1.ಕೇಂದ್ರ ಸರ್ಕಾರ ಕೂಡಲೇ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯ ಹೊರ ವಲಯದಲ್ಲಿ ಆರಂಭಿಸಿರುವ ರೈತ ಚಳುವಳಿ 27ನೇ ದಿನಕ್ಕೆ ಕಾಲಿಟ್ಟಿದೆ. ರೈತ ಮುಖಂಡರು ಮತ್ತು ಸರ್ಕಾರದ ನಡುವೆ ನಡೆದ 6 ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ರೈತರ ಬೇಡಿಕೆಗೆ ಸರ್ಕಾರ ಬಗ್ಗುವಂತೆ ಕಾಣುತ್ತಿಲ್ಲ. ಮತ್ತೊಂದೆಡೆ ರೈತರು ಸಹ ತಮ್ಮ ಹೋರಾಟವನ್ನು ಕೈಬಿಡುವ ಮನಸ್ಸು ಮಾಡಿಲ್ಲ.
Farmers Protest: ನಾಳೆ ರಾಷ್ಟ್ರಪತಿಯನ್ನು ಭೇಟಿಯಾಗಲಿರುವ ಕಾಂಗ್ರೆಸ್ ನಿಯೋಗ; ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಮನವಿ
2.ಕೇಂದ್ರ ಸರ್ಕಾರ ಕೂಡಲೇ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯ ಹೊರ ವಲಯದಲ್ಲಿ ಆರಂಭಿಸಿರುವ ಚಳುವಳಿ 27ನೇ ದಿನಕ್ಕೆ ಕಾಲಿಟ್ಟಿದೆ. ರೈತ ಮುಖಂಡರು ಮತ್ತು ಸರ್ಕಾರದ ನಡುವೆ ನಡೆದ 6 ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ರೈತರ ಬೇಡಿಕೆಗೆ ಸರ್ಕಾರ ಬಗ್ಗುವಂತೆ ಕಾಣುತ್ತಿಲ್ಲ. ಮತ್ತೊಂದೆಡೆ ರೈತರು ಸಹ ತಮ್ಮ ಹೋರಾಟವನ್ನು ಕೈಬಿಡುವ ಮನಸ್ಸು ಮಾಡಿಲ್ಲ.
ರೈತರ ಬೇಡಿಕೆ ಈಡೇರುವವರೆಗೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ; ರೈತರಿಂದ ಇಂಗ್ಲೆಂಡ್ ಸಂಸದರಿಗೆ ಪತ್ರ!
3. ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಸಮಿತಿ (DDC) ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ನ್ಯಾಷನಲ್ ಕಾನ್ಫೆರೆನ್ಸ್ ನೇತೃತ್ವದ ಗುಪ್ಕರ್ ಮೈತ್ರಿಕೂಟ ಸ್ಪಷ್ಟ ಮೇಲುಗೈ ಸಾಧಿಸಿದೆ. ಒಟ್ಟು 280 ಡಿಡಿಸಿ ಸ್ಥಾನಗಳ ಪೈಕಿ ಗುಪ್ಕರ್ ಮೈತ್ರಿಕೂಟದ ಪಕ್ಷಗಳು 112 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
DDC Election Results - ಜಮ್ಮು ಕಾಶ್ಮೀರ ಡಿಡಿಸಿ ಚುನಾವಣೆ: ಜನತಾ ಮೈತ್ರಿ ಮೇಲುಗೈ; ಬಿಜೆಪಿ ಅತಿದೊಡ್ಡ ಪಕ್ಷ
4. ಮೂರು ತಿಂಗಳ ಹಿಂದೆ ವೊಡಾಫೋನ್ ವಿರುದ್ಧ ಹಿಮ್ಮುಖ ತೆರಿಗೆ ವಿಚಾರದಲ್ಲಿ ಕಾನೂನು ಸಮರ ಸೋತಿದ್ದ ಭಾರತ ಸರ್ಕಾರ ಇದೀಗ ಅಂತರರಾಷ್ಟ್ರೀಯ ತೈಲ ದಿಗ್ಗಜ ಕೇರ್ನ್ ಎನರ್ಜಿ ಎದುರೂ ಸೋಲಪ್ಪಿದೆ. ಕೇಂದ್ರದ ತೆರಿಗೆ ಇಲಾಖೆ ಮತ್ತು ಕೇರ್ನ್ ಎನರ್ಜಿ ಸಂಸ್ಥೆ ನಡುವಿನ ತೆರಿಗೆ ವ್ಯಾಜ್ಯದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಐಸಿಜೆ ತೀರ್ಪು ನೀಡಿದ್ದು ಕೇರ್ನ್ ಸಂಸ್ಥೆಗೆ 8 ಸಾವಿರ ಕೋಟಿ ನಷ್ಟವನ್ನು ಭರಿಸಿಕೊಡುವಂತೆ ಭಾರತ ಸರ್ಕಾರಕ್ಕೆ ಸೂಚಿಸಿದೆ.
Cairn Dispute - ಭಾರತ ಸರ್ಕಾರ ವಿರುದ್ಧ ಕಾನೂನು ಸಮರ ಗೆದ್ದ ಕೇರ್ನ್; 8 ಸಾವಿರ ಕೋಟಿ ನಷ್ಟ ಭರಿಸಿಕೊಡುವಂತೆ ಐಸಿಜೆ ಸೂಚನೆ
5.ಬ್ರಿಟನ್ ದೇಶದಿಂದ ಹೊಸ ಸ್ವರೂಪದ ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದಿನಿಂದಲೇ 9 ದಿನಗಳ ಕಾಲ, ಅಂದರೆ ಜನವರಿ 2ರವರೆಗೂ ರಾತ್ರಿ ಸಂಚಾರ ನಿಷೇಧಾಜ್ಞೆ ಜಾರಿಯಾಗಲಿದೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಇಂದು ವಿವಿಧ ಸಭೆಗಳಲ್ಲಿ ಚರ್ಚೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
Night Curfew - ಇಂದಿನಿಂದ ಜ. 2ರವರೆಗೆ ನೈಟ್ ಕರ್ಫ್ಯೂ ಜಾರಿ; ರಾತ್ರಿ 10ರ ನಂತರ ಸಂಚಾರ ನಿಷೇಧ
6. ಹೊಸ ಸ್ವರೂಪದ ಕೊರೋನಾ ವೈರಸ್ ರಾಜ್ಯದಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ಹೀಗಾಗಿ ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇಂದಿನಿಂದ ಜನವರಿ 2ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ನೈಟ್ ಕರ್ಫ್ಯೂನಲ್ಲಿ ಏನಿರಲಿದೆ? ಏನಿರಲ್ಲ ಎಂಬುದು ಇಂದು ಸಂಜೆ ಗೊತ್ತಾಗಲಿದೆ. ಸರ್ಕಾರ ಇಂದು ಸಂಜೆ ಈ ಕುರಿತಾಗಿ ಮಾರ್ಗಸೂಚಿ ಪ್ರಕಟ ಮಾಡಲಿದೆ.
ಜನವರಿಯಲ್ಲಿ ಶಾಲೆ ಆರಂಭ ಬಹುತೇಕ ಅನುಮಾನ; ಡಿ.28ರ ಬಳಿಕ ನಿರ್ಧಾರ
7.ಬ್ರಿಟನ್ ದೇಶದಿಂದ ಹೊಸ ಸ್ವರೂಪದ ಕೊರೋನಾ ಹರಡುತ್ತಿರುವ ಭಯದ ಮಧ್ಯೆ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಸೆಕೆಂಡ್ ಪಿಯುಸಿ ತರಗತಿಗಳು ಜನವರಿ ಒಂದರಿಂದ ಪ್ರಾರಂಭ ಮಾಡಲು ಸರ್ಕಾರ ನಿರ್ಧರಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ. ವಿಕಾಸಸೌಧದಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿವಿಧ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕಟ್ಟೆಚ್ಚರಿಕೆಯಿಂದ ತರಗತಿಗಳ ಆಯೋಜನೆಗೆ ವ್ಯಾಪಕ ಸಮಾಲೋಚನೆ ನಡೆಸಿದರು.
ಜ. 1ರಿಂದ ಎಸ್ಸೆಸ್ಸೆಲ್ಸಿ, ಪಿಯು ತರಗತಿ ಆರಂಭ; ವಾರದೊಳಗೆ ಪಠ್ಯಕ್ರಮ, ಪರೀಕ್ಷೆ ವೇಳಾಪಟ್ಟಿ ಪ್ರಕಟ
8. ಹೊಸ ಕೊರೋನಾ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ 9 ದಿನಗಳ ಕಾಲ ನೈಟ್ ಕರ್ಫ್ಯೂ ರಾಜ್ಯದಲ್ಲಿ ಜಾರಿಯಲ್ಲಿರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಜನವರಿ 2ರವರೆಗೆ ಈ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಇಂದಿನಿಂದಲೇ ಇಡೀ ರಾಜ್ಯಕ್ಕೆ ಈ ಆದೇಶ ಅನ್ವಯವಾಗಲಿದೆ.
ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ; ಅಂತರರಾಜ್ಯ ಬಸ್ ಸಂಚಾರ ಸ್ಥಗಿತ ಸಾಧ್ಯತೆ
9. ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಚಿತ್ರರಂಗಗಳಲ್ಲಿ ಧೂಳೆಬ್ಬಿಸಿರುವ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ರಿಯಲ್ ಲೈಫ್ ಗೂಢಚಾರಿಕೆ ಕಥಾವಸ್ತು ಇರುವ “ಮಿಷನ್ ಮಜ್ನು” ಬಾಲಿವುಡ್ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ನಾಯಕರಾಗಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
Rashmika Mandanna - ರಾ ಏಜೆಂಟ್ ಕಥೆಯ ಮಿಷನ್ ಮಜ್ನು ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್ಗೆ ಲಗ್ಗೆ
10. ದಿವಂಗತ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ದೆಹಲಿ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಹೀಗಾಗಿ ದೆಹಲಿಯ ಫಿರೋಜ್ ಷಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಅರುಣ್ ಜೇಟ್ಲಿ ಅವರ ಪುತ್ಥಳಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ, ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಮಾಜಿ ಕ್ರಿಕೆಟಿಗ ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ದೆಹಲಿ ಕ್ರಿಕೆಟ್ ಅಸೋಸಿಯೇಷನ್ನಿಂದಲೇ ಹೊರ ನಡೆದಿದ್ದಾರೆ.
ದೆಹಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅರುಣ್ ಜೇಟ್ಲಿ ಪುತ್ಥಳಿ ಇಡಲು ನಿರ್ಧಾರ; ಸಂಸ್ಥೆಯನ್ನೇ ತೊರೆದ ಬಿಷನ್ ಸಿಂಗ್ ಬೇಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ