Evening Digest: 16ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ, ನಟಿ ಸಂಜನಾ ಗಲ್ರಾನಿಗೆ ಷರತ್ತುಬದ್ಧ ಜಾಮೀನು

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಈವರೆಗೆ ನಡೆದ 5 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.

  Farmers Protest:16ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ನಾಳೆ ದೇಶದ ಎಲ್ಲಾ ಟೋಲ್ ಪ್ಲಾಜಾ ಬಂದ್

  2. ಮತದಾರರ ಗುರುತಿನ ಚೀಟಿಯನ್ನು ಕೂಡ ಆಧಾರ್​ ಕಾರ್ಡ್​ನಂತೆ ಡಿಜಿಟಲ್​​ಗೆ ಬದಲಾಯಿಸುವ ಬಗ್ಗೆ ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಈ ಬಗ್ಗೆ ಅಂತಿಮ ಆದೇಶ ಬಾಕಿ ಇದೆ. ಒಂದು ವೇಳೆ ಮತದಾರರ ಗುರುತಿನ ಚೀಟಿ ಡಿಜಿಟಲ್​ಗೆ ಬದಲಾದರೆ, ಗುರುತಿನ ಚೀಟಿಯನ್ನು ಸುಲಭವಾಗಿ ಡೌನ್​ಲೋಡ್​ ಮಾಡಿಕೊಂಡು ಡಿಜಿಟಲ್​ ಆವೃತ್ತಿ ಮೂಲಕವೇ ಮತ ಚಲಾಯಿಸಲು ಸಾಧ್ಯವಾಗಲಿದೆ. ಈ ಕುರಿತು ಚುನಾವಣಾ ಸಮಿತಿ ಯೋಜನೆ ಸಿದ್ಧತೆ ನಡೆಸಿದೆ.

  ಡಿಜಿಟಲ್​ ರೂಪದಲ್ಲಿ ಮತದಾರರ ಗುರುತಿನ ಚೀಟಿ; ಮುಂದಿನ ವರ್ಷದೊಳಗೆ ಸೌಲಭ್ಯ

  3. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಕ್ರೂರಿ ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಿಸೆಂಬರ್ 2ರಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಲೇ ಇದೆ.

  Petrol Price: ಸತತ 4 ದಿನದಿಂದ ಏರಿಕೆಯಾಗದ ಪೆಟ್ರೋಲ್​-ಡೀಸೆಲ್​ ಬೆಲೆ; ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ

  4. ಕೊರೋನಾ ಹಾವಳಿ ಹೆಚ್ಚಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ 8-9 ತಿಂಗಳಿಂದ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿತ್ತು. ಈ ವರ್ಕ್​ ಫ್ರಂ ಹೋಮ್ ಐಟಿ-ಬಿಟಿ ಹೊರತಾಗಿಯೂ ಬೇರೆ ಕಂಪನಿಗಳಲ್ಲಿಯೂ ಮುಂದುವರೆದಿದೆ. ಸದ್ಯ ಕೊರೋನಾ ಎರಡನೇ ಅಲೆ ಶುರುವಾಗಿರುವುದರಿಂದ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಇನ್ನು ಕೆಲ ತಿಂಗಳ ಕಾಲ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರೆಸಲಿ ಎಂದು ಐಟಿ-ಬಿಟಿ ಸಚಿವ, ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.

  ಐಟಿ ಉದ್ಯೋಗಿಗಳು ಇನ್ನೂ ಕೆಲ ತಿಂಗಳು ವರ್ಕ್​ ಫ್ರಂ ಹೋಮ್ ಮುಂದುವರೆಸಿ: ಡಿಸಿಎಂ ಅಶ್ವಥ್ ನಾರಾಯಣ್

  5. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಬಿಜೆಪಿ ಸರ್ಕಾರ ಅಲ್ಲಾಡುತ್ತಿದೆ, ಸರ್ಕಾರ ಬೀಳುತ್ತದೆ ಎಂದು ಹೇಳುವವರು ರಾಜಕೀಯ ಪ್ರಬುದ್ಧತೆ ಇಲ್ಲದವರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿರುವ ಜೆಡಿಎಸ್​ ಶಾಸಕ ಜಿ.ಟಿ. ದೇವೇಗೌಡ ಬಿಜೆಪಿ ಸರ್ಕಾರದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

  ಕೇಂದ್ರ, ರಾಜ್ಯ ಸರ್ಕಾರಗಳನ್ನು ಬೀಳಿಸಲು ಅಸಾಧ್ಯ; ಬಿಜೆಪಿ ಪರ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಭರ್ಜರಿ ಬ್ಯಾಟಿಂಗ್

  6. ಅಲೈಯನ್ಸ್ ಏರ್‌ ಸಂಸ್ಥೆಯು ಮೈಸೂರು - ಮಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ (ವಾರಕ್ಕೆ 4 ದಿನ) ವಿಮಾನ ಹಾರಾಟ ನಡೆಸಲಿದೆ.

  ಇಂದಿನಿಂದ ಮೈಸೂರಿನಿಂದ ಮಂಗಳೂರು ನೇರ ವಿಮಾನ : ಅಲೈಯನ್ಸ್​ ಏರ್​ ಸಂಸ್ಥೆಯಿಂದ ಆರಂಭ

  7. ಪ್ರತಿ ವರ್ಷ ಹೊಸ ವರ್ಷದ ದಿನದಂದು ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಗಿಜಿಗುಡುತ್ತಿರುತ್ತವೆ. ನಗರದ ಯುವಪೀಳಿಗೆ ಎಂಜಿ ರಸ್ತೆಯ ಸುತ್ತಮುತ್ತ ಬೀಡು ಬಿಟ್ಟಿರುತ್ತದೆ. ಆದರೆ, ಈ ವರ್ಷ ಅದಕ್ಕೆ ಅವಕಾಶ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

  New Year 2021: ಬೆಂಗಳೂರಿಗರೇ ಎಚ್ಚರ!; ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡಿದರೆ ಜೈಲೂಟ ಖಚಿತ

  8. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ನೇಮಿಸುವಂತೆ ಆಗ್ರಹಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಇಂದು ಸರ್ಕಾರಿ ಬಸ್​ಗಳ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಬೇಡಿಕೆ ಸಂಬಂಧ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಗೌಪ್ಯ ಸಭೆ ನಡೆಸಿದ್ದಾರೆ.

  ಕೆಎಸ್​ಆರ್​​ಟಿಸಿ, ಬಿಎಂಟಿಸಿ ನೌಕರರ ಮುಷ್ಕರ; ಯೂನಿಯನ್ ಲೀಡರ್​ಗಳ ಸಭೆ ಕರೆದ ಡಿಸಿಎಂ ಲಕ್ಷ್ಮಣ ಸವದಿ

  9. ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಅವರಿಗೆ ಹೈಕೋರ್ಟ್​ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಮೂರು ಲಕ್ಷದ ವೈಯಕ್ತಿಕ ಬಾಂಡ್ ಜೊತೆಗೆ ತಿಂಗಳಲ್ಲಿ ಎರಡು ಬಾರಿ ತನಿಖಾಧಿಕಾರಿ ಎದುರು ಸಂಜನಾ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. 84 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ ಸಂಜನಾ ಅವರಿಗೆ ಈಗ ಜಾಮೀನು ಸಿಕ್ಕಿದೆ.

  Sanjjanaa Galrani: ಜೈಲು ಹಕ್ಕಿಯಾಗಿದ್ದ ಸಂಜನಾ ಗಲ್ರಾನಿಗೆ ಕೊನೆಗೂ ಸಿಕ್ತು ಷರತ್ತುಬದ್ಧ ಜಾಮೀನು..!

  10. ಮೊಹಮ್ಮದ್ ಸಿರಾಜ್​ ಹೈದ್ರಾಬಾದ್​ ಮೂಲದ ಈ ಬೌಲರ್​ ಇತ್ತೀಚೆಗೆ ಐಪಿಎಲ್ ಟೂರ್ನಿಯಲ್ಲಿ ಸದ್ದು ಮಾಡಿದ್ದರು. ಅಕ್ಟೋಬರ್ 21 ರಂದು ನಡೆದ ಕೋಲ್ಕತ್ತಾ ನೈಟ್‌ ರೈಡರ್ಸ್ ಎದುರಿನ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರವಾಗಿ ಬೌಲ್ ಮಾಡಿದ್ದ ಸಿರಾಜ್​ 4 ಓವರ್‌ಗಳಲ್ಲಿ ಕೇವಲ 8 ರನ್ ನೀಡಿ 2 ಮೇಡನ್ ಮತ್ತು 3 ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

  ಆಸೀಸ್​ ಎದುರು ಕ್ರಿಕೆಟ್ ಅಂಗಳದಲ್ಲೇ ಕ್ರೀಡಾಸ್ಫೂರ್ತಿ ಮೆರೆದ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್​
  Published by:G Hareeshkumar
  First published: