HOME » NEWS » National-international » EVENING DIGEST DECEMBER 3RD TOP 10 KANNADA POLITICAL SPORTS AND OTHER NEWS ARE HE HK

Evening Digest: ರಜನಿಕಾಂತ್ ರಾಜಕೀಯ ಪ್ರವೇಶ ಖಚಿತ, ಚಂದ್ರನ ಮೇಲೆ ಅಡಿ ಇಟ್ಟ ಚೀನಾದ ಚುಂಗು

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

news18-kannada
Updated:December 3, 2020, 5:23 PM IST
Evening Digest: ರಜನಿಕಾಂತ್ ರಾಜಕೀಯ ಪ್ರವೇಶ ಖಚಿತ, ಚಂದ್ರನ ಮೇಲೆ ಅಡಿ ಇಟ್ಟ ಚೀನಾದ ಚುಂಗು
ಸಾಂದರ್ಭಿಕ ಚಿತ್ರ
  • Share this:
1.ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪಂಜಾಬ್​ನ ಮಾಜಿ ಮುಖ್ಯಮಂತ್ರಿ, ಪ್ರಕಾಶ್​ ಸಿಂಗ್​ ಬಾದಲ್​ ತಮ್ಮ ಪದ್ಮವಿಭೂಣ ಪ್ರಶಸ್ತಿಯನ್ನು ಕೇಂದ್ರಕ್ಕೆ ಮರಳಿಸಿದ್ದಾರೆ. ಕೃಷಿ ಮಸೂದೆ ವಿರೋಧಿಸಿ ಎನ್​ಡಿಎ ಒಕ್ಕೂಟ ತೊರೆದಿರುವ ಶಿರೋಮಣಿ ಅಕಾಲಿದಳದ ನಾಯಕ, ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಪದ್ಮವಿಭೂಷಣ ಹಿಂದಿರುಗಿಸಿದ ಮಾಜಿ ಸಿಎಂ ಪ್ರಕಾಶ್​ ಸಿಂಗ್​ ಬಾದಲ್​; ಪಂಜಾಬ್​ನ 30 ಕ್ರೀಡಾಪಟುಗಳಿಂದ ಕೇಂದ್ರಕ್ಕೆ ಪ್ರಶಸ್ತಿ ವಾಪಸ್

2. ಸೂಪರ್ ಸ್ಟಾರ್​ ರಜನಿಕಾಂತ್ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಈ ಪ್ರಶ್ನೆ ಬಹಳ ಸಮಯದಿಂದ ಕೇಳಿಬರುತ್ತಲೇ ಇದೆ. ಅವರ ಅನಾರೋಗ್ಯದ ಬಳಿಕ ಈ ಕುರಿತು ಚರ್ಚೆಗಳು ಕಡಿಮೆಯಾಗಿದ್ದವು. ಕೊನೆಗೂ ಈ ಎಲ್ಲ ಚರ್ಚೆಗಳಿಗೆ ತೆರೆ ಬಿದ್ದಿದ್ದು, 2021ರ ಜನವರಿಯಲ್ಲಿ ರಜನಿಕಾಂತ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ.

Rajinikanth: ರಜನಿಕಾಂತ್ ರಾಜಕೀಯ ಪ್ರವೇಶ ಖಚಿತ​; 2021ರ ಜನವರಿಯಲ್ಲಿ ಪಕ್ಷ ಆರಂಭ

3.ಬಾಹ್ಯಾಕಾಶ ಯೋಜನೆಗಳಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಲೇ ಇರುವ ಚೀನಾ ಈಗ ಮತ್ತೊಂದು ಮೈಲಿಗಲ್ಲಿನ ಸಮೀಪದಲ್ಲಿದೆ. ಚೀನಾದ ಚಂದ್ರ ಯೋಜನೆ ಚುಂಗು-5 (Chang’e-5) ಚಂದ್ರನ ನೆಲದ ಮೇಲೆ ಯಶಸ್ವಿಯಾಗಿ ಇಳಿದಿದೆ. ಇನ್ನೂ ಕೆಲ ದಿನಗಳ ಕಾಲ ಚಂದ್ರನ ಅಂಗಳವನ್ನು ಜಾಲಾಡಿ ಚುಂಗು ಭೂಮಿಗೆ ವಾಪಸ್ ಬರಲಿದೆ.

ಚಂದ್ರನ ಮೇಲೆ ಅಡಿ ಇಟ್ಟ ಚೀನಾದ ಚುಂಗು-5; ಚಂದ್ರನಲ್ಲಿ ನೆಲೆ ಸ್ಥಾಪಿಸುವ ಡ್ರ್ಯಾಗನ್ ದೇಶದ ಹೆಗ್ಗುರಿ

4.ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಕ್ರೂರಿ ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವಾರದಂತೆ ಈ ವಾರದಲ್ಲೂ 5ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಿದೆ.Petrol Diesel Price Today: 1 ವಾರದಲ್ಲಿ‌ 5ನೇ ಬಾರಿಗೆ ಪೆಟ್ರೋಲ್ - ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರ್ಕಾರ

5.ದೇಶದಲ್ಲಿ ಮಾರಾಟವಾಗುತ್ತಿರುವ ಜೇನುತುಪ್ಪದಲ್ಲಿ ಸಕ್ಕರೆಯ ಕಲಬೆರಕೆ ಆಗಿರುವ ಬಗ್ಗೆ ಪರಿಸರ ಸಂಸ್ಥೆ ಸಿಎಸ್​ಇ ನಿನ್ನೆ ವರದಿ ಮಾಡಿತ್ತು. ಅದರಂತೆ ಬಹುತೇಕ ಟಾಪ್ ಬ್ರಾಂಡ್​ಗಳು ಇಂಥ ಕಲಬೆರಕೆ ಜೇನುತುಪ್ಪ ತಯಾರಿಸುತ್ತಿರುವ ಬಗ್ಗೆ ಬೆಳಕು ಚೆಲ್ಲಿದ ಈ ವರದಿಯ ಸತ್ಯಾಸತ್ಯತೆ ಬಗ್ಗೆ ಡಾಬರ್, ಪತಂಜಲಿ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಕಲಬೆರಕೆ ಜೇನುತುಪ್ಪದ ಬಗ್ಗೆ ಸಿಎಸ್ಇ ವರದಿ: ಪತಂಜಲಿ, ಡಾಬರ್ ಸಂಸ್ಥೆಗಳಿಂದ ಆಕ್ಷೇಪ

6.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಿವಾರ್ ಚಂಡಮಾರುತ ದಕ್ಷಿಣ ಭಾರತವನ್ನು ಅಪ್ಪಳಿಸಿತ್ತು. ಇದೀಗ ಇಂದಿನಿಂದ ಬುರೇವಿ ಚಂಡಮಾರುತದ ಅಬ್ಬರ ಶುರುವಾಗಲಿದೆ. ಇಂದಿನಿಂದ ಕೇರಳಕ್ಕೆ ಬುರೇವಿ ಚಂಡಮಾರುತದ ಆಗಮನವಾಗಲಿದೆ. ಇದರ ಪರಿಣಾಮವಾಗಿ ಕೇರಳದ ನೆರೆಯ ರಾಜ್ಯಗಳಾದ ತಮಿಳುನಾಡು ಕರ್ನಾಟಕದಲ್ಲಿ ಕೂಡ ನಾಲ್ಕೈದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Karnataka Weather: ಬುರೇವಿ ಚಂಡಮಾರುತದ ಎಫೆಕ್ಟ್​; ಕರ್ನಾಟಕದ ಈ ಭಾಗಗಳಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಳ

7.ಭಕ್ತ ಶ್ರೇಷ್ಟ ಕನಕದಾಸರ ಜಯಂತಿಯಂದೇ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ನಾಮ ಫಲಕ ಅಳವಡಿಕೆಯಾಗಿದೆ. ಕೃಷ್ಣಮಠದ ಮುಂದಿನ ಮುಖ್ಯದ್ವಾರದಲ್ಲಿ ವಿಶ್ವಗುರು ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಕೃಷ್ಣಮಠ ಎಂದು ಮರದ ನಾಮಫಲಕ ಹಾಕಲಾಗಿದೆ. ಕನ್ನಡಿಗರ ಆಕ್ರೋಶಕ್ಕೆ ಮಣಿದ ಮಠ ಕನ್ನಡ ನಾಮಫಲಕವನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ.

ಕನಕದಾಸ ಜಯಂತಿಯಂದೇ ಕೃಷ್ಣ ಮಠದ ಗೋಪುರವೇರಿದ ಕನ್ನಡ ನಾಮಫಲಕ

8.ದಾಸ ಶ್ರೇಷ್ಠ, ದಾರ್ಶನಿಕ ಕನಕದಾಸರ ಜಯಂತಿ ಆಚರಣೆಯನ್ನು ಸರ್ಕಾರ ಇಂದು ನಡೆಸಿತು. ಶಾಸಕರ ಭವನದಲ್ಲಿರುವ ಕನಕದಾಸರ ಪುತ್ಥಳಿಗೆ ಸಿಎಂ ಪುಷ್ಪಾರ್ಚಣೆ ಮಾಡಿ ವಂದಿಸಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಬೈರತಿ ಬಸವರಾಜ, ಮಾಜಿ ಸಚಿವ ಎಚ್.ಎಂ. ರೇವಣ್ಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕನಕದಾಸರಿಗೆ ನಮನ ಸಲ್ಲಿಸಿದರು.

Kanakadasa Jayanti 2020 – ಸರ್ಕಾರದಿಂದ ಕನಕದಾಸ ಜಯಂತಿ ಆಚರಣೆ: ದಾಸ ಶ್ರೇಷ್ಠರ ಬದುಕೇ ಆದರ್ಶ ಎಂದ ಸಿಎಂ

9.ಕನ್ನಡದಲ್ಲಿ ಪ್ಯಾನ್​ ಇಂಡಿಯಾ ಸಿನಿಮಾಗಳು ನಿರ್ಮಾಣಗೊಂಡು ಹಿಟ್​ ಆದರೆ ಐಆರಿಗೆ ತಾನೇ ಖುಷಿ ಆಗುವುದಿಲ್ಲ ಹೇಳಿ. ಹೊಂಬಾಳೆ ಫಿಲಂಸ್​ ಕೆಜಿಎಫ್​ ಸಿನಿಮಾವನ್ನು ನಿರ್ಮಿಸಿದಾಗ ಕನ್ನಡಿಗರು ಅಪ್ಪಿ ಮುದ್ದಾಡಿದ್ದರು. ಪ್ರಶಾಂತ್​ ನೀಲ್​ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈಗ ಇದೇ ಹೊಂಬಾಳೆ ಫಿಲಂಸ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾ ಸಲಾರ್​ಗೆ ಟಾಲಿವುಡ್​ ನಟ ಪ್ರಭಾಸ್​ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

Jaggesh: ಕನ್ನಡಕ್ಕೆ ಚಟ್ಟ ತಯಾರು ಎಂದ ಜಗ್ಗೇಶ್; ಸಲಾರ್ ಚಿತ್ರಕ್ಕೆ ಪ್ರಭಾಸ್ ಆಯ್ಕೆಯಾಗಿದ್ದಕ್ಕೆ ಬೇಸರವೇ?

10. ರಂಗು ರಂಗೀನ್ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್​ ಮುಕ್ತಾಯದ ಬೆನ್ನಲ್ಲೇ 14ನೇ ಸೀಸನ್ ಐಪಿಎಲ್ ಆರಂಭಿಕ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಮುಂದಿನ ಹರಾಜಿಗೆ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ. ಅದರಂತೆ ಡಿಸೆಂಬರ್ ಅಥವಾ ಜನವರಿಯಲ್ಲಿ ಮೆಗಾ ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದ್ದು, ಬಹುತೇಕ ತಂಡಗಳು ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ.

IPL 2021: 2 ಟೀಮ್​ಗಳ ಸೇರ್ಪಡೆ: ಐಪಿಎಲ್ ಅಂಗಳದಲ್ಲಿ 10 ತಂಡಗಳ ನಡುವೆ ಚುಟುಕು ಕದನ..?
Published by: G Hareeshkumar
First published: December 3, 2020, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories