Evening Digest: ಕೋರ್ಟ್​ ಎದುರು ವಿಚಾರಣೆಗೆ ಹಾಜರಾಗದ ಪ್ರಜ್ಞಾ ಸಿಂಗ್ ಠಾಕೂರ್‌, ಟಿಎಂಸಿ ಪಕ್ಷಕ್ಕೆ ಬಿಜೆಪಿ ಶಾಕ್

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರ ಪಾಲಿಗೆ ಮರಣ ಶಾಸನವಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಮೃತಪಟ್ಟ ರೈತರ ಗೌರವಾರ್ಥ ಇಂದು 'ಶೋಕ ದಿನ' ಆಚರಣೆ ನಡೆಸಲು ಸಂಯುಕ್ತ್ ಕಿಸಾನ್ ಮೋರ್ಚಾ ಕರೆ ಕೊಟ್ಟಿದೆ.

  Mourning Day: ರೈತರ ಪ್ರತಿಭಟನೆಯಲ್ಲಿ ಮೃತಪಟ್ಟವರ ಗೌರವಾರ್ಥ ಇಂದು ಶೋಕ ದಿನ ಆಚರಣೆ

   2. 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಪಕ್ಷದ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಈ ತಿಂಗಳು ಎರಡನೇ ಬಾರಿಗೆ ಕೋರ್ಟ್​ ಎದುರು ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಸೂಚಿಸಲಾಗಿತ್ತು. ಆದರೆ, ಈ ಬಾರಿಯೂ ಅವರು ನ್ಯಾಯಾಲಯದ ಎದುರು ಹಾಜರಾಗಿಲ್ಲ.

  ಮಾಲೆಗಾಂವ್‌‌ ಸ್ಪೋಟ ಪ್ರಕರಣ: 2 ನೇ ಬಾರಿಯೂ ಕೋರ್ಟ್​ ಎದುರು ವಿಚಾರಣೆಗೆ ಹಾಜರಾಗದ ಪ್ರಜ್ಞಾ ಸಿಂಗ್ ಠಾಕೂರ್‌

  3. ಬಿಹಾರದ ಚುನಾವಣೆ ಬೆನ್ನಿಗೆ ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷ ಚುನಾವಣೆ ನಡೆಯುವುದು ಪಕ್ಕಾ ಆಗಿದೆ. ಈ ನಡುವೆ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಬಿಜೆಪಿ ಪಣ ತೊಟ್ಟಂತೆ ಕಾಣುತ್ತಿದೆ. ಕಳೆದ ತಿಂಗಳು ಬಂಗಾಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕಾರ್ಯಕರ್ತರ ಸಭೆ ನಡೆಸಿ ಭೂತ್​ ಮಟ್ಟದಿಂದ ಪಕ್ಷವನ್ನು ಬಲಪಡಿಸುವಂತೆ ಕಿವಿಮಾತು ಹೇಳಿದ್ದರು.

  ಟಿಎಂಸಿ ಪಕ್ಷಕ್ಕೆ ಬಿಜೆಪಿ ಶಾಕ್; ಅಮಿತ್​ ಶಾ ನೇತೃತ್ವದಲ್ಲಿ ಸುವೆಂಧು ಅಧಿಕಾರಿ ಸೇರಿ 9 ಜನ ಶಾಸಕರು ಕಮಲಕ್ಕೆ ಪಕ್ಷಾಂತರ!

  4.ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ರಾಜ್ಯದ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಎಲ್ಲರೂ ಬೀದಿಗಿಳಿಯುವಂತಾಗಿದೆ. ಈ ಗೊಂದಲದಿಂದಾಗಿ ಬಹಳ ಮುಖ್ಯವಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

  ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಪ್ರತಿಭಟನೆ; ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

  5. ಶಿಕ್ಷಣ ಇಲಾಖೆ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ, ನಾಳೆಯಿಂದ ರುಪ್ಸಾ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಆನ್​ಲೈನ್ ಮತ್ತು ಆಫ್​ಲೈನ್​​ ತರಗತಿಗಳನ್ನು ಸ್ಥಗಿತಗೊಳಿಸುತ್ತಿದೆ.  ಜೊತೆಗೆ ಸಂಪೂರ್ಣ ಶೈಕ್ಷಣಿಕ ವರ್ಷವನ್ನು ಸ್ಥಗಿತ ಮಾಡಲು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ.  ಸರ್ಕಾರ ಶಾಲೆಗಳನ್ನು ಪುನರಾರಂಭಿಸುವ ಸಮಯದಲ್ಲಿ ಶಾಲೆಗಳನ್ನು ಮುಚ್ಚಲು ಖಾಸಗಿ ಶಿಕ್ಷಣ ಮಂಡಳಿ ಮುಂದಾಗಿದೆ.

  ನಾಳೆಯಿಂದ ರುಪ್ಸಾ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಆನ್ ಲೈನ್, ಆಫ್ ಲೈನ್ ತರಗತಿಗಳು ಸ್ಥಗಿತ

  6.ಜೋಡೆತ್ತು ಕಾಂಗ್ರೆಸ್ ಪಕ್ಷದ ಗುರುತಾಗಿತ್ತು. ಹಸು-ಕರು ಅವರ ಪಕ್ಷದ ಗುರುತಾಗಿತ್ತು. ಕಾಂಗ್ರೆಸ್ಸಿಗರು ಇತಿಹಾಸ ಮರೆತಿದ್ದಾರೆ. ಹಿಂದಿನ ಕಾಂಗ್ರೆಸ್ಸಿಗೂ ಈಗಿನ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

  ಜೋಡೆತ್ತು, ಹಸು-ಕರು ಕಾಂಗ್ರೆಸ್ ಪಕ್ಷದ ಗುರುತು, ಅವರಿಗೆ ಇತಿಹಾಸವೇ ಗೊತ್ತಿಲ್ಲ; ಸಿ.ಟಿ.ರವಿ ವ್ಯಂಗ್ಯ

  7. ಷಷ್ಠಿ ಹಬ್ಬದ ದಿನದಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಹುತ್ತಕ್ಕೆ ಕೋಳಿರಕ್ತ ಎರೆದು, ಕೋಳಿ ಮೊಟ್ಟೆ ಹಾಕಿ ನಾಗಾರಾಧನೆ ಮಾಡುವ ವಿಚಿತ್ರ ಸಂಪ್ರದಾಯವಿದೆ. ಹೌದು ಷಷ್ಠಿ ಹಬ್ಬದ ದಿನ ಹುತ್ತದ ಮುಂದೆ ಕೋಳಿ ಕುಯ್ದು ಅದರೆ ರಕ್ತವನ್ನು ಹುತ್ತಕ್ಕೆ ಎರೆಯುವುದು ಚಾಮರಾಜನಗರ ಜಿಲ್ಲೆಯ ಹಲವೆಡೆ ಕಂಡುಬರುತ್ತದೆ.

  ಷಷ್ಠಿ ಹಬ್ಬದಂದು ಹುತ್ತಕ್ಕೆ ಹಾಲಷ್ಟೇ ಅಲ್ಲ, ಇಲ್ಲಿ ಕೋಳಿ ಮೊಟ್ಟೆ ಹಾಕಿ ಕೋಳಿ ರಕ್ತಾನೂ ಎರೀತಾರೆ

  8.ಕಲಬುರ್ಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಡಿಸೆಂಬರ್ 22 ರಂದು ನಡೆಯಲಿದೆ. ಹೀಗಾಗಿ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕೆಲವೆಡೆ ಕೆಲ ಸದಸ್ಯರ ಅವಿರೋಧ ಆಯ್ಕೆ ನಡೆದಿದ್ದರೆ, ರಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಎಲ್ಲ ಸದಸ್ಯರ ಅವಿರೋಧ ಆಯ್ಕೆಯಾಗಿದೆ.

  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರದ ಅಬ್ಬರ ; ರಾವೂರು ಗ್ರಾಮದ ಎಲ್ಲ ಸದಸ್ಯರ ಅವಿರೋಧ ಆಯ್ಕೆ

  9. ಕೆಲವು ದಿನಗಳ ಹಿಂದೆಯಷ್ಟೆ ದರ್ಶನ್ ತಮ್ಮ ದೋಸ್ತಿಗಳೊಂದಿಗೆ ಕೇರಳದತ್ತ ಪಯಣ ಬೆಳೆಸಿದ್ದರು. ಪ್ರಯಾಣಕ್ಕೂ ಮುನ್ನ ತಮ್ಮ ಮನೆಯತ್ತ ನೆರೆದಿದ್ದ ಫ್ಯಾನ್ಸ್​ಗಾಗಿ ಪೋಸ್ ಕೊಟ್ಟ ದರ್ಶನ್ ಮತ್ತು ಅವರ ದೋಸ್ತಿ ಗ್ಯಾಂಗ್ ಫೋಟೋ ಸಾಮಾಜಿಕ ತಾಣಗಳಲ್ಲಿ ಭರ್ಜರಿ ವೈರಲ್ ಆಗಿತ್ತು. ಸ್ಯಾಂಡಲ್​ವುಡ್ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೂಟಿಂಗ್ ನಡುವೆ ಬಿಡುವುಮಾಡಿಕೊಂಡು ತಮ್ಮ ಸ್ನೇಹಿತರ ಬಳಗದೊಂದಿಗೆ ಜಾಲಿ ರೈಡ್ ಹೋಗುವುದು ಹೊಸ ವಿಷಯವೇನಲ್ಲ. ಇತ್ತೀಚೆಗಷ್ಟೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಪ್ರಣಬ್, ಪ್ರದೇಶ್, ಉಮಾಪತಿ ಸೇರಿದಂತೆ ತನ್ನ ಆಪ್ತ ಸ್ನೇಹಿತರೊಂದಿಗೆ ಡಿ ಬಾಸ್ ಮಡಿಕೇರಿಗೆ ಬೈಕ್​ನಲ್ಲಿ ಹೋಗಿದ್ದರು.

  D Boss Darshan: ಜಾಲಿ ರೈಡ್ ಹೊರಟ ಡಿ ಬಾಸ್ ದರ್ಶನ್​ಗೆ ಹೆದ್ದಾರಿಯಲ್ಲಿ ಕಾದು ಕುಳಿತ ಪೊಲೀಸರು: ಯಾಕೆ ಗೊತ್ತೇ?

  10. ಅಡಿಲೇಡ್​ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸುವ ಮೂಲಕ ಟೀಮ್ ಇಂಡಿಯಾ ಟೆಸ್ಟ್​ ಇತಿಹಾಸದಲ್ಲೇ ಭಾರತ ಕನಿಷ್ಠ ಮೊತ್ತ ಗಳಿಸಿದ ಹೀನಾಯ ದಾಖಲೆ ಬರೆದಿದೆ. ಹೌದು 1974 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್​ ಮೈದಾನದಲ್ಲಿ ಭಾರತ 42 ರನ್​ಗೆ ಆಲೌಟ್ ಆಗಿದ್ದು, ಇದುವರೆಗಿನ ಕಳಪೆ ದಾಖಲೆಯಾಗಿತ್ತು. ಆದರೆ ಶನಿವಾರ ಕೇವಲ 36 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದ ಕೊಹ್ಲಿ ಪಡೆ 46 ವರ್ಷಗಳ ಹಿಂದಿನ ಹೀನಾಯ ದಾಖಲೆಯನ್ನು ಅಳಿಸಿಹಾಕಿದರು.

  36 ರನ್ಸ್​...ಇದು ಕೇವಲ ಕಳಪೆ ದಾಖಲೆಯಲ್ಲ: ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪ್ರದರ್ಶನ
  Published by:G Hareeshkumar
  First published: