Evening Digest: ಬೆಂಗಳೂರಿನಲ್ಲಿ ಮೂವರಲ್ಲಿ ರೂಪಾಂತರಿ ಕೊರೋನಾ ಸೋಂಕು ಪತ್ತೆ, 2ನೇ ಟೆಸ್ಟ್ ಗೆದ್ದು ಬೀಗಿದ ಭಾರತ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಕಳೆದ ವರ್ಷ ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್​ ಇದೀಗ ಇಡೀ ವಿಶ್ವವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಜಗತ್ತಿನಾದ್ಯಂತ ಮಿಂಚಿನ ವೇಗದಲ್ಲಿ ಹರಡಿದ್ದ ಈ ವೈರಸ್​ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತಾಗಿದೆ. ಭಾರತದಲ್ಲೂ ಸಹ 1.4 ಲಕ್ಷಕ್ಕೂ ಅಧಿಕ ಜನ ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

  ಭಾರತದಲ್ಲಿ 6 ಜನರಲ್ಲಿ ಮ್ಯೂಟಂಟ್​​ ಕೊರೋನಾ ಸೋಂಕು ದೃಢ; ಆಘಾತಕಾರಿ ಮಾಹಿತಿ ಹೊರಹಾಕಿದ ICMR

  2. ಚೋಟಾ ರಾಜನ್ ಭಾರತದ ಭೂಗತ ಲೋಕವನ್ನು ಆಳಿದ ಒಂದು ಕಾಲದ ಡಾನ್. ಮುಂಬೈ ಸರಣಿ ಸ್ಪೋಟದ ರುವಾರಿ ದಾವೂದ್​ ಇಬ್ರಾಹಿಂನ ಒಂದು ಕಾಲದ ಬಂಟ. ಈತನ ವಿರುದ್ಧ ಭಾರತದ ವಿವಿಧ ರಾಜ್ಯಗಳಲ್ಲಿ ಹತ್ತಾರು ಅಪರಾಧ ಪ್ರಕರಣಗಳು ದಾಖಲಾಗಿವೆ.

  ಭೂಗತ ಪಾತಕಿ ಚೋಟಾ ರಾಜನ್​ ಅಂಚೆ ಚೀಟಿ ಬಿಡುಗಡೆ; ಪೇಚಿಗೆ ಸಿಲುಕಿದ ಉತ್ತರಪ್ರದೇಶ ಸರ್ಕಾರ

  3. ರಾಜಕೀಯಕ್ಕೆ ಎಂಟ್ರಿ ಕೊಡದೆ ಜನರಿಗೆ ನನ್ನಿಂದ ಮಾಡಬಹುದಾದ ಎಲ್ಲಾ ಸಹಾಯಗಳನ್ನು ಮಾಡುತ್ತೇನೆ. ಹೀಗಾಗಿ ಅಭಿಮಾನಿಗಳು ದಯವಿಟ್ಟು ನನ್ನನ್ನು ಕ್ಷಮಿಸಬೇಕು, ನನ್ನ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ಟ್ವಿಟರ್​ನಲ್ಲಿ ಮೂರು ಪುಟಗಳ ಪತ್ರ ಬರೆಯುವ ಮೂಲಕ ತಮಿಳು ಜನರಲ್ಲಿ ಮನವಿ ಮಾಡಿದ್ದಾರೆ.

  RajiniKanth: ಕೊನೆಗೂ ಸಕ್ರೀಯ ರಾಜಕಾರಣಕ್ಕೆ ತಾನು ಬರುವುದಿಲ್ಲ ಎಂದು ಘೋಷಿಸಿದ ರಜಿನಿಕಾಂತ್​; ಅಭಿಮಾನಿಗಳಲ್ಲಿ ನಿರಾಸೆ

  4. ನಗರದಲ್ಲಿ ತಾಯಿ ಮತ್ತು ಮಗು ಸೇರಿ ಮೂವರಿಗೆ ಬ್ರಿಟನ್ ರೂಪಾಂತರಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಲ್ಲರನ್ನೂ ಐಸೋಲೇಷನ್ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಮಹಿಳೆಯ ವಾಹನ ಚಾಲಕ, ಮನೆಗೆಲಸದವರನ್ನು ಭೇಟಿ ಮಾಡಿ, ಪ್ರತ್ಯೇಕವಾಗಿರಿಸಲಾಗಿದ್ದು, ಪರೀಕ್ಷೆ ನಡೆಸಲಾಗಿದೆ ಎಂದರು.

  ಬೆಂಗಳೂರಿನಲ್ಲಿ ತಾಯಿ-ಮಗು ಸೇರಿ ಮೂವರಲ್ಲಿ ಬ್ರಿಟನ್ ರೂಪಾಂತರಿ ಕೊರೋನಾ ಸೋಂಕು ಪತ್ತೆ

  5. ಹೊಸ ವರ್ಷ ಆಚರಣೆಗೆ ಇನ್ನೊಂದು ದಿನ ಬಾಕಿ ಇದೆ. ಈ ಬಾರಿ ರಾಜಧಾನಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಂಭ್ರಮಾಚರಣೆ ಮಾಡದಂತೆ ನಗರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ, ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಬ್ರಿಗೇಡ್​ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧವನ್ನು ವಿಧಿಸಲಾಗಿದೆ.

  New Year Eve: ಎಂಜಿ ರಸ್ತೆ ಮಾತ್ರವಲ್ಲ, ನಗರದ ಈ ರಸ್ತೆಗಳಲ್ಲಿಯೂ ಡಿ.31ರ ಸಂಜೆಯಿಂದ ಸಂಚಾರಕ್ಕಿಲ್ಲ ಅವಕಾಶ

  6. ವಿಧಾನಪರಿಷತ್ ಉಪಸಭಾಪತಿ ಹಾಗೂ ಜೆಡಿಎಸ್ ಸದಸ್ಯ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ಅವರು ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ವಿಧಾನಪರಿಷತ್​ನಲ್ಲಿ ನಡೆದ ಘಟನೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಅವರು ಬರೆದಿಟ್ಟಿರುವ ಡೆತ್​ನೋಟ್​ನಿಂದ ತಿಳಿದುಬಂದಿದೆ.

  SL Dharme Gowda Death - ರೈಲಿಗೆ ತಲೆಕೊಟ್ಟು ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ

  7. ಬಿಜೆಪಿ ದೇಶದಲ್ಲಿ ಸುಳ್ಳಿನ ರಾಜಕೀಯ ಮಾಡುತ್ತಲೇ ದೇಶದ ಜನರ ದಾರಿ ತಪ್ಪಿಸುತ್ತಿದೆ. ಬಡವರನ್ನ ಉದ್ದಾರ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ದೇಶದ ಬಡವರನ್ನ ಮತ್ತಷ್ಟು ಬಡವರನ್ನಾಗಿಸುತ್ತಿದೆ. ಇದೆ ಬಿಜೆಪಿಯವರ ಅಜೆಂಡಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

  ಬಡವರನ್ನ ಮತ್ತಷ್ಟು ಬಡವರನ್ನಾಗಿಸುವುದೆ ಬಿಜೆಪಿ ಅಜೆಂಡಾ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

  8. ಮುಂದಿನ ರಾಜಕೀಯ ದಿಗ್ಸೂಚಿ ಎಂದು ಪರಿಗಣಿಸಲಾದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಸಂಜೆಯ ವೇಳೆಗೆ ಅಂತಿಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ.

  Grama Panchayath Election Results: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತ

  9.ಬಿಗ್​ ಬಾಸ್​ ಹಾಗೂ ರಾಂಧವ ಸಿನಿಮಾ ಖ್ಯಾತಿಯ ನಟ ಭುವನ್​ ಪೊನ್ನಣ್ಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಗಪಟ್ಟೆ ಸಕ್ರಿಯವಾಗಿರುವ ಕಲಾವಿದ. ಬಿಗ್​ ಬಾಸ್​ ರಿಯಾಲಿಟಿ ಕಾರ್ಯಕ್ರಮದಲ್ಲಿ ರಂಜಿಸುವ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾದ ಭುವನ್​, ನಂತರ ರಾಂಧವ ಸಿನಿಮಾದಲ್ಲೂ ನಟಿಸಿದರು. ಸನತ್​ ಕುಮಾರ್​ ಎಸ್​ ಆರ್ ನಿರ್ಮಾಣದ ರಾಂಧವ ಚಿತ್ರವನ್ನು ಸುನೀಲ್​ ಎಸ್​ ಆಚಾರ್ಯ ನಿರ್ದೇಶಿಸಿದ್ದಾರೆ.

  Bhuvann Ponnannaa: ಬಿಗ್​ ಬಾಸ್​ ಖ್ಯಾತಿಯ ಭುವನ್​ ಪೊನ್ನಣ್ಣ ಈಗ ಪ್ರಣಯ ರಾಜ: ಡಿ.30ಕ್ಕೆ ಟೀಸರ್​ ರಿಲೀಸ್​..!

  10. ಇಲ್ಲಿನ ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಬ್ಯಾಟಿಂಗ್ - ಬೌಲಿಂಗ್ ಎರಡೂ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತೀಯರು 8 ವಿಕೆಟ್​ಗಳ ಜಯ ಸಾಧಿಸಿ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

  India vs Australia: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಭರ್ಜರಿ ಕಮ್​ಬ್ಯಾಕ್: 2ನೇ ಟೆಸ್ಟ್ ಗೆದ್ದು ಬೀಗಿದ ಭಾರತ
  Published by:G Hareeshkumar
  First published: