತ್ ಬಂದ್’ ನಡೆಸುತ್ತಿರುವ ರೈತ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗಳ ಮಹಾಪೂರವನ್ನೇ ಹರಿಸಿವೆ. ದೇಶದ ಬಹುತೇಕ ಕಡೆ ರಸ್ತೆ ತಡೆ, ರೈಲ್ ರೋಕೋ ಇತ್ಯಾದಿ ಪ್ರತಿಭಟನೆಗಳು ನಡೆಸಲಾಗುತ್ತಿದೆ.

  Bharat Bandh – ಭಾರತ್ ಬಂದ್​ಗೆ ಬೆಂಬಲವಾಗಿ ದೇಶಾದ್ಯಂತ ಪ್ರತಿಭಟನೆಗಳ ಮಹಾಪೂರ; ರಸ್ತೆ ತಡೆ, ರೈಲು ತಡೆ, ಮುಷ್ಕರ

  2.ವಿಶ್ವದ ಅತಿಹೆಚ್ಚು ಪ್ರಮಾಣದ ವ್ಯಾಕ್ಸಿನ್ ತಯಾರಕ ಸಂಸ್ಥೆಯಾಗಿರುವ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ಇದೀಗ ಕೋವಿಡ್-19 ಲಸಿಕೆ ತಯಾರಿಕೆಗೆ ಸಜ್ಜಾಗಿದೆ. ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಸರಬರಾಜು ಗುತ್ತಿಗೆ ಪಡೆಯಲು ಎದುರು ನೋಡುತ್ತಿದೆ. ಕೇಂದ್ರದ ಅನುಮೋದನೆ ಸಿಕ್ಕಲ್ಲಿ ಸೆರಮ್ ಇನ್ಸ್​ಟಿಟ್ಯೂಟ್ ತನ್ನ ಕೋವಿಶೀಲ್ಡ್ ಲಸಿಕೆಯನ್ನು ಒಂದು ಡೋಸ್​ಗೆ 250 ರೂನಂತೆ ಸರ್ಕಾರಕ್ಕೆ ಮಾರಾಟ ಮಾಡುವ ಸಾಧ್ಯತೆ ಇದೆ.

  Covid-19 Vaccine - ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಬೆಲೆ 250 ರೂ ಸಾಧ್ಯತೆ

  3.ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಕೇಂದ್ರದ ಡಿಜಿಟಲ್ ಇಂಡಿಯಾ ಯೋಜನೆಯನ್ನು ಶ್ಲಾಘಿಸಿದ್ದಾರೆ. 2020ರ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅಂಬಾನಿ, ಕೋವಿಡ್ ಸಂಕಷ್ಟದಲ್ಲೂ ಆನ್​ಲೈನ್​ನಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಭಾರತದ ಪ್ರಬಲ ಡಿಜಿಟಲ್ ತಂತ್ರಜ್ಞಾನ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಹಾಗೆಯೇ, ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಜಿಯೋ 5ಜಿ ನೆಟ್​ವರ್ಕ್ ಅಳವಡಿಕೆಗೆ ಸಜ್ಜಾಗಿರುವುದನ್ನೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

  Mukesh Ambani - ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಜಿಯೋದಿಂದ 5ಜಿ: ಮುಕೇಶ್ ಅಂಬಾನಿ

  4.ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಖಾಸಗೀಕರಣದ ಪರವಾಗಿತ್ತು. ಖಾಸಗಿಯವರ ಪರವಾಗಿ ಅವರು ಇದೇ ಕೃಷಿ ಕಾನೂನನ್ನು ರೂಪಿಸಿದ್ದರು. ಈ ಹಿಂದೆ ಕಾಂಗ್ರೆಸ್​ ರೂಪಿಸಿದ್ದ ಅದೇ ಕೃಷಿ ಕಾನೂನನ್ನು ಇಂದು ನಾವು ಜಾರಿಗೆ ತರುತ್ತಿದ್ದೇವೆ. ಆದರೆ, ಕಾಂಗ್ರೆಸ್​ ಸೇರಿದಂತೆ ಇತರೆ ವಿರೋಧ ಪಕ್ಷಗಳು ಈ ಕಾನೂನನ್ನು ವಿರೋಧಿಸುತ್ತಿರುವುದೇಕೆ? ಇದು ಇಬ್ಬಂದಿನವಲ್ಲವೇ? ಎಂದು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಪ್ರಶ್ನಿಸಿದ್ದಾರೆ.

  ಈ ಹಿಂದೆ ಕಾಂಗ್ರೆಸ್​ ತರಲು ಬಯಸಿದ್ಧಅದೇ ಕೃಷಿ ಮಸೂದೆಯನ್ನು ಇಂದು ವಿರೋಧಿಸುತ್ತಿರುವುದೇಕೆ?; ಸಚಿವ ರವಿಶಂಕರ್ ಪ್ರಶ್ನೆ

  5. ಇಂದು ದೇಶಾದ್ಯಂತ ಭಾರತ್​ ಬಂದ್​ಗೆ ಕರೆ ನೀಡಿದ್ದು, ರೈತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್​ ನಾಯಕರು ಕೂಡ ಭಾರತ್​ ಬಂದ್​ಗೆ ಬೆಂಬಲ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್​ ನಾಯಕರು ರೈತ ಮಸೂದೆ ಕಾಯ್ದೆ ವಿರೋಧಿಸಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

  Bharath Bandh: ಸೆಕ್ಷನ್ 144​​ ನಡುವೆಯೂ ವಿಧಾನಸೌಧದ ಬಳಿ ಕಪ್ಪು ಬಾವುಟ ಹಿಡಿದು ಕಾಂಗ್ರೆಸ್​ ನಾಯಕರ ಪ್ರತಿಭಟನೆ

  6. ಒಂದು ವಾರದ ಹಿಂದೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಭಾರೀ ಏರಿಕೆಯಾಗಿದೆ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಇಂದು ಯಾವ ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕಳೆದ ವಾರಕ್ಕಿಂತ ಈ ವಾರ ಚಿನ್ನದ ಬೆಲೆ 2,000 ಸಾವಿರ ರೂ. ಹೆಚ್ಚಾಗಿದೆ. ಕಳೆದ ವಾರ 24 ಕ್ಯಾರೆಟ್​ನ 10 ಗ್ರಾಂ. ಚಿನ್ನಕ್ಕೆ 47,920 ಇತ್ತು. ಇದೀಗ 24 ಕ್ಯಾರೆಟ್ ಚಿನ್ನದ ಬೆಲೆ 49,330 ರೂ. ಆಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 50,830 ರೂ. ಆಗಿದೆ.

  Gold Rate: 50 ಸಾವಿರ ರೂ. ಗಡಿ ದಾಟಿದ ಚಿನ್ನದ ಬೆಲೆ; ಗಗನಕ್ಕೇರಿದ ಬೆಳ್ಳಿ ದರ; ಇಂದಿನ ಚಿನ್ನದ ದರ ಹೀಗಿದೆ

  7. ಬುರೇವಿ ಚಂಡಮಾರುತದ ಪರಿಣಾಮ ಕೊಡಗಿನ ಕೆಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ವಿರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದಲ್ಲಿ ಅರ್ಧ ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು ಬಿಟ್ಟು ಬಿಟ್ಟು ತುಂತುರು ಮಳೆ ಬೀಳುತಿತ್ತು. ಆದರೆ ಇಂದು ವಿರಾಜಪೇಟೆ ತಾಲೂಕಿನ ಅಲ್ಲಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ.

  Cyclone Burevi: ಬುರೇವಿ ಚಂಡಮಾರುತದ ಎಫೆಕ್ಟ್​​ : ಕೊಡಗಿನಾದ್ಯಂತ ಮೋಡಕವಿದ ವಾತಾವರಣ ಅಲ್ಲಲ್ಲಿ ಧಾರಾಕಾರ ಮಳೆ

  8. ನಿನಗೆ ಏನು ಬೇಕು ಹೇಳು, ಎಲ್ಲಾ ಕೆಲಸ ಮಾಡಿಕೊಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಹೇಳಿದ್ದಾರೆ.  ಕ್ಷೇತ್ರದ ಕಾಮಗಾರಿಗಳ ಬಗ್ಗೆ ಸಿಎಂ ಬಿಎಸ್​ವೈಗೆ ರೇವಣ್ಣ ಅವರು ಮನವಿ ಮಾಡಿದ ಬೆನ್ನಲ್ಲೇ ಸಿಎಂ ಈ ಅಭಯ ನೀಡಿದ್ದಾರೆ.

  ನಿನಗೆ ಏನು ಬೇಕು ಹೇಳು, ಎಲ್ಲಾ ಮಾಡಿಕೊಡುತ್ತೇನೆ; ಮಾಜಿ ಸಚಿವ ಎಚ್.ಡಿ.ರೇವಣ್ಣ‌ಗೆ ಸಿಎಂ ಬಿಎಸ್​ವೈ ಅಭಯ

  9. ಸ್ಯಾಂಡಲ್​ವುಡ್​ನ ಹಿರಿಯ ನಟಿ ಪ್ರಮೀಳಾ ಜೋಷಾಯ್​ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಈಗ ಅವರ ಪತಿ ಸುಂದರ್ ರಾಜ್​ ಅವರೂ ಸಹ ಆಸ್ಪತ್ರೆಗೆ ಸೇರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಘನಾ ರಾಜ್​ ಪತಿ ಚಿರು ಅಗಲಿದಾಗಿನಿಂದ ಅಪ್ಪ-ಅಮ್ಮನೊಂದಿಗೆ ಇದ್ದಾರೆ. ಕಳೆದ ತಿಂಗಳು ಮಗನ ತೊಟ್ಟಿಲು ಶಾಸ್ತ್ರವನ್ನು ಸರಳವಾಗಿ ಕುಟುಂಬದೊಂದಿಗೆ ಸಂಭ್ರಮಿಸಿದ್ದರು.

  Meghana Raj: ಮಗು ಸೇರಿದಂತೆ ಮೇಘನಾ ರಾಜ್​ ಮನೆಯಲ್ಲಿ ಎಲ್ಲರಿಗೂ ಕೊರೋನಾ ಪಾಸಿಟಿವ್​..!

  10. ಅಚ್ಚರಿ ಎಂದರೆ, ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ವಿಂಡೀಸ್ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಇಬ್ಬರ ವೇತನ ಸಮವಾಗಿದೆ. ಶ್ರೀಲಂಕಾ ಕ್ರಿಕೆಟ್ ಆಯೋಜನೆ ಮಾಡಿರುವ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯು ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ತಿಸಾರ ಪೆರೇರಾ ನಾಯಕತ್ವದ ಜಾಫ್ನಾ ಸ್ಟಾಲಿಯನ್ಸ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ.

  LPL 2020 : ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಇರ್ಫಾನ್ ಪಠಾಣ್ ಸಂಭಾವನೆ ಎಷ್ಟು ಗೊತ್ತೇ?
  Published by:G Hareeshkumar
  First published: