1. ಕೋವಿಡ್-19 ರೋಗದಿಂದ ಭಾರತೀಯರು ಹೈರಾಣಾಗಿ ಹೋಗಿದ್ದಾರೆ. ಅರ್ಥ ವ್ಯವಸ್ಥೆ ಹದಗೆಟ್ಟು ಸರ್ಕಾರ ತಲೆ ಮೇಲೆ ಕೈಹೊತ್ತು ಕೂತಿದೆ. ಈ ಹೊತ್ತಿನಲ್ಲಿ ಭಾರತದಾದ್ಯಂತ ಮತ್ತೊಂದು ಮಾರಕ ರೋಗ ಪಸರುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಮ್ಯೂಕೋರ್ಮೈಕೋಸಿಸ್ ಎಂಬ ಅಪರೂಪದ ಫಂಗಲ್ ಕಾಯಿಲೆಯ ಸೋಂಕು ಅಹ್ಮದಾಬಾದ್ ನಗರದಲ್ಲಿ ದಟ್ಟವಾಗಿ ಹಬ್ಬುತ್ತಿದೆ.
MucorMycosis - ಕೊರೋನಾ ನಂತರ ಭಾರತದಲ್ಲಿ ಈಗ ಮತ್ತೊಂದು ಮಾರಕ ರೋಗ; ಅಲಕ್ಷಿಸಿದರೆ ದೊಡ್ಡ ಅಪಾಯ
2. ಉತ್ತರ ಪ್ರದೇಶದ ಹತ್ರಾಸ್ನಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಸಿಬಿಐ ಅಲ್ಲಿನ ಮೇಲ್ಜಾತಿಯ ನಾಲ್ವರು ಆರೋಪಿಗಳ ಮೇಲೆ ಚಾರ್ಜ್ ಶೀಟ್ ದಾಖಲಿಸಿದೆ. ಇದಕ್ಕೂ ಮುನ್ನ ಉತ್ತರ ಪ್ರದೇಶ ಪೊಲೀಸರು ಸಂತ್ರಸ್ತ ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಸಂತ್ರಸ್ತ ಯುವತಿ ಮೇಲೆ ಆರೋಪಿಗಳು ಗ್ಯಾಂಗ್ ರೇಪ್ ನಡೆಸಿ, ಹತ್ಯೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.
ಹತ್ರಾಸ್ ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ; ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ಶೀಟ್
3.ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರ ಪಾಲಿಗೆ ಮರಣ ಶಾಸನವಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ದೇಶದ 10 ಹಿರಿಯ ಅರ್ಥಶಾಸ್ತ್ರಜ್ಞರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ 10 ಅರ್ಥಶಾಸ್ತ್ರಜ್ಞರು
4. ಮುಂದಿನ 2 ವರ್ಷಗಳಲ್ಲಿ ಭಾರತದ ಎಲ್ಲ ಹೆದ್ದಾರಿಗಳನ್ನೂ ಟೋಲ್ಬೂತ್ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶಾದ್ಯಂತ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಟೋಲ್ ಸಂಗ್ರಹಕ್ಕೆ ಜಿಪಿಎಸ್ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಲು ನಿರ್ಧರಿಸಲಾಗಿದೆ.
Nitin Gadkari: ಇನ್ನೆರಡು ವರ್ಷಗಳಲ್ಲಿ ಟೋಲ್ಬೂತ್ ಮುಕ್ತವಾಗಲಿದೆ ಭಾರತ; ಕೇಂದ್ರ ಸಚಿವ ನಿತಿನ್ ಗಡ್ಕರಿ
5.ಕೇಂದ್ರದ ಕೃಷಿ ಕಾಯ್ದೆ ವಿರುದ್ಧದ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಹೋರಾಟ ನಿರತ ರೈತರ ಪೈಕಿ ಈವರೆಗೆ 24 ಜನ ಮೃತಪಟ್ಟಿದ್ದು, ರೈತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತಿದೆ. ಈ ನಡುವೆ ರಾಷ್ಟ್ರದಾದ್ಯಂತ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ.
Farmers Protest: ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ತಮಿಳುನಾಡಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಡಿಎಂಕೆ ಪಕ್ಷ
6. ನಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಹಾಗೂ ಹೆಚ್ಚು ವೇದನೆ ನೀಡಿದ ಕ್ಷೇತ್ರ ಚಾಮುಂಡೇಶ್ವರಿ. ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಸಹಿಸಲು ಅಸಾಧ್ಯ. ನಾನು ಚಾಮುಂಡೇಶ್ವರಿಯಲ್ಲಿ ಇಷ್ಟು ಕೆಟ್ಟದಾಗಿ ಸೋಲುತ್ತೇನೆ ಎಂದು ಕೊಂಡಿರಲಿಲ್ಲ. ನಾನು ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನೀವು ಸೋಲಿಸಿದಂತೆ ಅವರು ನನ್ನನ್ನು ಸೋಲಿಸಿದ್ದರೆ, ಈ ರಾಜ್ಯದ ಭವಿಷ್ಯ ಏನಾಗುತ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾವಾನಾತ್ಮಕವಾಗಿ ಮಾತನಾಡಿದ್ದಾರೆ.
Siddaramaiah: ನನ್ನನ್ನು ಸೋಲಿಸಲು ಕಾರಣಗಳೇನು ಹೇಳಿ: ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಕೇಳಿದ ಸಿದ್ದರಾಮಯ್ಯ
7. ರಾಜಧಾನಿ ಬೆಂಗಳೂರಿನಲ್ಲಿ ಕಸ ಶುಲ್ಕ ಹೆಚ್ಚಳ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಸಾರ್ವಜನಿಕರು, ವಾಣಿಜ್ಯ ಬಳಕೆದಾರರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ನ್ಯೂಸ್ 18 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ಕಸ ಹೆಚ್ಚುವರಿ ಶುಲ್ಕ ಯೋಜನೆಯನ್ನು ಹಿಂಪಡೆದಿದೆ.
ಸಾರ್ವಜನಿಕರ ವಿರೋಧದ ಬಳಿಕ ಕಸ ಹೆಚ್ಚುವರಿ ಶುಲ್ಕ ಯೋಜನೆ ಕೈಬಿಟ್ಟ ಬಿಬಿಎಂಪಿ
8. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 4 ದಿನಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ಬಸ್ಗಳ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಸಾರಿಗೆ ಇಲಾಖೆಗೆ 54 ಕೋಟಿ ರೂ. ನಷ್ಟವಾಗಿತ್ತು. ಹೀಗಾಗಿ, ಮುಷ್ಕರದ ಬೆನ್ನಲ್ಲೇ ಸಾರಿಗೆ ನೌಕರರಿಗೆ ಶಾಕ್ ನೀಡಿರುವ ಸರ್ಕಾರ 200 ಉದ್ಯೋಗಿಗಳನ್ನು ಅಮಾನತು ಮಾಡಿದೆ.
ಮುಷ್ಕರ ನಡೆಸಿದ್ದ ಸಾರಿಗೆ ನೌಕರರಿಗೆ ಶಾಕ್; 200ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟೀಸ್, ಹಲವರ ಅಮಾನತು!
9.ತರುಣ್ ಸುಧೀರ್ ಹಾಗೂ ಕಾಮಿಡಿ ಅದ್ಯಕ್ಷ ಶರಣ್, ಸ್ಯಾಂಡಲ್ವುಡ್ನ ಹಿಟ್ ಕಾಂಬಿನೇಷನ್ ಎಂದೇ ಹೇಳಬಹುದು. ಇವರಿಬ್ಬರು ಜೊತೆಯಾದಗಲೆಲ್ಲಾ ಸಕ್ಸಸ್ ಸಿಕ್ಕಿದೆ. ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ್ದೇ ಕಲೆಕ್ಷನ್ ಆಗಿದೆ. ಅಂದಹಾಗೆ ಕನ್ನಡ ಚಿತ್ರರಂಗದಲ್ಲಿ ಈ ಜೋಡಿ ಮೋಡಿ ಮಾಡೋಕೆ ಶುರು ಮಾಡಿದ್ದು, ರ್ಯಾಂಬೋ ಮೂಲಕ. ಹೌದು, ಶರಣ್ ನಾಯಕನಾಗಿ ಭಡ್ತಿ ಪಡೆದ ಈ ಸಿನಿಮಾದಲ್ಲಿ ತರುಣ್ ಸುಧೀರ್ ಡೈರೆಕ್ಷನ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿದ್ದರು.
ಶರಣ್-ತರುಣ್ ಕಾಂಬಿನೇಷನ್ನಲ್ಲಿ ತೆರೆಗೆ ಬರಲಿದೆ ಮತ್ತೊಂದು ಸಿನಿಮಾ..!
10. ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಇದೇ ಜನವರಿ 10ರಿಂದ 31ರವರೆಗೆ ನಡೆಯಲಿದೆ. ದೇಶೀಯ ಟಿ20 ಟೂರ್ನಿಯಾದ ಇದರಲ್ಲಿ ದೇಶದ ವಿವಿಧ ರಾಜ್ಯಗಳ 38 ತಂಡಗಳು ಹಣಾಹಣಿ ನಡೆಸಲಿವೆ. ಒಟ್ಟು ಆರು ಗುಂಪುಗಳನ್ನ ರಚಿಸಲಾಗಿದೆ. ಮೇಲಿನ ಹಂತದ ಐದು ಇಲೈಟ್ ಗುಂಪು ಹಾಗೂ ಕೆಳಗಿನ ಹಂತದ ಒಂದು ಪ್ಲೇಟ್ ಗುಂಪು. ಕರ್ನಾಟಕ ತಂಡ ಇಲೈಟ್ ವಿಭಾಗದ ಎ ಗುಂಪಿನಲ್ಲಿದೆ. ಎ ಗುಂಪಿನ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯುತ್ತವೆ.
Syed Mushtaq Ali Trophy: ಸಯದ್ ಮುಷ್ತಾಕ್ ಅಲಿ ಟಿ20: ಚಾಂಪಿಯನ್ ಕರ್ನಾಟಕದ ಎದುರಾಳಿಗಳು ಯಾರು? ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ