HOME » NEWS » National-international » EVENING DIGEST DECEMBER 31TH TOP 10 KANNADA POLITICAL SPORTS AND OTHER NEWS ARE HE HK

Evening Digest: ಕೃಷಿ ಮಸೂದೆ ವಿರುದ್ಧ ನಿರ್ಣಯ ಮಂಡಿಸಿದ ಕೇರಳ ಸರ್ಕಾರ, ಜ. 1ರಿಂದ ಜಿಯೋದಿಂದ ಉಚಿತ ಕರೆ ಸೌಲಭ್ಯ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

news18-kannada
Updated:December 31, 2020, 4:59 PM IST
Evening Digest: ಕೃಷಿ ಮಸೂದೆ ವಿರುದ್ಧ ನಿರ್ಣಯ ಮಂಡಿಸಿದ ಕೇರಳ ಸರ್ಕಾರ, ಜ. 1ರಿಂದ ಜಿಯೋದಿಂದ ಉಚಿತ ಕರೆ ಸೌಲಭ್ಯ
ಸಾಂದರ್ಭಿಕ ಚಿತ್ರ
  • Share this:
1. ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳ ವಿರುದ್ಧ ದೇಶದ ರೈತರು ಕಳೆದ 35 ದಿನಗಳಿಂದ ದೆಹಲಿ ಹೊರ ವಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ರೈತ ಹೋರಾಟಕ್ಕೆ ದಿನದಿಂದ ದಿನಕ್ಕೆ ರಾಷ್ಟ್ರವ್ಯಾಪಿ ಬೆಂಬಲ ಹೆಚ್ಚಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ಮಸೂದೆಗಳ ವಿರುದ್ಧ ದೆಹಲಿ ಮತ್ತು ಪಂಜಾಬ್ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿರುವ ಬೆನ್ನಿಗೆ ಕೇರಳ ಸರ್ಕಾರವೂ ಸಹ ಇಂದು ನಿರ್ಣಯ ಮಂಡಿಸಿದೆ.

ಕೇಂದ್ರದ ಕೃಷಿ ಮಸೂದೆ ವಿರುದ್ಧ ನಿರ್ಣಯ ಮಂಡಿಸಿದ ಕೇರಳ ಸರ್ಕಾರ; ಬಿಜೆಪಿ ಏಕೈಕ ಶಾಸಕನೂ ಬೆಂಬಲ!

2. ಸಿರಿಯಾದಲ್ಲಿ ಸೈನಿಕರಿದ್ದ ಬಸ್​ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿರುವ ಘಟನೆ ಬುಧವಾರ ನಡೆದಿದೆ. ಈ ದುರಂತದಲ್ಲಿ 37 ಸೈನಿಕರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. Syriaದಲ್ಲಿ ನಡೆದ ಉಗ್ರ ದಾಳಿಗಳಲ್ಲಿ ಅತ್ಯಂತ ಭಯಾನಕ ದಾಳಿಗಳಲ್ಲಿ ಇದೂ ಒಂದಾಗಿದೆ ಎನ್ನಲಾಗಿದೆ. ಹೆದ್ದಾರಿಯಲ್ಲಿ ಸೈನಿಕರನ್ನು ಹೊತ್ತು ಸಾಗುತ್ತಿದ್ದ ಬಸ್​ನ ಮೇಲೆ ನಿನ್ನೆ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ.

Syria: ಸಿರಿಯಾದಲ್ಲಿ ಸೇನಾ ಬಸ್​ ಮೇಲೆ ಉಗ್ರರಿಂದ ಬಾಂಬ್ ದಾಳಿ; 37 ಸೈನಿಕರು ಸಾವು

3. ಉದ್ರಿಕ್ತರ ಗುಂಪೊಂದು ಹಿಂದೂ ದೇವಾಲಯವೊಂದನ್ನು ಧ್ವಂಸ ಮಾಡಿರುವ ಘಟನೆ ಪಾಕಿಸ್ತಾನದ ಖೈಬರ್​ ಫಂಖ್ತುಕ್ವಾ ಪ್ರಾಂತ್ಯದಲ್ಲಿ ನಡೆದಿದೆ. ಕರಕ್ ಜಿಲ್ಲೆಯ ತೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೆಲವು ಸ್ಥಳೀಯ ಧರ್ಮಗುರುಗಳ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚಿನ ಜನರು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದಾರೆ.

ಉದ್ರಿಕ್ತರ ಗುಂಪಿನಿಂದ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ ಆರೋಪ

4. ರೈತರ ಪ್ರತಿಭಟನೆ ವೇಳೆ ಮೊನ್ನೆ ಕೆಲ ದುಷ್ಕರ್ಮಿಗಳು ಬರೋಬ್ಬರಿ 1,500 ಟೆಲಿಕಾಂ ಟವರ್​ಗಳನ್ನ ಧ್ವಂಸ ಮಾಡಿದ್ದರು. ಇದು ರೈತರ ಆಕ್ರೋಶದ ಸ್ಯಾಂಪಲ್ ಅಷ್ಟೇ ಎಂದು ಮೇಲ್ನೋಟಕ್ಕೆ ತೋರಬಹುದು. ಆದರೆ, ಘಟನೆ ಹಿಂದೆ ದೊಡ್ಡ ಚಿತಾವಣೆ ಇರುವುದರ ಸುಳಿವು ಸಿಗಬೇಕೆಂದರೆ ನೀವು ತುಸು ಆಳಕ್ಕೆ ಹೋಗಬೇಕಾಗುತ್ತದೆ. ತುಸು ನೇರವಾಗಿ ಹೇಳಬೇಕೆಂದರೆ ಚೀನಾದ 5ಜಿ ಸಾಮ್ರಾಜ್ಯ ಸ್ಥಾಪನೆಯ ಹಪಾಹಪಿಯ ಒಂದು ಸಣ್ಣ ಭಾಗವಾಗಿ ಆ ಘಟನೆ ಕಾಣುತ್ತದೆ.Opinion - ರೈತರ ಪ್ರತಿಭಟನೆ ವೇಳೆ ಟೆಲಿಕಾಂ ಟವರ್ ಧ್ವಂಸ: ಘಟನೆ ಹಿಂದಿದೆಯಾ ಚೀನಾ 5ಜಿ ಕುತಂತ್ರ?

5. ಡಾಟಾ ಪ್ಯಾಕ್ ಹಾಕಿಕೊಂಡು ಇಂಟರ್ನೆಟ್ ಮೂಲಕ ನಾವು ಉಚಿತವಾಗಿ ಧ್ವನಿ ಕರೆ ಮಾಡಬಹುದು. ಇಂಟರ್ನೆಟ್ ಇಲ್ಲದೇ ಸಿಮ್​ನಿಂದ ಧ್ವನಿ ಕರೆ ಮಾಡಬೇಕೆಂದರೆ ಅದಕ್ಕೆ ನಿರ್ದಿಷ್ಟ ಶುಲ್ಕ ತೆರಬೇಕು. ಆದರೆ, ಹೊಸ ವರ್ಷದಿಂದ, ಅಂದರೆ ನಾಳೆಯಿಂದ ನೀವು ರಿಲಾಯನ್ಸ್ ಜಿಯೋದ ಸಿಮ್​ನಿಂದ ಉಚಿತವಾಗಿ ಕರೆ ಮಾಡಬಹುದಾಗಿದೆ. ಇದು ಭಾರತದೊಳಗೆ ಯಾವುದೇ ಮೊಬೈಲ್ ನಂಬರ್​ಗೆ ಮಾಡಲಾಗುವ ಕರೆಗಳಿಗೆ ಅನ್ವಯವಾಗುತ್ತದೆ.

Jio Free Call – ಜ. 1ರಿಂದ ಜಿಯೋದಿಂದ ಉಚಿತ ಕರೆ ಸೌಲಭ್ಯ

6. ರಾಜ್ಯದ ಶೇ. 60ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಇನ್ನೂ ಎಣಿಕೆಯೇ ಪೂರ್ಣಗೊಂಡಿಲ್ಲ. ನಾವೂ ಕೂಡ ನಂಬರ್ ಒನ್ ಅಂತ ಹೇಳಿಕೊಳ್ಳಬಹುದು. ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಗೆದ್ದಿರುವ ಮಾಹಿತಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಗ್ರಾ.ಪಂ. ಚುನಾವಣೆ ಗೆಲುವು ಯಡಿಯೂರಪ್ಪನ ಹಗಲುಗನಸು; ಈಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ: ಸಿದ್ದರಾಮಯ್ಯ ಸವಾಲು7.ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ (Grama Panchayath Elections) ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. 5,728 ಗ್ರಾಮ ಪಂಚಾಯಿತಿಗಳ ಪೈಕಿ 3,800 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು (BJP Supported Candidates) ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಶೇ. 60 ರಷ್ಟು ಗ್ರಾ.ಪಂ.ಗಳಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ತಿಳಿಸಿದರು.

ಬಿಜೆಪಿಯ ಕೃಷಿಪರ ನೀತಿಗೆ ರೈತರ ಬೆಂಬಲ ಇರುವುದಕ್ಕೆ ಗ್ರಾ.ಪಂ. ಚುನಾವಣೆ ಗೆಲುವು ಸಾಕ್ಷಿ: ಸಿಎಂ ಯಡಿಯೂರಪ್ಪ

8. ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮದು, ಎಲ್ಲ ಪೋಷಕರು ಮಕ್ಕಳನ್ನು ಆಶೀರ್ವದಿಸಿ ಧೈರ್ಯವಾಗಿ ಶಾಲೆಗೆ ಕಳಿಸಿ, ಅವರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಮಕ್ಕಳ ಸುರಕ್ಷತೆ ನಮ್ಮದು, ಶಾಲೆಗೆ ಧೈರ್ಯವಾಗಿ ಕಳುಹಿಸಿ: ಸಚಿವ ಸುರೇಶ್ ಕುಮಾರ್ ಮನವಿ

9. ಹೊಸ ವರ್ಷದ ಆಗಮನಕ್ಕೆ ಸಿದ್ಧತೆ ನಡೆದಿದೆ. ಇದರ ಜೊತೆಗೆ ಹೊಸ ವರ್ಷದಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಾಲು ಸಾಲು ಸಿನಿಮಾಗಳು ಸಿದ್ಧವಾಗಿವೆ. ಹೀಗಿರುವಾಗಲೇ ರಾಘವೇಂದ್ರ ರಾಜ್​ಕುಮಾರ್ ಅಭಿನಯದ ರಾಜತಂತ್ರ ನಾಳೆ ರಿಲೀಸ್​ ಆಗಲಿದೆ.

Rajatantra: ಹೊಸ ವರ್ಷಕ್ಕೆ ರಿಲೀಸ್​ ಆಗಲಿರುವ ಮೊದಲ ಕನ್ನಡದ ಸಿನಿಮಾ ರಾಜತಂತ್ರ..!

10. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್​ ಮತ್ತು ಪಾಕಿಸ್ತಾನ -ನ್ಯೂಜಿಲೆಂಡ್‌ ನಡುವಣ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮುಕ್ತಾಯವಾದ ಬೆನ್ನಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನೂತನ ಟೆಸ್ಟ್​ ರ‍್ಯಾಂಕಿಂಗ್‌ ಪಟ್ಟಿಯನ್ನು ಪ್ರಕಟ ಮಾಡಿದೆ.

ICC Test Rankings: ಕೇನ್ ವಿಲಿಯಮ್ಸನ್​ಗೆ ನಂಬರ್ 1 ಪಟ್ಟ: ಭರ್ಜರಿ ಏರಿಕೆ ಕಂಡ ಅಜಿಂಕ್ಯಾ ರಹಾನೆ
Published by: G Hareeshkumar
First published: December 31, 2020, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories