Evening Digest: ಆರ್​ಬಿಐನ ರೆಪೋ ದರ ಯಥಾಸ್ಥಿತಿ, ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಈ ವರ್ಷ ಭಾರತದ ಜಿಡಿಪಿ ಮೈನಸ್ 9.5 ಪ್ರತಿಶತ ಇರಬಹುದು ಎಂದು ಹೇಳಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮತ್ತೊಮ್ಮೆ ತನ್ನ ಅಂದಾಜನ್ನು ಪರಿಷ್ಕರಿಸಿದೆ. ಜಿಡಿಪಿ ಬೆಳವಣಿಗೆ -7.5 ಪ್ರತಿಶತಕ್ಕೆ ಬಂದು ನಿಲ್ಲಬಹುದು ಎಂದು ಆರ್​ಬಿಐ ಹೇಳಿದೆ. ಅಂದರೆ, ಭಾರತದ ಆರ್ಥಿಕ ಕುಸಿತ ಶೇ. 7.5ಕ್ಕೆ ಮಾತ್ರ ಸೀಮಿತವಾಗಬಹುದು. ಇದರೊಂದಿಗೆ ಭಾರತದ ಆರ್ಥಿಕತೆ ಆಶಾದಾಯಕ ಸ್ಥಿತಿಗೆ ಮರಳುವ ಸೂಚನೆಯನ್ನು ಆರ್​ಬಿಐ ಗ್ರಹಿಸಿದೆ.

  RBI Monetary Policy – ಆರ್​ಬಿಐನ ರೆಪೋ ದರ ಯಥಾಸ್ಥಿತಿ; ಜಿಡಿಪಿ ಗುರಿ ಏರಿಕೆ; ಗರಿಗೆದರಿದ ಸೆನ್ಸೆಕ್ಸ್

  2. ದೇಶದಲ್ಲಿ ಕೋವಿಡ್​ ಬಿಕ್ಕಟ್ಟು ಹೆಚ್ಚುತ್ತಿರುವ ಕೈಗೊಳ್ಳಬೇಕಾದ ಕ್ರಮ ಹಾಗೂ ಲಸಿಕೆ ವಿತರಣೆ ಕುರಿತು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಯಿತು. ಸಭೆಯ ನಂತರ ಮಾತನಾಡಿದ ಅವರು, ಕೋವಿಡ್​ 19 ಲಸಿಕೆಯನ್ನು ಮೊದಲು ಆರೋಗ್ಯ ಸೇವೆ ನಿರ್ವಹಿಸುವ ಕೊರೋನಾ ವಾರಿಯರ್ಸ್​ಗೆ ನೀಡಲಾಗುವುದು. ಕೆಲವೇ ವಾರಗಳಲ್ಲಿ ಭಾರತದಲ್ಲಿ ಕೊರೋನಾ ವೈರಸ್​ ಲಸಿಕೆ ಸಿದ್ದವಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  Coronavirus: ಮುಂದಿನ ಕೆಲವಾರಗಳಲ್ಲೇ ಕೋವಿಡ್​-19 ಲಸಿಕೆ ಸಿದ್ಧ; ಪ್ರಧಾನಿ ಮೋದಿ

  3. ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಕ್ರೂರಿ ಕೊರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೆ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಿದೆ.

  Petrol Diesel Price: ಮತ್ತೆ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಏರಿಕೆ; ವಿವಿಧ ನಗರಗಳಲ್ಲಿ ಇಂದಿನ ದರವೆಷ್ಟು ಗೊತ್ತೇ?

  4. ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ನಾಲ್ಕನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದ್ದು, ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಿಂದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ.

  ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ; ನಾಳೆ ಕೇಂದ್ರ ಸರ್ಕಾರದ ಜೊತೆ 5ನೇ ಸುತ್ತಿನ ಮಾತುಕತೆ

  5. ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಪಂಜಾಬ್ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿದ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಇಂದು ಶುಕ್ರವಾರ ದೆಹಲಿಯಲ್ಲಿರುವ ಕೆನಡಾ ರಾಯಭಾರಿಯನ್ನ ಕರೆಸಿ ಎಚ್ಚರಿಕೆಯನ್ನೂ ನೀಡಿದೆ. ಪ್ರಧಾನಿ ನೀಡಿದಂಥ ಹೇಳಿಕೆಯಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಇನ್ಮುಂದೆ ಇಂಥದಕ್ಕೆ ಆಸ್ಪದ ಕೊಡಬೇಡಿ ಎಂದು ಕೆನಡಾ ರಾಯಭಾರಿಗೆ ಸರ್ಕಾರ ಸೂಚಿಸಿದೆ.

  ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆ, ಕೆನಡಾ ರಾಯಭಾರಿ ಕರೆಸಿ ಎಚ್ಚರಿಕೆ ನೀಡಿದ ಭಾರತ ಸರ್ಕಾರ

  6.ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಡಿ.5ರಂದು ಅಂದರೆ ನಾಳೆ (ಶನಿವಾರ) (Karnataka Bandh) ಕರ್ನಾಟಕ ಬಂದ್​ಗೆ ಕರೆ ಕೊಟ್ಟಿವೆ. ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಈ ಬಂದ್ ನಡೆಯಲಿದೆ. ರಾಜ್ಯ ಸರ್ಕಾರದ ವಿರುದ್ಧ ಸಮರಕ್ಕೆ ಇಳಿದಿರುವ ಕನ್ನಡಪರ ಸಂಘಟನೆಗಳ ನಾಳಿನ ಬಂದ್​ನ್ನು ಯಶಸ್ವಿಗೊಳಿಸಲು ಹರಸಾಹಸ ಪಡುತ್ತಿವೆ.

  Karnataka Bandh: ಶನಿವಾರ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

  7. ಲೂಟಿ ಮಾಡುವುದಕ್ಕಾಗಿ ಹಾಸನದ ಭೂ ಸ್ವಾಧೀನಾಧಿಕಾರಿ ಇಲಾಖೆಗೆ ಒಬ್ಬ ಭ್ರಷ್ಟ ಅಧಿಕಾರಿಯನ್ನು ನೇಮಿಸಲಾಗಿದೆ. ಆ ಅಧಿಕಾರಿ ದಾಖಲೆಗಳನ್ನು ತಿದ್ದುವುದರಲ್ಲಿ ಪರಿಣಿತನಾಗಿದ್ದಾನೆ. ಮತ್ತು ದಾಖಲೆ ನಾಶ ಮಾಡುವುದರಲ್ಲೂ ನಿಪುಣನಾಗಿದ್ದಾನೆ ಎಂದು ರೇವಣ್ಣ ಗಂಭೀರ ಆರೋಪ ಮಾಡಿದರು.

  ಹಾಸನಕ್ಕೆ ಕಳ್ಳ, ಭ್ರಷ್ಟ ಭೂ ಸ್ವಾಧೀನಾಧಿಕಾರಿ ನೇಮಿಸಿದ್ದಾರೆ; ಸರ್ಕಾರದ ವಿರುದ್ದ ಎಚ್.ಡಿ. ರೇವಣ್ಣ ಕಿಡಿ

  8.ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಎರಡನೇ ಅಲೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬಹುದು ಎಂಬುದು ಅವಲೋಕಿಸಿ ತಾಂತ್ರಿಕ ಸಲಹಾ ಸಮಿತಿ ತನ್ನ ವರದಿ ನೀಡಿದೆ. ಮುಂದಿನ 45 ದಿನಗಳು ನಿರ್ಣಾಯಕ ಹಂತವಾಗಿದ್ದು ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

  ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಎದುರಿಸಲು ವಿವಿಧ ಕ್ರಮಗಳಿಗೆ ತಜ್ಞರ ಸಮಿತಿ ಶಿಫಾರಸು

  9.ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಫಿಟ್ನೆಸ್​ ಫ್ರೀಕ್​ ಅನ್ನೋದು ಗೊತ್ತೇ ಇದೆ. ಅವರ ಹಳೇ ವರ್ಕೌಟ್​ ವಿಡಿಯೋ ನೋಡಿದರೆ ಸಾಕು ಅದು ಅರ್ಥವಾಗುತ್ತದೆ. ಲಾಕ್​ಡೌನ್​ನಲ್ಲಿ ಮನೆಯಲ್ಲಿದ್ದಾಗಲೂ ರಶ್ಮಿಕಾ ವ್ಯಾಯಾಮ ಮಾಡುತ್ತಾ ಬೆವರಿಳಿಸುತ್ತಿದ್ದರು. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುವ ನಟಿ,  ತಮ್ಮ ಫಿಟ್ನೆಸ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  Rashmika Mandanna: ನನ್ನನ್ನು ನೋಡಿ ಸ್ವಲ್ಪ ಕಲಿಯಿರಿ ಎಂದಿದ್ದೇಕೆ ರಶ್ಮಿಕಾ ಮಂದಣ್ಣ..?

  10. ಇಲ್ಲಿನ ಮನುಕಾ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ ಕಲೆಹಾಕಿದೆ. ಕೆ. ಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕ ಹಾಗೂ ಜಡೇಜಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್​ಗಳಲ್ಲಿ 161 ರನ್ ಬಾರಿಸಿದೆ. ಕೊಹ್ಲಿ ಪಡೆ ಏಕದಿನ ಸರಣಿ ಕಳೆದಕೊಂಡ ನೋವಿನಲ್ಲಿ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಇತ್ತ ಫಿಂಚ್ ಪಡೆ ಮತ್ತೊಂದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

  India vs Australia 1st T20 Live: 162 ಟಾರ್ಗೆಟ್: ಆಸ್ಟ್ರೇಲಿಯಾ ಮೊದಲ ವಿಕೆಟ್ ಪತನ
  Published by:G Hareeshkumar
  First published: