1.ಮಾತುಕತೆಗೆ ಕರೆದಿರುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಂಡೇ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 'ದೆಹಲಿ ಚಲೋ' ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.
2. ಜನಸಾಮಾನ್ಯರ ದಿನನಿತ್ಯ ಜೀವನದಲ್ಲಿ ಬದಲಾವಣೆಗಳಾಗುವುದು ಸಹಜ. ಅಂತೆಯೇ ಡಿಸೆಂಬರ್ 1ರಿಂದ ಅಂದರೆ ಇಂದಿನಿಂದ ಜನಸಾಮಾನ್ಯರ ಜೀವನದ ಮೇಲೆ ಕೆಲವೊಂದು ಪರಿಣಾಮಗಳು ಬೀರಬಹುದು. ಅಂತಹ ಪರಿಣಾಮಗಳೇನು ಎಂಬುದನ್ನು ಇಲ್ಲಿ ನೋಡಬಹುದಾಗಿದೆ.
3. ನಿವಾರ್ ಚಂಡಮಾರುತ ಅಬ್ಬರಿಸಿ ಕಣ್ಮರೆಯಾಗುತ್ತಿದ್ದಂತೆಯೇ ಈಗ ಮತ್ತೊಂದು ಚಂಡಮಾರುತ ನೆಲಕ್ಕಪ್ಪಳಿಸಲು ಅಣಿಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ನಿನ್ನೆ ವಾಯುಭಾರ ಕುಸಿತದಿಂದ ಬುರೇವಿ (Burevi) ಚಂಡಮಾರುತ ನಿರ್ಮಾಣವಾಗಿದ್ದು ಇವತ್ತಿನಿಂದ ನಾಲ್ಕು ದಿನಗಳ ಕಾಲ ದೇಶದ ದಕ್ಷಿಣದ ಕೆಲ ಭಾಗಗಳಲ್ಲಿ ಮಳೆ ಗಾಳಿ ರಾಚಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
4.ಕೇಂದ್ರ ಸರ್ಕಾರದ ಕಟು ಟೀಕಾಕಾರರಾಗಿ ಗಮನ ಸೆಳೆದಿರುವ ಶೆಹಲಾ ರಷೀದ್ ವಿರುದ್ಧ ಸ್ವತಃ ಆಕೆಯ ತಂದೆಯೇ ಸಿಡಿದೆದಿದ್ದಾರೆ. ತಮ್ಮ ಮಗಳ ದೇಶದ್ರೋಹ ಚಟುವಟಿಕೆಗಳನ್ನ ತನಿಖೆಗೆ ಒಳಪಡಿಸಬೇಕೆಂದು ಕೋರಿ ಅಬ್ದುಲ್ ರಷೀದ್ ಶೋರಾ ಅವರು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಗ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
5.ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರಾದ್ಯಂತ ರೈತ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿವಿಧ ರಾಜ್ಯಗಳಿಂದ ಇದೀಗ ದೆಹಲಿಗೆ ಆಗಮಿಸಿರುವ ರೈತರು ಇಡೀ ರಾಷ್ಟ್ರ ರಾಜಧಾನಿಯನ್ನೇ ಸ್ತಬ್ಧಗೊಳಿಸುವ ಬೆದರಿಕೆ ಒಡ್ಡಿದ್ದಾರೆ. ರೈತ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದ್ದು ಸದ್ಯಕ್ಕಂತೂ ಹೋರಾಟ ಕೊನೆಗೊಳ್ಳುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.
6.ದೆಹಲಿಯಲ್ಲಿ ರೈತರು ಚಳವಳಿ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ರೈತ ವಿರೋಧಿ ಕಾನೂನು ವಾಪಸ್ಗೆ ಕೇಂದ್ರಕ್ಕೆ ಡಿಸೆಂಬರ್ 3 ರವರಗೆ ಗಡುವು ನೀಡಲಾಗಿದೆ. ಡಿ.4 ರಿಂದಲೇ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ನೇತೃತ್ವದಲ್ಲಿ ಚಳುವಳಿ ನಡೆಸಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಎಚ್ಚರಿಸಿದರು.
7.ಕುರುಬ ಸಮುದಾಯದ ಮೀಸಲಾತಿ ಹೋರಾಟಕ್ಕೆ ಸಮುದಾಯದ ಮುಖಂಡರಾದ , ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಒಪ್ಪಿಗೆಯನ್ನು ಪಡೆದಿಲ್ಲ. ಅಲ್ಲದೇ ಮೀಸಲಾತಿಗೆ ಆಗ್ರಹಿಸಿ ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ನಡೆಸುತ್ತಿರುವ ಬೃಹತ್ ಪ್ರತಿಭಟನೆಗೂ ಅವರನ್ನು ಆಹ್ವಾನಿಸಿಲ್ಲ. ಇದೇ ಹಿನ್ನಲೆ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.
8. ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ 1.5 ರೂ. ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
9.ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ದೂರದ ಇಟಲಿಗೆ ತೆರಳಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಇವರ ವಿವಾಹದ ಫೋಟೋಗಳಿಗೆ ಆಗ ಸಖತ್ ಬೇಡಿಕೆ ಇತ್ತು. ಅದಕ್ಕಾಗಿಯೇ ಪಾಪರಾಜಿಗಳು ಸಿಕ್ಕಾಪಟ್ಟೆ ಒದ್ದಾಡಿದ್ದರು. ಈ ಸೆಲೆಬ್ರಿಟಿ ಜೋಡಿ ಮದುವೆಯಾಗಿ ಮೂರು ವರ್ಷಗಳ ನಂತರದಲ್ಲಿ ಸಿಹಿ ಸುದ್ದಿ ನೀಡಿದ್ದಾರೆ.
10. ಆಸ್ಟ್ರೇಲಿಯಾ ಪ್ರವಾಸವನ್ನು ಕೆಟ್ಟದಾಗಿ ಆರಂಭಿಸಿರುವ ಟೀಂ ಇಂಡಿಯಾ ಮೊದಲ ಎರಡೂ ಏಕದಿನ ಪಂದ್ಯದಲ್ಲಿ ಸೋಲುಂಡು ಸರಣಿ ಕಳೆದುಕೊಂಡಿದೆ. ನಾಳೆ ಬುಧವಾರ ಕ್ಯಾನ್ಬೆರಾದ ಮನುಕಾ ಓವಲ್ ಮೈದಾನದಲ್ಲಿ ಅಂತಿಮ ಮೂರನೇ ಏಕದಿನ ಪಂದ್ಯ ನಡೆಯಲಿದೆ.