Evening Digest: ದೆಹಲಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ, ಕೊನೆಯ ಏಕದಿನ ಪಂದ್ಯ ಗೆದ್ದ ಭಾರತ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಸಂಬಂಧಿಕರ ಮದುವೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾರಿನ ಮೇಲೆ ಮರಳು ತುಂಬಿದ್ದ ಲಾರಿಯೊಂದು ಬಿದ್ದ ಕಾರಣ ಒಂದೇ ಕುಟುಂಬದ 8 ಜನ ಸಾವನ್ನಪ್ಪಿರುವ ದುರ್ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಇಂದು ನಡೆದಿದೆ.

  ಉತ್ತರಪ್ರದೇಶ; ಮರಳು ತುಂಬಿದ ಲಾರಿ ಕಾರಿನ ಮೇಲೆ ಬಿದ್ದು ಒಂದೇ ಕುಟುಂಬದ 8 ಜನ ಸಾವು

  2.ಜಗತ್ತಿನಲ್ಲಿ ಮೊದಲ ಬಾರಿಗೆ ಬ್ರಿಟನ್ ದೇಶ ಕೋವಿಡ್ -19 ವಿರುದ್ಧ ಫಿಜರ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಅಧಿಕೃತವಾಗಿ ಬಳಕೆ ಮಾಡಲು ಬುಧವಾರ ಅನುಮೋದನೆ ನೀಡಿದೆ. ಮುಂದಿನ ವಾರದಿಂದ ಲಸಿಕೆ ಹಂಚಿಕೆ ನಡೆಯಲಿದೆ.

  Pfizer Vaccine: ಕೊರೋನಾ ವಿರುದ್ಧ ಫಿಜರ್ ಬಯೋಟೆಕ್ ಲಸಿಕೆ ಬಳಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಬ್ರಿಟನ್!

  3.ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಿಂದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ.

  Farmers Protest - 7ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ನಿನ್ನೆಯ ಸಭೆ ವಿಫಲ, ನಾಳೆ ಏನಾಗುತ್ತೊ?  4. ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಬಹಳ ಜಾಸ್ತಿಯಾಗುತ್ತದೆ. ಹಾಗೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಆದರೆ ಈ ಬಾರಿ ದೀಪಾವಳಿ ಕಳೆದ 15 ದಿನವಾದರೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ಅಪಾಯಕಾರಿ ಹಂತ ತಲುಪಿದೆ.

  ದೆಹಲಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ಪಟಾಕಿ ನಿಷೇಧಿಸಿದ್ದರೂ ಕೆಟ್ಟ ಗಾಳಿಗೆ ಏನು ಕಾರಣ?

  5.ಗಡಿ ಬಿಕ್ಕಟ್ಟಿನ ನಡುವೆಯೂ ದಶಕಗಳಲ್ಲೇ ಮೊದಲ ಬಾರಿಗೆ ನೆರೆಯ ರಾಷ್ಟ್ರ ಚೀನಾ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಶುರು ಮಾಡಿದೆ. ಲಡಾಕ್​​ ಗಡಿಯಲ್ಲಿ ಕಟ್ಟುನಿಟ್ಟಿನ ಸರಬರಾಜು ಮತ್ತು ರಿಯಾಯಿತಿ ದರದಲ್ಲಿ ಅಕ್ಕಿ ರಫ್ತು ಮಾಡುತ್ತಿರುವ ಕಾರಣಕ್ಕೆ ಚೀನಾ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಮುಂದಾಗಿದೆ.

  ಗಡಿ ಬಿಕ್ಕಟ್ಟಿನ ನಡುವೆಯೂ ದಶಕಗಳ ಬಳಿಕ ಮೊದಲ ಬಾರಿಗೆ ಭಾರತದ ಅಕ್ಕಿ ಖರೀದಿಗೆ ಮುಂದಾದ ಚೀನಾ

  6.ಹುಣಸೂರು ಕ್ಷೇತ್ರದ ಪ್ರಚಾರ ವೆಚ್ಚಕ್ಕೆ ಕೊಡಲಾಗಿದ್ದ ದೊಡ್ಡ ಮೊತ್ತದ ಹಣ ಸಂದಾಯ ಆಗಲಿಲ್ಲ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ನಿನ್ನೆ ಮಾಡಿದ್ದ ಆರೋಪ ಈಗ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ದಾಳವಾಗಿ ಪರಿಣಮಿಸಿದೆ. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಹಣದ ಹೊಳೆ ಹರಿಸುತ್ತದೆ ಎಂಬುದಕ್ಕೆ ವಿಶ್ವನಾಥ್ ಅವರ ಹೇಳಿಕೆಯೇ ಸಾಕ್ಷಿಯಾಗಿದೆ. ಅವರ ಹೇಳಿಕೆ ಆಧಾರದ ಮೇಲೆ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

  ಎಚ್ ವಿಶ್ವನಾಥ್ ಹೇಳಿಕೆ: ಐಟಿ, ಇಡಿ ಸುಮೋಟೋ ಕೇಸ್ ದಾಖಲಿಸಲಿ, ನ್ಯಾಯಾಂಗ ತನಿಖೆ ಆಗಲಿ – ಕಾಂಗ್ರೆಸ್ ಆಗ್ರಹ

  7.ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ  ತೆರವಾಗಿರುವ ಸ್ಥಾನಕ್ಕೆ ಜಗದೀಶ್​ ಶೆಟ್ಟರ್​ ಸ್ಪರ್ಧಿಸುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬಂದಿದೆ. ಆದರೆ, ಈ ಕುರಿತು ಜಗದೀಶ್​ ಶೆಟ್ಟರ್​ ಎಲ್ಲಿಯೂ ಮಾತನಾಡಿಲ್ಲ. ಈ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಮಾಜಿ ಸಿಎಂ, ಲೋಕಸಭೆ ಸ್ಪರ್ಧೆ ವಿಚಾರ ಅಪ್ರಸ್ತುತ ಎನ್ನುವ ಮೂಲಕ ತಮ್ಮ ಸ್ಪರ್ಧೆ ಕುರಿತ ವಿವರವನ್ನು ತಳ್ಳಿ ಹಾಕಿದ್ದಾರೆ.

  ಲೋಕಸಭಾ ಉಪಚುನಾವಣೆಯಲ್ಲಿ ನನ್ನ ಹೆಸರು ತೇಲಿಬಿಟ್ಟವರ ಹುಡುಕುತ್ತಿದ್ದೇನೆ; ಜಗದೀಶ್​ ಶೆಟ್ಟರ್

  8.ಹಿಂದೂ-ಮುಸ್ಲಿಂ ಕ್ರಾಸ್ ಬ್ರೀಡ್ ಕುರಿತ ಸಿದ್ದರಾಮಯಯ್ಯ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಹೇಳಿಕೆಯನ್ನು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ವಸತಿ ಸಚಿವ ಸೋಮಣ್ಣ ಖಂಡಿಸಿದ್ದಾರೆ. ಹಿರಿಯ ನಾಯಕರೆನಿಸಿಕೊಂಡ ಸಿದ್ದರಾಮಯ್ಯ ಈ ರೀತಿಯ ಕ್ಷುಲ್ಲಕ ಹೇಳಿಕೆ ನೀಡಿ ಸಮಾಜವನ್ನು ತುಚ್ಛೀಕರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಸಿದ್ಧರಾಮಯ್ಯ ಬ್ರೀಡ್ ಹೇಳಿಕೆಗೆ ಆಕ್ರೋಶ; ಹಿರಿಯರಿಂದ ಕ್ಷುಲ್ಲಕ ಹೇಳಿಕೆ ಸಲ್ಲ ಎಂದ ಲಕ್ಷ್ಮಣ ಸವದಿ, ಸೋಮಣ್ಣ

  9.ಕೆಜಿಎಫ್​ ಸಿನಿಮಾದಲ್ಲಿ ವ್ಯಸ್ತವಾಗಿರುವ ಸ್ಯಾಂಡಲ್​ವುಡ್​ ನಿರ್ದೇಶಕ ಪ್ರಶಾಂತ್​ ನೀಲ್​ ಪ್ರಭಾಸ್​ ಜೊತೆ ಪ್ಯಾನ್​ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಪ್ರಶಾಂತ್ ನೀಲ್​ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ನಂತರ ಜೂನಿಯರ್​ ಎನ್​ಟಿಆರ್​ ಅವರಿಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಎಂಬ ಸುದ್ದಿಯೂ ಟಾಲಿವುಡ್​ ಅಂಗಳದಲ್ಲಿ ಹರಿದಾಡಿತ್ತು. ಹೀಗಿರುವಾಗಲೇ ಕೆಜಿಎಫ್​ ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್​  ಈಗ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾವನ್ನು ಪ್ರಕಟಿಸಿದೆ.

  Salaar: ಹೊಂಬಾಳೆ ನಿರ್ಮಾಣದ ಸಲಾರ್ ಸಿನಿಮಾದಲ್ಲಿ ಮೋಸ್ಟ್​ ವೈಲೆಂಟ್​ ಮ್ಯಾನ್​ ಪ್ರಭಾಸ್​

  10.ಇಲ್ಲಿನ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಕೊಹ್ಲಿ ಪಡೆ ಸರಣಿ ಕ್ಲೀನ್​ಸ್ವೀಪ್​ನಿಂದ ಪಾರಾಗಿದ್ದು ಬ್ಯಾಟ್ಸ್​ಮನ್​ಗಳು - ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದರು.

  India vs Australia 3rd ODI: ಕೊನೆಗೂ ಕೊನೆಯ ಏಕದಿನ ಪಂದ್ಯ ಗೆದ್ದು ಬೀಗಿದ ಭಾರತ
  Published by:G Hareeshkumar
  First published: