Evening Digest: ಗಣರಾಜ್ಯೋತ್ಸವ ಪರೇಡ್​ಗೆ ಬ್ರಿಟನ್ ಪ್ರಧಾನಿ ಮುಖ್ಯ ಅತಿಥಿ, ಸಂಸತ್​ ಚಳಿಗಾಲ ಅಧಿವೇಶನ ರದ್ದು

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಕೇಂದ್ರದ ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ಕಳೆದ 20 ದಿನಗಳಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಕೃಷಿ ಕಾಯ್ದೆ ರದ್ದುಪಡಿಸುವಂತೆ ಅವರು ಬಿಗಿ ಪಟ್ಟು ಹಿಡಿದಿದ್ದು, ಕೃಷಿಕರೊಂದಿಗೆ ಸರ್ಕಾರ ನಡೆಸಿರುವ ಆರು ಸುತ್ತಿನ ಮಾತುಕತೆ ವಿಫಲವಾಗಿದೆ. ಈ ನಡುವೆ ಕೃಷಿ ಕಾಯ್ದೆಯನ್ನು ಸಮರ್ಥನೆ ನೀಡುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ.

  ರೈತರಲ್ಲಿ ಗೊಂದಲ ಮೂಡಿಸುವ ಹುನ್ನಾರ; ರೈತರ ಅನುಮಾನಗಳನ್ನು ಸ್ಪಷ್ಟಪಡಿಸಲು ಸರ್ಕಾರ ಸಿದ್ಧ; ಮೋದಿ

  2.ಜನವರಿ 15ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನದ ಪೆರೇಡ್​ನಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಲಿದ್ದಾರೆ. ಕಳೆದ ತಿಂಗಳು ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿಗೆ ದೂರವಾಣಿ ಕರೆ ಮೂಲಕ ಈ ಆಹ್ವಾನ ನೀಡಿದ್ದು, ಅದಕ್ಕೆ ಬೋರಿಸ್ ಜಾನ್ಸನ್ ಒಪ್ಪಿಕೊಂಡಿದ್ದಾರೆ.

  Boris Johnson – ಭಾರತದ ಗಣರಾಜ್ಯೋತ್ಸವ ಪರೇಡ್​ಗೆ ಬ್ರಿಟನ್ ಪ್ರಧಾನಿ ಮುಖ್ಯ ಅತಿಥಿ

  3. ಕೊರೋನಾ ವೈರಸ್​ ಸೋಂಕಿನ ಹಿನ್ನಲೆ ಈ ಬಾರಿ ಚಳಿಗಾಲ ಅಧಿವೇಶನವನ್ನು ರದ್ದುಮಾಡಲಾಗಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಈ ಬಾರಿ ಚಳಿಗಾಲ ಅಧಿವೇನ ನಡೆಸದಿರಲು ತೀರ್ಮಾನಿಸಲಾಗಿದೆ. ಈ ಕುರಿತು ಲೋಕಸಭಾ ಕಾಂಗ್ರೆಸ್​ ನಾಯಕ ಅಧಿರ್​ ರಂಜನ್​ ಚೌಧರಿ ಅವರಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ತಿಳಿಸಿದ್ದಾರೆ.

  Winter Session: ಕೋವಿಡ್​-19 ಹಿನ್ನಲೆ ಸಂಸತ್​ ಚಳಿಗಾಲ ಅಧಿವೇಶನ ರದ್ದು

  4. ಇಂದು ಪ್ರಾರಂಭಗೊಂಡ ಫೇಸ್​ಬುಕ್ ಫುಯಲ್ ಫಾರ್ ಇಂಡಿಯಾ ಆನ್​ಲೈನ್ ಶೃಂಗಸಭೆಯ ಮೊದಲ ದಿನದ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ ಮತ್ತು ಮಾರ್ಕ್ ಝುಕರ್​ಬರ್ಗ್ ನಡುವಿನ ಸಂವಾದವೇ ಪ್ರಮುಖ ಅಂಶವೆನಿಸಿತು. ವಿಶ್ವ ಉದ್ಯಮದ ದಿಗ್ಗಜರಾದ ಫೇಸ್​ಬುಕ್ ಸಂಸ್ಥಾಪಕ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರ ಮಧ್ಯೆ ಡಿಜಿಟಲ್ ಕ್ಷೇತ್ರದ ಪ್ರಾಮುಖ್ಯತೆ ಬಗ್ಗೆ ಗಹನ ಚರ್ಚೆ ಆಯಿತು.

  Facebook Fuel For India 2020 – ಗಮನ ಸೆಳೆಯಿತು ಮಾರ್ಕ್ ಝುಕರ್​ಬರ್ಗ್ ಮತ್ತು ಅಂಬಾನಿ ಸಂವಾದ

  5. 2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ತಿಳಿಸಿದ್ದಾರೆ. ಎಂಟು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಎಎಪಿ ದೆಹಲಿಯಲ್ಲಿ ಮೂರು ಬಾರಿ ಸರ್ಕಾರ ರಚಿಸಿದೆ. ಪಂಜಾಬ್​ನಲ್ಲಿ ಬಹುದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು, ಈಗ ಉತ್ತರ ಪ್ರದೇಶದಲ್ಲಿ ಸ್ಪರ್ಧೆಗೆ ತಯಾರಿ ನಡೆಸಿದೆ.

  2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಎಎಪಿ ಸಜ್ಜು; ಅರವಿಂದ್​ ಕೇಜ್ರಿವಾಲ್​

  6. ಬಹು ನಿರೀಕ್ಷಿತ ತಮಿಳುನಾಡಿನ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ಈ ಚುನಾವಣೆಯಲ್ಲಿ ಡಿಎಂಕೆ ಮತ್ತು ಎಡಿಎಂಕೆ ಪಕ್ಷಗಳು ಗೆಲ್ಲುವ ಫೇವರಿಟ್​. ಆದರೆ, ತಮಿಳುನಾಡಿನ ಸಿನಿಮಾ ಸೂಪರ್​ ಸ್ಟಾರ್​ ರಜನಿಕಾಂತ್​ ತಮ್ಮ ಪಕ್ಷವನ್ನು ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ತಮಿಳುನಾಡು ಚುನಾವಣೆಯಲ್ಲಿ ಆಟೋ ರಿಕ್ಷಾ ಚಿಹ್ನೆಯಲ್ಲಿ ಸ್ಪರ್ಧಿಸುತ್ತಾರಾ ರಜಿನಿಕಾಂತ್?; ಕುತೂಹಲವಾಗಿದೆ ನಟ ನಡೆ

  7. ವಿಧಾನ ಪರಿಷತ್​ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಅವಕಾಶ ನೀಡದೆ ಏಕಾಏಕಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಅವಿಶ್ವಾಸ ಗೊತ್ತುವಳಿ ನಿರ್ಣಯ ಹಾಗೂ ಗೋಹತ್ಯೆ ನಿಷೇಧ ಮಸೂದೆ ಬಗ್ಗೆ ಚರ್ಚಿಸಲು ಇಂದು ವಿಧಾನ ಪರಿಷತ್​ ಮರು ಕಲಾಪ ನಡೆಸಲಾಗಿತ್ತು. ಆದರೆ, ಇಂದಿನ ಕಲಾಪ ಅಕ್ಷರಶಃ ರಣರಂಗವಾಗಿ ಬದಲಾಗಿತ್ತು.

  ವಿಧಾನ ಪರಿಷತ್​ ಕಲಾಪದಲ್ಲೇ ಕೈ ಮಿಲಾಯಿಸಿದ ಸದಸ್ಯರು; ಬಿಜೆಪಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಸಭಾಪತಿ

  8. ಹಾಲಿ ಸಭಾಪತಿ ಅವಿಶ್ವಾಸ ನಿರ್ಣಯಯನ್ನು  ಜೆಡಿಎಸ್ ಸದಸ್ಯರು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಬೆಂಬಲ ಇಲ್ಲದ ಮೇಲೆ, ಬಹುಮತ ಇಲ್ಲದ ಮೇಲೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಕಾಂಗ್ರೆಸ್ ನವರ ಕರ್ತವ್ಯ.  ಕಾನೂನಿನ ಚೌಕಟ್ಟಿನ ಪ್ರಕಾರ ಸಭಾಪತಿ ರಾಜೀನಾಮೆ ನೀಡಬೇಕು. ಒಂದು ಸಾರಿ ನಿಮ್ಮ ಮೇಲೆ ಅವಿಶ್ವಾಸ ನಿರ್ಣಯ ಆದ ಮೇಲೆ ನಿಮಗೆ ಆ ಕುರ್ಚಿಯಲ್ಲಿ ಕೂರಲು ಅರ್ಹತೆಯಿಲ್ಲ. ಇದು ಇಡೀ ಜಗತ್ತಿಗೆ ಗೊತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ಅನೇಕ ತೀರ್ಪುಗಳಿವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.

  ಉಪಸಭಾಪತಿಗಳ ಕತ್ತು ಹಿಡಿದು ಎಳೆದಾಡಿದ್ದು ದೇಶದ ಇತಿಹಾಸದಲ್ಲೇ ಮೊದಲು; ಸಿಎಂ ಬಿಎಸ್ ಯಡಿಯೂರಪ್ಪ

  9. ಸ್ಯಾಂಡಲ್​ವುಡ್​ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡುವ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆ ಹೊಂಬಾಳೆ ಫಿಲಂಸ್​. ಇಂತಹ ಪ್ರತಿಷ್ಠಿತ ಸಂಸ್ಥೆ ಕೆಜಿಎಫ್​ ನಂತರ ಇತ್ತೀಚೆಗಷ್ಟೆ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾವನ್ನು ಪ್ರಕಟಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಲಾರ್​ ಎಂದು ಟೈಟಲ್​ ಇಟ್ಟಿರುವ ಚಿತ್ರದಲ್ಲಿ ಪ್ರಭಾಸ್​ ಮೋಸ್ಟ್​ ವೈಲೆಂಟ್​ ಮ್ಯಾನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

  ಹೊಂಬಾಳೆ ಫಿಲಂಸ್​ನಿಂದ ಮತ್ತೊಂದು ಬಿಗ್ ಅನೌನ್ಸ್​ಮೆಂಟ್: ಈ ಬಾರಿ ಹೀರೋ ಯಾರು ಗೊತ್ತೇ?

  10. 2022ರ ಐಸಿಸಿ ಮಹಿಳಾ ವಿಶ್ವಕಪ್ ವೇಳಾಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಮಾರ್ಚ್​ 4 ರಿಂದ ಶುರುವಾಗಲಿರುವ ಟೂರ್ನಿ ಏಪ್ರಿಲ್ 3ರವರೆಗೆ ನಡೆಯಲಿದೆ.

  ICC Women’s World Cup 2022: 2022ರ ಮಹಿಳಾ ವಿಶ್ವಕಪ್ ವೇಳಾಪಟ್ಟಿ ಪ್ರಕಟ..!
  Published by:G Hareeshkumar
  First published: