Evening Digest: ಅಂತಿಮ ಹೋರಾಟಕ್ಕೆ ಅಣ್ಣಾ ಹಜಾರೆ ಅಣಿ, ಕಾಂಗ್ರೆಸ್​ ಸಂಸ್ಥಾಪನಾ ದಿನ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರು

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತೃತ್ವ ವಹಿಸಿ ಯುಪಿಎ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಈಗ ಎನ್​ಡಿಎ ಸರ್ಕಾರದ ವಿರುದ್ಧ ಸೆಟೆದು ನಿಲ್ಲುತ್ತಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಶಕ್ತಿಯಾಗಿ ಅಣ್ಣಾ ನಿಂತಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ತಾನು ಮುಂದಿಟ್ಟಿರುವ ಬೇಡಿಕೆಗಳನ್ನ ಈಡೇರಿಸದಿದ್ದರೆ ಉಪವಾಸ ನಿರಶನ ಕೂರುವುದಾಗಿ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ.

  ಅಂತಿಮ ಹೋರಾಟಕ್ಕೆ ಅಣ್ಣಾ ಹಜಾರೆ ಅಣಿ; ಕೇಂದ್ರದಿಂದ ರೈತರ ಅವಹೇಳನಕ್ಕೆ ಪ್ರಿಯಾಂಕಾ ಕಿಡಿ

  2. ಇಂದು ಕಾಂಗ್ರೆಸ್​ ಪಕ್ಷದ 136ನೇ ಪ್ರತಿಷ್ಟಾಪನಾ ದಿನಾಚರಣೆ. ಹೀಗಾಗಿ ದೇಶದೆಲ್ಲೆಡೆ ಎಲ್ಲಾ ಕಾಂಗ್ರೆಸ್​ ಕಚೇರಿಗಳಲ್ಲೂ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯಲ್ಲೂ ಕಾಂಗ್ರೆಸ್​ ಕೇಂದ್ರ ಕಚೇರಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದ್ದು, ದೇಶದ ಎಲ್ಲಾ ಪ್ರಮುಖ ಕಾಂಗ್ರೆಸ್​ ನಾಯಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

  ಕಾಂಗ್ರೆಸ್​ ಸಂಸ್ಥಾಪನಾ ದಿನ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರು; ಕಾಲೆಳೆದ ಬಿಜೆಪಿ, ಸಮರ್ಥಿಸಿಕೊಂಡ ಕೈ ನಾಯಕರು!

  3. ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ ಸಂಜಯ್ ರೌತ್ ಅವರ ಪತ್ನಿ ವರ್ಷಾ ರೌತ್ ಅವರನ್ನು ಜಾರಿ ನಿರ್ದೇಶನಾ ಇಲಾಖೆ (Enforcement Department) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇಂದು ಸಮನ್ಸ್​ ಜಾರಿ ಮಾಡಿದೆ. ಹೀಗಾಗಿ ಅವರು ಡಿಸೆಂಬರ್ 29 ರಂದು ಏಜೆನ್ಸಿಯ ಮುಂಬೈ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಣೆಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ.

  ಪಿಎಂಸಿ ಬ್ಯಾಂಕ್​ ಹಗರಣ; ಶಿವಸೇನೆ ಮುಖಂಡ ಸಂಜಯ್ ರೌತ್​ ಹೆಂಡತಿಗೆ ಸಮನ್ಸ್​ ನೀಡಿದ ಜಾರಿ ನಿರ್ದೇಶನಾಲಯ

  4. ಕಳೆದ ವರ್ಷ ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್​ ಇದೀಗ ಇಡೀ ವಿಶ್ವವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಜಗತ್ತಿನಾದ್ಯಂತ ಮಿಂಚಿನ ವೇಗದಲ್ಲಿ ಹರಡಿದ್ದ ಈ ವೈರಸ್​ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತಾಗಿದೆ. ಭಾರತದಲ್ಲೂ ಸಹ 1.4 ಲಕ್ಷಕ್ಕೂ ಅಧಿಕ ಜನ ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

  CoronaVirus: ಬ್ರಿಟನ್ ನಿಂದ ಬಂದವರ ಪೈಕಿ ಮ್ಯೂಟೆಡ್ ವೈರಸ್ ಪೀಡಿತರು ಎಷ್ಟು?; ಇಂದು ಹೊರ ಬೀಳಲಿದೆ ಅಧಿಕೃತ ಮಾಹಿತಿ

  5. ನಾನು ದನದ ಮಾಂಸ ತಿನ್ನುತ್ತೇನೆ’. ಆಹಾರ ಪದ್ಧತಿ ನನ್ನ ಹಕ್ಕು. ನಾನು ವಿಧಾನ ಸಭೆಯಲ್ಲಿ ಕೂಡ ಹೇಳಿದ್ದೆ. ಸಂದರ್ಭ ಬಂದರೆ ತಿನ್ನುತ್ತೇನೆಂದು ಹೇಳಿದ್ದೆ . ಅದನ್ನು ಕೇಳೊಕೆ ನೀವು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.  ಗೋಮಾತೆಯನ್ನು ಪೂಜಿಸಿ ತಾಯಿ ಎನ್ನುತ್ತಾರೆ. ಬಿಜೆಪಿಯವರು ಗೋಹತ್ಯೆ ಮಸೂದೆ ತಂದಿದ್ದಾರೆ. ವಯಸ್ಸಾದ ಹಸು ಇಟ್ಟುಕೊಂಡು ಏನು ಮಾಡಬೇಕು.

  ಕಾಂಗ್ರೆಸ್​​ಗೆ ಹಿನ್ನಡೆಯಾದ್ರೆ ಬಡವರಿಗೆ ಹಿನ್ನಡೆ; ಗಟ್ಟಿಯಾಗಿ ಧ್ವನಿ ಎತ್ತಿ: ಕಾರ್ಯಕರ್ತರಿಗೆ ಸಿದ್ಧರಾಮಯ್ಯ ಕರೆ

  6. ರಾಜ್ಯವಷ್ಟೇ ಅಲ್ಲ, ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.  ಶ್ರೀ ಕ್ಷೇತ್ರ ಕೋಡಿಮಠ ದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಜೊತೆಗೆ  ಜಾಗತಿಕ  ಮಟ್ಟದಲ್ಲಿಯೂ ಕೂಡ ಬದಲಾವಣೆಯ ಸಾಧ್ಯತೆ ಇದೆ. ಇದಕ್ಕೆಲ್ಲ ಕಾರಣ ಈಗ ಬಂದಿರುವ ಗ್ರಹಣಗಳ ಸಂಕೇತವೇ ಸಾಕ್ಷಿಯಾಗಿದೆ ಎಂದರು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಭವಿಷ್ಯ ಗೋಚರ ಹಾಗಿರುವ ಪ್ರಕಾರ ನನ್ನ ಕಣ್ಣ ಮುಂದೆ ನೀರು ಕಾಣುತ್ತಿದೆ.

  ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ; ಕೋಡಿಶ್ರೀ ಭವಿಷ್ಯ

  7. ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ವಿನಯ ಸೋದರ ಮಾವ ಚಂದ್ರಶೇಖ ಇಂಡಿ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

  ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನ ವಿಸ್ತರಣೆ

  8. ಕೊರೋನಾ ಆತಂಕದಿಂದಾಗಿ ಶಾಲಾ-ಕಾಲೇಜುಗಳನ್ನು ಮುಚ್ಚಿರುವ ಸರ್ಕಾರ, ಈಗ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗಳನ್ನು ಆರಂಭಿಸುವ ನಿರ್ಧಾರಕ್ಕೆ ಬಂದಿದೆ. ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕ ಸೃಷ್ಟಿಸಿದ್ದರೂ ಸಹ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಲಾ-ಕಾಲೇಜುಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ.

  Schools Reopening: ಜನವರಿ 1ರಿಂದಲೇ ಶಾಲಾ-ಕಾಲೇಜು ಆರಂಭಕ್ಕೆ ಸಿಎಂ ಒಪ್ಪಿಗೆ

  9. ವಿಷ್ಣುವರ್ಧನ್​... ಕೋಟಿ ಕೋಟಿ ಕನ್ನಡಿಗರ ಹೃದಯಗೆದ್ದ ನಟ. ಅಭಿಮಾನಿಗಳ ಪಾಲಿನ ಸಾಹಸಸಿಂಹ. ವಿಷ್ಣುವರ್ಧನ್ ಅವರಿಗೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಸಹ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟನ ಸ್ಮರಣೆಗಾಗಿ ಅಭಿಮಾನಿಗಳು ಪ್ರತಿಮೆ ಸ್ಥಾಪಿಸಿ ಪ್ರೀತಿ ಅಭಿಮಾನ ತೋರಿದ್ದರು. ಆದರೆ ರಾತ್ರೋರಾತ್ರಿ ಕಿಡಿಗೇಡಿಗಳ ಗುಂಪು ಡಾ. ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿ ವಿಕೃತಿ ಮರೆದಿದ್ದಾರೆ.

  ವಿಷ್ಣುವರ್ಧನ್​ ಪುತ್ಥಳಿ ಮರುಸ್ಥಾಪನೆಗೆ ಗುದ್ದಲಿ ಪೂಜೆ ನೆರವೇರಿಸಿದ ಅನಿರುದ್ಧ್​​..!

  10. ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ಸಾಗುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಮಾರಕ ದಾಳಿ ಸಂಘಟಿಸಿದ್ದಾರೆ. ಪರಿಣಾಮ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ 2 ರನ್​ಗಳ ಮುನ್ನಡೆ ಸಾಧಿಸಿದೆಯಷ್ಟೆ. ಭಾರತ ತಂಡ ನಾಯಕ ಅಜಿಂಕ್ಯಾ ರಹಾನೆ ಅವರ ಅಮೋಘ ಶತಕ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 326 ರನ್​ಗೆ ಆಲೌಟ್ ಆಯಿತು. ಈ ಮೂಲಕ 131 ರನ್​ಗಳ ಮುನ್ನಡೆ ಸಾಧಿಸಿತು.

  India vs Australia: ಕಾಂಗರೂ ಪಡೆಗೆ ನಡುಕ ಹುಟ್ಟಿಸಿದ ಭಾರತೀಯ ಬೌಲರ್ಸ್​: ಆಸ್ಟ್ರೇಲಿಯಾ 133/6
  Published by:G Hareeshkumar
  First published: