Evening Digest: ದೆಹಲಿ ಗಡಿ ಸಮೀಪ ಮತ್ತೋರ್ವ ಹೋರಾಟ ನಿರತ ರೈತ ಸಾವು, ಕ್ರಿಕೆಟ್ ಅಂಗಳಕ್ಕೆ ಮರಳಲಿರುವ ಸುರೇಶ್ ರೈನಾ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ 22 ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿ ಹೊರ ವಲಯದಲ್ಲಿ ಹೋರಾಟನಿರತರಾಗಿದ್ದಾರೆ. ಈ ಹೋರಾಟದಲ್ಲಿ ತೀವ್ರ ಚಳಿ ಮತ್ತು ಗಾಳಿಗೆ 36 ವರ್ಷದ ವ್ಯಕ್ತಿ ಹೋರಾಟದ ಕಣದಲ್ಲೇ ಮೃತಪಟ್ಟಿದ್ದಾರೆ. ಇವರಿಗೆ 10, 12 ಮತ್ತು 14 ವರ್ಷದ ಮೂವರು ಮಕ್ಕಳಿದ್ದಾರೆ ಎಂದು ವರದಿಯಾಗಿದೆ.

  Framers Protest: ರೈತ ಹೋರಾಟ; ತೀವ್ರ ಚಳಿ ಗಾಳಿಗೆ ದೆಹಲಿ ಗಡಿ ಸಮೀಪ ಮತ್ತೋರ್ವ ಹೋರಾಟ ನಿರತ ರೈತ ಸಾವು!

  2. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ರೈತರಿಗೂ ಪ್ರತಿಭಟಿಸುವ ಹಕ್ಕಿದ್ದು, ಅವರ ಹೋರಾಟ ಮುಂದುವರೆಯಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ರೈತರನ್ನು ಹೋರಾಟದ ಕಣದಿಂದ ತೆರವುಗೊಳಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್​ ಇಂದು ಮಹತ್ವದ ತೀರ್ಪು ನೀಡಿದೆ.

  Farmers Protest: ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ರೈತರ ಹೋರಾಟ ಮುಂದುವರೆಯಬೇಕು; ಸುಪ್ರೀಂ ಕೋರ್ಟ್​

  3. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಏತನ್ಮಧ್ಯೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ರೈತರನ್ನುಉದ್ದೇಶಿಸಿ ಮಾತನಾಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ನಾಳೆ ಮಧ್ಯಾಹ್ನ 2 ಗಂಟೆಗೆ ಭಾಷಣ ಮಾಡಲಿದ್ದಾರೆ.

  ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡುವೆ ನಾಳೆ ಮಧ್ಯಪ್ರದೇಶ ರೈತರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

  4. ಸಚಿವ ಸ್ಥಾನಕ್ಕೆ ಮತ್ತು ಶಾಸಕ ಸ್ಥಾನಕ್ಕೆರಾಜೀನಾಮೆ ನೀಡಿದ್ದ ಟಿಎಂಸಿ ಪಕ್ಷದ ಹಿರಿಯ ನಾಯಕ ಸುಭೇಂದು ಅಧಿಕಾರಿ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಇಂದು ಗುರುವಾರ ತಿಳಿಸಿದ್ದಾರೆ. ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ತಮ್ಮ ರಾಜೀನಾಮೆ ನಿರ್ಧಾರವನ್ನು ತಿಳಿಸಿದ್ದಾರೆ.

  ಟಿಎಂಸಿ ಪ್ರಾಥಮಿಕ ಸದಸ್ಯತ್ವಕ್ಕೆ ಸುಭೇಂದು ಅಧಿಕಾರಿ ರಾಜೀನಾಮೆ; ಈ ವಾರಾಂತ್ಯ ಬಿಜೆಪಿ ಸೇರ್ಪಡೆ ಸಾಧ್ಯತೆ

  5.ವಿಶ್ವ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಭಾರತ ಮತ್ತೆ ಎರಡು ಸ್ಥಾನ ಕುಸಿತ ಕಂಡಿದ್ದು, 131ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. 189 ದೇಶಗಳ ಪೈಕಿ ಕಳೆದ ವರ್ಷ ಭಾರತ 129ನೇ ಸ್ಥಾನ ಪಡೆದಿತ್ತು. ಆದರೆ, ಈ ವರ್ಷ ಎರಡು ಸ್ಥಾನ ಕುಸಿದಿದೆ ಎಂದು ವರದಿಯಾಗಿದೆ. ಆದರೆ ಪ್ರತಿ ರಾಷ್ಟ್ರದ ಅಭಿವೃದ್ಧಿಯಿಂದ ಉಂಟಾಗುವ ಗ್ರಹದ ಮೇಲಾಗುವ ಒತ್ತಡವನ್ನು ನಿರ್ಣಯಿಸಲು ಸೂಚ್ಯಂಕವನ್ನು ಸರಿಹೊಂದಿಸಿದರೆ, ಭಾರತವು ಶ್ರೇಯಾಂಕದಲ್ಲಿ ಎಂಟು ಸ್ಥಾನಗಳನ್ನು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

  ಮಾನವ ಅಭಿವೃದ್ಧಿ ಸೂಚ್ಯಾಂಕ; ಮತ್ತೆರಡು ಸ್ಥಾನ ಕುಸಿದು 131ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಭಾರತ!

  6. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದ್ದ ಖ್ಯಾತ ಉದ್ಯಮಿ ಆರ್​.ಎನ್​. ಶೆಟ್ಟಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಆರ್​.ಎನ್​.ಎಸ್​ ಶಿಕ್ಷಣ ಸಂಸ್ಥೆಗಳ ಸ್ಥಾಪಕರೂ ಆಗಿರುವ ಆರ್​.ಎನ್. ಶೆಟ್ಟಿ ಅವರಿಗೆ 92 ವರ್ಷವಾಗಿತ್ತು. ಅವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

  RN Shetty Death: ಖ್ಯಾತ ಉದ್ಯಮಿ ಆರ್​ಎನ್​ ಶೆಟ್ಟಿ ಹೃದಯಾಘಾತದಿಂದ ನಿಧನ; ಸಿಎಂ ಯಡಿಯೂರಪ್ಪ ಸಂತಾಪ

  7. ದೂರದ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಅತ್ಯಂತ ಸುಂದರವಾದ ರಾಷ್ಟ್ರವೂ ಹೌದು. ಕಡಲ ಕಿನಾರೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾದ ಆ ರಾಷ್ಟ್ರದಲ್ಲಿ ಇನ್ನು ಕರ್ನಾಟಕದ ತರಕಾರಿ, ಕಾಳುಗಳು ಕೂಡ ದೊರೆಯಲಿವೆ! ಹೇಗೆ ಅಂತೀರಾ? ಮಾಲ್ಡೀವ್ಸ್​ ಎಂಬ ಆ ಸುಂದರ ದ್ವೀಪಕ್ಕೆ ಇದೀಗ ಮಂಗಳೂರಿನಿಂದ ಸಮುದ್ರ ಮಾರ್ಗದ ಮೂಲಕ ಸರಕು ಸಾಗಾಟ ನೌಕೆಯೊಂದು ಹೊರಟಿದೆ.

  Mangalore: ಮಂಗಳೂರಿನಿಂದ ಮಾಲ್ಡೀವ್ಸ್​ಗೆ ಹಡಗಿ​ನಲ್ಲಿ ತರಕಾರಿ, ಗೊಬ್ಬರ ರಫ್ತು!

  8. ಆರ್ಥಿಕತೆ ದಿವಾಳಿಯಿಂದಾಗಿ ರಾಜ್ಯ ಸರ್ಕಾರ ಐಸಿಯುನಲ್ಲಿದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೋಮಾಕ್ಕೆ ಹೋಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

  ರಾಜ್ಯ ಸರ್ಕಾರ ಐಸಿಯುನಲ್ಲಿ - ಕೆಕೆಆರ್​​ಡಿಬಿ ಕೋಮಾ ಸ್ಥಿತಿಯಲ್ಲಿ: ಪ್ರಿಯಾಂಕ್ ಖರ್ಗೆ ಲೇವಡಿ

  9. ಸ್ಯಾಂಡಲ್​ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಬೆಳಗ್ಗೆಯಷ್ಟೇ 'ಮದಗಜ' ಚಿತ್ರತಂಡ, ಸಿನಿಮಾ ಟೀಸರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಭರ್ಜರಿಯಾಗಿ ಶುಭ ಕೋರಿದೆ. ಇದರ ಬೆನ್ನಲ್ಲೇ ಅವರ ಹೊಸ ಸಿನಿಮಾವೊಂದು ಅನೌನ್ಸ್ ಆಗಿದೆ.

  Bagheera Movie: ಪ್ರಶಾಂತ್ ನೀಲ್ ಚಿತ್ರಕಥೆ, ಮುರಳಿ ನಾಯಕನಾಗಿರುವ ಬಘೀರ ಸಿನಿಮಾ ನಿರ್ದೇಶಕ ಡಾ. ಸೂರಿ ಯಾರು ಗೊತ್ತೇ?

  10. ಕೆಲ ತಿಂಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಇದೀಗ ದೇಶೀಯ ಕ್ರಿಕೆಟ್​ಗೆ ಅಣಿಗೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸಯದ್ ಮುಷ್ತಾಕ್ ಅಲಿ ಟ್ರೋಫಿ ಸೀಮಿತ ಓವರ್​ಗಳ ಟೂರ್ನಿಯಲ್ಲಿ ಅವರು ಆಡಲಿದ್ದಾರೆ. ತಮ್ಮ ಉತ್ತರ ಪ್ರದೇಶ ರಾಜ್ಯ ತಂಡದ ಪರವಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  Suresh Raina – ಕ್ರಿಕೆಟ್ ಅಂಗಳಕ್ಕೆ ಮರಳಲಿರುವ ಸುರೇಶ್ ರೈನಾ
  Published by:G Hareeshkumar
  First published: