HOME » NEWS » National-international » EVENING DIGEST DECEMBER 16TH TOP 10 KANNADA POLITICAL SPORTS AND OTHER NEWS ARE HE HK

Evening Digest: ಕೇರಳ ಚುನಾವಣೆಯಲ್ಲಿ ಎಲ್​ಡಿಎಫ್ ಜಯಭೇರಿ, ಪ್ರಮುಖ ರಾಜಕಾರಣಿಗೆ ಬಿಗ್ ಬಾಸ್ ಗಾಳ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

news18-kannada
Updated:December 16, 2020, 4:48 PM IST
Evening Digest: ಕೇರಳ ಚುನಾವಣೆಯಲ್ಲಿ ಎಲ್​ಡಿಎಫ್ ಜಯಭೇರಿ, ಪ್ರಮುಖ ರಾಜಕಾರಣಿಗೆ ಬಿಗ್ ಬಾಸ್ ಗಾಳ
ಸಾಂದರ್ಭಿಕ ಚಿತ್ರ
  • Share this:
1. ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ 78 ವರ್ಷದ ಜೋ ಬೈಡನ್​ ಸ್ವತಃ ತಾವೇ ಕೊರೋನಾ ಲಸಿಕೆಯನ್ನು ಸಾರ್ವಜನಿಕವಾಗಿ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗ ತಜ್ಱ ಆಂಥೋನಿ ಫೌಸಿ ತಮಗೆ ಶಿಫಾರಸು ಮಾಡಿದ್ದು ಶೀಘ್ರದಲ್ಲೇ ಈ ಲಸಿಕೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾ ಲಸಿಕೆಯನ್ನು ಶೀಘ್ರವೇ ಸಾರ್ವಜನಿಕವಾಗಿ ಸ್ವತಃ ನಾನೇ ಸ್ವೀಕರಿಸುತ್ತೇನೆ; ಅಮೆರಿಕ ಅಧ್ಯಕ್ಷ ಜೋ ಬೈಡನ್

2. ಮಧ್ಯಪ್ರದೇಶದ ಜಬಲ್​ಪುರ್​ನ ಪಾಟನ್ ಎಂಬಲ್ಲಿ ರೈತರಿಗೆ ಪಾವತಿ ವಿಳಂಬ ಮಾಡಿದ್ದಕ್ಕೆ ಖಾಸಗಿ ಸಂಸ್ಥೆಯೊಂದಕ್ಕೆ 25 ಸಾವಿರ ದಂಡ ವಿಧಿಸಿದ ಸಂಗತಿ ಬೆಳಕಿಗೆ ಬಂದಿದೆ. ಕೇಂದ್ರದ ನೂತನ ಕೃಷಿ ಕಾಯ್ದೆಗಳ ನಿಯಮಗಳ ಅನುಸಾರವಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟರು ಈ ದಂಡ ವಿಧಿಸಿದ್ದು ಇದರ ವಿಶೇಷತೆ. ರೈತರಿಂದ ಬೆಳೆ ಖರೀದಿ ಮಾಡಿದ ಖಾಸಗಿ ವ್ಯಾಪಾರಿ ನಿಗದಿತ ಅವಧಿಯಲ್ಲಿ ಹಣ ಪಾವತಿ ಮಾಡಲು ವಿಫಲರಾಗಿದ್ದರು.

ಹೊಸ ಕೃಷಿ ಕಾನೂನು ಪ್ರಕಾರ ರೈತರಿಗೆ ಪೇಮೆಂಟ್ ನಿಧಾನಿಸಿದ್ದಕ್ಕೆ ಕಂಪನಿಗೆ ಬಿತ್ತು ದಂಡ

3. ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ (Kerala Local Body Elections) ಆಡಳಿತಾರೂಢ ಎಲ್​ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಈಗ ಬಂದಿರುವ ಇತ್ತೀಚಿನ ಮಾಹಿತಿ ಪ್ರಕಾರ ಎಲ್​ಡಿಎಫ್ ಮೈತ್ರಿಕೂಟ 482 ಗ್ರಾ.ಪಂ., 103 ಬ್ಲಾಕ್ ಪಂಚಾಯತ್, 41 ಪುರಸಭೆ, 14 ಜಿಲ್ಲಾ ಪಂಚಾಯತ್ ಮತ್ತು 3 ನಗರಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.

Kerala Election Results: ಕೇರಳ ಚುನಾವಣೆ: ಎಲ್​ಡಿಎಫ್ ಜಯಭೇರಿ; ತುಸು ಬಲವೃದ್ಧಿಸಿಕೊಂಡ ಬಿಜೆಪಿ

4. ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ವೇಳೆಗೆ ಚುನಾವಣೆ ಎದುರಾಗಲಿದ್ದು, ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರಕ್ಕೆ ಮುಂದಾಗಿವೆ. ಮತ್ತೊಂದೆಡೆ ತಮಿಳುನಾಡಿನ ಸಿನಿಮಾ ಸೂಪರ್ ಸ್ಟಾರ್​ ರಜಿನಿಕಾಂತ್​ ಸಹ ರಾಜಕೀಯಕ್ಕೆ ಧುಮುಕುವುದು ಬಹುತೇಕ ಖಚಿತವಾಗಿದ್ದು, ಅವರು ಆಟೋರಿಕ್ಷಾ ಚಿಹ್ನೆಯೊಂದಿಗೆ ಮಕ್ಕಳ್​ ಸೇವಯ್​ ಕಚ್ಚಿ (MSK) ಎಂಬ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ನಿನ್ನೆಯಿಂದ ಹರಿದಾಡುತ್ತಿದೆ.ಸೈದ್ದಾಂತಿಕವಾಗಿ ಒಮ್ಮತವಿದ್ದರೆ ನಟ ರಜಿನಿಕಾಂತ್ ಜೊತೆಗೆ ರಾಜಕೀಯ ಮೈತ್ರಿಗೆ ಸಿದ್ಧ; ಕಮಲಹಾಸನ್ ಸ್ಪಷ್ಟನೆ

5. ನಿನ್ನೆ ವಿಧಾನಪರಿಷತ್​ನಲ್ಲಿ ನಡೆದ ಗಲಾಟೆ ಪ್ರಕರಣ ದೇಶಾದ್ಯಂತ ಜೋರು ಸುದ್ದಿಯಾಗಿದೆ. ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಪಟ್ಟು ಹಿಡಿದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳು ರಾಜ್ಯದ ಮಾನ ಹರಾಜು ಹಾಕಿವೆ. ಕಾಂಗ್ರೆಸ್ ಬಳಿ ಇರುವ ಸಭಾಪತಿ ಸ್ಥಾನವನ್ನು ಪಡೆದುಕೊಳ್ಳಲು ಶತಾಯಗತಾಯ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಜೆಡಿಎಸ್ ಕೂಡ ಕೈಜೋಡಿಸಿದೆ. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದೆ.

ಸಭಾಪತಿ ಸ್ಥಾನಕ್ಕೆ ಕಿತ್ತಾಟ; ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಸಿದ್ದರಾದ ಸಿದ್ದರಾಮಯ್ಯ

6. ಕಾಂಗ್ರೆಸ್​ನವರು ಅಧಿಕಾರಕ್ಕಾಗಿ ಗೂಂಡಾಗಿರಿ ಮಾಡಿರುವ ನಿದರ್ಶನಗಳೂ ಕಣ್ಮುಂದೆ ಇವೆ. ಇವರ ವರ್ತನೆಗೆ ಬೇಸತ್ತು ಪಕ್ಷದಿಂದ ಹೊರ ಬಂದ ಶಾಸಕರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದರು. ವಿಧಾನ ಸೌಧದಲ್ಲಿ ಒಬ್ಬ ಶಾಸಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು. ಈಗ ವಿಧಾನ ಪರಿಷತ್​ನಲ್ಲೂ ದಾಂಧಲೆ ಮಾಡಿದ್ದಾರೆ. ಗೂಂಡಾಗಿರಿ ಮಾಡಿ ಪರಿಷತ್ ಮಾನವನ್ನು ಹರಾಜು ಹಾಕಿದ್ದಾರೆ. ಅತ್ಯಂತ ಹಿರಿಯ ಹಾಗೂ ಗೌರವಯುತ ವ್ಯಕ್ತಿಗಳಿರುವ ಜಾಗದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ.

ಕಾಂಗ್ರೆಸ್​ ದಿವಾಳಿತನಕ್ಕೆ ಗೂಂಡಾ ರಾಜಕಾರಣವೇ ಕಾರಣ; ನಳಿನ್ ಕುಮಾರ್ ಕಟೀಲ್ ವಾಗ್ದಾಳಿ

7. ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ರಾಜ್ಯದ ಸಚಿವರು, ಜೆಡಿಎಸ್ ನಾಯಕರು ಸೇರಿದಂತೆ ಕರ್ನಾಟಕದ ಅನೇಕ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಇದರ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಹೆಚ್​ಡಿ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

HD Kumaraswamy Birthday: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

8.ರಾಜ್ಯದ ಪ್ರಮುಖ ರಾಜಕಾರಣಿಗಳ ಪೈಕಿ ಒಬ್ಬರಾದ, ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ಅನುಗುಣವಾಗಿ, ಕ್ಷಣಾರ್ಧದಲ್ಲಿ ಗುಣಕಾರ ಭಾಗಕಾರ ಹಾಕಿ ಮಾತನಾಡುವ, ಮಾತಿನ ಮಧ್ಯೆ ಹಾಸ್ಯವನ್ನು ಹರಿಬಿಡುವ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಈಗ ರಾಜ್ಯದ ಜನತೆ ಮುಂದೆ ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರಮುಖ ರಾಜಕಾರಣಿಗೆ ಬಿಗ್ ಬಾಸ್ ಗಾಳ; ಕನ್ನಡದ 8ನೇ ಆವೃತಿಯಲ್ಲಿ ಕೇಳಲಿದೆಯೇ ಹಳ್ಳಿ ಹಕ್ಕಿ ಕಲರವ?

9. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್​ ಕ್ರಶ್​ ಆಗಿ ಸದ್ದು ಮಾಡುತ್ತಿದ್ದಾರೆ. ಕನ್ನಡ, ತೆಲುಗಿನಲ್ಲಿ ಬೇಡಿಕೆ ಪಡೆದ ರಶ್ಮಿಕಾರ ತಮಿಳು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ್ದಾರೆ ಈ ಬೆಡಗಿ. ಟ್ವಿಟರ್​ ಇಂಡಿಯಾ ಬಿಡುಗಡೆ ಮಾಡಿದ ಈ ವರ್ಷ ಟ್ವಿಟರ್​ನಲ್ಲಿ ಹೆಚ್ಚು ಬಾರಿ ಟ್ವೀಟ್​ ಆದ ಕನ್ನಡದ ಏಕೈಕ ನಟಿ ರಶ್ಮಿಕಾ ಮಂದಣ್ಣ ಆಗಿದ್ದಾರೆ.

Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

10. ಕಾಂಗರೂ ನೆಲದಲ್ಲಿ ಏಕದಿನ ಸರಣಿ ಸೋತರೂ ಟಿ-20 ಸರಣಿಯಲ್ಲಿ ಗೆಲುವು ಸಾಧಿಸುವ ಮೂಲಕ ವಿಜಯದ ಹಾದಿಗೆ ಮರಳಿರುವ ಭಾರತ ತಂಡ ನಾಳೆಯಿಂದ ಟೆಸ್ಟ್​ ಸರಣಿಗಾಗಿ ಕಣಕ್ಕಿಳಿಯಲಿದೆ. ಆಸೀಸ್​ ಎದುರು ಭಾರತ ಟೆಸ್ಟ್​ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ? ಎಂಬ ಕುತೂಹಲ ಮೂಡಿತ್ತು. ಆದರೆ, ಟೀಮ್​ ಇಂಡಿಯಾ ಇಂದು ಆಡುವ ಹನ್ನೊಂದು ಆಟಗಾರರ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದು ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದೆ.

AUS vs IND: ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್​; ಅಂತಿಮ ಹನ್ನೊಂದು ಆಟಗಾರರ ಪಟ್ಟಿ ಬಿಡುಗಡೆ; ಯಾರೆಲ್ಲಾ ಇದ್ದಾರೆ ಗೊತ್ತಾ?
Published by: G Hareeshkumar
First published: December 16, 2020, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories