Evening Digest: ತಮಿಳುನಾಡಿನಲ್ಲಿ ಕಮಲ್ ಹಾಸನ್-ಒವೈಸಿ ಮೈತ್ರಿ ಸಾಧ್ಯತೆ, ಅಮೆರಿಕದಲ್ಲಿ ಗಾಂಧಿ ಪ್ರತಿಮೆಗೆ ಹಾನಿ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ ನಡೆದ 5 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.

  Farmers Protest: ದೆಹಲಿ ಗಡಿಯಲ್ಲಿ19 ದಿನದಿಂದ ರೈತರ ಪ್ರತಿಭಟನೆ; ಇಂದಿನಿಂದ ಉಪವಾಸ ಸತ್ಯಾಗ್ರಹ

  2. ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಬಹಳ ದೊಡ್ಡ ಮಟ್ಟದಲ್ಲಿ ಜಾಸ್ತಿಯಾಗುತ್ತದೆ. ಹಾಗೆ ದಿನ ಕಳೆದಂತೆ ಅದು  ಕಡಿಮೆ ಕೂಡ ಆಗುತ್ತದೆ. ಆದರೆ, ಈ ಬಾರಿ ದೀಪಾವಳಿ ಹಬ್ಬವಾಗಿ ತಿಂಗಳು ಕಳೆದರೂ ವಾಯು ಮಾಲಿನ್ಯ ಮಾತ್ರ ನಿಯಂತ್ರಣಕ್ಕೆ ಬಾರದೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಈ ಹಿನ್ನಲೆಯಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

  ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ : ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

  3. ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲವಾಗಿ ಅಮೆರಿಕದಲ್ಲಿನ ಸಿಖ್ ಧರ್ಮೀಯರು ಕಾರ್ ರ್ಯಾಲಿ ನಡೆಸಿದರು. ಈ ವೇಳೆ, ಶಾಂತಿಯುತವಾಗಿ ನಡೆದ ಈ ರ್ಯಾಲಿಯ ಮಧ್ಯೆ ಖಲಿಸ್ತಾನೀ ಪ್ರತ್ಯೇಕತಾವಾದಿಗಳು ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿ ಅಟ್ಟಹಾಸ ಮೆರೆದ ಘಟನೆಯೂ ವರದಿಯಾಗಿದೆ.

  ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನಿ ಹೋರಾಟಗಾರರಿಂದ ಅಮೆರಿಕದಲ್ಲಿ ಗಾಂಧಿ ಪ್ರತಿಮೆಗೆ ಹಾನಿ

  4. ಹೈದರಾಬಾದ್​ನಿಂದ ಹೊರಗೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷ ಇದೀಗ ತಮಿಳುನಾಡಿನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡುತ್ತಿದೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಸ್ಪರ್ಧಿಸಲು ನಿರ್ಧರಿಸಿದೆ.

  ತಮಿಳುನಾಡಿನಲ್ಲಿ ಕಮಲ್ ಹಾಸನ್-ಒವೈಸಿ ಮೈತ್ರಿ ಸಾಧ್ಯತೆ; 25 ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧೆ?

  5. ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಇಂದು ಅಂತ್ಯಗೊಂಡಿದೆ. ಹಲವು ಹೇಳಿಕೆ ಪ್ರತಿಹೇಳಿಕೆಗಳಿಂದ ಮೂಡಿದ್ದ ಗೊಂದಲಗಳು ಕೊನೆಗೂ ತೆರೆಬಿದ್ದಿದೆ. ನಾಗರಿಕ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯುತ್ತಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

  ಸಾರಿಗೆ ನೌಕರರ ಮುಷ್ಕರ ಅಂತ್ಯ; ಸಾರ್ವಜನಿಕರು ನಿರಾಳ; ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ

  6. ಸಿಎಂ ಇಬ್ರಾಹಿಂ ಅವರು ಸ್ವಂತ ಮನೆಗೆ ಬರುವ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಈ ಬಗ್ಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ನಾನು ಇಬ್ರಾಹಿಂ ಅವರನ್ನು ಭೇಟಿ ಮಾಡಿದ ಬಳಿಕ ಕೆಲವು ಕಾಂಗ್ರೆಸ್ ನಾಯಕರು ಇಬ್ರಾಹಿಂ ಮನೆಗೆ ಹೋಗಿದ್ದಾರೆ. ಈಗ ಇಬ್ರಾಹಿಂ ಮನೆ ಅಡ್ರೆಸ್ ಹುಡುಕಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

  ಸಿಎಂ ಇಬ್ರಾಹಿಂ ಸ್ವಂತ ಮನೆಗೆ ಬರುವ ಬಗ್ಗೆ ಚಿಂತನೆ ಮಾಡಿದ್ದಾರೆ; ಎಚ್.ಡಿ.ಕುಮಾರಸ್ವಾಮಿ

  7.ಕಳೆದ 10 ದಿನಗಳಿಂದ ಚಿನ್ನದ ಬೆಲೆ ಹೆಚ್ಚೂಕಡಿಮೆ ಒಂದೇ ರೀತಿಯಲ್ಲಿದೆ. ಕಳೆದ ವಾರ ಭಾರತದಲ್ಲಿ 10 ಗ್ರಾಂಗೆ 49,330 ರೂ. ಇದ್ದ ಚಿನ್ನದ ಬೆಲೆ ಇಂದು 49,260 ರೂ. ಆಗಿದೆ. ಅಲ್ಪ ಏರಿಳಿತಗಳನ್ನು ಬಿಟ್ಟರೆ 10 ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಈಗಿನ ಚಿನ್ನದ ಬೆಲೆಯಿಂದ ಜನರು ಬಂಗಾರವನ್ನು ಖರೀದಿಸಲು ಹಿಂದೇಟು ಹಾಕುವಂತಾಗಿದೆ.

  Gold Rate Today: ಬೆಂಗಳೂರಿನಲ್ಲಿ ಅರ್ಧ ಶತಕ ಬಾರಿಸಿದ ಚಿನ್ನದ ದರ; ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರದ ಬೆಲೆಯೆಷ್ಟು?

  8. ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗೆ  ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಚುನಾವಣೆಗೆ ಮುನ್ನ ಚಿತ್ರದುರ್ಗ ಜಿಲ್ಲೆಯ ಒಂದು ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ  ಸ್ಥಾನಕ್ಕೆ ಗ್ರಾಮಸ್ಥರು ಹರಾಜು ಪ್ರಕ್ರಿಯೆ ನಡೆಸಿದ್ದಾರೆ. ಹರಾಜಿನಲ್ಲಿ  ಲಕ್ಷ ಲಕ್ಷ ಮೊತ್ತಕ್ಕೆ ಒಂದೊಂದು ಸದಸ್ಯ ಸ್ಥಾನ ಹರಾಜು‌ ಮಾಡಿ ಹಣ ಪಡೆದು  ಗ್ರಾಮಸ್ಥರೇ ಹರಾಜು ಪುಸ್ತಕಕ್ಕೆ ಸಾಕ್ಷಿ ಸಹಿ ಹಾಕಿರುವ ಘಟನೆ ನಡೆದಿದೆ.

  ಚಿತ್ರದುರ್ಗದ ಈ ಹಳ್ಳಿಯಲ್ಲಿ ಗ್ರಾ.ಪಂ ಸದಸ್ಯ ಸ್ಥಾನಗಳು ಹರಾಜು; ಮುಂಗಡ ಹಣ ಪಡೆದು ಸಾಕ್ಷಿ ಸಹಿ ಹಾಕಿದ ಗ್ರಾಮದ ಮುಖಂಡರು

  9. ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಭಾಗಶಃ ಮುಂದಿನ ವರ್ಷ ಮೇ ತಿಂಗಳ ವೇಳೆಗೆ ತಮಿಳುನಾಡು ಮಹತ್ವದ ಚುನಾವಣೆಯನ್ನು ಎದುರಿಸಲಿದೆ. ಇದು ಕಳೆದ 50 ವರ್ಷಗಳ ತಮಿನಾಡಿನ ಚುನಾವಣಾ ಇತಿಹಾಸದಲ್ಲಿ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಮತ್ತು ಎಡಿಎಂಕೆ ಪಕ್ಷದ ನಾಯಕಿ ಜಯಲಲಿತ ಇಲ್ಲದೆ ನಡೆಯುತ್ತಿರುವ ಮೊದಲ ಚುನಾವಣೆ. ಈ ಹಿನ್ನೆಲೆಯಲ್ಲಿಯೂ ಈ ಚುನಾವಣೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

  ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದ ಕಮಲಹಾಸನ್; ದ್ರಾವಿಡ ನೆಲದಲ್ಲಿ ರಂಗೇರಿದ ರಾಜಕೀಯ ಆಟ

  10. 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಬಿಸಿಸಿಐ ಈಗಾಗಲೇ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಜೊತೆಗೆ ಈ ಬಾರಿಯ ಐಪಿಎಲ್​ನಲ್ಲಿ ಕಣಕ್ಕಿಳಿಯದ ಸ್ಟಾರ್ ಆಟಗಾರ ಕೂಡ ಅಭ್ಯಾಸ ಶುರುಮಾಡಿಕೊಂಡಿದ್ದು ಐಪಿಎಲ್ 2021 ರಲ್ಲಿ ಆಡುವುದು ಖಚಿತ ಪಡಿಸಿದ್ದಾರೆ.

  IPL 2021 ರಲ್ಲಿ ಈ ಸ್ಟಾರ್ ಆಟಗಾರ ಕಣಕ್ಕಿಳಿಯುವುದು ಖಚಿತ: ಈಗಿನಿಂದಲೇ ಅಭ್ಯಾಸ ಶುರು
  Published by:G Hareeshkumar
  First published: