Evening Digest: ಕೇರಳದಲ್ಲಿ ಮೇಯರ್ ಆದ ಕಾಲೇಜು ವಿದ್ಯಾರ್ಥಿನಿ, ಎರಡನೇ ಟೆಸ್ಟ್​ಗೆ ಟೀಂ ಇಂಡಿಯಾ ತಂಡ ಪ್ರಕಟ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ ನಡೆದ 6 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆದಿದ್ದು 29ನೇ ದಿನಕ್ಕೆ ಕಾಲಿಟ್ಟಿದೆ.

  Farmers Protest: ಕೃಷಿ ಕಾಯ್ದೆಗಳ ವಿರುದ್ಧ ನಾಳೆ ತಿಂಗಳು ಪೂರೈಸಲಿರುವ ಅನಿರ್ದಿಷ್ಟಾವಧಿ ರೈತರ ಹೋರಾಟ

  2. ರೈತರ ಪ್ರತಿಭಟನೆಗಳಿಗೆ ಕಾರಣವಾಗಿರುವ ಕೇಂದ್ರದ ಕೃಷಿ ಕಾಯ್ದೆಗಳನ್ನ ಪ್ರಧಾನಿ ನರೇಂದ್​ರ ಮೋದಿ ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪಿಎಂ ಕಿಸಾನ್ ಯೋಜನೆಯ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡುತ್ತಿದ್ದ ಅವರು, ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲಾಗುತ್ತಿದೆ ಎಂದು ವಿಪಕ್ಷಗಳು ಹಾಗೂ ಕೆಲ ರೈತ ಸಂಘಟನೆಗಳ ವಿರುದ್ದ ಹರಿಹಾಯ್ದಿದ್ದಾರೆ.

  ರೈತರ ಭೂಮಿ ಕಬಳಿಸುತ್ತೇವೆಂಬ ಸುಳ್ಳು ಸೃಷ್ಟಿ: ಪಿಎಂ ಕಿಸಾನ್ ಕಾರ್ಯಕ್ರಮದಲ್ಲಿ ಪ್ರಧಾನಿ ಆಕ್ರೋಶ

  3. ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳೂ ಚುನಾವಣಾ ಪ್ರಚಾರದಲ್ಲಿ ನಿರತವಾಗಿವೆ. ಆದರೆ, ಈ ಬಾರಿ ತಮಿಳುನಾಡಿನಲ್ಲಿ ಖಾತೆ ತೆಗೆಯಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿಗೆ ದ್ರಾವಿಡ ನಾಡಿನಲ್ಲಿ ತಳಮಟ್ಟದಿಂದ ಪಕ್ಷ ಬಲವಾಗಿಲ್ಲ. ಹೀಗಾಗಿ ಚಿತ್ರ ನಟ ನಟಿ ಮತ್ತು ಬೇರೆ ಪಕ್ಷಗಳ ಹಿರಿಯ ನಾಯಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಯಾವ ಪಕ್ಷದಲ್ಲಿ ಸಣ್ಣ ಒಡಕಾದರೂ ಆ ಪಕ್ಷದ ಬಂಡಾಯ ನಾಯಕರಿಗೆ ಬಿಜೆಪಿ ರೆಡ್​ ಕಾರ್ಪೆಟ್ ಹಾಕಿ ಕಾಯುತ್ತಿದೆ.

  TamilNadu Politics: ನಟ ರಾಜಕಾರಣಿ ಕಮಲಹಾಸನ್​ ಪಕ್ಷದ ಉಪಾಧ್ಯಕ್ಷ ಅರುಣಾಚಲಂ ಬಿಜೆಪಿಗೆ ಸೇರ್ಪಡೆ!

  4. ಇನ್ನೂ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿರುವ 21 ವರ್ಷದ ಆರ್ಯಾ ರಾಜೇಂದ್ರನ್ ಅವರು ತಿರುವನಂತಪುರಂ ನಗರಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಮೇಯರ್ ಹುದ್ದೆ ಅಲಂಕರಿಸಲಿರುವ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ.

  ಕೇರಳದಲ್ಲಿ ಮೇಯರ್ ಆದ ಕಾಲೇಜು ವಿದ್ಯಾರ್ಥಿನಿ ಆರ್ಯಾ ರಾಜೇಂದ್ರನ್ ಹೊಸ ದಾಖಲೆ

  5.‘ರಾತ್ರಿ ಕರ್ಫ್ಯೂ ವಿಚಾರ ಯಡಿಯೂರಪ್ಪನವರದಲ್ಲ. ಸುಧಾಕರ್ ಅವರದು. ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡುತ್ತಿದ್ದ ಅವರು ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಹೇರುವ ನಿರ್ಧಾರಕ್ಕೆ ಬಂದಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಮತ್ತೊಮ್ಮೆ ಪ್ರಶ್ನಿಸಿದರು.

  ಸುಧಾಕರ್​ಗೆ ಪರಿಜ್ಞಾನ ಇದೆಯಾ? – ನೈಟ್ ಕರ್ಫ್ಯೂ ವಿಚಾರಕ್ಕೆ ಡಿಕೆ ಶಿವಕುಮಾರ್ ಕೆಂಡಾಮಂಡಲ

  6. 2018ರಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ಜೆಡಿಎಸ್​-ಕಾಂಗ್ರೆಸ್​, ಇದೇ ಹುಮ್ಮಸ್ಸಿನಲ್ಲಿ ಮೈಸೂರಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಮೈತ್ರಿ ನಡೆಸಿತು. ರಾಜ್ಯದಲ್ಲಿ ಸರ್ಕಾರ ಬೀಳುತ್ತಿದ್ದಂತೆ,  ಮಹಾನಗರ ಪಾಲಿಕೆಯಲ್ಲಿನ ಆಡಳಿತದಲ್ಲಿನ ಸಂಬಂಧ ಕೂಡ ಹದಗೆಟ್ಟಿದೆ. ಇದೇ ಹಿನ್ನಲೆ ಜೆಡಿಎಸ್,​ ಕಾಂಗ್ರೆಸ್​ ಮೈತ್ರಿ ತೊರೆದು ಬಿಜೆಪಿ ಜೊತೆ ಸೇರುವ ಹುಮ್ಮಸ್ಸು ತೋರಿದೆ. ಮೇಯರ್- ಉಪಮೇಯರ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈತ್ರಿ ವಿಚಾರ ಚರ್ಚೆಗೆ ಬಂದಿದ್ದು, ಕಾಂಗ್ರೆಸ್​ ಮೈತ್ರಿ ಮುಂದುವರೆಸುವುದಾ ಅಥವಾ ಬಿಜೆಪಿ ಸೇರುವುದಾ ಎಂಬ ಬಗ್ಗೆ ಜೆಡಿಎಸ್​ ನಾಯಕರು ಚಿಂತನೆ ನಡೆಸಿದ್ದಾರೆ.

  ಕಾಂಗ್ರೆಸ್‌ ಜೊತೆ ಮೈತ್ರಿ ಮುರಿದುಕೊಳ್ಳಲು ಸಜ್ಜಾದ ಜೆಡಿಎಸ್‌; ಮೈಸೂರು ಮೇಯರ್​ ಸ್ಥಾನದ ಬೇಡಿಕೆ ಇಟ್ಟ ಪ್ರತಾಪ್​ ಸಿಂಹ

  7. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಸದಾನಂದಗೌಡ ಕಿಡಿಕಾಡಿದ್ದಾರೆ. ಯಾರು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಹಾಗೂ ಗೌರವ ಸಿಗುತ್ತದೆ ಎಂದು ಸ್ವಪಕ್ಷ ಶಾಸಕ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ.

  ಯತ್ನಾಳ್ ಯಾರು? ಅವರೇನು ರಾಷ್ಟ್ರೀಯ ನಾಯಕನಲ್ಲ, ಸಾಮಾನ್ಯ ಶಾಸಕನಷ್ಟೇ; ಸಚಿವ ಸದಾನಂದಗೌಡ ಕಿಡಿ

  8.ರಾಜಕೀಯ ಎಂಬುದು ಹೇಗೆ ಒಂದು ಕುಟುಂಬದ ಸಂಬಂಧಗಳಿಗೂ ಬೆಲೆ ಇಲ್ಲದಂತೆ ಮಾಡುತ್ತದೆ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿ. ಈ ಕುಟುಂಬದಲ್ಲಿ ತಮ್ಮ ಶಾಸಕರಾಗಿದ್ದಾರೆ. ಇವರ ಇಬ್ಬರು ಅಕ್ಕಂದಿರು ಮಾತ್ರ ಒಂದೇ ಊರಲ್ಲಿ, ಒಂದೇ ಸ್ಥಾನಕ್ಕೆ ಬದ್ಧ ವೈರಿಗಳಂತೆ ಪರಸ್ಪರ ಸ್ಪರ್ಧೆಗಿಳಿದಿದ್ದಾರೆ.

  ಸಹೋದರ ಶಾಸಕನಾದರೂ ಬದ್ಧವೈರಿಗಳಂತೆ ಚುನಾವಣೆಯಲ್ಲಿ ಅಕ್ಕ-ತಂಗಿಯರ ಸ್ಪರ್ಧೆ; ಬಸವನಾಡಲ್ಲಿ ಅಪರೂಪದ ರಾಜಕೀಯ ಜಿದ್ದಾಜಿದ್ದಿ

  9.ಕಾಲಿವುಡ್​ ನಟ ರಜಿನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದರಾಬಾದಿನಲ್ಲಿರುವ ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿದೆ. ಹೈದರಾಬಾದಿನಲ್ಲಿ ಸಿನಿಮಾ  ಚಿತ್ರೀಕರಣದಲ್ಲಿದ್ದಾಗ, ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತೊದೊತ್ತಡದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ರಜಿನಿ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  Rajinikanth: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಟ ರಜಿನಿಕಾಂತ್​..!

  10. ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ಶನಿವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಮಾಡಲಾಗಿದೆ. ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಆಡುವ 11 ಆಟಗಾರರ ಹೆಸರನ್ನು ತಿಳಿಸಿದ್ದು ತಂಡದಲ್ಲಿ ಒಟ್ಟು ನಾಲ್ಕು ಬದಲಾವಣೆ ಮಾಡಲಾಗಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ.
  Published by:G Hareeshkumar
  First published: